*ಸ್ಟಾರ್ ಕ್ರಿಕೆಟ್ ಕ್ಲಬ್*

           ಸ್ಟಾರ್ ಕ್ರಿಕೆಟ್ ಕ್ಲಬ್ಬು 


ಬ್ರಹ್ಮ ನಿಂಗೆ ಜೋಡಿಸ್ತೀನಿ ಹೆಂಡ ಮುಟ್ಟಿದ ಕೈನ  ಹಾಡು ತೇಲಾಡ್ತಾ ಬಂದು
ಕಿವಿಯ ತೀರವನ್ನು ಹಾಯಾಗಿ
ಸೋಂಕಿ ಮೈ ಜುಮ್ಮಂತ ಅನಿಸಿತು 
ಕಣ್ಣಿಗೆ ಕಪ್ಪನೇ ಕೂಲಿಂಗ್ ಗ್ಲಾಸ್ಸು, 
ಕೈಯಲ್ಲಿ ಮೈಕು,  ಸ್ಟೇಜ್ ನ ಮೇಲೆ 
ಶರ್ಟು ಪ್ಯಾಂಟ್ ನಲ್ಲಿ  ಸ್ಟೈಲಾಗಿ 
ಓಲಾಡ್ತಾ  ಹಾಡುತಿದ್ದ 
ಕಾಳಿಂಗ ರಾವ್ ರವರ 
ರಾಮಮಂದಿರದ ಮುಂದೆ ಇದ್ದ 
ಓಪನ್ ಏರ್ ಸಭಾಗ್ರಹದಲ್ಲಿ 
ರಾಮನವಮಿಯ  ಆರ್ಕೆಸ್ಟ್ರಾ ಕಾರ್ಯಕ್ರಮ 
ಚಿತ್ರ ಕಣ್ಣ ಮುಂದೆ ಯು ಟ್ಯೂಬ್ ನಲ್ಲಿ ಬರುವಂತೆ ನೆನಪಿನಾಳದಲ್ಲಿ ಮೂಡಿ ಬಂತು.
ಹಾಡು ಮುಗೀತು
ಮಂಗಳಾರತಿ, ಮತ್ತೆ 
ಚೆರ್ಪು ಗಾಗಿ 
ಬಕಪಕ್ಷಿಗಳಂತೆ ಕಾದಿದ್ದ 
ನಮ್ಮ ಕೈಗೆ ಚೌಕಾಕಾರದ ಬಾಳೆಲೆ 
ಶೇಷಗಿರಿ ಗುಮಾಸ್ತ ಜಿಪುಣರ ಕೈ ನಿಂದ ಬಿದ್ದ ಪುಳಿಯೋಗರೆ ಹಾಗೂ ಕೇಸರಿಬಾತು 
ಪ್ರಸಾದ ನಿಜಕ್ಕೂ ದೈವಾಮೃತ  
ರಾಮನವಮಿ ಮುಗಿದಾದ ಮರುದಿನ
ಏಪ್ರಿಲ್ ಒಂಬತ್ತು ಫಲಿತಾಂಶ ಎಲ್ರೂ ಪಾಸು 
ಹತ್ತನೇ ತಾರೀಕಿನಿಂದ ಜೂನ್ ಒಂದನೇ
ತಾರೀಕುವರೆಗೂ ಸ್ಕೂಲಿಗೆ ವರುಶಾಂತರ ರಜೆ 
ಸ್ವಲ್ಪ ಬ್ರೇಕು ಹಾಕಿ 
ಇದು ಯಾವ ಊರಿನ ಕಥೆ ಅಂತ ಕೇಳೋರಿಗೆ
ಮಲೆನಾಡ ಮಡಿಲಲ್ಲಿ ಅಂಬುತೀರ್ಥ ದಿಂದ ಉದ್ಭವಿಸಿ ತಳುಕಿ ಬಳುಕಿ ಹರಿದು ಹಾಯ್ದ ಶರಾವತಿ ನದಿಯ ಬೋರ್ಗೆರೆಯುವ ಜೋಗದ ಜಲಪಾತದೊಟ್ಟಿಗೆ 
ಜೋಡಿಯಾಗಿ ವಿಕಸಿತವಾದ ಹೊಸ ಊರು
ಕಾರ್ಗಲ್ ಕಾಲೋನಿ 
ಸಾಗರ ತಾಲೂಕ್ 
ಶಿವಮೊಗ್ಗ ಡಿಸ್ಟ್ರಿಕ್ಟ್ 
ನಮ್ಮಪ್ಪ PWD ನ ಕನಿಷ್ಠ ಇಂಜಿನಿಯರ್ 
ಟ್ರಾನ್ಸ್ಫರ್ ಗೆ ಅನುಗುಣವಾಗಿ 
ಲಕ್ಕವಳ್ಳಿಯಿಂದ ಕಾರ್ಗಲ್ಗೆ ಬಂದಿದ್ದಾಯ್ತು 
ನಾ ಹುಟ್ಟಿದ್ದು ಲಕ್ಕವಳ್ಳಿಯಾದ್ರುವೇ ಬೆಳೆದು ಓದಿದ್ದು ಇದೇ ಕಾರ್ಗಲ್ ಕಾಲೋನಿ 
ಬನ್ನಿ ಮತ್ತೊಮ್ಮೆ ರಾಮಮಂದಿರಕ್ಕೆ 
ಮಂದಿರದ  ಹೊರಾಂಗಣದಲ್ಲಿ 
ಸಂಜೆ ಹರಟೆ ಹೊಡ್ಕೊಂಡು  
ಮಂಗಳಾರತಿ ಹಾಡಿಗೆ ಜೊತೆ ಸೇರಿ ಭಜನೆಯು ಜೋರಾಗಿ 
ಮಂಗಳಂ ಗುರುಶ್ರೀ ಚಂದ್ರಮೌಳೀಶ್ವರ ಗೆ 
ಶಕ್ತಿ ಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೆ 
 ಸರಿಯಾಗಿ ಪ್ರಸಾದಕ್ಕೆ ಹಾಜರು l
ಇವತ್ತು ಕಡ್ಲೆ ಕಾಳು ಉಸ್ಲಿ,ಮತ್ತೆ ಬೆಳಗ್ಗೆ 
ರಾಮಮಂದಿರದ ಹಿಂದಿನ ಮೈದಾನದಲ್ಲಿ 
ಟೆನಿಸ್ ಬಾಲ್ ಕ್ರಿಕೆಟ್ ಕಾರ್ಯಕ್ರಮ
ಟೀಮ್ ಇಲ್ಲದೇನೆ ಇರೋ ಆರು ಆಟಗಾರರಿಗಾಗಿ ಬ್ಯಾಟ್ ಮಗುಚಿ 123456 ಎಂದು ಈ ಕಡೆ ಬರೆದು 
ನಂಬರ್ ಮರೆಸಿ ಆ ಕಡೆ ನಂಬರಿಗೆ ಎದುರು ಗೆರೆ ಎಳೆದು  ಆರ್ಡರ್ ನ ತಯ ಮಾಡಿ ಆಟ ಪ್ರಾರಂಭಿಸಿ 
ಸೀಬೆ ಕಾಯಿ ಮರದ ಅಂಕು ಡೊಂಕಿಲ್ಲದ ರೆಂಬೆ ವಿಕೆಟಿಗಾದರೆ ಬಡಗಿಗಳು ಕೆತ್ತಿ ಸಮ ಮಾಡಿಕೊಟ್ಟ ಹಲಗೆ ಬ್ಯಾಟ್ ಆಗ್ತಾ ಇತ್ತು 
ಕ್ರಿಕೆಟ್ಟಿನ ಗುಂಗಲ್ಲಿ ಹೊತ್ತು ಹೋಗೋದೇ 
ಗೊತ್ತಾಗ್ತಾ ಇರಲಿಲ್ಲಾ 
ಅದೊಂದು ಶನಿವಾರ 
ನಮ್ಮ ದೊಡ್ಡಣ್ಣ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜುನಲ್ಲಿ ಓದುತಿದ್ದವ 
ರಜೆಗಾಗಿ ಬಂದ ಸಮಯವದು. 
ಹೊಸ ಬ್ಯಾಟು ಬಾಲು ತಂದಿದ್ದ 
ಹೀಗೇ ಕ್ರಿಕೆಟ್ ಆಡಲು ಮೈದಾನಕ್ಕೆ ಹೋದ್ರೆ 
ನಮ್ಮಕಾಲೋನಿಯವರಲ್ಲದ ಹತ್ತು ಹುಡುಗ್ರು 
ಕೈಯಲ್ಲಿ ಲಾಠಿ ಹಿಡಿದು ವ್ಯಾಯಾಮ ಪ್ರಾಕ್ಟೀಸ್ ಮಾಡ್ತಾ ಇದ್ರು, ಜಗಳಕ್ಕೆ ಮುಖ್ಯ ಕಾರಣ   
ನಾವು ಕಷ್ಟಪಟ್ಟು ಗ್ರೌಂಡ್ ರೆಡಿ ಮಾಡಿದ್ರೆ 
ರಾಷ್ಟೀಯ ಸ್ವಯಂ ಸೇವಕ ಸಂಘ ದವರು  
ಆಟದ ಮೈದಾನವನ್ನ ಆಕ್ರಮಿಸಿದ್ದರು, 
ಆದ್ರುವೇ ನಮ್ಮಣ್ಣ ಧೈರ್ಯ ವಾಗಿ ಹೋಗಿ ಕೇಳಿದ್ರೆ  
ಖಾಲಿ ಮಾಡೋಕ್ಕಾಗಲ್ಲ ಅಂತ  
ಶಾಖಾ ಪ್ರಮುಖ ಜಿದ್ದಿಡಿದದ್ದು 
ನಮ್ಮಣ್ಣ ಹ್ಞೂ ಅಂದ್ರೆ ಸಾಕು 
ಕೈಗಿಂತ ಬಾಯಿಯನ್ನ ನಂಬಿದ್ದ
ನಮ್ಮ ಟೀಮಿನ ವಿಭಿನ್ನ ಸೈಜ್ ನ 
ಸ್ಮಾಲ್ ಮೀಡಿಯಂ ಲಾರ್ಜ್ 
ಡಜನ್ ಹುಡುಗ್ರು 
ಇನ್ನೇನು ಕೈ ಕೈ ನೋಡ ಬೇಕಿತ್ತು 
ಅಷ್ಟರಲ್ಲಿ ಬದಿಗೆ ಹಾಯ್ದು ಹೋದ 
ರಸ್ತೆಯಲ್ಲಿ ಜೀಪಿನಲ್ಲಿ ಬಂದಿಳಿದ 
ಸೂಪರ್ಟೆಂಡಿಂಗ್ ಇಂಜಿನಿಯರ್ ಕಾಳಪ್ಪನವರು 
ಮಧ್ಯಸ್ತಿಕೆ ಮಾಡಿ ಇದು ಕ್ರಿಕೆಟ್ ಮೈದಾನ 
ಇಲ್ಲಿ ನೀವು ಶಾಖಾ ನಡಸ ಕೂಡದು 
ಅಂತ ಖರಾರಾಗಿ ಹೇಳಿ 
ನಮ್ಮ ಮೈದಾನ ನಮಗೆ ದೊರಕಿಸಿಕೊಟ್ರು.
ಆ ಮೈದಾನದಲ್ಲಿ ನಮ್ಮಣ್ಣ ಸುಂದರ್ 
ಮೊಟ್ಟ ಮೊದಲ ಬಾರಿಗೆ ಸ್ಥಾಪಿಸಿದ 
ಕಾರ್ಗಲ್ ನ ಪ್ರಪ್ರಥಮ ಕ್ರಿಕೆಟ್ ತಂಡ 
ಹೆಸರೇನಿಟ್ಟಿದ್ರು ಗೊತ್ತಾ 
ಸ್ಟಾರ್ ಕ್ರಿಕೆಟ್ ಕ್ಲಬ್
ನಾವೆಲ್ಲಾ  ಟೀಮಿನ ಪರ್ಮನೆಂಟ್ 
ಬಾಲ್ ಬಾಯ್ಸ್ ಗುಂಪು
ಆಟಕ್ಕುಂಟು ಲೆಕ್ಕಕಿಲ್ಲ 
ಪ್ರಗತಿ ಅಂದ್ರೆ ಟೆನಿಸ್ ಬಾಲ್ ನಿಂದ  
ಮಿರಿ ಮಿರೀ ಅಂತ ಮಿನುಗುತ್ತಿದ್ದ 
ಕೆಂಪು ಬಣ್ಣದ ಕಾರ್ಕ್ ಬಾಲ್ ಗೆ ಬದಲಾಗಿದ್ದು 
ಮ್ಯಾಟ್ಟು,ಪ್ಯಾಡು, ಗಾರ್ಡು, ಸ್ಟಂಪು, ಬೇಲ್ಸ್ 
 ಒಂದೊಂದಾಗಿ ಯಾವಾಗ ಬಂತೋ ಗೊತ್ತೇ ಆಗಲಿಲ್ಲ   NTM School ನ್ಯೂ ಟೈಪ್ ಮಿಡ್ಲ್ ಸ್ಕೂಲ್ ನ ಪಕ್ಕದಲ್ಲಿ ಹತ್ತಡಿ ಅಗಲದ ನೀರಿನ ಕಾಲುವೆ ದಾಟಿದ್ರೆ ವಿಶಾಲವಾದ ಗ್ರೌಂಡು ಕೆಮ್ಮಣ್ಣು, ರೋಡ್ ರೋಲರ್ ನಿಂದ ಸಮತಳ ಮಾಡಿದ ಹೊಸ ಪಿಚ್ಚು 
ಅದರ ಮೇಲೆ ಹಾಸಿದ ಹಸಿರು ಕಾಯಿರ್ ಮ್ಯಾಟ್ಟು  
22 ದಾಪುಗಾಲು ಹೆಜ್ಜೆ ಹಾಕಿ ಎರಡು ಕಡೆಯ ನಡು ಸೆಂಟರಿನಲ್ಲಿ  ಹೆಚ್ಚು ಕಮ್ಮಿ ನಮ್ಮ ಹೈಟ್ ಇದ್ದ ಮೂರು ಮೂರು ಸ್ಟಂಪುಗಳು ಜೊತೆಗೆ ಬೇಲ್ಸ್, 
ಪ್ರಭಾಶಂಕರ್ ನಮ್ಮ ಫಾಸ್ಟ್ ಬೌಲರ್ ಸುಧೀರ ಸ್ಪಿನ್ ಬೌಲರ್ ಅಂಥೋನಿ ಮತ್ತೆ ರಫಿ ನಮ್ಮ ಟೀಮಿನ ಬ್ಯಾಟ್ಸಮನ್ ಗಳು ಹೀಗೇ ಹನ್ನೊಂದು ಹುಡುಗರ ಟೀಮು, ಟ್ರೇನಿಂಗು, ಪ್ರಾಕ್ಟೀಸ್, ಸಾಗರದಿಂದ ತಂದ ಸ್ಕೋರ್ ಶೀಟು ಪುಸ್ತಕ ಪುಟಗಳು ತಿರುಗುವಷ್ಟರಲ್ಲಿ  ಕ್ರಿಕೆಟ್ ಕಾಂಪಿಟಿಷನ್ 
ಒಂದೊಂದೇ ಇಂನಿಂಗ್ಸು ಮ್ಯಾಚು 
ಇಷ್ಟೆಲ್ಲಾ ಕಥೆ ಹೇಳಿದ್ದು  
ನಾವು ಶಿವಮೊಗ್ಗದಲ್ಲಿ
ಗೆದ್ದು ತಂದ ಟ್ರೋಫಿ ಈಗಲೂ ಸ್ಕೂಲಿನ ಅಲಮಾರಿಯ ಮೇಲೆ ಶೋಭಿಸ್ತಾ ಇದೆ. 
Dr.ಮೇಧಾವಿ,K.ಸುರೇಶ್, K. ಸುಂದರ್. K.ಉದಯ
 (🌟ಕ್ರಿಕೆಟ್ ಕ್ಲಬ್ ಬ್ಯಾಟ್ಸಮನ್ ಬೌಲರ್ ಫೀಲ್ಡರ್)





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.