ಎಂಟರ ನಂಟು
ಎಂಟರ ನಂಟು 1974-75 ರ ಡಿಸೆಂಬರ್ ತಿಂಗಳು ನಮ್ಮಮಂಗಳೂರಿನ ಗೋರಿಗುಡ್ಡದ ಫಿಶರೀಸ್ ಕಾಲೇಜಿನ ಹುಡುಗ್ರಿಗೂ ಕೊಡಿಯಾಲ್ ಬೈಲ್ ನ ಸೈನ್ಟ್ ಅಲಾಯ್ಶಿಯಸ್ ಕಾಲೇಜಿನ ಹುಡುಗ್ರಿಗೂ ಅಷ್ಟಕ್ಕಷ್ಟೇ, ಆಗಾಗ ಸಣ್ಣ ಪುಟ್ಟ ಜಗಳ ಆಗಿದ್ದೂ ಉಂಟು, ಆದ್ರೆ, ಇಬ್ಬರನ್ನೂ ಆಕರ್ಷಸಿತ್ತಿದ್ದದ್ದು ಮತ್ತೆ ವೈಮನಸ್ಯತೆಗೆ ಕಾರಣವಾಗಿದ್ದು ಕಂಕನಾಡಿಯ ಸೈನ್ಟ್ ಎಗ್ನೇಸ್ ವಿಮೆನ್ಸ್ ಕಾಲೇಜಿನ ವಿದ್ಯಾರ್ಥಿನಿಯರು ಬೆಡಗಿನ ಯುವತಿಯರು ಇಬ್ಬರೂ ಅರಸಿ ಹೋಗುತ್ತಿದ್ದ ಮತ್ತೊಂದು ಕೇಂದ್ರವೆಂದ್ರೆ ಅದು ಮಂಗಳೂರ ವೆಲೆಂನ್ಸಿಯಾದಲ್ಲಿದ್ದ ರೋಶಿನಿ ನಿಲಯ. ಕಾಲೇಜು ಹುಡುಗ್ರು ಯಾಕ್ ಅಲ್ಲಿಗೆ ಹೋಗ್ ತಿದ್ರೂ ಅನ್ನೋದು ಎಲ್ರಿಗೂ ಗೊತ್ತಿದ್ದ ವಿಷಯ ಕ್ರಿಸ್ಮಸ್ ಗೆ ಸರಿಯಾಗಿ ಒಂದು ವಾರದ ಮುಂಚೆ ಅಂದ್ರೆ ಡಿಸೆಂಬರ್ 17ನೇ ತಾರೀಕು ರೋಶನಿ ನಿಲಯದಲ್ಲಿ ಮ್ಯೂಸಿಕ್ ಫೆಸ್ಟಿವಲ್ ನಡಿಯುತ್ತಿತ್ತು. ನಾವೂ ಹೋಗಿದ್ವಿ ನಾವೂ ಅಂದ್ರೆ ನಾನು, ವೆಂಕಿ ಅಶ್ವಥ್, ಮಂಜು, ಕೊಂಡಾ,ಮತ್ತಿತರರು ತಂಬೋಲಾ, ಹೌಸಿ ಹೌಸಿ ಜರುಗಿತ್ತು ಅದ್ರಷ್ಟವ ಅಳೆಯಲು 10 ರೂಪಾಯಿ ಟಿಕೆಟ್ ತೆಕ್ಕೊಂಡಿದ್ವಿ. ಮೈಕ್ ಹಿಡಿದು...