ನೇತ್ರಾವತಿಯ ಫೋಟೋ
ಆತನ ಪೂರ್ತಿ ಹೆಸರು
ಪಾಲಸಮುದ್ರಮ್ ಕೊಂಡಾ ರೆಡ್ಡಿಂತ.
Milk Sea ಕೊಂಡಾ ರೆಡ್ಡಿಂತ ಫೇಮಸ್.
ನಾವೆಲ್ಲಾ ಅವನನ್ನ ರಾಣಾತ್ರ ಅಂತ ಕರೀತಿದ್ವಿ.
ಯಾರು ಈ ಹೆಸರಿಟ್ರೋ ಗೊತ್ತಿಲ್ಲ.
Ranatra ಏನೂ ಎಂಬುದನ್ನ,
ನೀವೇ ಗೂಗಲ್ ಮಾಡಿ ತಿಳ್ಕೊಳ್ಳಿ.
ನಮಗೆ ಅದು ಕೋಡ್ ಭಾಷೆ.
ಸದ್ಯಕ್ಕೆ ಒಂದು ಕ್ಲೂ...
ಏನ್ ತಿಂದ್ರೂವೆ ಅವನ ಮೈಗೆ ಅಂಟುತ್ತಿರಲಿಲ್ಲ.
ಅವ್ನು ಇದನ್ನೆಲ್ಲಾ ಕೇರೇ ಮಾಡ್ತಿರಲಿಲ್ಲ.
BFSc., MFSc., ಜೊತೆಗಾರ,
ಕಾಲೇಜು ಟೇಬಲ್ ಟೆನಿಸ್ ಜೋಡಿದಾರ.
ಯಾಕೆ ಅವನ ಬಗ್ಗೆ ಹೇಳೋಕೆ ಶುರು
ಮಾಡಿದೇಂತಂದ್ರೆ,
ಅವ್ನು ಮಲ್ಟಿ ಟ್ಯಾಲೆಂಟೆಡ್ ಜೀನಿಯಸ್.
ಅಂದ್ರೆ ಬಹುಮುಖ ಪ್ರತಿಭೆಯ ಧಣಿ.
ಆರ್ಟ್,ಪೈಂಟಿಂಗ್ ನಿಪುಣ, ಕೈಯಲ್ಲಿ ಗುಂಚ ಹಿಡ್ಕೊಂಡೇ ಹುಟ್ಟಿರಬೇಕು.
ಹ್ಯಾಂಡ್ ರೈಟಿಂಗ್ ಅಷ್ಟು ಸುಂದರ.
ಅದಕ್ಕಿಂತಲೂ ಅತಿ ಸುಂದರ,
ಆತನ ಗುಂಗುರು ಗುಂಗುರು ತಲೆ ಕೂದಲು
ನಾವೆಲ್ಲಾ ಸ್ವಲ್ಪ ಲೆಫ್ಟ್, ಜಾಸ್ತಿ ರೈಟ್ ತಲೆಕೂದಲ ಬಾಚಿದ್ರೆ
ಕೊಂಡಾರೆಡ್ಡಿ ಸ್ವಲ್ಪ ಡಿಫರೆಂಟ್,
ಅವನ ನಂಬಿಕೇನ್ನಿ ಅಥವಾ ಊಹೆ ಇರಬಹುದೋ
ಡಿಫರೆಂಟ್ ಅಂದ್ರೆ ಭಿನ್ನ
ಹಾಗಿದ್ರೇನೆ ಎಲ್ರೂ ಗಮನಿಸ್ತಾರೇಂತ
ಆತ ತಲೆಯ ಕೂದಲ ನಡುವೆ ಕೈ ಆಡಿಸಿ
ಒಂದು ಲೈನ್ ಎಳುದು
ಸ್ವಲ್ಪ ,ರೈಟ್
ಜಾಸ್ತಿ ಲೆಫ್ಟ್,
ಅಂತ ಬಾಚಿದ್ರೆ 11 ನೇ ಕ್ಲಾಸ್ ಹುಡುಗಿಯರು
ಅವನ ಗುಂಗುರು ಕೂದಲನ್ನ
ಲೆಫ್ಟ್ ಕಡೆ ನೋಡ್ತಾನೆ ಇರೋರು.
ಆತ ನಕ್ಕರೆ ಮತ್ತೆ ರೈಟೋ ರೈಟು
ಪಾಲಸಮುದ್ರಮ್, ಪೆನುಕೊಂಡಾ, ಮದನಪಲ್ಲಿ, ಹಿಂದೂಪುರ್,
ಹೀಗೇ ಹುಟ್ಟಿ, ಬೆಳದ, ಓದಿದ ಊರುಗಳ ಜೊತೆ ಕೊನೆಗೆ ಸೇರಿದ್ದು ಹುಡುಗಿಯರಿಲ್ಲದ
ಮಂಗಳೂರ ಫಿಶರೀಸ್ ಕಾಲೇಜು.
ಹಾಗೆಯೇ ನಾವೂ ಭೇಟಿಯಾಗಿದ್ದು
ಜೊತೆ ಸೇರಿದ್ದು ಇಲ್ಲೇ.
ಮಂಗಳೂರಿನ ಫಿಶರೀಸ್ ಕಾಲೇಜು
ಕ್ಲಾಸ್ಮೇಟ್, ಹಾಸ್ಟೆಲ್ ಮೇಟ್,
ಸ್ಪೋರ್ಟ್ಸ್ ಮೇಟ್...
ವಾಳು ತೆಲಗ್ ಲೋ ಮಾಟ್ಲಾಡ್ತೆ,
ನಾನು ಕನ್ನಡದಲ್ಲಿ ಮಾತಾಡ್ತಿದ್ದೆ.
ಫ್ರೆಂಡಶಿಪ್ ಭಾಷೆಯೇ ಬೇರೆ.
ಅದೇನು ಪ್ರಾಸಂಗಿಕವೋ,
ಅಥವಾ
ಆಕಸ್ಮಿಕವೋ,
ಗುಂಗುರು ಕೂದಲಿನ ಪುಟ್ಟಪರ್ತಿ ನಿವಾಸಿ,
ಶ್ರೀ ಸತ್ಯ ಸಾಯಿಬಾಬಾ ನೂವೆ
ಇವ್ರ ಊರಿಗೆ ಹತ್ತಿರ.
ಆದ್ರೆ ಇವನಿಗೆ ಮಾಯಾ ಮಂತ್ರ
ಬರ್ತಾ ಇರಲಿಲ್ಲಾ
ಇವನಿಗೆ ಗೊತ್ತಿದ್ದೆಲ್ಲಾ ಒಂದೇ ಒಂದು
ವೈಜ್ಞಾನಿಕ ಅನ್ವೇಷಣೆಯಷ್ಟೇ.
ಹೀಗಿರುವಾಗ
(ಅಂದ್ರೆ ಥರ್ಡ್ ಇಯರ್ BFSc)
ಕೊಂಡಾ ರೆಡ್ಡಿ ಯವರ ಅಣ್ಣ
ರಾಮಿರೆಡ್ಡಿ ಯವರು
ಅವನು ಚೆನ್ನಾಗಿ ಓದುವದನ್ನು ಪ್ರೋತ್ಸಾಹಿಸಲು ಅವನಿಗೆ
ಬನ್ನಿ ಕ್ಯಾಮೆರಾ ಒಂದನ್ನು ಉಡುಗೊರೆಯಾಗಿ ಕೊಟ್ಟರು.
ಪ್ರೋತ್ಸಾಹವೋ ಇಲ್ಲಾ.,
ಓದಿಗೆ ಅಡಚಣೆಯೋ?
ವ್ಯೂ ಫೈಂಡರ್ ನಲ್ಲಿ ಕಣ್ಣಿಟ್ಟು
ಕೊಂಡನ ಚಿತ್ರ ಕಲೆಯ ನೋಡೋಣ ಬನ್ನಿ
ಬನ್ನಿ ಕ್ಯಾಮೆರಾಮೊದಲೇ ಕೊಂಡಾ,
ಅವನ ಕೈ ಗೆ ಮಾಣಿಕ್ಯ
ಕೇಳಬೇಕಾ, ಮೇಲೆ ಕೆಳಗೆ
ದಾಯೆ ಬಾಯೇಂತ
ಬಗ್ಗಿ ಎದ್ದು ಬಿದ್ದು
ಫೋಟೋ ತೆಗೆದದ್ದೇ ತೆಗೆದಿದ್ದು
ಫಿಲಂ ಇಲ್ಲದೇನೆ,
ಹಲ್ಲಿಲ್ಲದವನಿಗೆ
ಹಾಲವಲಕ್ಕಿಗೆ ಸಕ್ರೆ ಹಾಕಿ ಕೊಟ್ಟಂಗೆ.
ನಮ್ಮೆಲ್ಲರ ಮುಂದೆ ಕೊಂಡಾ ರೆಡ್ಡಿ
ಕ್ಯಾಮೆರಾ ಪುರಾಣವ
ಶುರು ಮಾಡೇ ಬಿಟ್ಟ, ಅದೇ
ಬನ್ನಿ ಕ್ಯಾಮೆರಾ ಪುರಾಣ
ಇದೊಂದು ಸ್ಪೆಷಾಲಿಟಿ ಕ್ಯಾಮೆರಾ
ಅದರಲ್ಲಿ 6×6 ಎಕ್ಸ್ ಪೋಷರ್ ನ 120 ಫಿಲಂರೋಲ್ ಹಾಕಿದ್ರೆ 12 ಫಿಲಂಗಳನ್ನ
ನಿರ್ವಿಗ್ನವಾಗಿ ಕ್ಲಿಕ್ ಮಾಡಿ ಫೋಟೋ
ತೆಗೆಯಬಲ್ಲ ವ್ಯೂ ಫೈಂಡರ್ ಕ್ಯಾಮೆರಾ
ಕ್ಯಾಮೆರಾದ ಮುಂಭಾಗದಲ್ಲಿ ಅಂದ್ರೆ
ಅಡ್ಜಸ್ಟ್ ಬಲ್ ಲೆನ್ಸ್ ನ ಕೆಳಗೆ ಇಂಡಿಯ
ಮ್ಯಾಪ್ ಹಾಗೂ Made in India
ಸ್ಪಷ್ಟವಾಗಿ ಕಾಣಿಸುತ್ತೆ,
ಅದನ್ನ ಬಲು ಹೆಮ್ಮೆಯಾಗಿ ತೋರಿಸಿದ.
ಆ ಕ್ಯಾಮೆರಾ ನ ಬಹಳ ನಾಜೂಕಾಗಿ
ಒಂದು ಚೂರೂ ಧೂಳಿನ ಕಣ ಲೆನ್ಸ್ ಮೇಲೆ
ಬೀಳದಂತೆ ಜಾಗ್ರತೆಯಾಗಿ
ಬಳಸ್ಕೊಂಡು ಬರುತ್ತಾ ಇದ್ದ
ಅವಂದೇ ಫೋಟೋ ಆದ್ರುವೇ
ಬೇರೆಯವರು ಮುಟ್ಟ ಬಾರದು.
ಅವನೇ ಕ್ಲಿಕ್ ಮಾಡ ಬೇಕು.
ನನಗಷ್ಟೇ ಫ್ರೀಡಂ ಅವನ ಫೋಟೋಗಳನ್ನು
ನಾನು ಮಾತ್ರ ತೆಗೆಯಬಹುದು ನಾನೇ ತೆಗೆಯಬೇಕು.
ಫಿಶರೀಸ್ ನಲ್ಲಿ ಏನ್ ರಿಸರ್ಚ್ ಮಾಡಿದ್ನೋ
ಗೊತ್ತಿಲ್ಲಾ ಆದ್ರೆ ಕ್ಯಾಮೆರಾ ನ ಇಟ್ಕೊಂಡು
ಬಹಳ ಎಕ್ಸ್ಪೆರಿಮೆಂಟ್ ಮಾಡ್ತಾ ಇದ್ದ
ಅವನ ಆ ಕಾಲದ ಅಂದ್ರೆ 70ರ ಸಾಧನೆ
ಡಬಲ್ ಆಕ್ಟಿಂಗ್ ಫೋಟೋ
ಲೆನ್ಸ್ ನ ಒಂದು ಕಡೆ ಪೇಪರ್ ಅಂಟಿಸಿ
ಇನ್ನೊಂದು ಕಡೆ ತೆಗೆಯೋದು
ಮತ್ತೊಂದು ಕಡೆ ಅಂಟಿಸಿದ್ದ ಪೇಪರ್ ತೆಗೆಯೋದು
ಇನ್ನೊಂದು ಕಡೆ ಆಂಟಿಸೋದು ಹೀಗೇ
ವಿವಿಧ ಪ್ರಯತ್ನಗಳ ಮಾಡ್ತಾಇದ್ದ
Ichthyology (ಇಕ್ತಿಯೋಲಜಿ) ಕ್ಲಾಸ್,
ಮೀನುಗಳ ಚಿತ್ರ ಬರೆದು ಸಬ್ ಮಿಟ್
ಮಾಡುವ ಡೆಡ್ ಲೈನ್ ಬಂದೇಬಿಡ್ತು.
ಹಾಸ್ಟೆಲ್ ನಲ್ಲಿ ಕಲ್ ಬಿಲಿ.
ಎಲ್ರೂ ಕೊಂಡಂಗೇ ಮೊರೆ ಹೋದರು.
ಕೊಂಡಾ ಸುಂದರವಾಗಿ ಕಾಟ್ಲ, ರೋಹು,
ಮೃಗಾಲ್ ಮೀನುಗಳ ಚಿತ್ರ ಬಿಡಿಸಿಟ್ರೆ ಸಾಕು
ನಾವದನ್ನ ಕಾಪಿ ಮಾಡೋ ವಿಧಾನ ಸ್ವಲ್ಪ ಭಿನ್ನ
ದಪ್ಪ ದಪ್ಪ ಪುಸ್ತಕಗಳನ್ನು ಲೈಬ್ರರಿಯಿಂದ
ತಂದು ಮೇಜಿನ ಮೇಲೆ,
ಈ ಕಡೆ ಎರಡು
ಆ ಕಡೆ ಎರಡು ಪುಸ್ತಕಗಳನನ್ನಿಟ್ಟು
ಪುಸ್ತಕಗಳ ನಡುವೆ ವಿದ್ಯುತ್ ಬಲ್ಬ್ ಇಡಲು
ಅದರ ಮೇಲೆ ಗಾಜಿನ ಸೇತುವೆ
ಕೆಳಗಿಂದ ಬರೋ ಬೆಳಕಿನಲ್ಲಿ
ಡ್ರಾಯಿಂಗ್ ನ ಕಾಪಿ ಸುಂದರವಾಗಿ
ಮಾಡಲು ಸಾಧ್ಯ ವಾಗ್ತಿತ್ತು
ಒರಿಜಿನಲ್ಗಿಂತಲೂ ಕಾಪಿ
ಸುಂದರವಾಗಿ ಮೂಡಿಬರ್ತಿತ್ತು.
ಹೀಗೇ ಕಾಲೇಜು ಲೈಫ್ ಏನೊಂದು
ಗೋಳಿಲ್ಲದೆ (ಗೋಲ್ ಇಲ್ಲದೆ)ನಡೀತಿತ್ತು
ಒಂದು ಶುಕ್ರವಾರ ರಜೆ
ಶನಿವಾರ, ಭಾನುವಾರಗಳೊಂದಿಗೆ
ಸೇರಿ ಬಂದಿತ್ತು.
ನಾನು, ಕೊಂಡಾ, ಮಂಜು, ವಿಜಯ್
ಅಶ್ವಥ್, ಅಯ್ಯಪ್ಪನ್, ಐದು ಜನ
ಟ್ಯಾಕ್ಸಿ ಯೊಂದನ್ನ ಬಾಡಿಗೆಗೆ ತೆಗೊಂಡು
ಆರು ಜನ ಟ್ರಾವೆಲ್ ಮಾಡಿದ್ವಿ.
ಮಂಗಳೂರಿಂದ ಮೂಡಬಿದ್ರಿ
ಜೈನ ಮತದ ಗುಡಿಗಳನ್ನು museum ನ್ನು
ನೋಡಿ ರಾತ್ರಿ ಕಾರ್ಕಳದಲ್ಲಿ ನೈಟ್ ಹಾಲ್ಟ್ ಮಾಡಿ
ಬೆಳಗ್ಗೆ ಕಾರ್ಕಳ ಸುತ್ತಿ ನೋಡುವ ಬದಲು
ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ
ಹೋಗುವ ವಿಚಾರಕ್ಕೆ ಎಲ್ಲರ
ಸಹಮತಿಯು ಸಿಗ್ತು.
ಅದೂ ಅಲ್ದೆ ನಮ್ಮ ಕಾಲೇಜಿನ ಡಾಕ್ಟರ್ ಗುಪ್ತಾ
ಹಾಗೂ ಶ್ರೀ ಕಟ್ಟಿ ಯವರು ಹಲವಾರು ಬಾರಿ limnology ಪ್ರಾಕ್ಟಿಕಲ್ ಕ್ಲಾಸ್ ಗಾಗಿ
ಕಾರ್ಕಳದ ರಾಮ ಸಮುದ್ರಮ್ ಟ್ಯಾಂಕ್ನಲ್ಲಿ
ಎಷ್ಟು ಬಾರಿ ನೀರು ಕುಡಿಸಿದರೋ,
ಒಂದು ಐಪಿ ಗೆ ಗೊತ್ತಿರಬೇಕು ಇಲ್ಲಾಂದ್ರೆ
ಕಾರ್ಕಳದಲ್ಲಿ ನೆಲಸಿರುವ ಗೋಮಟೇಶ್ವರನಿಗೇ ಗೊತ್ತುಂಟು ಮಾರಾಯ್ರೆ.
ದಿಢೀರ್ ಅಂತ ಕೊಂಡಾಗೆ ಜ್ಞಾಪಕಕ್ಕೆ ಬಂತು
ಬನ್ನಿ ಕ್ಯಾಮೆರಾ ಏನೋ ತೆಗೊಂಡಿದ್ದಾಯ್ತು ಆದ್ರೆ ಅದಕ್ಕೆ ಫಿಲಂ ರೋಲ್ ಖರೀದಿಸಬೇಕಿತ್ತು.
ಸರಿ ಕಾರ್ಕಳದ ಮೇನ್ ಮಾರ್ಕೆಟ್ ರಸ್ತೆಯಲ್ಲಿ
ಬೆಳಗ್ಗೆ 8 ಘಂಟೆ ಇರಬೇಕು. ಮುಖ್ಯವಾಗಿ ಫೋಟೋ ಸ್ಟುಡಿಯೋ ಎಲ್ಲೀಂತ ಅಲ್ಲಿ ಇಲ್ಲಿ ಕೇಳಿ ಬಸ್ ಸ್ಟಾಂಡ್ ಹತ್ತಿರ ಇದ್ದ ಪ್ರಕಾಶ್ ಫೋಟೋ ಸ್ಟುಡಿಯೋಗೆ ಬಂದ್ವಿ ಸ್ಟುಡಿಯೋ ಅಂಗಡಿಯು ತೆಗೆದಿರಲಿಲ್ಲ.
ಅಕ್ಕ ಪಕ್ಕದಲ್ಲಿರುವವರನ್ನು ಅವರ ಮನೆ ಎಲ್ಲಿದೇಂತ ವಿಚಾರಿಸಿ ಅವರ ಮನೆಗೆ ಹೋಗಿ
ಸ್ಟುಡಿಯೋ ಮಾಲೀಕ ನ ಕರೆದುಕೊಂಡು ಬಂದು
ಕೊಂಡಾ ಫಿಲಂ ರೋಲ್ ತೆಗುದುಕೊಂಡು
ಫೋಟೋಗಾಗಿ ಕೊಂಡಾ ರೆಡ್ಡಿ ಪಟ್ಟ ಅವಿರತ ಪ್ರಯಾಸ ನಿಜಕ್ಕೂ ಪ್ರಶಂಸನೀಯ
ಅಷ್ಟು ಫೋಟೋಗ್ರಫಿ ಹುಚ್ಚು, ಏನಾದ್ರೂ ಫಿಲಂ ಫೀಲ್ಡ್ ಗೆ ಹೋಗಿದಿದ್ದರೆ...
ಬಿಡಿ, ಅದರ ಲಾಸ್ಸು ನಮಗೆ ಗೈನು
ರಸ್ತೆಯಲ್ಲಿ ಒಂದು ಅವಕಾಶ ವನ್ನೂ ಬಿಡದೆ
ಗೋಮಟೇಶ್ವರ ನ ಮುಂದೆ ,
ಸೇತುವೆ ಮೇಲೊಂದು ಫೋಟೋ ಸೆಶನ್
ಮುಗಿಸಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಒಂದು ಹನ್ನೊಂದು ಘಂಟೆಗೆ ತಲುಪಿದೆವು. ಬ್ಯಾಗು,ಬಟ್ಟೆಎಲ್ಲವನ್ನು ಗಾಡಿಯಲಿಟ್ಟು
ಮೊದಲು ಕುಮಾರಧಾರ ನದಿಯಲ್ಲಿ ಸ್ನಾನ
ಆಮೇಲೆ ದೇವರ ದರ್ಶನ ಎಂದು ನಿರ್ಣಯಿಸಿ
ನಡೆ ಕಟ್ಟಿದೆವು. ರಥವೊಂದನ್ನು ಕಂಡು
ನಿಂತು ವಿಚಾರಿಸಿದಾಗ ವರ್ಷಕ್ಕೊಮ್ಮೆ
ಡಿಸೆಂಬರ್ ನಲ್ಲಿ ನಡೆಯುವ ಚಂಪ ಷಷ್ಠಿ
ರಥೋತ್ಸವ ದ ರಥವಿದು.
ಚಾನ್ಸ್ ಬಿಡ್ತಾನಾ ಕೊಂಡಾ,
ಆತನ ಆಜ್ಞೆಗೆ ಅನುಗುಣವಾಗಿ
ಅದರ ಮುಂದೆ ಪೋಸ್ ಕೊಟ್ಟು
ನನ್ನ ಕೈ ಯಲ್ಲಿ ಕ್ಯಾಮೆರಾ...
ಕ್ಲಿಕ್
ಇಲ್ಲೊಂದು ಫೋಟೊ
(ನಂಬೋಕ್ಕೆ ಆಗಲ್ಲಾ ಈ ಬ್ಲಾಗ್ ನ ಎಲ್ಲಾ ಫೋಟೋಗಳು ಐವತ್ತು ವರುಷಗಳ ಹಿಂದೆ ತೆಗೆದದ್ದು.ಸುಂದರ, ಸ್ಪಷ್ಟ, ಸುಮ್ಮನೇನ
ಬನ್ನಿ ಕ್ಯಾಮೆರಾ)
ಬನ್ನಿ ಕ್ಯಾಮೆರಾ ಫೋಟೋಗ್ರಾಫರ್ ಸುರೇಶ
ಕುಕ್ಕೆ ಸುಬ್ರಮಣ್ಯ ದೇವಸ್ಥಾನ ರಥದ ಮುಂದೆ.
ನನಗೂ ಕೊಂಡಾನ ಕ್ಯಾಮೆರಾ
ಹುಚ್ಚು ಸ್ವಲ್ಪ ಹಚ್ಚಿರಬೇಕು
ಹೀಗಾಗಿ ಕೊಂಡಾ ಸ್ವಲ್ಪ
ಫೋಟೋ ರೇಷನಿಂಗ್ ಶುರು ಮಾಡಿದ .
ಅಲ್ಲಿಂದ ಹೊರಟು ಕುಮಾರಧಾರ ನದಿಯ ನೋಡಿದೊಡನೆ ಜುಳು ಜುಳು ಎಂದು ಹರಿಯುತಿದ್ದ ನದಿಯಲ್ಲಿ ಕಾಲಿಡಲು
ಇಚ್ಛೆಯಾಯ್ತು. ಇದೇ ನದಿ ಮುಂದೆ ಉಪ್ಪಿನಂಗಡಿಯ ಬಳಿ ನೇತ್ರಾವತಿಯಲ್ಲಿ ಸಂಗಮವಾಗಿ ವಿಶಾಲವಾದ
ನೇತ್ರಾವತಿ ನದಿಯಾಗಿ ಬಂಟವಾಳ ನಗರವ ಒಮ್ಮೊಮ್ಮೆ ಸುತ್ತು ಬಳಸಿ ಕೊಚ್ಚಿ
ಕೊನೆಗೆ ಅರಬ್ಬೀ ಸಮುದ್ರದಲ್ಲಿ ಮಿಲನ.
ಕುಮಾರಧಾರ ನದಿಯಲ್ಲಿ
ಕಾಲಿಟ್ಟೊಡನೆ ತಣ್ಣಗೆ ಹಿತವಾಗಿತ್ತು
ಹರಿಯುತ್ತಿದ್ದ ನೀರು ಕುಡಿಯುವಷ್ಟು ಶುದ್ಧ
ಹಾಗೂ ತಳ ಕಾಣುವಷ್ಟು ಸ್ವಚ್ಛವಾಗಿತ್ತು
ನೋ ಟರ್ ಬಿಡಿಟಿ ಅಂತ ಹೇಳ್ದ ಇಂಗ್ಲೀಷಲ್ಲೇ ಮಾಟ್ಲಾಡೋ ಕನ್ನಡದ ಅಶ್ವಥ್ ರೆಡ್ಡಿ.
ಸ್ವಲ್ಪ ಓದುವದರಲ್ಲಿ ಕೀನ್ ಟೈಪ್ ಐಪಿ ಕಂಡು
ಹಿಡಿದೇ ಬಿಟ್ಟ ಸಣ್ಣ ಸಣ್ಣ ಬಣ್ಣ ಬಣ್ಣದ ಮೀನುಗಳು ಪಾದದ ಹಿಮ್ಮಡಿಯ ನೋಚಲು ಅವೆಲ್ಲಾ
ಜೀಬ್ರಾ ಮೀನುಗಳು Danio rerio ಡೇನಿಯೋ ರೇರಿಯೋ ಮೀನುಗಳು ಎಂದು.
ಇಷ್ಟರಲ್ಲಿ ಪಟ್ಟಾ ಪಟ್ಟಿ ಲೈನ್ ಹೊಂದಿದ್ದ ಸಣ್ಣ ಮೀನುಗಳ ಜುಂಡೊಂದು ವಿಜಯ್ ಕಾಲ ಸುತ್ತಿ ಬರಲು ಮಂಜು ಸುಮ್ಮನಿರಲಾರದೆ ಕೂಗಿ ಹೇಳ್ದ ಟೈಗರ್ ಬಾರ್ಬ್ Puntius ticto
ಪಂಟಿಯಸ್ ಟಿಕ್ಟೊಂತ ಗುರುತು ಹಿಡಿದ.
ಕ್ಲಾಸ್ ರೂಮಿನಲ್ಲಿ ಹಿಲ್ ಸ್ಟ್ರೀಮ್
ಫಿಷಸ್ ಓದಿದ್ದಷ್ಟೇ, ನೋಡೋದು ಫಸ್ಟ್ ಟೈಮ್
ಹಾಗೇ ನದಿಯ ಹಾದಿ ಹಿಡಿದು ಎದಿರು ದಿಕ್ಕಲ್ಲಿ
ಅಂದ್ರೆ ಅಪ್ ಸ್ಟ್ರೀಮ್ ಗೆ ಎದುರಾಗಿ ನಡೆಯಲಾರಂಭಿಸಿದೆವು.
(ಅಶು ಬನ್ನಿ ಕ್ಯಾಮೆರಾ ಸಿಕ್ಕ ಖುಷಿಯಲ್ಲಿ ಕಾಲುವೆ
ದಾಟ್ಟುವಾಗ್ಲೇ ಕ್ಲಿಕ್ ಮಾಡಿಬಿಟ್ಟ).
ನದಿ ಮೂಲ ಹಾಗೂ ರಿಷಿ ಮೂಲ
ಹುಡುಕಲು ಹೋಗ ಬಾರದೂಂತ
ಒಂದು ಗಾದೆ ಇದೆ.
ಆದ್ರೂವೆ ಕುಮಾರಧಾರ ನದಿಯ
ಸೇರಲು ಇನ್ನೊಂದು
ಬೆಟ್ಟದಿಂದ ಬುಗ್ಗೆಯೊಂದರಿಂದ
ಹರಿದು ಬರುತಿದ್ದ ಧಾರೆಯನ್ನು
ಅನುಸರಿಸಿ ಅದರ ಮೂಲ ಹುಡುಕಲು ಹೊರಟೆವು.
ಕಡಿದಾದ ಕಲ್ಲು ಬಂಡೆಗಳ ನಡುವೆ ಹರಿದು ಬಂದ ನೀರು ಸ್ವಚ್ಛವಾಗಿರಲು
ಎಲ್ರು ಶರ್ಟ್ ಬನಿಯನ್ ಬಿಚ್ಚಲು
ಬೆಟ್ಟದಿಂದ ಇಳಿದು ಬಂದ ಹಳ್ಳಿಯವ ನ ನೋಡಿ
ಕೊಂಡಾ ಅವನಿಗೆ ಫೋಟೋ ಕ್ಲಿಕ್ ಮಾಡುವ ವಿಧಿ ಯನ್ನ ಹೇಳ್ಕೊಟ್ಟು ನಮ್ಮೊಡನೆ ಓಡಿ ಬಂದು ಸೇರಿಕೊಂಡ. ನಾವೆಲ್ರು ಪ್ರಯತ್ನ ಪಟ್ಟಿದ್ರುವೇ
ಇಷ್ಟು ಚೆನ್ನಾಗಿ ಬರ್ತಿತ್ತೋ ಏನೋ?
ಕ್ಲಿಕ್...
ಆರು ಜನಾನೂ ಫೋಟೋಫ್ರೇಮ್ನಲ್ಲಿ
ಯಾರು ತೆಗೆದ್ರೂ ಕ್ಯಾಮೆರಾ ತನ್ ಕೆಲಸ ಮಾಡುತ್ತೆ
ನಂತರ
ನೀರಲ್ಲಿ ಇಳಿದು ಸ್ವಚ್ಛಂದವಾಗಿ ನೀರಾಡಿದೆವು.
ನಾವೆಲ್ಲಾ ನೀರಲ್ಲಿದ್ದಾಗ
ಕ್ಯಾಮೆರಾ ನಮ್ಮನ್ನೇ ನೋಡ್ತಾ ಇತ್ತು.
ಆದ್ರೆ ಕ್ಲಿಕ್ ಮಾಡೋರು ಯಾರೂ ಇರಲಿಲ್ಲಾ.
ಬರೀ ನದಿಯ ಜುಳುಜುಳು ಶಬ್ದ ಕೇಳಿ ಬರುತ್ತಿತ್ತು.
ದಿಢೀರ್ ಅಂತ ಹಳ್ಳಿ ಜನರ ಗುಂಪೊಂದು
ಬೆಟ್ಟದಿಂದ ಕೆಳಗಿಳಿದು
ಹಾ ಹೋ ಹಾ ಅಂತ ಚಿಲ್ಲಾಟ
ಜೋರ್ ಜೋರಾಗಿ ಕೂಗಾಡ್ತಾ ಬಂದ್ರು
ಹಿಂದೆ ಫಾರೆಸ್ಟ್ ಗಾರ್ಡುಗಳಿಬ್ಬರು
ಉದ್ದ ಹಾಗೂ ದಪ್ಪನೆಯ
ಎರಡು ಹಸಿರು ಬೊಂಬುಗಳಿಗೆ
ಚಿರತೆಯನ್ನು ನೆಟ್ ಒಂದರಲ್ಲಿ ಕಟ್ಟಿ
ಹೆಗಲ ಮೇಲೆ ನಾವಿದ್ದ ನೀರಿನ
ಹೊಂಡದ ಪಕ್ಕ ಹೊತ್ತುಕೊಂಡು ಹೋಗುತ್ತಿದ್ದರು.
ಒಂದು ನಿಮಿಷ ಹೃದಯ ಬಾಯಿಗೆ ಬಂತು
ಮಾತೇ ಬರಲಿಲ್ಲ.
ನೀರಲ್ಲಿದ್ರೂವೆ ಬೆವತು ಹೋದ್ವಿ..
ಹಿಂದೆ ಬಂದ ಹಳ್ಳಿಯವರು,
ಇದು ಚಿರತೆಗಳು ಓಡಾಟ ಇರುವ ಅರಣ್ಯ.
ಇಲ್ಲಿರಬೇಡಿ ಮರಳಿ ಹೋಗಿ ಅಂತ ಚೇತರಿಸಿದರು.
ಇಂತಹ ಒಂದು ದ್ರಶ್ಯವ ಕೈದು ಮಾಡಲು
ಕ್ಯಾಮೆರಾ ಕೈಯಲ್ಲಿರಲಿಲ್ಲ.
ನಾವು ಸಹ ಬಟ್ಟೆ ಗಿಟ್ಟೆ ಎಲ್ಲಾ ತೊಟ್ಕೊಂಡು
ಕೆಳಗಿಳಿಯಲು ಸಜ್ಜಾದ್ವಿ.
ಮಧ್ಯಾಹ್ನ ಒಂದು ಘಂಟೆಯಾಗಿತ್ತು.
ಐಪಿಗಂತೂ ಹಸಿವು ಕಂಟ್ರೋಲ್ ಮಾಡ್ಲಿಕ್ಕಾಗಲಿಲ್ಲ
ನಮ್ಮನ್ನೂ ಹಸಿವು ಕಾಡ ತೊಡಗಿತು.
ಝರಿಯಿಂದ ಕೆಳಗಿಳಿದು
ಪಕ್ಕ ಸಮತಳವಾದ ನೆಲದಲ್ಲೊಂದು
ಹಂಚಿನ ಮನೆ ಕಂಡೆವು.
ಮನೆಯ ಸುತ್ತಮುತ್ತ
ಸಗಣಿ ಸಾರಿಸಿ ಇನ್ನೂ ಹೆಚ್ಚು
ಸುಂದರಿಸಿದ ಹಾಗಿತ್ತು.
ಮನೆಗೆ ಹೋಗಿ
ಕುಡಿಯಲು ನೀರು ಕೇಳಿದೆವು
ಮನೆಯಿಂದ ಭಟ್ರು ಹೊರಗೆ ಬಂದ್ರು.
ಮನೆಯ ಕೊನೆಯಲ್ಲಿ
ಬಿಳಿ ಬಟ್ಟೆ ಕಟ್ಟಿದ ಮಡಿಕೆ ಕಂಡು ಬಂತು
ನದಿ ನೀರನ್ನ ಅಚ್ಛಗಟ್ಟಾಗಿ
ಚೌಕಾಕರದ ಬಿಳಿ ಪಂಚೆಯ ತುಂಡನ್ನು
ಮಡಿಕೆಯ ಕುತ್ತಿಗೆಗೆ ಕಟ್ಟಿ
ಫಿಲ್ಟರ್ ಮಾಡಿದ ನೀರನ್ನು
ಕುಡಿಯಲು ಕೊಟ್ಟರು.
ನಮ್ಮ ಬಗ್ಗೆ ಕೇಳಿದರು.
ಅವರು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ
ಪೂಜಾರಿಗಳು.
ಮಧ್ಯಾಹ್ನ
ಲಘು ಉಪಹಾರಕ್ಕೆ ಮನೆಗೆ ಬಂದಿದ್ದರು.
ಅಷ್ಟರಲ್ಲಿ
ಅಡಿಗೆ ಮನೆಯಿಂದ ಹೊರಬಂದ
ಅವರ ಸೊಸೆ ನಮ್ಮನ್ನು ನೋಡಿ
ನಮಸ್ಕರಿಸಿದರು.
ಅವರ ಹಿಂದೆ, ಸೀರೆ ಸೆರಗುಗಳಲ್ಲಿ
ತನ್ನನ್ನು ಬಚ್ಚಿಟ್ಟುಕೊಂಡು,
ಬೊಗಸೆ ಕಣ್ಣುಗಳಿಂದ
ಇಣುಕಿ
ನಮ್ಮನ್ನು ಅವಳು ನೋಡಲು
ನಾವು ಅವಳನ್ನು ನೋಡಲು
ಪುಟ್ಟ ಬೊಂಬೆ
ಭಟ್ರ ಮೊಮ್ಮಗಳು
ಮತ್ತೆ ಸೆರಗಂಚಿನಲ್ಲಿ ಮರೆಯಾದಳು.
ಭಟ್ರಿಗೆ ಏನನಿಸಿತೋ ಏನೋ
ನಮ್ಮ ಹಸಿವನ್ನು ಅರಿತರೋ ಏನೋ,
ಒಳ ಹೋದ ಭಟ್ರು ಹೊರಬಂದಾಗ
ಒಂದು ಐದು ನಿಮಿಷ ವೇಯಿಟ್ ಮಾಡಿ
ಉಪಹಾರ ರೆಡಿ ಆಗುತ್ತೆ
ತಿಂದು ಹೋಗಲು ಆಗ್ರಹಿಸಿದರು.
ರೋಗಿ ಬಯಸಿದ್ದೂ ಹಾಲು ಅನ್ನ
ವೈದ್ಯರು ಕೊಟ್ಟಿದ್ದೂ ಹಾಲು ಅನ್ನ
ನಾವು ಯಾರೂ ಸಂಕೋಚಕ್ಕೂ ಬೇಡಾಂತ ಹೇಳಲಿಲ್ಲಾ. ಮನೆಯೊಳಗೆ ಕರೆದು
ಭಟ್ಟರ ಜೊತೆ ಹಾಲಿನಲ್ಲಿ ಕೂರಿಸಿ
ಬಾಳೆಲೆಯಲ್ಲಿ ಗಮ ಗಮ ಪರಿಮಳದ
ಉಪ್ಪಿಟ್ಟು ಬಡಿಸಿದ್ರು ಅವರ ಸೊಸೆ
ಅವರ ಸೆರಗ ಬಿಡದೇ ಬಂದ
ಬೊಗಸೆ ಗಣ್ಣಿನ ಪುಟ್ಟ ಬೊಂಬೆ
ಮತ್ತೆ ಬಚ್ಚಿಟ್ಟುಕೊಂಡಳು.
ಹೆಸರು ಎಂತಾ ಎಂದು ಕೇಳಿದ್ದಕ್ಕೆ
ನೇತ್ರಾವತಿ ಎಂದು ಭಟ್ಟರು, ಅವರ ಸೊಸೆ
ಹಾಗೂ ಪುಟ್ಟಬೊಂಬೆ ಒಟ್ಟಿಗೆ ಹೇಳಿದರು.
ಫಸ್ಟ್ ಟೈಮ್ ಪುಳಕ್ಂತ ನಕ್ಕಳು.
ಫ್ಲಾಶ್ ಲೈಟ್ ಮನೆ ತುಂಬಾ ಹರಡಿತ್ತು.
ಉಪ್ಪಿಟ್ಟು ಜೊತೆಗೆ ಮಾವಿನ ಮಿಡಿ ಉಪ್ಪಿನಕಾಯಿ
ಅದ್ಭುತ ಕಾಂಬಿನೇಶನ್.
ಬಾಯಿ ಚಪ್ಪರಿಸಿಕೊಂಡು
ಹೊರ ಬಂದು ಕೈ ತೊಳದು
ಅವರಿಗೆ ಹಣವ
ನೀಡಲು ಅದನ್ನವರು ಸ್ವೀಕರಿಸಲು ನಿರಾಕರಿಸಿದರು.
ನಾವೆಲ್ಲರೂ ಧನ್ಯವಾದ ಹೇಳಿ ಹೊರಡಲು
ಕೊಂಡಾ ಹೇಳ್ದ ಭಟ್ರ ಜೊತೆ ಒಂದು ಫೋಟೋ
ಅಷ್ಟೇ ಬನ್ನಿ ಕ್ಯಾಮೆರಾ ನನ್ನ ಕೈಯಲ್ಲಿ ಕೊಟ್ಟ.
ಎಲ್ರನ್ನೂ ನಿಲ್ಲಿಸಿ
ಫೋಟೋ ತೆಗೆಯಲು ಸಿದ್ದವಾದಾಗ
ಅದುವರೆಗೂ ನಾಚಿಕೊಂಡು
ಬಚ್ಚಿಟ್ಟುಕೊಳ್ಳುತಿದ್ದ
ಬೊಗಸೆ ಕಣ್ಣಿನ ಪುಟ್ಟ ಬೊಂಬೆ
ಓಡಿ ಬಂದು ಗ್ರೂಪ್ ಫೋಟೋಗೆ
ಪೋಸ್ ಕೊಡಲು ನಿಂತಳು.
ಅದೇನೋ ಗೊತ್ತೇ ಆಗಲಿಲ್ಲಾ
ಪುಟ್ಟಿಯನ್ನು ಸರ್ರಂತ ಅವರಮ್ಮ ಕರೆದುಕೊಂಡು
ಮನೆಯೊಳಗೆ ಹೊರಟು ಹೋದ್ರು.
ಎಲ್ರೂ ಒಲ್ಲದ ಮನಸ್ಸಿಂದ ಭಟ್ರ್ ಜೊತೆ ಫೋಟೋ
ಕ್ಲಿಕ್
ಕ್ಲಿಕ್
ಫೋಟೋ ತೆಗೆದಾಯ್ತು
ಅಷ್ಟರಲ್ಲಿ ಹೊಸಾ ಫ್ರಾಕ್ ಹಾಕ್ಕೊಂಡು
ಪೌಡರ್ ಹಚ್ಕೊಂಡು
ಶೃಂಗರಿಸಿಕೊಂಡು
ಓಡೋಡಿ ಬಂದಳು
ಬೊಗಸೆ ಕಣ್ಣಿನ ಪುಟ್ಟ ಬೊಂಬೆ
ನೇತ್ರಾವತಿ
ಸರಿ ಕ್ಯಾಮೆರಾ ನ ಕೊಂಡಾನ ಕೈ ಗೆ ಕೊಟ್ಟು
ನಾನು ಹೋಗಿ ಗ್ರೂಪ್ ಫೋಟೋಗೆ ನಿಂತೆ
ರೆಡಿ ಸ್ವಲ್ಪ ನಗು ರಿ...
ಕೊಂಡಾ ಕ್ಲಿಕ್ ಮಾಡಿದ
ಕ್ಲಿಕ್ ಆಗಲೇ ಇಲ್ಲಾ
ಕಾರ್ಕಳ ದಲ್ಲಿ ಕೊಂಡು ಕೊಂಡ
ಫಿಲಂ ರೋಲ್ ನ ಹನ್ನೆರಡು ಫೋಟೋಗಳು
ಸಮಾಪ್ತಿ ಯಾಗಿತ್ತು.
ಕೊಂಡಾ ನ ಮನಸ್ಸಿಗೆ ಕಸಿವಿಸಿ
ನೂರು ಸಾವಿರ ಫೋಟೋಗಳ ತೆಗೆದಿರಬಹುದು
ಆದ್ರೆ
ಆ ಬೊಗಸೆ ಕಣ್ಣಿನ
ಫೋಟೋಗಾಗಿ
ಮುಗುಳುನಗೆಯೊಂದಿಗೆ
ಕಾಯುತಿದ್ದಿದ್ದ
ಪುಟ್ಟ ಬೊಂಬೆಯ
ಆ ಒಂದು ಫೋಟೋ
ಕ್ಯಾಮೆರಾದಲ್ಲಿ
ತೆಗೆಯಲಾಗಲಿಲ್ಲ.
ನಮ್ಮೆಲ್ಲರ ಹೃದಯದಲ್ಲಿ
ಅಳಿಯಲಾಗದ ಭಾವ ಚಿತ್ರವಾಗಿ
ಮನಸ್ಸಿನ ಕ್ಯಾಮೆರಾದಲ್ಲಿ
ಕ್ಲಿಕ್ ಆಗಿತ್ತು,
ನೇತ್ರಾವತಿಯ ಫೋಟೋ
ಲೆಫ್ಟೂ ಇಲ್ಲಾ ರೈಟೂಇಲ್ಲಾ, ಗುಂಗುರೂ ಕಾಣೆ ಆದ್ರೆ ಅವರು ಸಾಧಿಸಿರೋದು ನಮಗೆಲ್ಲಾ ಹೆಮ್ಮೆಯ ವಿಷಯ ಅವರ ಬಗ್ಗೆ ಅವರೇನು ಹೇಳ್ತಾರೆ
ಕೇಳೋಣ /ನೋಡೋಣ ಬನ್ನಿ
ಅವರೇ ಬರೆದ ಪರಿಚಯ... ನಾನು
Dr. P ಕೊಂಡಾ ರೆಡ್ಡಿ belong to
1971-'75 batch of B.F.Sc. graduates. I did my M.F.Sc. in Fish Production & Management. After M.F.Sc., I joined the
College as Instructor in Fish Breeding and later was promoted as Assistant Professor
in Fish Breeding and Genetics.
In 1984, I went to Singapore to do my Ph.D. at the National University of Singapore (NUS) and My doctoral thesis was on the role of thyroid hormones in early fish larval growth and development. After my Ph.D,
I continued in the Department as Research Fellow. In 1992,
I moved to Canada and joined the University of Gueplh, Ontario as Research Fellow.My main Research focus was on Stress Physiology in Fish.
In the year 2000, I came back to Singapore to join the newly established Tropical Marine
Science Institute (TMSI), NUS, as
Research Head of Marine Aquaculture Program
Our research focus was on marine fish larval digestive physiology and development of larval feeds for marine
aquaculture. Another focus was on the development of hatchery technology for seahorses and giant clams and stock enhancement and conservation
of these threatened species in
Singapore waters.
I was invited to write a chapter on Stress Physiology in Fish by the editors J. F.Leatherland and P.T.K. Woo of the book Fish Diseases and Disorders,Volume 2
(Non-Infectious Disorders)
I came back to India in 2006 and settled in Bangalore and doing part time consultancy work.
Joined some of my retired batch mates who have settled in Bangalore enjoying retired life.
Mobile: 99005 69020.
👍🙏👍👍🙏Vasu
ಪ್ರತ್ಯುತ್ತರಅಳಿಸಿಈ ಬ್ಲಾಗ್ ನಮ್ಮ ಕಾಲೇಜು ದಿನಗಳ ಒಂದು ಸುಂದರ ಚಿತ್ರಣ. ಸೂರಿ, ನಿಮ್ಮ ನೆನಪಿನ ಶಕ್ತಿ ಹಾಗೂ ಬರಹದ ಶೈಲಿಯನ್ನು ಮೆಚ್ಚಲೇ ಬೇಕು. ಈ ಬರಹ ನಮ್ಮ ಕುಕ್ಕೆಯ ಭೇಟಿಯ ನೆನಪಿನ ಆಳಕ್ಕೆ ಕೊಂಡೊಯ್ದಿತು. ಕೊಂಡನ ಕ್ಯಾಮೆರ ಮೇಲಿನ ಪ್ರೀತಿಯನ್ನು ಅತಿ ಸುಂದರವಾಗಿ ಚಿತ್ರಗಳ ಸಮೇತ ವರ್ಣಿಸಿದ್ದೀರಿ. ನೇತ್ರಾವತಿಯ ಸುಂದರ ಮುಖದ ನೆನಪು Konda Reddy ಯ ಸ್ಮೃತಿ ಪಟಳದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿರಬೇಕು. Konda ಹೇಗಿದ್ದರೂ ಒಳ್ಳೆಯ Artist. Konda ನೀವು ನನ್ನ ಕಾಮೆಂಟ್ ಓದುತಿದ್ದರೆ, ಏಕೆ ನೇತ್ರಾವತಿಯ ಚಿತ್ರವನ್ನು ನಮೂದಿಸ ಬಾರದು?
ಪ್ರತ್ಯುತ್ತರಅಳಿಸಿಹೀಗೆe ಬರೆಯುತ್ತಿರಿ ಸುರೇಶ್. ಒಂದು ಸುಂದರ ಕುಕ್ಕೆಯ ನೆನಪಿನ ಚಿತ್ರಣಕ್ಕೆ.ಧನ್ಯವಾದಗಳು.
ಪಾಲು ಲೇದು ಸಮುದ್ರಮೋ ಲೇದು
ಪ್ರತ್ಯುತ್ತರಅಳಿಸಿsuperb sir..
ಪ್ರತ್ಯುತ್ತರಅಳಿಸಿ