ಚಿಲುಮೆ


ಜೋಗದ ಜಲಪಾತವನ್ನು 
ನೀವೆಲ್ಲಾ ನೋಡಿರಬಹುದು 
ನೋಡಿರಬೇಕು, ಇಲ್ಲಾಂದ್ರೆ 
ನೋಡಲೇ ಬೇಕು 
ಯಾಕಂತೀರ 
ಡಾll ರಾಜಕುಮಾರ್ರವರ ಈ ಹಾಡು ಕೇಳಿ 
ಮಾನವನಾಗಿ ಹುಟ್ಟಿದ್ಮೇಲೆ 
ಏನೇನ್ ಕಂಡಿ 
ಸಾಯೋತನ್ಕ ಸಂಸಾರದಲ್ಲಿ 
ಗಂಡಾಗುಂಡಿ  
ಏರಿಕೊಂಡು ಹೋಗೋದಿಲ್ಲ 
ಸತ್ತಾಗ್ ಬಂಡಿ 
ಇರೋದ್ರೊಳಗೆ ಒಮ್ಮೆ ನೋಡು 
ಜೋಗಾ ಗುಂಡಿ. 
ರಾಜ, ರೋರರ್, ರಾಕೆಟ್, ರಾಣಿ ಯಾದ 
830 ಅಡಿಯ ಈ ಪ್ರವಾಹವೇ 
ಜೋಗದ ಜಲಪಾತ, ವಿಶ್ವ ವಿಖ್ಯಾತ
ರಾಜ, ಗಂಭೀರವಾಗಿ ಹರಿವ ಧಾರೆಯಾದ್ರೆ 
ರೋರರ್, ಧುಮುಕಿ ಅರ್ಧಧಲ್ಲಿ ದಿಢೀರ್ 
ಅಂತ ರಾಜನ್ನ ಸೇರುವ ಧಾರೆ 
ರಾಕೆಟ್, ಹೆಸರಿಗೆ ಅನುಗುಣವಾಗಿ 
ಸೀಳಿ ಕೊಂಡು ಉಕ್ಕಿ ಬರುವಂತಹ ಧಾರೆ 
ರಾಣಿ ತಳುಕಿ ಬಳುಕಿ 
ವೈಯ್ಯಾರವಾಗಿ ಸುರಿವ ಧಾರೆ 
ಜೋಗ್ ಫಾಲ್ಸ್ ಜೊತೆ ಅದೊಂತರಾ ನಂಟು
ನಾನು ಜೋಗದ MSEB ಹೈ ಸ್ಕೂಲ್ ನಲ್ಲಿ ಓದಿದ್ದು ಒಂದು ಕೊಂಡಿಯಾದರೆ ಮತ್ತೊಂದು
ಈ ಜಲಪಾತದೊಡನೆ ನಡೆದ ಘಟನೆ 
ನೆನಪಿನ ವ್ಯೂಹ ಸುರುಳಿಯಿಂದ  
ನಮಗೆಲ್ಲಾ ಕಾಕಿಪ್ಯಾಂಟ್ ಬಿಳಿ ಶರ್ಟು ಯುನಿಫಾರ್ಮ್ ಆದ್ರೆ ಹೆಣ್ಮಕ್ಕಳಿಗೆ 
ನೀಲಿ ಲಂಗ ಬಿಳಿ ಶರ್ಟು
ಜೋಗದ ಜಲಪಾತವ 
ಈ ಕಡಿಯಿಂದ ನೋಡಿದ ಕ್ಷಣ 
ರಾಜಾ ರೋರರ್  ನಡುವೆ 
ಚಾಚಿದ್ದ ಕಲ್ಲು ಬಂಡೆಯ ಮೇಲೆ , 
ಜಲಪಾತದ ನಡುವೆ ಸಿಕ್ಕಿದ್ದ ನೀಲಿ ಲಂಗ, 
ಹೈಸ್ಕೂಲ್ ಯುನಿಫಾರ್ಮ್ ದುಂತ ನೋಡಿ
ಊಹೆ ಮಾಡಿ ಯಾರೋ ಹೈಸ್ಕೂಲ್ ಹುಡುಗಿ 
ಆತ್ಮಹತ್ಯೆ ಮಾಡಿಕೊಂಡಿದ್ದಾಳಂತ ಸುದ್ದಿ ಕಾಡಗಿಚ್ಚಿನಂತೆ ಹಬ್ಬಿತ್ತು.
ಪ್ರಪಾತದ ಕೆಳಕ್ಕೆ ಹೋಗಿ ಹುಡುಕಿದ್ರೂ 
ಬಾಡಿ ಯಾವದೂ ಸಿಗಲಿಲ್ಲಾ 
ಉಲ್ಟಾ ಫಾಲ್ಸ್ ಹತ್ತೋ  ಸಜೆಶನ್ ಹಂತದಲ್ಲೇ 
ನಿಂತು, ಯಾರು ಮಿಸ್ಸಿಂಗ್ ಅನ್ನೋ 
ಪೋಲೀಸರ ವಿಚಾರಣೆ ಶುರುವಾಯ್ತು.  
ಠಾಣೆಯಲ್ಲಿ ರಿಪೋರ್ಟು ಇಲ್ಲಾ 
ಸ್ಕೂಲ್ ಗೆ ಬಂದ ಪೇದೆಗಳು ವಿಚಾರಿಸಿದಲ್ಲಿ 
ನಮ್ಮ ಕಕ್ಷದ ಶಶಿಕಲ ಆಬ್ಸೆಂಟ್
ಸರಿ ಎರಡು ಎರಡು ನಾಲ್ಕುಂತ 
ನಾವೆಲ್ರುಶಶಿಕಲಾನ್ನ ಹುಡುಕಿಕೊಂಡು ಹೊರಟ್ವಿ 
ನಮ್ಮಲ್ಲಿ ಕೆಲವರು ಜೋಗ್ ಫಾಲ್ಸ್ ಹತ್ತಿರ ಮತ್ತಿತರರು  ಕೆಲವ್ರು ಶರಾವತಿ ನದಿಯ ಮೇಲ್ದಂಡೆಯ  ತಟದಲ್ಲಿ ಸಿರೂರ್ 
ಬಂಡೆಯ ಬಳಿ ಇದ್ದ ಆಕೆಯ ಮನೆಗೆ 
ಹೋದ್ರೆ ಮನೆ ಮುಂದೆ 
ಕುಂಟ ಬಿಲ್ಲೇ ಆಡ್ತಾ ಇದ್ದ ಶಶಿ 
ನಮ್ಮನ್ನು ನೋಡಿ ಮನೆಯೊಳಕ್ಕೆ   
ಓಡಿ ಬಚ್ಚಿಟ್ಕೊಂಡಳು 
ದೇವ್ರೇಂತ ನಿಟ್ಟುಸಿರು ಬಿಟ್ವಿ. 
ಶಶಿಕಲಾಗೆ ಕ್ಲಾಸ್ಸಿಗೆ ಮಟ್ಟ ಹಾಕಿದ್ದು, 
ಬಟ್ಟೆಒಗಿತ್ತಿದ್ದಾಗ ಯುನಿಫಾರ್ಮ್ 
ನೀಲಿ ಲಂಗ ನೀರಲ್ಲಿ ಹರಿದು 
ಜೋಗ್ಫಾಲ್ಸ್ ನಲ್ಲಿ ಚಿನ್ಹೆ ಯಾಗಿದ್ದು ಗೊತ್ತೇ ಇರಲಿಲ್ಲ.
ಜಲಪಾತ ಜ್ಞಾಪಕವಾದಾಗೆಲ್ಲಾ ನೀಲಿ ಲಂಗದ 
ಜ್ಞಾಪಕ ಉಮ್ಮಳಿಸಿಕೊಂಡು ಬರುತ್ತೆ.
ನೀವು ಜೋಗದ ಜಲಪಾತ ನೋಡಲೇ ಬೇಕೂಂದ್ರೆ 
ಕಾರ್ಗಲ್ ನ ದಾಟಿ ಐದು ಕಿಲೋಮೀಟರ್ ಪ್ರಯಾಣಿಸಬೇಕು. ಅದುವೇ ನಮ್ 
ಕಾರ್ಗಲ್ ಕಾಲೋನಿ 
ನಮ್ಮೂರ ಲೇಔಟ್ 
ಉತ್ತರ,ದಕ್ಷಿಣ, ಪೂರ್ವ, ಪಶ್ಚಿಮ 
ಅಂತ ವಿಂಗಡಿಸಿ ಹೇಳಲು 
ಸ್ವಲ್ಪ ಕಷ್ಟ ಏಕೆಂದರೆ 
ಯಾವದು ಉತ್ತರ, ಯಾವದು ದಕ್ಷಿಣಾಂತ 
ನನಗೇ ಗೊತ್ತಿರ್ಲಿಲ್ಲ 
ನಾಲ್ಕೂ ದಿಕ್ಕಿನ ಗುಡ್ಡ ಬೆಟ್ಟಗಳ 
ನಡುವೆ ಇದ್ದ ಕಣಿವೆಯೇ ಕಾರ್ಗಲ್ ಕಾಲೋನಿ. ಶರಾವತಿ ವ್ಯಾಲ್ಲಿ ಪ್ರಾಜೆಕ್ಟ್ ಬರೋಕ್ ಮುಂಚೆ ಮನೆಗಳು, ರಸ್ತೆ, ಸಿಮೆಂಟು ಶೆಡ್ದುಗಳು 
ಇವೆಲ್ಲವನ್ನ  ಸ್ಥಾಪಿಸಿ ಜೀವ ನೀಡಿತ್ತು 
ರಾಜ್ಯ ಸರ್ಕಾರ. ಇಂಜಿನಿಯರಗಳು, 
ಕಂಟ್ರಾಕ್ಟರುಗಳು, ಜಮೀನು ಕಳೆದುಕೊಂಡ ಗ್ರಾಮಸ್ಥರು, ವಲಸೆ ಬಂದ ತಮಿಳು ಶ್ರಮಿಕರು , ಮಲಬಾರಿ ವ್ಯಾಪಾರಿಗಳು ಹೀಗೇ ಹಲವಾರು ಜನರ ಪ್ರಯಾಸದಿಂದ  ಕಾರ್ಗಲ್ ಗ್ರಾಮ 
ಕಾರ್ಗಲ್ ಕಾಲೋನಿಯಾಯ್ತು 
ಊರ ನಡುವೆ ಹಾದು ಹೋಗುವ ರಸ್ತೆ 
ಶಿವಮೊಗ್ಗದಿಂದ ಸಾಗರ-ಕಾರ್ಗಲ್-ಜೋಗ -ಸಿದ್ದಾಪುರ-ಸಿರ್ಸಿ ಹಾಗೇ ಉತ್ತರ ಕರ್ನಾಟಕವ ಜೋಡಿಸ್ತಾ ಇತ್ತು. ಶರಾವತಿ ಜಲವಿದ್ಯುತ್ 
ಯೋಜನೆ ಯನ್ನು ಉದ್ಘಾಟಿಸಲು ಆಗಮಿಸಿದ 
ಆಗ ಪ್ರಧಾನ ಮಂತ್ರಿಯಾಗಿದ್ದ 
ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರು 
ಕಾರಿನಿಂದ ಇಳಿದು ನಮ್ಮೂರ ಮಿಡಲ್ ಸ್ಕೂಲಿನ 
ಬಳಿ ಹಾದು ಹೋಗುವ ಇದೇ ರಸ್ತೆಯ ಪಕ್ಕದಲ್ಲೇ 
ನಿಂತ ನಮ್ಮನ್ನೆಲ್ಲಾ ನೋಡಿ 
ಕೈ ಆಡಿಸಿ ಟಾಟಾ ಮಾಡಿದ್ದು ಅವ್ರು ಕೊಟ್ಟ 
ಜೈಜವಾನ್ ಜೈ ಕಿಸಾನ್ ಸ್ಲೋಗನ್ನು 
ನಮ್ಮನ್ನೆಲ್ಲಾ ಪ್ರೆರೇಪಿಸಿ ಪ್ರತಿ ಗುರುವಾರ ರಾತ್ರಿ ಖಡ್ಡಾಯ ಗೋದಿ ಹಿಟ್ಟಿನ ಮುದ್ದೆ, ಚಪಾತಿ, 
ಅಡಿಗೆ ಮನೆಯ ಪ್ರವೇಶಿಸಿದ್ದು 
ವರ್ಷಗಳು ಉರುಳಿ ಹೋದರೂವೆ 
ಒಂದೇ ಒಂದು ಪರಿವರ್ತನೆ ಅದೇನಂದ್ರೆ  
ಪ್ರತಿ ಗುರುವಾರ ರಾತ್ರಿ ಮುದ್ದೆ ಹೋಗಿ 
ಗೋದಿ ಚಪಾತಿ, ಗೋದಿ ಉಪ್ಪಿಟ್ಟು 
ಮುಂದುವರೀತ ಇದೆ. 
ನೆನಪುಗಳು ಮಾತ್ರ ಹಚ್ಚ ಹಸಿರಾಗಿ
ಮನಸ್ಸಲ್ಲೇ ಉಳಿದು ಹೋಯ್ತು.


ಕಾಮೆಂಟ್‌ಗಳು

  1. ಶಶಿಕಲ ಯಾರು? ಈಗ ಎಲ್ಲಿದ್ದಾರೆ?ಏನ್ ಮಾಡ್ತಿದ್ದಾರೆ? ಪ್ರಶ್ನೆಗಳ ಸುರಿಮಳೆ ನನ್ನೊಟ್ಟಿಗೆ ನನ್ನ ಬ್ಲಾಗ್ ಓದ್ತಾ ಇರಿ ಬರುತ್ತಾಳೆ ಚಂದದ ಚೆಲುವಿನ ತಾರೆ ಕಾದಿರಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.