ನೂರೊಂದು ನೆನಪು ಅಧ್ಯಾಯ -2
ನೂರೊಂದು ನೆನಪು
ಅಧ್ಯಾಯ-2
ಸಂಜೆ 6 ಘಂಟೆ
ಕುಶಿ ಓದುತಿದ್ದ
ಇಂಜಿನಿಯರಿಂಗ್ ಕಾಲೇಜಿನ
ವಾರ್ಷಿಕೋತ್ಸವ.
ಸಂಗೀತೋತ್ಸವಕ್ಕಾಗಿ ಕಾತುರದಿಂದ
ಕಾಯುತಿದ್ದ ಸ್ಟೂಡೆಂಟ್ಸ್ ಗಳ ತಾಳ್ಮೆಯನ್ನು
ಪ್ರಿನ್ಸಿ ಗುಂಡೂರಾವ್ ರ ಭಾಷಣ ಶೋಧಿಸಿತ್ತು.
ಎಲ್ಲಿಂದ ಬಂತೋ
ಕೊಳೆತ ಟೊಮೇಟೊ ಹಣ್ಣು
ಸೀದಾ ಪ್ರಿನ್ಸಿ ಭುಜವ ಪಚಕ್ಂತ
ಹದ ನೋಡಿತು.
ಆದ್ರೂವೆ ಭಾಷಣವ ನಿಲ್ಲಿಸಲಿಲ್ಲಾ.
ಪ್ರಿನ್ಸಿ ಗೆ ಯಾಕೆ ಅರ್ಥವಾಗಲಿಲ್ಲವೋ ಗೊತ್ತಿಲ್ಲಾ
ಅದಕ್ಕೇ ಅವರು ಪ್ರಿನ್ಸಿಪಾಲರು.
ಈ ಸಲ ಮಿಸ್ ಆಗಲಿಲ್ಲಾ
ಬೋಡು ತಲೆಯ ಮೇಲೆ ಇನ್ನೊಂದು
ಲೊಚ್ಚಂತ ಬಿದ್ದು, ರಸ ಮುಖದ ಮೇಲೆ
ಇಳಿಯಲು, ಕಾಲೇಜಿನ ಸುರಕ್ಷಾ ದಳದವರು,
ಪ್ರಿನ್ಸಿ ಪಾಲ್ ಗುಂಡೂರಾವ್ರನ್ನು
ಸುರಕ್ಷಿತವಾಗಿ ಕರೆದೊಯ್ದರು.
ಅಷ್ಟರಲ್ಲಿ ಹೋಹೋಂತ, ಸ್ಟೂಡೆಂಟ್ಸ್
ಸ್ಟೇಜ್ ಹತ್ತಿ ಗಲಾಟೆ ಮಾಡ ತೊಡಗಿದರು.
ಕೋರಸ್ಸಾಗಿ
ವೀ ವಾಂಟ್ ಕುಶಿ,
ವೀ ವಾಂಟ್ ಕುಶೀಂತ.
ಜೋರಾಗಿ ಉಚ್ಚ ಸ್ಥಾಯಿ
ಡೆಸಿಬೆಲ್ನಲ್ಲಿ ಕೂಗ ತೊಡಗಿದರು.
ಗ್ರೀನ್ ರೂಮ್ ನಿಂದ ಹೊರ ಬಂದು
ಸ್ಟೇಜ್ ಹತ್ತಿದ ಕುಶಿಯ ಮೇಲೆ
ಫೋಕಸ್ ಲೈಟ್ ಬಿತ್ತು.
ಮತ್ತೆಲ್ಲಾ ಲೈಟ್ಸ್ ಆಫ್
ಆಕೆಯ ಕೈಗೆ ಮೈಕ್...
ಡಿಜೆ ಸುಮ್ಮನಿರಲಾರದೆ
ಒಹೋ ಬಿಂಕದ ಸಿಂಗಾರಿ
ಮೈ ಡೊಂಕಿನ ವಯ್ಯಾರಿ
ಹಾಡು ಹಾಕಿಬಿಟ್ಟ
ಎಲ್ಲಾ ಹುಡುಗ್ರು ಜೊತೆ ಸೇರಿ
ಹಾಡಿಕೊಂಡೇ ಕುಣಿಯಲು ತೊಡಗಿದರು.
ಹಾಡು ನಿಂತು
ಒಂದು ಕ್ಷಣ
ಕುಶಿ ಕೈ ಎತ್ತಿ ವೇವ್ ಮಾಡಿದೊಡನೆ
ಹೋ ಹೋ ಎಂದು ಅರಚಿ ರಿಟರ್ನ್
ವೇವ್ ಕೈ ಆಡಿಸಿದರು.
ಕುಶಿ ಹಾಡಲು
ಅವಳೂ ಅವಳ ಟ್ರೂಪ್ ಜೊತೆ ನೀಡಲು
ಇಡೀ ಸಭಾಗ್ರಹ ಸ್ತಬ್ದವಾಯಿತು.
ಪುರುಷ ಪ್ರಧಾನ ಹಾಡುಗಳ ಹಾಡೋದು
ಅವಳ ಸ್ಪೆಷಾಲಿಟಿ
ಕುಶಿ ಹಾಡ್ತಾಲೆ ಸೀಟಿಗಳ ಸುರಿಮಳೆ
ಶಿವಾಂತ ಹೋಗುತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲಾ ಇತ್ತು ಲೈಫಿನಲಿ
ಅರ್ಧ ಟ್ಯಾಂಕು ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ...
ಚಪ್ಪಾಳೆ ಕೋರಸ್ಸು ಎಲ್ಲಾ ಒಂದೇ ಜೋರು
ಹೂವಿನಂತ ಹುಡುಗ ನಾನು ತುಂಬಾ ಮೃದು
ಹೆಣ್ಣ್ ಮಕ್ಳೇ ಸ್ಟ್ರಾಂಗು ಗುರು
ಅದನ್ನ ಪ್ರೂವ್ ಮಾಡಲು
ಕುಶಿ ಗ್ಯಾಂಗ್ ಜೊತೆಗೆ ಧ್ವನಿ ಗೂಡಿಸಿ
ರಾಂಗ್ ಗುರು ರಾಂಗ್ ಗುರು..
ಅಂತ ಹಾಡಿ ಕಾಲೇಜಿನ
ಕಲ್ಚರಲ್ ಚಟುವಟಿಕೆಗಳನ್ನ
ತಮ್ಮ ಕೈವಶ ಪಡಸಿಕೊಂಡರು ಹೆಣ್ಣು ಮಕ್ಕಳು
ಕುಶಿ
ಹೆಸರಿಗೆ ತಕ್ಕ ಹಾಗೇ ಹಸ್ಮುಖಿ,
ತಾನೂ ನಗು ನಗುತಾ
ಜೊತೆಗಿರುವವರುನ್ನು ನಗಿಸುತ್ತಾ
UG, PG ಯ ಓದು ಮುಗಿಸಿದ್ದಳು.
ಹಾಸ್ಟೆಲ್ ನ ಕಾಲಿ ಮಾಡಿ
ಸಾಮಾನೆಲ್ಲವನ್ನು ಶಿವಮೊಗ್ಗ ಸಾಗಿಸಿದ್ದಳು.
ಇಂಜಿನಿಯರಿಂಗ್ ಕಾಲೇಜ್ ನ
ಕಂಪ್ಯೂಟರ್ ಸೈನ್ಸ್ ನ ಟಾಪ್ಪರ್.
ಭಾವ ಗೀತೆ, ಜನಪದ ಗೀತೆಗಳು
ಸಿನಿಮಾ ಹಾಡುಗಳು ಹಾಡೋದು,
ರಂಗಮಂಚ, ಬೀದಿ ನಾಟಕ
ಇವೆಲ್ಲಾ ಅವಳ ವಿಶೇಷ ಹವ್ಯಾಸಗಳು.
ಈ ನಡುವೆ
ಕ್ಯಾಂಪಸ್ ಇಂಟರ್ವ್ಯೂನಲ್ಲಿ
ಬೆಂಗಳೂರು, ಪುಣೆ, ಮೈಸೂರುಗಳಲ್ಲಿದ್ದ
ಸಾಫ್ಟ್ ವೇರ್ ಕಂಪನಿಗಳಲ್ಲಿ
ಆಯ್ಕೆಯಾಗಿದ್ದಳು ನಮ್ಮ ಕುಶಿ.
ಮೈಸೂರ್ ನಲ್ಲಿದ್ದ ಸಾಫ್ಟ್ ವೇರ್ ಕಂಪನಿಯ
ಸೇರುವ ಮುನ್ನ ಒಮ್ಮೆ
ಸದ್ಯಕ್ಕೆ ಚಿಲ್ ಮಾಡೋಣಾಂತ
ಅಮ್ಮ ಅಪ್ಪನ ನೋಡೋಣಾಂತ
ಮನೆ ಊಟ ತಿನ್ನೋಣಾಂತ
ಏಪ್ರಿಲ್ 28 ಕ್ಕೆ ಶಿವಮೊಗ್ಗದತ್ತ
ಹೊರಟಳು.
ಹಾಂ ಹೌದು ಏಪ್ರಿಲ್ 29
ಶಿವಮೊಗ್ಗದ ಮಾಲ್ ನಿಂದ
ಹೊರ ಬಂದಾಗ
ಮರೆಯಲಾಗದ
ಆ ಎರಡು ಸೆಕೆಂಡುಗಳು
ಹರ್ಷನ್ನ ಮೊಟ್ಟ ಮೊದಲ ಬಾರಿಗೆ
ನೋಡಿದ್ದು
ಆಗಲೇ ಕುಶಿಗೆ ಅನಿಸಿತ್ತು
ಇವನನ್ನ ಎಲ್ಲೋ ನೋಡಿದ್ದೀನಲ್ಲಾಂತ l
ಕ್ಲಾಸ್ಮೇಟ್ ಹರ್ಷ ಇರಬಹುದೇನೋಂತ
ಯಾರಿವನು ಅನ್ನೋ ಜಿಜ್ಞಾಸೆ
ಅವಳನ್ನೂ ಸಂಶಯ ಕಾಡಿತ್ತು.
ಕುಶಿ ಒಂದು ವಿಷಯವನ್ನ ಕೈಯಲ್ಲಿ
ತೆಗೊಂಡ್ರೆ ಮುಗಿಸಿ ತೀರಿಸೋವರೆಗೂ ಬಿಡಲ್ಲ
ಈಗ ಅವಳಿಗೆ ಮಾಲ್ ನಲ್ಲಿ ನೋಡಿದವನು
ಹ್ಯಾಂಡ್ಡ್ಸ ಮ್ ಹರ್ಷಾನ.. ಬೇರೇ ಯಾರೋನ
ವೆರಿಫಯ್ ಮಾಡಬೇಕಿತ್ತು... ಫಸ್ಟ್ ಟೈಮ್
ಸ್ಮಾರ್ಟ್ ಆಗಿ ಬ್ರೈಟ್ ಆಗಿ ಒಬ್ಬ ಆಕರ್ಷಸಿದ್ದ.
ಅದೇನೋ
ಅವಳೂ ಇಂಜಿನಿಯರಿಂಗ್ ಕಾಲೇಜಿನಲ್ಲಿ
ಹಲವಾರು ಜೊಲ್ಲುಬುರುಕರನ್ನ
ಸ್ಮಾರ್ಟ್ ಆದ್ರೆ ಐಕ್ಯೂ ಕಮ್ಮಿಯವರನ್ನ
ಆಸ್ತಿ ಪಾಸ್ತಿ ಇರೋರು
ಆದ್ರೆ ವ್ಯವಹಾರದಲ್ಲಿ ಶೂನ್ಯರನ್ನ
ಕಂಡಿದ್ದಳು. ನೋಡೋಣ
ಹರ್ಷ ಹ್ಯಾಗೆ, ಏನೂಂತ
ಮಾತಾಡಿ ತಿಳ್ಕೊಳ್ಳೋಣ
ಹರ್ಷ ನ ವಿಚಾರವನ್ನ
ಕುಶಿಯ ಸೋಶಿಯಲ್ ನೆಟ್ವರ್ಕ್ ಸ್ಟ್ರಾಂಗ್
ಜೋಗ್ ಫಾಲ್ಸ್ ನಲ್ಲಿ ಜೊತೆ ಓದಿದ
ಸುಧಾರಾಣಿ ಶಿವಮೊಗ್ಗದಲ್ಲೇ
ಮದುವೆಯಾಗಿ ಸೆಟ್ಲ್ ಆಗಿದ್ದು
ಜ್ಞಾಪಕಕ್ಕೆ ಬಂದು ಮನೆಗೆ ಬಂದವಳು
ಅವಳ ನಂಬರ್ ಕಂಡು ಹಿಡಿದು
ಅವಳಿಗೊಂದು ಫೋನ್ ಹಾಕಿ
ಅದೇ ಸಂಜೆ ಸುಧಾರಾಣಿಯ
ಮನೆ ಹುಡುಕಿ ಹೋಗಿ ನಿಂತಳು.
ಕೈಯಲ್ಲಿ ಮಗಳನ್ನುಎತ್ಕೊಂಡು
ನಿಂತಿದ್ದ ಸುಧಾರಾಣಿ ಗೆ ಆಶ್ಚರ್ಯ
ಓಡಿಬಂದವಳು ಕುಶಿನ ತಬ್ಕೊಂಡಳು.
ಮದುವೆಗೆ ಬರದಿದ್ದವಳಿಗೆ
ಹುಸಿ ಮುನಿಸು ತೋರಿಸಿ
ಕೈಕೂಸಾದ ಮೇಲೆ ನೋಡ ಬಂದವಳನ್ನ ಅಕ್ಕರೆಯಿಂದ ಉಪಚರಿಸಿ
ಮಿಸ್ಸಾದ ವರುಷಗಳನ್ನ
ಘಂಟೆಗಟ್ಲೆ ಅದೂ ಇದೂಂತ ಮಾತಾಡಿ
ಟಾಪಿಕ್ ಗೆ ಬಂದಳು ಕುಶಿ..
ಇನ್ನು ಯಾರೆಲ್ಲಾ ಕ್ಲಾಸ್ಮೇಟ್ಗಳು
ಶಿವಮೊಗ್ಗ ದಲ್ಲಿ ಇದ್ದಾರೆಂದಾಗ
ಡಾಕ್ಟರ್ ಹರ್ಷನ ಬಗ್ಗೆ ಕೇಳ್ದೆನೇ
ಎಲ್ಲಾ ವಿವರಣೆಯನ್ನ ಸುಧಾ ಕೊಟ್ಟಳು.
ಕುಶಿಯ ಮನಸ್ಸಲ್ಲಿ ಹರ್ಷನ್ನ
ಹೇಗಾದ್ರೂ ಭೇಟಿ ಮಾಡಲೇ ಬೇಕೊಂತ
ಪ್ಲಾನ್ ಓಡ್ತಾ ಇತ್ತು ಅದೇ ಮಾತು
ಹೇಳ್ತಾರಲ್ಲ, ನೀವು ಮನಸ್ಸಾರೆ ಒಂದು ವಿಷಯ
ಸಾಧಿಸಲು ಹೊರಟ್ರೆ
ಪ್ರಕೃತಿಯು ಸಹಕರಿಸುತ್ತೇಂತ.
ಇದು ದೃಢ ನಿಶ್ಚಯದಿಂದ ಪ್ರಯತ್ನ ಪಡುವ ಎಲ್ಲರಿಗೂ ಅನ್ವಯಿಸುತ್ತೆ.
ಆದ್ರೆ ಜಾಗಿಂಗ್ ಪಾರ್ಕ್ ನಲ್ಲಿ ನಡೆದ
ಕುಶಿ ಹರ್ಷನ ಭೇಟಿ ಆಕಸ್ಮಿಕ,
ಮತ್ತೆ ಪೂರ್ವನಿಯೋಜಿತ
ಭೇಟಿ ನಡೆಯದೆ ಹರ್ಷನ ಮನೆಯಲ್ಲಿ
ನಡೆದ ಔಪಚಾರಿಕ ಭೇಟಿಯೇ ಇಬ್ಬರ
ಕೊನೆಯ ಭೇಟಿಯಾಗಿತ್ತು.
ಹರ್ಷ ಬೆಂಗಳೂರಿಗೆ ಹೊರಟ ದಿನದಂದೇ
ಕುಶಿಯು ಹೊರಟಿದ್ದಳು ಮೈಸೂರಿಗೆ
ಅವಳ ಆಂಡ್ರಾಯ್ಡ್ samsung ನ
ಹೊಸಾ ಫೋನ್ ನ್ನು.
ಬಸ್ಸಲ್ಲೇ ಸೀಟಿನ ಮೇಲೆ ಇಟ್ಟು
ಕೆಳಗಿಳಿದು ಅಪ್ಪನಿಗೆ ಬೈ ಹೇಳಲು
ಬಸ್ಸು ಹೊರಟಿತು.
ಮತ್ತೆ ಬಂದು ನೋಡಿದಾಗ
ಫೋನ್ ಕಾಣೆ... ಬಸ್ಸ ನಿಲ್ಲಿಸಿ
ಹುಡುಕಿ ನೋಡಿ ಸಿಗದೆ ನಿರಾಶಳಾಗಿ
ಮೈಸೂರ್ ತಲುಪಿ
ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್ನಲ್ಲಿ
ದಾಖಲಾದಳು.
ಈಗ ಹೇಳಿ ಹರ್ಷ ನ ಫೋನ್ ಕಾಲ್ ಗಳಿಗೆ
ಕುಶಿಯಿಂದ ಯಾವ ಒಂದೂ
ಉತ್ತರ ವಿಲ್ಲದ ಕಾರಣ
ಮೊಬೈಲ್ ಫೋನ್ ಇಲ್ಲದೆ ಇಮೋಬೈಲ್
ಆದ ಕುಶಿ ನಿಧಾನವಾಗಿ
ಹಕ್ಕಿ ಗೂಡು ಕಟ್ಟುವ ಹಾಗೇ ಒಂದೊಂದಾಗಿ
ಲ್ಯಾಪ್ಟಾಪ್ ನ ಕಾಂಟಾಕ್ಟ್ ನಿಂದ
ಮತ್ತೊಮ್ಮೆ ಹೊಸಾ ಫೋನಿನಲ್ಲಿ
ಮಾಯಾಲೋಕವ ಸೃಷ್ಟಿ ಸಿದಳು.
ಒಂದು ಮಾತ್ರ ಸತ್ಯ
ನೀವು ಏನೇ ಗುದ್ದಾಡಿದರೂ
ನಡೆಯೋದನ್ನ ತಪ್ಪಿಸೋಕ್ಕಾಗಲ್ಲಂತ.
ಕುಶಿ ಹರ್ಷ ಎರಡೂವೆ ಸಂತೋಷ
ತರುವ ಹೆಸರುಗಳು.
ಈ ಸಲ ಬೆಳಗ್ಗೆ ಎಂಟು ಘಂಟೆಗೆ
ಫೋನ್ ಮಾಡಿದ್ದು ಕುಶಿನೇ
ಯಾರಿಗೇಂತೀರಾ?
ಹರ್ಷನಿಗೆ...
ರಿಂಗ್ ಆಗ್ತಾ ಇದೆ
ತಮ್ ನಮ್ ತಮ್ ನಮ್ ಅಂತ
ಇಲ್ಲಿ ಕುಶಿಯ ಹೃದಯ ನುಡಿಯುತಿದೆ...
ಆದ್ರೆ ಇದೂನೂವೆ ನಿಜ
ನಾವು ನೆನಸ್ಕೊಳ್ಳೋದು ಒಂದು
ನಡೆಯೋದು ಒಂದು...
ಹಲೋ ಯಾರು ಮಾತಾಡೋದು.
ಮೇಡಂ, ಡಾಕ್ಟರ್ ಒಳಗೆ OT ಯಲ್ಲಿದ್ದಾರೆ.
ಫೋನ್ ಡಿಸ್ಕನೆಕ್ಟ್ ಆಯ್ತು.
ಇದು ಕುಶಿಯ ನೆನಪು.
ಎದೆಯಾಳದಿಂದ
ನೂರೊಂದು ನೆನಪು...
Absolutely loved this piece of writing!
ಪ್ರತ್ಯುತ್ತರಅಳಿಸಿThe non-linear writing style of yours executed in this blog was unexpected, and I thoroughly enjoyed both Part 1 and Part 2. It felt like every single lead from Part 1 had a backstory, and there was a deep sense of contentment at the end of the read. What I truly admire is how every blog is of a different genre, each carrying a unique style of writing—yet you never miss adding your personal touch. Eagerly waiting to read more of your blogs! ✨🦋🙌
Thoroughly Enjoyed every bit of the story... Great Narration!!! One more classic from the author....
ಪ್ರತ್ಯುತ್ತರಅಳಿಸಿ