ನೂರೊಂದು ನೆನಪು ಅಧ್ಯಾಯ-3

ನೂರೊಂದು ನೆನಪು ಅಧ್ಯಾಯ -3
ಆಪರೇಷನ್ ಥಿಯೇಟರ್ ನಿಂದ ಹೊರಬಂದ,
ಡಾಕ್ಟರ್ ಹರ್ಷ ಫೋನ್ ಸ್ಕ್ರೀನ್ ನೋಡಿದ.
ಮಿಂಚುವಿನ ಮಿಸ್ಸ್ ಡ್ ಕಾಲ್ ಇತ್ತು.
ಕಾಲ್ ನ ತಲೆಯ ತಟ್ಟಿದ, ಅದೇ ಸ್ವಾಮಿ...
ಸೆಲ್ ಫೋನ್ ಟಚ್ ಸ್ಕ್ರೀನ್ ತಟ್ಟಿದ.
ರಿಂಗ್ ಹೋಯ್ತು... ಒಂದು...ಎರಡು
ಮೂರು ಅನ್ನೋದ್ರೊಳಗೆ ಫೋನ್ ಎತ್ತಿದಳು.
ಮಿಂಚಿನ ಇಂಚರ... ಹಲೋ... ಎಂದಳು.
ಹರ್ಷನ ಆತುರ, ಏರು ಪೇರು ಉಸಿರಾಟ,
ಎಲ್ಲಾ ಒಂದುಗೂಡಿ
ಧ್ವನಿ ಬರಲೇ ಇಲ್ಲಾ, 
ಬರೀ ಗಾಳಿ ಬಂತು.
ಎಲ್ಲೋ ಬಾವಿಯೊಳಗಿಂದ...
ಹಲೋನ್ನೂ ಇಲ್ಲಾ, ಹಾಯ್ ನ್ನೂ ಇಲ್ಲಾ,
ನಾನು ಡಾಕ್ಟರ್ ಹರ್ಷ ಮಾತಾಡ್ತಿದ್ದೀನಿ, 
ಧ್ವನಿ ಬಿಟ್ಟು ಬಿಟ್ಟು ಕೇಳಿಸ್ತಾ ಇತ್ತು. 
ಹರ್ಷನ ಧ್ವನಿ ಕೇಳಿ ಕುಶಿಗೆ ಖುಷಿ.
ಹೈ ನಾನು ಕುಶಿ.
ಕುಶಿಯ ಧ್ವನಿ ಕೇಳಿ ಹರ್ಷ ಹರ್ಷಿತನಾದ.
ಹರ್ಷ ಕಂಟಿನ್ಯೂ ಮಾಡಿದ.ಧ್ವನಿ ಕೂಡಿತ್ತು
ನಾನೀಗ ಮೈಸೂರ್ ಹತ್ತಿರವಿರುವ 
HD ಕೋಟೆ, ಅದೇ ಹೆಗ್ಗಡ ದೇವನ ಕೋಟೆ 
PHC ಯಲ್ಲಿ ಡಾಕ್ಟರ್ರು.
ಗ್ರಾಮೀಣ ಪೋಸ್ಟಿಂಗ್.
ನೀವೇನು ಮಾಡುತ್ತಿದ್ದೀರಾ
ನಾನೂ ಮೈಸೂರ್ ನಲ್ಲಿ ಸಾಫ್ಟ್ ವೇರ್ ಟೆಕಿ 
ಕಂಪನಿಯೊಂದನ್ನ ಸೇರಿದ್ದೀನಿ...
ಸಾರೀ, ನನ್ನ ಸೆಲ್ ಫೋನ್ ಕಳುವಾಗಿದ್ದರಿಂದ
ನಿಮ್ಮ ಹತ್ತಿರ ಮಾತನಾಡಲಿಕ್ಕಾಗಲಿಲ್ಲ
ಹರ್ಷನಿಗೆ ಶಾಕ್ 
ಹೀಗೂ ಹಾಗಿರಬಹುದಾ...
ಅವನೋ ಏನೇನೋ ಕಲ್ಪನೆ ಮಾಡಿದ್ದ.
ಛೇ ಇದಕ್ಕ ಹೋಗಿ ವಿರಕ್ತಿ ಯಾಗಿ ಬಿಟ್ಟಿದ್ದೆನಾಂತ
ಅವನ ಬಗ್ಗೆ ಅವನಿಗೇ...ಜಿಗುಪ್ಸೆ
ಈಗ ಹೊಸ ಫೋನ್ ತೆಗೊಂಡು
ನಿಮಗೇ ಫಸ್ಟ್ ಕಾಲು ಅಂದಳು
ಹರ್ಷ ಫ್ಲಾಟ್ ಆಗಿಬಿಟ್ಟ.
ನಿಮ್ಮ ಫೋನ್ ಬಂದಾಗ 
ನಾನು OT ಯಲ್ಲಿದ್ದೆ..
ಬನ್ನಿ ಮೈಸೂರಿಗೆ ಬಂದಾಗ ಬನ್ನೀಂತ ಹೇಳಿ
ಇನ್ನೂ ಮಾತಾಡ ಬೇಕೆಂಬ ಆಸೆ ಆದ್ರೆ
ಅದಕ್ಕೆ ಮೇಲೆ ಏನ್ ಮಾತಾಡಬೇಕಂತ
ತಕ್ಷಣ ಗೊತ್ತಾಗಲಿಲ್ಲ,
ಫೋನ್ ಇಟ್ಟುಬಿಟ್ಟ.
ಆದ್ರೆ ಇನ್ನು ಮುಂದೆ ಫೋನ್ ಮಾಡಿ 
ಮಾತಾಡ ಬಹುದಲ್ಲಾ.. 
ಕನೆಕ್ಷನ್ ಪುನರ್ಸ್ಥಾಪಿಸಿದ 
ಸಂತೋಷದಲ್ಲಿ ಹರ್ಷನ ಹೆಸರನ್ನು
ಡಾಕ್ಟರ್ ❤️ ಅಂತ ಸ್ಟೋರ್ ಮಾಡಿಟ್ಟಿದ್ದಳು
ಪ್ರೊಫೈಲ್ ನಲ್ಲಿ ಅವನೊಟ್ಟಿಗೆ ತೆಗೆದ ಸೆಲ್ಫಿ ಫೋಟೋವನ್ನ ಪಿನ್ ಮಾಡಿದ್ದಳು.
ಅದನ್ನೇ ನೋಡ್ತಾ ಮುಗಳ್ನಕ್ಕಳು..
ಹೇಯ್ ಕುಶಿ ಏನ್ ವಿಷಯ..
ಬಹಳ ಕುಶಿಯಾಗಿದ್ದೀಯ
ನಥಿಂಗ್ ಸರ್ ಎಂದು 
ಜಾರಿ ಕೊಳ್ಳುವ ಮುನ್ನ 
ಟೀಮ್ ಲೀಡರ್ ಗುಪ್ತಾ ಹೇಳಿದ್ರು, 
ನಿನಗೆ ಅಡ್ಡಿಷನಲ್ ಕೆಲಸ ಕೊಡುತ್ತಿದ್ದೀನಿ.
ನಮ್ಮ CSR ಸಿ.ಎಸ್.ಆರ್ ಪ್ರಾಜೆಕ್ಟ್
ನೀನೇ ನೋಡ್ಕೋಬೇಕು ಕುಶಿ. 
CSR ಅಂದ್ರೆ ಏನ್ ಸಾರ್?
ಕಾರ್ಪೊರೇಟ್ ಸೋಶಿಯಲ್ ರೆಸ್ಪೋನ್ಸಿಬಿಲಿಟಿ.
ಬರೀ ಧನಾರ್ಜನೆ ಮಾತ್ರವಲ್ಲ, 
ನಮ್ಮ ಕಂಪನಿಯ ಉದ್ದೇಶ. 
ನಾವು ಗಳಿಸಿದ ಲಾಭದ 
ನಿರ್ಧಾರಿತ ಹಾಗೂ ನಿಶ್ಚಿತ ಅಂಶವ
ಸಾಮಾಜಿಕ ಸೇವೆಗಳಿಗೆ, 
ಶಿಕ್ಷಾ, ಆರೋಗ್ಯ ಮತ್ತೆ ಪರಿಸರದ ಉನ್ನತಿಗೆ 
ರಾಜ್ಯ ಸರ್ಕಾರದ ಯಾವುದೇ 
ವಿಭಾಗದೊಂದಿಗೆ ಸೇರಿ ಕ್ರಿಯಾನ್ವಿತಗೊಳಿಸುವುದು
ಎಂದು ಗುಪ್ತಾ ರವರು ವಿವರಿಸಿದರು.
ಈ ವಾರದೊಳಗೆ ಪ್ರಾಜೆಕ್ಟ್ ನ್ನು
ಡೆಪ್ಯೂಟಿ ಕಮಿಷನರ್ ಆಫೀಸ್ಗೆ 
ತಲುಪಿಸಬೇಕು ಎಂದು ಡೆಡ್ ಲೈನ್ 
ನಿರ್ಧಾರಿಸಿ ಬಿಟ್ರು. 
ಲಂಚ್ ಟೈಮ್ ನಲ್ಲಿ
ಕ್ಯಾಂಟೀನ್ನಲ್ಲಿ ದಿವ್ಯ, ಶೃತಿಯ ಜೊತೆ 
CSR ಬಗ್ಗೆ ಚರ್ಚಿಸಿದಳು.
ಜೂನ್ ತಿಂಗಳಿರಬೇಕು. 
ಡಾಕ್ಟರ್ ಹರ್ಷ ಸೇರಿ ಸರಿಯಾಗಿ
ಒಂದು ವಾರ ಕೂಡ ಆಗಿರಲಿಲ್ಲ.
ಕಾಫಿ ಕುಡಿಯುತ್ತಿದ್ದಾಗ ಹರ್ಷನ
ಫೋನ್ ಬಂತು. 
ಕುಶಿಯ ಹೃದಯ ಡಬ್ ಡಬ್ ಅಂತ 
ವೇಗವಾಗಿ ಬಡಿಯ ತೊಡಗಿತು.
ಹೈ ... ನಾನು...
ಕುಶಿ ಮಾತಾಡ್ತಾ ಇರೋದು...
ಕುಶಿ ಅಲ್ಲಿದ್ರೆ ನಾವು ಹೆಂಗೇ
ಇಲ್ಲಿ ಕುಶಿಯಾಗಿರೋದೂಂತ ಚುಡಾಯಿಸಿದ
ಹರ್ಷ ಅಲ್ಲಿರುವಾಗ ಕುಶಿಗೇನು ಕೆಲಸಾಂತ
ಇವಳೊಂದು ಕೌಂಟರ್ ಕೊಟ್ಟಳು.
ಶನಿವಾರ ಮೈಸೂರ್ ಬನ್ನೀ ಮಾತಾಡೋಣಾಂತ ಡೇಟ್, ಟೈಮ್ ಎಲ್ಲಾ ಫಿಕ್ಸ್ ಆಯ್ತು
ಹರ್ಷ ಕುಶಿಯಾಗಿ ಸಾರೀ ಕುಶಿಗಾಗಿ
ಶನಿವಾರ ಬರೋದನ್ನೇ ಕಾಯ್ತಾ ಕೂತಿದ್ದ.
ಬುಧವಾರ ರಾತ್ರಿಯಿಂದ ಹಿಡಿದ ಜಡಿ ಮಳೆ ಶುಕ್ರವಾರ ಸಂಜೆ ಯಾದ್ರೂ ಬಿಡಲಿಲ್ಲಾ..
SOS ಮೆಸೇಜ್ ಬಂತು ಬೀಚಿ ಹಳ್ಳಿ ಹಾಗೂ 
ಬೀರಿ ಹಳ್ಳಿಯಲ್ಲಿ ಇಪ್ಪತಕ್ಕೂ ಹೆಚ್ಚು ಮಕ್ಕಳು
ಸಕತ್ತು ಸೀರಿಯಸ್ಸಾಗಿ ದ್ದಾರೇಂತ..
ಮುಂಗಾರು ಸೀಸನ್ನಿನ 
ಮೊಟ್ಟ ಮೊದಲ ಮಳೆಗೆ
ಹಳ್ಳ, ಕೊಳ್ಳ, ನದಿ, ನಾಲೆಗಳು ತುಂಬಿ
ರಬಸದಿಂದ ಮಳೆ ನೀರು ಹರಿದು
ಕಬಿನಿಯ ಸೇರಲು ಹಾತೊರೆಯುತಿತ್ತು.
ಹೆಗ್ಗಡ ದೇವನ ಕೋಟೆಯ ಪಕ್ಕದ ಗ್ರಾಮಗಳು 
ಬೀಚಿಹಳ್ಳಿ ಮತ್ತೆ ಬೀರಿಹಳ್ಳಿಗಳು 
ಪ್ರತ್ಯೇಕ ದ್ವೀಪ ಗಳಾಗಿದ್ದವು.
ಡಾಕ್ಟರ್ ಹರ್ಷ ಮೊದಲೇ ಜಾಗರೂಕನಾಗಿ
ಟೀಮ್, ಔಷಧಿ ಎಲ್ಲವನ್ನು
ತಯ್ಯಾರು ಸ್ಥಿತಿಯಲ್ಲಿಟ್ಟಿದ್ದ.
ಮಾರ್ಚ್ ತಿಂಗಳಲ್ಲಿ ದಡಾರ ಅಮ್ಮನ
ಪ್ರಕೋಪಕ್ಕೆ ಈಡಾಗಿ ಮೊದಲೇ ನಿಶಕ್ತರಾದ
ಎರಡು ವರ್ಷವೂ ತುಂಬದ 
ಮಕ್ಕಳಿಗೆ  ಇದೀಗ 
ಬೇಧಿ (diarrohea) 
ಪ್ರಾರಂಭವಾಗಿ ನಿಲ್ಲಲೇ ಇಲ್ಲಾ 
ಅವರ ಸ್ಥಿತಿ ಕ್ಷೀಣವಾಗಿತ್ತು.
ಅವರನ್ನು ಉಬ್ಬಿ ಹರಿಯುತ್ತಿದ್ದ 
ನಾಲೆಯ ಪಾರುಮಾಡಿ PHC 
ತರುವದು ದುಷ್ಕರವಾಗಿತ್ತು.
ಹೀಗಾಗಿ PHC ಯಿಂದ ಮೆಡಿಕಲ್ ಟೀಮ್
ಅಲ್ಲಿಗೆ ಹೋಗಲು ಅನುವಾಯ್ತು
ಶನಿವಾರ ಬೆಳಗ್ಗೆ ಮೈಸೂರಿನ ಪ್ರಯಾಣ
ಮುಂದೂಡಬೇಕಾಗಿ ಬಂತು 
ಪ್ರಾರಂಭದ ಮಳೆ ಕಲುಷಿತವಾಗಿದ್ದಿರಬೇಕು
ಅದರ ಸೇವನೆ ಇಲ್ಲಾ ಉಪಯೋಗ 
ಮಕ್ಕಳನ್ನ ಭಾಧಿಸಿರಬೇಕು
ಶನಿವಾರ ಬೆಳಗ್ಗೆ  ಡಾಕ್ಟರ್ ಹರ್ಷನವರ
ನೇತೃತ್ವದಲ್ಲಿ ಮೆಡಿಕಲ್ ಟೀಮ್ ಹೊರಟಿತು.
ಮಳೆಯೂ ನಿಂತಿತ್ತು.
ಜೀಪನ್ನು ಎಲ್ಲಿ ನಾಲೆ ಸಂಕೀರ್ಣವಾಗಿತ್ತೊ ಅಲ್ಲಿವರೆಗೂ ಹೋಗಿ 
ನಾಲೆಯ ಒಂದು ತೀರದಲ್ಲಿ 
ದಪ್ಪ ಹಗ್ಗವ ಕಟ್ಟಿ  ಮತ್ತೊಂದು 
ಕೊನೆಯಲ್ಲಿ ಅದನ್ನ ಸೇರಿಸಿ ಅದರ ಸಹಾಯದಿಂದ
ನಾಲೆ ಪಾರು ಮಾಡಿ 
ಆ ಹಳ್ಳಿಗಳಿಗೇ ಹೋಗಿದ್ದಾಯ್ತು.
ಬೇಧಿ ಯಿಂದ ತ್ರಸ್ತರಾದ ಮಕ್ಕಳನ್ನು 
ಮನೆ ಮನೆಯಿಂದ ಹುಡುಕಿ
ಹೊತ್ತು ತಂದು ಅಲ್ಲಿಯ ಸ್ಕೂಲ್  
ಕಕ್ಷ ಗಳಲ್ಲಿ  ಬೆಂಚಿನ ಮೇಲೆ ಮಲಗಿಸಿ
ಸೇಲೈನ್ ಡ್ರಿಪ್ ಹಾಕಿ ಟ್ರೀಟ್ಮೆಂಟ್
ಪ್ರಾರಂಭಿಸಿ ಹಗಲೂ ರಾತ್ರಿ 
ಅಲ್ಲೇ ಇದ್ದು ಶುಶ್ರೂಷೆ ಮಾಡಿದ್ದರಿಂದ
ಮಕ್ಕಳ ಸ್ಥಿತಿಯಲ್ಲಿ ಸುಧಾರಣೆಯಾಯ್ತು.
ಲ್ಯಾಬ್ ಅಟೆಂಡರ್ ಮರಿಯಪ್ಪ 
ಜೊತೆಗೆ ತಂದಿದ್ದ ಅಕ್ಕಿ ಬೇಳೆಯ
ಉಪಯೋಗಿಸಿ ಎಲ್ಲರೊಡಗೂಡಿ    ಹಳ್ಳಿಯವರೊಂದಿಗೆ ಬಿಸಿ ಬೇಳೆ ಬಾತ್ 
ಮಾಡಿ ಹಂಚಿಕೊಂಡರು.
ಸಾವಿನ ದವಡೆಯಿಂದ ಮಕ್ಕಳನ್ನು ಕಾಪಾಡಿದ್ದು
ಡಾಕ್ಟರ್ ಹರ್ಷನ ಮೊದಲನೇ ವಿಜಯ
ಆದಿವಾಸಿ ಹಳ್ಳಿಯವರ ವಿಶ್ವಾಸ ಗಳಿಸಿದ್ದು
ಹರ್ಷನ ಎರಡನೇ ವಿಜಯ.
ಈ ವಿಷಯ ಮೈಸೂರಿನ 
ಲೋಕಲ್ ನ್ಯೂಸ್ ಪೇಪರ್ ಗಳಲ್ಲಿ 
ಡಾಕ್ಟರ್ ಹರ್ಷನ ಪ್ರಶಂಶನೀಯ ಸೇವೆಯ
ಸುದ್ದಿ ಬಂದಿದ್ದು 
ಕುಶಿ ನೋಡಿ ಖುಷಿ ಪಟ್ಟಳು.
ಮತ್ತೆ ಡಾಕ್ಟರ್ ❤️ ಗೆ ಫೋನ್ ಮಾಡಿದಳು.
ಹಲೋ ಡಾಕ್ಟರ್ ನಾನು ಕುಶಿ
ಶುಭಾಶಯಗಳು, ಹಾರ್ಟಿ ಕಂಗ್ರಾಟ್ಸ್...
ಥ್ಯಾಂಕ್ಸ್ ಹೇಳಿದ ಡಾಕ್ಟರ್ ಹರ್ಷ
ಸಾರೀ ಕುಶಿ...  
ಶನಿವಾರ ಮೈಸೂರು ಬರ ಬೇಕಿತ್ತು
ನಿಮ್ಮನ್ನು ಭೇಟಿಯಾಗುವ 
ಚಾನ್ಸ್ ಮಿಸ್ಸ್ ಆಗಿ ಹೋಯ್ತು
ಆದ್ರೆ  ಏನ್ಮಾಡೋದು ಹೇಳಿ
ಅನಿರೀಕ್ಷತವಾಗಿ ಹಳ್ಳಿ ಗಳಿಗೆ 
ಹೋಗಬೇಕಾದ ಸಂಧರ್ಭ 
MBBS ಓದಿದ್ದು ಸಾರ್ಥಕವಾಯ್ತು  
ಅಂತ ಹೇಳಿ
ನೀವೇ ಬನ್ನೀ HD ಕೋಟೆಗೇಂತ 
ಆಹ್ವಾನ ನೀಡಿದ್ದ.  
ಅಷ್ಟೇ
ಸಂತೋಷದಿಂದ ಕುಶಿಯ
ಪ್ರಫುಲ್ಲಿತ ಮನಸ್ಸು
ಚಿಟ್ಟೆ ತರಹ ಅಲ್ಲಿಂದ ಇಲ್ಲಿಗೆ 
ಇಲ್ಲಿಂದ ಅಲ್ಲಿಗೆ, ಕಡಿವಾಣವಿಲ್ಲದೆ
ಹಾರುತಿತ್ತು....
ಅವಳು ಬರುತ್ತಾಳ...


ಕಾಮೆಂಟ್‌ಗಳು

  1. A delightful read again! The curiosity built up with every sentence, making it even more engaging. It was so exciting to see the virtual meet-up of Khushi and Harsha — now, eagerly waiting for their actual meet-up! Truly enjoyed the emotions and storytelling throughout. 🌸🦋

    ಪ್ರತ್ಯುತ್ತರಅಳಿಸಿ
  2. I was very much impressed theme eating time has come n wanted see the excitement between both ,meantime you bought a rain which washed off everything. I read yesterday but forgot to communicate

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.