ನಿಗೂಢ ಮೃತ್ಯು

ಮಲ್ಲೇಶ್ವರಂನಲ್ಲಿ ಎಲ್ಲಿದ್ದೀರಾ? 
ಅಂತ ಯಾರಾದ್ರೂ ಕೇಳಿದ್ರೆ, 
ಎಷ್ಟೇ ದೂರವಿರಲಿ, 
ವಿಳಾಸ ಹೇಳೋವ್ರು, 
ಮಲ್ಲೇಶ್ವರಂ ನ ಎಯಿಟ್ಟೀನ್ತ್ ಕ್ರಾಸ್ ನಿಂದ 
ಶುರು ಮಾಡಿ ಲೊಕೇಶನ್ ಹೇಳ್ತಿದ್ರು.
ಇನ್ನೂ ಹೇಳ್ ಬೇಕೂ ಅಂತಂದ್ರೆ 
ಮಲ್ಲೇಶ್ವರಂ ಅಂದ್ರೆ ಎಯಿಟ್ಟೀನ್ತ್ ಕ್ರಾಸ್ ರೋಡು,
ಮತ್ತೆಲ್ಲಾ ಅದರಲ್ಲೇ ಅಡಗಿದೆ,
ಹೇಗೆಂತಂದ್ರೆ,ತರಕಾರಿ ಮಾರೋರು, 
ಹೂವು,ಬಟ್ಟೆ, ಅಂಗಡಿಗಳು, 
ಜನತಾ ಹೋಟ್ಲು,  ರೆಸ್ಟೋರೆಂಟುಗಳು 
ಆಸ್ಪತ್ರೆಗಳು, ಕ್ಲಿನಿಕ್ ಗಳು,  
ಐದನೇ ಕ್ರಾಸ್ನಿಂದ  ಹದಿನೆಂಟನೇ ಕ್ರಾಸ್ 
ವರೆಗೂ ಉದ್ದಕ್ಕೂ ಅಗಲಕ್ಕೂ ಹಬ್ಬಿ
ಮಲ್ಲೇಶ್ವರಂ ನ ಹೆಗ್ಗುರುತಾಗಿತ್ತು.
ಕಾಲೇಜು ಓದುತ್ತಿದ್ದಾಗ ನಾವೆಲ್ಲಾ
ಭೇಟಿಯಾಗಲು ಕೂಡುತಿದ್ದ, 
ಮೀಟಿಂಗ್ ಪಾಯಿಂಟ್ ಆಗಿ ಚಿನ್ಹಿತವಾಗಿತ್ತು.
ಕಾಲೇಜು ಹೈಕ್ಳು, ಸಂಜೆಯಾದರೆ 
ಯಾಕೆ ಅಲ್ಲೇ ಕೂಡ್ತಿದ್ರು ಅನ್ನೋದಕ್ಕೆ 
ಕಾರಣ ಹುಡುಕೋದೇ ಬೇಡ.
ಬೆಂಗಳೂರಿನ ಸುಂದರ ಯುವತಿಯರ 
ಕ್ಯಾಟ್ ವಾಕು, ಫ್ಯಾಷನ್ ಪೆರೇಡ್, 
ಎಲ್ಲಾ ಇಲ್ಲೇ ಬಿಟ್ಟಿಯಾಗಿ ನೋಡಲು, 
ಜೊಲ್ಲು ಬಿಡಲು ಯುಕ್ತವಾಗಿತ್ತು.
ನಲ್ವತ್ತು ವರುಷಗಳ ಹಿಂದೆ 
ಇದೇ ರಸ್ತೆಯ ಒಂದು ಕಾರ್ನರ್ 
ಮಾರ್ಗೋಸ  ರೋಡ್ ಮತ್ತೆ 12 ನೇ ಕ್ರಾಸ್ 
ಕತ್ತರಿಸೋ ಜಂಕ್ಷನ್ ಬಳಿ ಇದ್ದ 
ಡೆಂಟಲ್ ಕ್ಲಿನಿಕ್ ನೊಳಗೆ 
ಕೈ ಬಿಡಮ್ಮ,..ಅರೆ..
ಮುನಿಸು ಕೊಂಡು ಹೇಳ್ದ.  
ಆದ್ರೂ ಆಕೆ  ಕೇಳಲಿಲ್ಲಾ, 
ಇನ್ನೂ ಗಟ್ಟಿ ಯಾಗಿ ಕೈ ಹಿಡ್ಕೊಂಡ್ಬಿಟ್ಲು.
ಬಿಡಮ್ಮಾಅಂತ ಬಿರ್ಸಾಗೆ ಹೇಳಿದ ಮೇಲೆ
ಆಕೆ ಕೈಯ ಬಿಟ್ಟಳು.
ಹಲ್ಲಿನ ಡ್ರಿಲ್ಲಿಂಗ್ ನೋವಾಗಿ ಗಟ್ಟಿಯಾಗಿ
ಕೈ ಹಿಡಿದಳೋ ಏನೋ, 
ಆದ್ರೆ ಡಾಕ್ಟರ್ಗೆ ಗೊತ್ತಾಗ್ ಬಿಡ್ತಿತ್ತು. 
ಯಾಕ್ ಹಿಡಿದ್ಲು ಅಂತ. 
ಆರಡಿ ಎತ್ತರ, ದೃಢಕಾಯ, 
ಆಕರ್ಷಕ ವ್ಯಕ್ತಿತ್ವ, 
ಗೋಧಿ ಬಣ್ಣದ ಹಸ್ಮುಖಿ, 
ನೋಡಲು ಸುಂದರ ಅನ್ನೋದಕ್ಕಿಂತಲೂ 
ಹ್ಯಾಂಡ್ಸಂ ಶಬ್ದ ಫಿಟ್ಆಗ್ತಿತ್ತು, 
ನಮ್ಮ ಡೆಂಟಿಸ್ಟು ಅಶೋಕನಿಗೆ. 
ಕಷ್ಟಪಟ್ಟು ಕೈಯ್ಯ ಬಿಡಿಸ್ಕೊಂಡು
ನೋಡಿ ಹೀಗಲ್ಲಾ ಮಾಡಿದ್ರೆ  
ವಕ್ರವಾಗಿಬಿಡುತ್ತೆಂತ 
ಹಲ್ಲೋ, ಮನಸ್ಸೋ, ಅಂತ ಹೇಳಲಿಲ್ಲಾ. 
ಆದ್ರೆ, ನಮ್ಮ ಅಶೋಕನ ಕ್ಲಿನಿಕ್ ಗೆ 
ಹಲ್ಲು ನೋವಿತ್ತೋ ಇಲ್ಲವೋ 
ವಯಸ್ಸು ಹೆಣ್ಣುಮಕ್ಕಳ ದಾಳಿ ಸ್ವಲ್ಪ ಹೆಚ್ಚಾಗೇ ಇತ್ತು.
ನಮಗೆಲ್ಲಾ ಹೊಟ್ಟೆ ಕಿಚ್ಚು.
ನಾವೂ ಸುಮ್ಮನೆ ಆಗಾಗ 
ಅಸಿಸ್ಟೆಂಟ್ ಗಳ ತರಹ ಹೋಗಿ 
ಹೊರಗೆ ಹಾಕಿದ್ದ ಕುರ್ಚಿ ಯಲ್ಲಿ 
ರಿಸೆಪ್ಶನಿಸ್ಟ್ ಸುಮನ ನ ಎದುರು ಕುಳಿತಿರುತ್ತಿದ್ವಿ.
ಇದಕ್ಕಾಗಿ ಅಶೋಕ ಎಂದೂ ಕೋಪಿಸ್ಕೊಂಡಿದ್ದೆ ಇಲ್ಲ.
ಯಾಕಂದ್ರೆ  ಅವನ ಸ್ವಭಾವವೇ ಹಾಗೆ 
ಸೌಮ್ಯ, ಸಹಿಷ್ಣುತೆ, ಅನ್ನೋ ಪದಕ್ಕೆ ಅರ್ಥ ಕಲ್ಪಿಸಿದವ ನಾಪೋಕ್ಲು ಭೀಮಯ್ಯನ ಮಗ ಅಶೋಕ ಕೊಡಗಿನ ಭೀಮಯ್ಯ ಮತ್ತೆ ಶ್ರೀಮತಿ ಯವರಿಗೆ ಒಬ್ಬನೇ ಮಗ ಮತ್ತು ಇನ್ನೊಬ್ಬಳು ಮಗಳು, ಅವರಿದ್ದದ್ದು, ಬೆಂಗಳೂರಿನ HMT ಲೇಔಟ್ 
ಅಶೋಕ ನಮಗೆ ಪರಿಚಯವಾಗಿದ್ದು, 
ಕೃಷಿ ವಿಶ್ವ ವಿದ್ಯಾಲಯದ  (UAS )
ಪಶುಪಾಲನೆಯ (Veternary) ಕಾಲೇಜಿನ ಪ್ರಾಂಗಣದಲ್ಲಿ. 
ನಾವು ಆಗ  ಓದುತ್ತಿದ್ದದು  (BFSc ಕೋರ್ಸ್) ಮತ್ಸ್ಯ ವಿಜ್ಞಾನದ ಪದವಿಯೇತ್ತರ ಕೋರ್ಸ್ ನ ಪ್ರಥಮ ವರ್ಷ, ಮತ್ತೆ ಮೂರು ವರ್ಷ ಮಂಗಳೂರಿ ನ ಫಿಶರೀಸ್ ಕಾಲೇಜಿನಲ್ಲಿ ಓದಿ  ಡಿಗ್ರೀ ಪಡೆಯಬೇಕು. ಹೌದು,
ಈ ನಾವೂ, ನಮ್ಮ ಅಂತ ಹೇಳೋದು ಬೇರೆ ಯಾರಿಗೂ ಅನ್ವಯಸ್ಸಲ್ಲಾ,  ಅದು ನಾನು,ಅಶ್ವಥ್ 
ಮತ್ತೆ  ಜೊತೆಯಿದ್ದ 24 ಸಹಪಾಠಿಗಳು. 
ಅಶೋಕ್ ನಮ್ಮ  ಕ್ಲಾಸ್ಮೇಟ್, ಸಹಜವಾಗಿಯೇ ಪರಿಚಯ ಮಿತ್ರತ್ವದಲ್ಲಿ ಪರಿವವರ್ತನೆ ಯಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಮುಂದುವರೆದ ಓದಿನ ಯಾತ್ರೆಯಲಿ ಮಂಗಳೂರಿನಲ್ಲಿ ಕಾಲೇಜ್ ನ ಒಂದು ಟ್ರೈಮೆಸ್ಟರ್ ಅಂದ್ರೆ ಮೂರು ತಿಂಗಳು ಅಶೋಕ ನಮ್ಮ ಜೊತೆ ಇದ್ದ. ಹಾಸ್ಟೆಲ್ನಲ್ಲಿ ಸಂತೋಷವಾಗಿ ಕಳೆದ ದಿನಗಳವು 
1970-71ನೇ ಬ್ಯಾಚ್ PUC ಓದಿದವರು. 
ಆ ವರ್ಷ 10+2 ಪ್ರಕ್ರಿಯೆ ಬದಲಾದ ವರ್ಷ.
ನಾವು ಓದಿದ್ದು ಒಂದೇ ಒಂದು ವರ್ಷ PUC.
ಅದರ ಲಾಭ ಪೂರ್ಣವಾಗಿ ನಮಗೆಲ್ಲಾ ದೊರಕಿತ್ತು ಅಂದ್ರೆ  ಇನ್ನೊಮ್ಮೆ ಮೆಡಿಕಲ್ ಕಾಲೇಜು ಮತ್ತೆ ಇಂಜಿನಿಯರಿಂಗ್ ಕಾಲೇಜು ದಾಖಲೆಗೆ 
ವಿಶೇಷವಾಗಿ ಹೆಚ್ಚು ಪ್ರತಿ ಸ್ಪರ್ಧೆಯಿಲ್ಲದೇ 
ಲಭ್ಯವಾಗಿತ್ತು. ನಾವು ಯಾರೂ ಅಪ್ಲೈಮಾಡಲಿಲ್ಲ.
ಆದ್ರೆ ಹೋಮ್ ಸಿಕ್ ಆಗಿ  ಅಪ್ಲೈ ಮಾಡಿದ್ರ ಫಲ 
ಅಶೋಕ್ ಗೆ ಬೆಂಗಳೂರಿನ ಸರಕಾರಿ ಡೆಂಟಲ್ ಕಾಲೇಜ್ ನಲ್ಲಿ ಸೀಟ್ ಸಿಕ್ಕಿ ಫಿಶರೀಸ್ 
ಕೋರ್ಸ್ ನ್ನು ಬಿಟ್ಟು ಡೆಂಟಿಸ್ಟ್ 
ಆಗೋ ಕನಸ್ಸ ಹತ್ತಿ ಹೊರಟೇ ಬಿಟ್ಟ. 
ರಜೆಯಲ್ಲಿ ಬೆಂಗಳೂರು ಹೋದಾಗೆಲ್ಲಾ 
ಡೆಂಟಲ್ ಕಾಲೇಜ್ ನಲ್ಲಿದ್ದ ಅಶೋಕ್ನ ನೋಡೋಕೆ ಹೋದ್ರೆ ಆತ ನಮ್ಮನ್ನು ತನ್ನ ಜೊತೆ ಕ್ಲಾಸ್ನಲ್ಲಿ ಕೂರಿಸಿ ಲೆಕ್ಚರ್ ಕೇಳೋ ಹಾಗೇ ಮಾಡೋನು. ಆದ್ರೆ ನಮ್ಮ ದ್ರಷ್ಟಿ ಎಲ್ಲಾ ಡೆಂಟಿಸ್ಟಿಣಿ ಗಳ ಮೇಲೆ ಕೇಂದ್ರೀಕ್ರಿತ. 
ಹಾಗೂ ಹೀಗೂ ನಾವು ಓದಿ ಮುಗಿಸೋಕ್ಕು ಅಶೋಕ್ ಡೆಂಟಿಸ್ಟ್ (ದಂತ ವ್ಯದ್ಯಕೀಯ) ಆಗೋದುಕ್ಕು ಸರಿ ಹೋಯ್ತು. ಅದಾದ ಮೇಲೆ ನಮ್ಮೆಲ್ಲರ ಅಡ್ಡ 
ಮಲ್ಲೇಶ್ವರಂ ನ ಎಯಿಟ್ಟೀನ್ತ್ ಕ್ರಾಸ್ ನ  ಡಾಕ್ಟರ್ ಅಶೋಕನ ಕ್ಲಿನಿಕ್ ಗೆ ಶಿಫ್ಟ್ಆಯ್ತು.
ಕಾಲ ಚಕ್ರ ಉರುಳಿದಂತೆ, 
ಕೆಲಸದ ನಿಮಿತ್ತ,
ನಾವೆಲ್ಲರೂ ಬೇರೆ ಬೇರೆಯಾದೆವು.
ಆ ಒಂದು ಬೆಳಗ್ಗೆ ಡಾಕ್ಟರ್ ಅಶೋಕ್ 
ನಮ್ಮನ್ನೆಲ್ಲಾ ಅಗಲಿದ  ಸುದ್ದಿ ಅಶ್ವಥ್ನ ಫೋನಿನ ಮೂಲಕ ಭೋಪಾಲ್ನ ಲ್ಲಿದ್ದ ನನಗೆ ತಿಳಿಯ ಬಂತು. ಅದುನೂವೆ ತೀರ್ಕೊಂಡು ಮೂರು ದಿನಗಳ ನಂತರ,
ಅದಕ್ಕಿಂತಲೂ ಶಾಕಿಂಗ್ ಆಗಿ ಇದ್ದದ್ದು ರೈಲ್ವೆ ಟ್ರ್ಯಾಕ್ನಲ್ಲಿ ಸಿಕ್ಕ ಅಶೋಕನ ಶವ, 
ಪೊಲೀಸ್ರ  ನಿಷ್ಕರ್ಷ ಆತ್ಮಹತ್ಯೆ. 
ಎಲ್ಲವೂ ಮುಗಿದು ಒಂದು ವಾರದ ನಂತರ ಕೊಡಿಗೇಹಳ್ಳಿ ಲೇಔಟ್ನಲ್ಲಿದ್ದ ಶೋಕ ಸಂತ್ರಸ್ತ ಅಶೋಕನ ತಂದೆ ತಾಯಿ ತಂಗಿಯ ನೋಡಲು ಹೋಗಿದ್ದೆ.  
ದುಃಖ ತಡೆಯಲಾಗಲಿಲ್ಲ.
ಅವರಿಗಂತೂ ವಿಶ್ವಾಸವೇ ಇಲ್ಲಾ 
ಅಶೋಕನ ತಂದೆ ಭೀಮಯ್ಯನವ್ರು 
ಮಾಜಿ ಸೈನಿಕರು HMT ಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ನಿವೃತ್ತಿಯಾದವರು 
ಆತ್ಮಹತ್ಯೆ ಮಾಡಿಕೊಳ್ಳುವಂತ ಹೇಡಿಯಲ್ಲ 
ನನ್ನ ಮಗ ಅಂತ ಖಚಿತ ವಾಗಿ ಹೇಳಿದಾಗ 
ನಮಗೂ ಮೊದಲಿಂದಲೂ ಆ ಸಂದೇಹವಿತ್ತು.ಸ್ನೇಹಕ್ಕೆ, ಸೌಹಾರ್ದತೆಗೆ ಒಡೆಯ ಇಂದು ನಮ್ಮೊಟ್ಟಿಗಿಲ್ಲಾಂದ್ರೆ 
ಮನಸೆಲ್ಲಾ ಕಸಿವಿಸಿ, 
ಏನೋ ಒಂದು ತರಹ ಭ್ರಮೆ.
ಅಮೂಲ್ಯ ಹಾಗೂ ಅಲಭ್ಯವಾದ ಮಿತ್ರನ 
ಕಳೆದು ಕೊಂಡ ಕಳವಳಿ.
ಪೋಲೀಸರ ಹತ್ತಿರ ಜೂಜೋದು ಸಾಧ್ಯವಾಗಲಿಲ್ಲ.

      ( ಬಿಳಿಯ ಜುಬ್ಬಾ ದಲ್ಲಿ Dr.N.B.ಅಶೋಕ) ಘಟನೆಯ ಒಂದು ವರ್ಷದ ಮುಂಚೆ ಸಿಂಗಪೂರ್ ನಲ್ಲಿ Dr. ಕೊಂಡಾ ರೆಡ್ಡಿ ಯವರ ಜೊತೆ).

ಅಶೋಕನ ತಂದೆ ಭೀಮಯ್ಯನವ್ರ ಸಂಶಯ ಮುಕ್ಕೋಣದಲ್ಲಿತ್ತು, 
ಅಂದ್ರೆ ಥ್ರೀ Angles 
ಮೊದಲನೇ Angle:
ಅಶೋಕ ದುಬಾಯ್ ಗೆ ಹೋಗಿ ಅಲ್ಲಿ ಪ್ರಾಕ್ಟೀಸ್ ಮಾಡುವ ಇಚ್ಛೆಯಿತ್ತು. ಅದಕ್ಕಾಗಿ ಏಜೆಂಟ್ಗಳಿಗೆ ದೊಡ್ಡ ಅಮೌಂಟ್ ಕೊಟ್ಟಿದ್ದ. ಆ ಹಣ ವಾಪಸ್ ಕೇಳಲು ಹೋದವನ್ನ ಹೊಡೆದು ರೈಲ್ವೆ ಟ್ರಾಕ್ ನ ಮೇಲೆ ಹಾಕಿರಬೇಕು.
ಎರಡನೇ Angle: Dr.ಅಶೋಕ ನ ಲವ್ ಅಫೇರ್.
ಗೆಳತಿಯೊಬ್ಬಳು ಇದ್ದಳು. ಅವಳೊಟ್ಟಿಗೆ ಶೀಘ್ರದಲ್ಲಿ 
ಮದುವೆ ಆಗುವ ವಿಷಯವ ಮಿತ್ರರಲ್ಲಿ ಹಂಚಿದ್ದ.
ಆದ್ರೆ ಅವಳು ಯಾರೂಂತ ಯಾರಿಗೂ ಗೊತ್ತಿರಲಿಲ್ಲಾ. 
ಬೇರೆ ಯಾರೋ ಆ ಯುವತಿಯ ಇಷ್ಟ ಪಟ್ಟಿದ್ದರು.
ಆದ್ರೆ ಆಕೆ ಡಾಕ್ಟರ್ ಅಶೋಕನ್ನ ಇಷ್ಟಪಟ್ಟದರಿಂದ ಅಶೋಕ್ ನನ್ನು ಮುಗಿಸಿಬಿಟ್ರು.
ಮೂರನೇ Angle 
ಹೊಟ್ಟೆಕಿಚ್ಚು  ಅದೇ ರಸ್ತೆಯಲ್ಲಿ ಇದ್ದ ಇನ್ನೊಬ್ಬ ಡೆಂಟಿಸ್ಟ್  ಡಾಕ್ಟರ್ ಅಶೋಕ್ ಬರೋದಿಕ್ಕೆ ಮುಂಚೆ ಅವರ ರೋರಿಂಗ್ ಪ್ರಾಕ್ಟೀಸ್ ನಡೀತಿತ್ತು ಡಾಕ್ಟರ್ ಅಶೋಕ್ ರವರ ಕ್ಲಿನಿಕ್ ಬಂದಮೇಲೆ  
ಅವರ ಕ್ಲಿನಿಕ್ ನ ಆದಾಯ ಕ್ಷೀಣವಾಗಿತ್ತು ಅದೂ ಅಲ್ಲದೆ  ಡಾಕ್ಟರ್ ಅಶೋಕ ರಾತ್ರಿ 12ಘಂಟೆಗೆ ಕ್ಲಿನಿಕ್ ಮುಚ್ಚಿ ಒಬ್ಬನೇ ಸ್ಕೂಟರ್ ನಲ್ಲಿ ಮನೆಗೆ ಹೋಗುತಿದ್ದ. ಹೊಟ್ಟೆಕಿಚ್ಚು ಕ್ಲಿನಿಕ್ ನ ಮಾಲೀಕ  ಬಾಡಿಗೆ ಹಂತಕರ ಮೂಲಕ ಆಕ್ಸಿಡೆಂಟ್ ಮಾಡಿ ಅಥವಾ ಮಾಡಿಸಿ ರೈಲ್ವೆ ಟ್ರಾಕ್ ನಲ್ಲಿ ಹಾಕಿರಬಹುದೂಂತ 
ಇದು ಯಾವ ಪಾಯಿಂಟ್ ನ್ನು  ಘಣನೆಗೆ  ತೆಗದುಕೊಳ್ಳದೆ ಪೊಲೀಸರು ತಮ್ಮದೇ ಆದ ನಿಷ್ಕರ್ಶೆ  ಆತ್ಮಹತ್ಯೆ ಅಂತ ಹೇಳಿ ಕೇಸ್ ಕ್ಲೋಸ್ ಮಾಡಿದರು.
ಯಾಕೆ ಆತ್ಮಹತ್ಯೆ ಮಾಡಿಕೊಂಡ್ರು ಅನ್ನೋದಕ್ಕೆ ಯಾವೊಂದು ಕಾರಣ ವನ್ನು ನೀಡಲಿಲ್ಲ.
ಪೊಲೀಸರಿಗೆ ಅದೊಂದು ಪ್ರಕರಣ ಮಾತ್ರ 
ನಮಗೆ ಮಿತ್ರನ ಕಳೆದುಕೊಂಡ ದುಗುಡ 
ಅಶೋಕನ ತಂದೆ ತಾಯಿ ತಂಗಿಗೆ 
ಅದೊಂದು ತುಂಬಲಾರದ ನಷ್ಟ 
ಆತ್ಮಹತ್ಯೆ ಅಲ್ಲ ಹತ್ಯೆ ಅನ್ನೋದು  
ಇನ್ನೂವೆ ಬಗೆಹರಿಯಲಾಗದ 
ನಿಗೂಢ ಮೃತ್ಯು 



ಕಾಮೆಂಟ್‌ಗಳು

  1. ಬಿಳಿ ಜುಬ್ಬಾದಲ್ಲಿ Dr.N.B. Ashok ಹಾಗೂ Dr. P. Kondareddy Singapore University ಯ ಪ್ರಾಂಗಣ ದಲ್ಲಿ ತೆಗೆದುಕೊಂಡ ಫೋಟೋ

    ಪ್ರತ್ಯುತ್ತರಅಳಿಸಿ
  2. Very sad to have lost such a thick friend. Thank you Sir for your recollection of the valued friendship 🙏 How unfortunate his loss has been to the parents. And, your genuine feelings are so overwhelming

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.