ನೂರೊಂದು ನೆನಪು ಅಧ್ಯಾಯ -4
ನೂರೊಂದು ನೆನಪು
ಅಧ್ಯಾಯ -4
ಸೆಪ್ಟೆಂಬರ್ 30,
ಮಳೆ ನಿಂತು ಹತ್ತು ದಿನಗಳಾಗಿತ್ತು
ಮೈಸೂರು ದಸರಾ ಮತ್ತೆ
ಅದರ ಜೊತೆ ದಸರಾ ರಜೆಯು
ಮುಗಿದಿತ್ತು
ಯಾರಪ್ಪಾ ಇದು?
ಹೆಗ್ಗಡ ದೇವನ ಕೋಟೆ ಕಾಲೇಜ್ ಮೈದಾನದಲ್ಲಿ
Nike ಶೂಸ್
ಬ್ಲೂ ಜೀನ್ಸ್ ಪ್ಯಾಂಟ್,
ಬ್ಲಾಕ್ ಟೀ ಶರ್ಟ್
ಹಾಕ್ಕೊಂಡು, ತಲೆ ಕೂದಲ ಫ್ರೀಯಾಗಿ ಬಿಟ್ಟು
ಕೆಂಪು ಕಲರ್ ದುಪಟ್ಟ ಸೊಂಟಕ್ಕೆ ಕಟ್ಟಿಕೊಂಡು
ಇನ್ಯಾರು ಅವರು? ನಮ್ಮ
ಸಾಫ್ಟ್ ವೇರ್ ಕಂಪನಿಯ ಕುಶಿ
ಅವರ ಜೊತೆ ದಿವ್ಯ ಮತ್ತು ಶ್ರುತಿ ಬಂದಿದ್ದರು
ಕುಶಿ ಕಾಲೇಜು ಸ್ಟೂಡೆಂಟ್ಸ್ ಗಳ ಜೊತೆ ಮಾತನಾಡುತಿದ್ದಳು.
ಏನಪ್ಪಾ ನಡೀತಾ ಇದೇ ಅನ್ನುವಷ್ಟು
ಜೋರಾಗಿ ಕೂಗು ಕೇಳಿ ಬಂತು..
ಅದೂನೂವೆ ಕಾಲೇಜಿನ
ಕಾಂಪೌಂಡ್ ಗೋಡೆಯ ಆಚೆ
ಬೀದಿಯಲ್ಲಿ ಹೋಗುವವರಿಗೆ
ಬನ್ನಿರಣ್ಣ ಬನ್ನಿರೋ
ಬನ್ನಿರಣ್ಣ ಬನ್ನಿರೋ
ಬೀದಿ ನಾಟಕ ನೋಡಲು
ಪ್ರಾಸಬದ್ದವಾಗಿ ಹಾಡುತ್ತಾ
ಕಾಲೇಜಿನ ಆರು ಯುವಕರು
ಆರು ಯುವತಿಗಳು ಒಂದು ಸರ್ಕಲ್ ರಚಿಸಿ
ಕೈ ಚಪ್ಪಾಳೆ ತಟ್ಟಿ ತಟ್ಟಿ
ಬೀದಿ ನಾಟಕಕ್ಕೆ ತಯ್ಯಾರಿ
ಜೋರು ಶೋರಾಗಿ ನಡಿಯುತಿತ್ತು.
ಲಯಬದ್ದವಾಗಿ, ಹೆಜ್ಜೆ ಹಾಕಲು
ಕುಶಿಯಾಗಿ ಹೇಳಿಕೊಡುತಿದ್ದಳು ಕುಶಿ.
ಕುಶಿ ಮತ್ತೆ ಅವಳ ಟೀಮ್ ಮೈಸೂರಿನಿಂದ
HD ಕೋಟೆ ಬಂದಿಳಿದು
ಕಾಲೇಜಿನವರೊಟ್ಟಿಗೆ ಸೇರಿ ಬೀದಿನಾಟಕ,
ವಿದ್ಯಾರ್ಥಿಗಳ ಮೂಲಕ ಪ್ರಚಾರದ
ಪೂರ್ವಾಭ್ಯಾಸ..ನಡೆಸಿದ್ದರು.
ಜನ ಚೇತನಾಕಾರ್ಯಕ್ರಮ
ಒಂದು ಜಂಟಿ CSR ಕಾರ್ಯಕ್ರಮ
ಅರೋಗ್ಯ ಇಲಾಖೆ ಹಾಗೂ ಸಾಫ್ಟ್ ವೇರ್
ಕಂಪನಿ ಜೊತೆಗೂಡಿ ನಡೆಸುತಿದ್ದ
ಬೀದಿ ನಾಟಕ ಪ್ರಯಾಸ...
ಒಳಗೆ ಇಣುಕಿ ನೋಡಿದರೇ
ಇನ್ನೂ ಜೋರಾಗಿ ಕಾಲೇಜು ಹುಡುಗ್ರು
ಕಿರುಚಲು ಕೇಳ್ಬೇಕಾ
ಒಬ್ಬಳು ಮುಂದೆ ಬಂದು ಕೇಳೋದು
ಏನಪ್ಪಾ ನಾಟಕ
ಇನ್ನೊಬ್ಬಳು ಬಂದು
ಅದನ್ನ ರಿಪೀಟ್ ಮಾಡೋದು
ಏನಪ್ಪಾ ನಾಟಕ
ಒಬ್ಬ ಮುಂದೆ ಬಂದು ಹೇಳೋದು
ಮಕ್ಕಳು ಒಳ್ಳೆ ಊಟ ಮಾಡಬೇಕು
ಪೌಷ್ಟಿಕ ಆಹಾರ ಉಣ್ಣ ಬೇಕು
ಬನ್ನಿರಕ್ಕ ಬನ್ನಿರಿ
ಬನ್ನಿರಕ್ಕ ಬನ್ನಿರಿ
ಬೀದಿ ನಾಟಕವ ನೋಡಲು
ಕುಶಿ ಡೈರೆಕ್ಷನ್ ಇದನ್ನೇ
ಪ್ರಭಾವಿತ ಹಳ್ಳಿಗಳಲ್ಲಿ ಹೋಗಿ ನಡೆಸಿ
ಕುದಿಸಿದ ನೀರ ಕುಡಿಯುವ
ಪೌಷ್ಟಿಕ ಆಹಾರದ ಮಹತ್ವವ
ಹಾಗೇ ಆರ್ಥಿಕ ಉನ್ನತಿಗೆ,
ಖಾದ್ಯಾಹ್ನ, ಮತ್ತೆ ಔಷದಿಗಳ ಉಪಲಬ್ಧತೆ
ಜನ ಚೇತನವ ಜಾಗೃತಿ ಗೊಳಿಸುವ ಪ್ಲಾನ್.
ಇದರ ಬಗ್ಗೆ ಯಾವ ಸುಳಿವು ಕೊಡದೆ
ಸರ್ ಪ್ರೈಸ್ ಆಗಿ ಡಾಕ್ಟರ್ ಸಾಹೇಬ್ರಿಗೆ
ಶಾಕ್ ಕೊಡುವ ಮತ್ತೊಂದು ಪ್ಲಾನ್.
ಈ ಕಾರ್ಯಕ್ರಮವನ್ನ
ಬೀಚಿ ಹಳ್ಳಿ ಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದರು.
ಮುಖ್ಯ ಅತಿಥಿಗಳಾಗಿ
ಡಾಕ್ಟರ್ ಹರ್ಷನ ಕರೆಯೋಣವೆಂದು
ನಿರ್ಣಯಿಸಿ ಕಾರ್ಯಕ್ರಮವನ್ನ
ಅಕ್ಟೋಬರ್ ತಿಂಗಳ ಎರಡನೇ ತಾರೀಕು
ಗಾಂಧಿ ಜಯಂತಿಯಂದು ನಿಶ್ಚಯಿಸಲಾಗಿತ್ತು.
ಈ ನಡುವೆ ಡಾಕ್ಟರ್ ಹರ್ಷ
ಮೈಸೂರಿನಲ್ಲಿದ್ದ CFTRI ಜೊತೆ ಸೇರಿ
ನಿಶಕ್ತ ಮಕ್ಕಳ ಪೌಷ್ಟಿಕ ಆಹಾರದ
ಕೊರತೆಯ ದೂರಗೊಳಿಸುವ ಸಲುವಾಗಿ
ದಿನ ಬೆಳಗ್ಗೆ ಒಂದು Spirulina ಮಿಶ್ರಣದ
ಉಂಡೆಯ ಆಂಗನ್ ವಾಡಿ ಕೇಂದ್ರಗಳಲ್ಲಿ
ಬೆಳಗ್ಗೆ ಉಪಹಾರದ ಜೊತೆ ಕೊಡಲು
ಏರ್ಪಾಡು ಮಾಡಿದ್ದ
ಬೀಚಿ ಹಳ್ಳಿಯಿಂದ ಪ್ರಾರಂಭಿಸಲು
ಭಾನುವಾರ ಅಕ್ಟೋಬರ್ 2 ಫಂಕ್ಷನ್ ಗೆ
ಒಪ್ಪಿಕೊಂಡ. ಆ ಭಾನುವಾರವೂ ಬಂತು.
ಬೆಳಗ್ಗೆ ಒಂಬತ್ತು ಘಂಟೆಗೆ
HD ಕೋಟೆಯಿಂದ ಬೀಚಿಹಳ್ಳಿಗೆ ಬಸ್ಸಲ್ಲಿ
ಸುಗಮವಾಗಿ ಅರ್ಧ ಘಂಟೆಯಲ್ಲಿ
ಕುಶಿ, ದಿವ್ಯ ಶ್ರುತಿ ಸಾಫ್ಟ್ ವೇರ್ ಕಂಪನಿಯಿಂದ
ಮತ್ತೆ ಅವರ ಟೀಮ್ ಕಾಲೇಜು ಹುಡುಗ್ರು
ಹುಡುಗಿಯರು ಬಂದಿಳಿದಿದ್ದರು.
ಡಾಕ್ಟರ್ ಹರ್ಷನ ಟೀಮ್
ಜೀಪಿನಲ್ಲಿ ಬಂದಿಳಿದರು.
ಬೀದಿ ನಾಟಕ ವಾಗಿದ್ದರಿಂದ
ಯಾವ ಒಂದು ಔಪಾಚಾರಿಕತೆ ಇಲ್ಲದೆ
ಬನ್ನಿರಣ್ಣ ಬನ್ನಿರಿ
ಡಾಕ್ಟರ್ ಅಣ್ಣ ಬನ್ನಿರಿ ಎಂದು ಸ್ವಾಗತಿಸಿ
ಮಂಚದ ಮೇಲೆ ಕರೆದುಕೊಂಡು ಹೋಗಿ
ಕೂರಿಸಿದರು. ಡಾಕ್ಟರ್ ಕಪ್ಪು ಬಣ್ಣದ
ಜೀನ್ಸ್ ಪ್ಯಾಂಟ್ ಹಾಗೂ ತಿಳಿನೀಲಿ ಬಣ್ಣದ ಶರ್ಟ್
ಶೂಸ್ ಹಾಕಿಕೊಂಡು ಬಂದಿದ್ದರು.
ಹಳ್ಳಿಯ ಜನರು ಡಾಕ್ಟರ್ ನ್ನು ಗುರುತಿಸಿ
ಡಾಕ್ಟರ್ ಗೆ ಜೈ ಅಂತ ಘೋಷಣೆಯಿಟ್ಟರು.
ಮೊಟ್ಟ ಮೊದಲ ಬಾರಿಗೆ
ಸೀರೆ ಉಟ್ಟು ಬಂದಿದ್ದಳು ಮಿಂಚು.
ಕಾಲೇಜು ಹುಡುಗರ ಒಂದು ಲೈನ್.
ಹುಡುಗಿಯರು ಇನ್ನೊಂದು ಲೈನ್,
ಇದರ ನಡುವೆ
ಕ್ಯಾಟ್ ವಾಕ್ ತರಹ
ನಡೆದು ಬಂದಳು ಕುಶಿ.
ಮೈಕ್ ನಲ್ಲಿ ಕುಶಿಯ ಬಗ್ಗೆ ಪರಿಚಯ
ನೀಡುತ್ತಲಿರಲು,
ಕುಶಿಯಕ್ಕ ಬನ್ನಿರಿ
ಒಂದು ನಿಮಿಷ ಅವಾಕ್ಕಾಗಿ ನಿಂತ ಹರ್ಷ. ಕುಶಿಯನ್ನ
ಈ ಗ್ರಾಮದಲ್ಲಿ ಭೇಟಿಯಾಗ್ತೀನೀಂತ
ಕನಸ್ಸಲ್ಲೂ ನೆನಸಿರಲಿಲ್ಲ.
ಈ ನಡುವೆ ಅವಳ ಫೋನ್ ಕಾಲು ಬಂದಿರಲಿಲ್ಲ.
ಕೆಂಪು ಬಣ್ಣದ ರೇಷ್ಮೆ ಸೀರೆ, ಕಪ್ಪು ಬ್ಲೌಸ್,
ತಲೆ ಕೂದಲು ಸ್ವಚ್ಚಂದವಾಗಿ
ಹಾರಾಡ್ತಾ ನಡೆದು ಬಂದ ಕುಶಿಯನ್ನ
ಕಣ್ಣು ಮುಚ್ಚದೆ ನೋಡ್ತಾನೆ ನಿಂತ ಹರ್ಷ.
ಮಾತು ಬರಲಿಲ್ಲಾ.
ಕುರ್ಸಿ ಮೇಲೆ ಹಾಗೇ ಕುಳಿತು ಬಿಟ್ಟ.
ಕುಶಿ ಪಕ್ಕದ ಕುರ್ಸಿಯಲ್ಲಿ ಕುಳಿತು
ಹಾಯ್ ಡಾಕ್ಟರ್ ಅಂದಳು.
ನೂರು ಮಿಂಚು ಒಂದೇ ಸಲ
ಶಾಕ್ ಹೊಡದಂಗಿತ್ತು.
ಇವನೂ ಹಾಯ್ ಕುಶಿಂತ
ಧೈರ್ಯವಾಗಿ ಹೇಳಿದ
ಅವಳಿಗೆ ಕೇಳಿಸ್ತೋ ಏನೋ ಗೊತ್ತಿಲ್ಲಾ
ಯಾಕೇಂದ್ರೆ ಇವನು ಹೇಳಿದ್ದು
ಇವನಿಗೇ ಕೇಳಿಸಿರಲಿಲ್ಲ.
ಪಾಪ ಅನಿಸಿತು ಕುಶಿಗೆ,
ಹರ್ಷನಿಗೆ ಬರ್ತಾ ಇದ್ದೀವಿ ಅಂತ
ಮೊದಲೇ ತಿಳಿಸಿರಬೇಕಾಗಿತ್ತೋ ಏನೋಂತ,
ಅವಳೇ ಶುರು ಮಾಡಿದ್ಲು
ಹರ್ಷ ಕಂಗ್ರಾಟ್ಸ್
ನೀವು ತುಂಬಾ ಒಳ್ಳೆಯ
ಸೇವೆ ಮಾಡಿದ್ದೀರಿ
ಮಕ್ಕಳ ಜೀವ ಉಳಿಸಿದ್ದೀರಿ ಅಂತ ಅಂದಳು
ನೀವು ಹ್ಯಾಗೆ ಇಲ್ಲಿ ಕೇಳ್ದಾ
CSR ಮತ್ತೆ ಜಂಟಿ ಕಾರ್ಯಕ್ರಮದ ಬಗ್ಗೆ
ಹೇಳ್ತಾ ಇದ್ದಳು. ಭಾಷಣ ಬೇಡಾಂತ
ಇಬ್ಬರೂವೆ ಕೇಳ್ಕೊಂಡ್ರು.
ಕುಶಿ ಹೇಳಿದ್ಲು
ನೋಡ್ತಾ ಇರಿ ನಮ್ಮ ಸ್ಟೂಡೆಂಟ್ಸ್ ಮಾಡೋ
ಜನಚೇತನ ಕಾರ್ಯಕ್ರಮಾನ್ನ...
ಅಷ್ಟರಲ್ಲಿ ಊರ ಮುಖ್ಯ,
ಡಾಕ್ಟರ್ ಹರ್ಷಗೆ ಹೂವಿನ ಹಾರ ಹಾಕಿ ಗೌರವಿಸಿದರು,
BDO ಶಾಂತಿಯವರು ಕುಶಿಗೆ
ಹಾರ ಹಾಕಿ ಗೌರವಿಸಿದರು.
ಮಂಚದ ಮೇಲೆ ಇವರಿಬ್ಬರಿಗೆ ಮಾತ್ರ ಹಾರ
ಮದುವೆ ಆರತಕ್ಷತೆಯಲ್ಲಿ ಕೂರಿಸಿದ ಹಾಗೇ
ಕುಶಿ ಪಕ್ಕದಲ್ಲಿದ್ರೂ ಏನೂ
ಮಾತನಾಡಲು ಸಾಧ್ಯವಾಗಲಿಲ್ಲ
ಎಂತ ವಿಪರ್ಯಾಸ
ಇಷ್ಟ ಪಟ್ಟವನ ಜೊತೆಗೇ ಕೂತಿದ್ದೀನಿ
ಮಾತನಾಡಲು ಸಾಧ್ಯವಾಗ್ತಾ ಇಲ್ಲಾ ನೋಡಿ.
ಅಕ್ಕ ಪಕ್ಕ ಎಲ್ರೂ ಇದ್ದದ್ದರಿಂದಲೋ ಏನೋ
ಕಾರ್ಯಕ್ರಮ ಪ್ರಾರಂಭವಾಯ್ತು.
ಬೀದಿ ನಾಟಕ ಪೌಷ್ಟಿಕ ಆಹಾರದ ಬಗ್ಗೆ
ಡಾಕ್ಟರ್ ಹರ್ಷನಿಗೆ ಅದೊಂದು
ವಿನೂತನ ಅನುಭವ, ಬೀದಿ ನಾಟಕವ
ಇದಕ್ಕೆ ಮುಂಚೆ ನೋಡಿರಲಿಲ್ಲ.
ಆದ್ರೆ ಅದರ ಒಂದೊಂದು ವಿಷಯವು
ಹಳ್ಳಿಯವರಿಗೆ ಸುಲಭವಾಗಿ ಅರ್ಥವಾಯ್ತು.
ಅದರ ಲಾಭ ಡಾಕ್ಟರ್ ಟೀಮ್ ಗೆ
ಅವರಿಗೆ Spirulina ಲಡ್ಡು ಬಗ್ಗೆ
ತಿಳುವಳಿಕೆ ಹೇಳುವ ಅವಶ್ಯಕತೆಯೇ ಇರಲಿಲ್ಲಾ.
ಧನ್ಯವಾದಗಳೊಂದಿಗೆ ಕಾರ್ಯಕ್ರಮ ಸಮಾಪ್ತವಾಯ್ತು.
ಕಾರ್ ಹತ್ತುವಾಗ ನೋಡಿದ್ದ ಮಿಂಚು
ಜಾಗಿಂಗ್ ನಲ್ಲಿ ಸಿಕ್ಕ ಮಿಂಚು
ಮನೆಯಲ್ಲಿ ಅಮ್ಮನ ಮುಂದೆ ನೋಡಿದ ಮಿಂಚು
ಸೆಲ್ ಫೋನ್ ನ ಆ ಚೆಲುವೆ
ಮಿಂಚು, ಬೆಡಗಿ, ಚೆಲುವೆ,
ನನ್ನ ಕುಶಿ
ಈಗ ಪಕ್ಕದಲ್ಲೇ ಕುಳಿತಿದ್ದಾಳೆ
ಏನೇನೋ ಕನಸ್ಸು ಕಂಡಿದ್ದೆನಲ್ಲಾ
ಅವಳ ಕೈ ಹಿಡಿದು
ನೀನೂಂತಂದ್ರೆ
ತುಂಬಾ ಇಷ್ಟ ಕಣೇಂತ
ಹೇಳ್ಬೇಕುಂತ ಆಸೆ.
ನೋಡಿದ್ರೆ ಮಾತೇ ಬರದು.
ಇಷ್ಟರಲ್ಲಿ ಜಾರಿ ಹೋದ ಅಪ್ಸರೆ
ಕಾಲೇಜು ಸ್ಟೂಡೆಂಟ್ಸ್ ಗಳ ಜೊತೆ
ಬೀದಿ ನಾಟಕದ ಬಗ್ಗೆ ಹೊಗಳಿ
ಹೇಳ್ತಾ ಇದ್ದಳು
ಎಲ್ಲರೂ ಅವಳ ಮಾತನ್ನು
ಗಮನದಿಂದ ಆಲಿಸುತಿದ್ದರು.
ಡಾಕ್ಟರ್ ಹರ್ಷ ಅಲ್ಲೇ ಮೆಡಿಕಲ್ ಕ್ಯಾಂಪ್
ಒಂದನ್ನು ಶುರು ಮಾಡಿ
ಕಾಂಪೌಂಡರ್ ಮೂಲಕ ಅವಶ್ಯಕತೆಗೆ ಅನುಗುಣವಾಗಿ ಮಾತ್ರೆಗಳನ್ನು
ವಿತರಣೆ ಮಾಡುತಿದ್ದರು.
12 ಘಂಟೆಗೆ ಕಾರ್ಯಕ್ರಮ ಮುಗಿಯಿತು
ಕಾಫಿ ಟೀ ಬಿಸ್ಕೆಟ್ ಸ್ವಲ್ಪಾಹಾರ ಸವಿದ ನಂತರ
HD ಕೋಟೆಗೆ ಹೊರಟ್ವಿ.
ಹರ್ಷನ ಲಂಚ್ ಅವನ ಮನೆಯಲ್ಲಿ
ಖಂಡಿತ ಮನೆಗೆ ಬನ್ನೀ ಲಂಚ್ ಗೇಂತ
ಆಹ್ವಾನಿಸಿದ. ಸಾರೀ ಡಾಕ್ಟರ್
ನಮಗೆ ಮತ್ತೆ ಸಾಫ್ಟ್ ವೇರ್ ಕಂಪನಿಯ ಸಹಯೋಗಿಗಳಿಗೆ ಮತ್ತೆ ಕಾಲೇಜು
ಸ್ಟೂಡೆಂಟ್ಸ್ ಸ್ಟಾಫ್ ಗಳಿಗೆ
ಪ್ರತ್ಯೇಕ ಲಂಚ್ ವ್ಯವಸ್ಥೆಯಾಗಿದೆ.
ನೀವು ಜಾಯಿನ್ ಮಾಡೀಂತ ಆಹ್ವಾನಿಸಿದಳು.
ಸಾರೀ ಯ ಬಾರಿ ಈ ಸಲ ಹರ್ಷಂದು
ವಿನಂತಿಸಿ ಕೊಂಡು ಮನೆಗೆ ಹೊರಟ.
ಹಾಸ್ಪಿಟಲ್ ನೋಡಲು ಸಂಜೆ ಬರ್ತೀನಿ
ಅಂತ ಕುಶಿ ಹೇಳಿ ಹೊರಟಳು.
ಡಾಕ್ಟರ್ ಹರ್ಷನಿಗಂತೂ
ತನ್ನನ್ನೇ ಹುಡುಕಿಕೊಂಡು ಇಷ್ಟು ದೂರ
ತನಗಾಗೇ HD ಕೋಟೆಯಲ್ಲಿ
CSR ಪ್ರಾಜೆಕ್ಟ್ ನ್ನು ಸ್ರಷ್ಟಿಸಿ
ಇಲ್ಲಿ ತನಗೋಸ್ಕರ ಕಾರ್ಯಕ್ರಮವ
ಆಯೋಜಿಸಿ
ನಿಜಕ್ಕೂ ಹರ್ಷನ್ನ
ಆಶ್ಚರ್ಯಚಕಿತ ಗೊಳಿಸಿದ್ದಳು
ಅವಳ ಹತ್ತಿರ ಮಾತಾಡಬೇಕಾದ
ವಿಷಯ ಹಲವಿತ್ತು
ಫ್ರೆಂಡ್ಸ್, ಕ್ಲಾಸ್ಮೇಟ್ ಎಲ್ಲಾ ಸರಿ
ಲವ್ವನ್ನ ಹ್ಯಾಗೆ ಹೇಳೋದು,
ಏನೂಂತ ಹೇಳೋದು
ಅನುಭವ ಇಲ್ಲಾ
ಸಿನಿಮಾ ನೋಡಿದ್ದರಿಂದ,
ಕಥೆ ಪುಸ್ತಕಗಳ ಓದಿದ್ದರಿಂದ
ಹೀರೋ ಹೀರೋಯಿನ್ ಗೆ ಹ್ಯಾಗಲ್ಲಾ
ಪ್ರೊಪೋಸ್ ಮಾಡ್ತಾರೆ
ಇದೆಲ್ಲವೂ ನೋಡಿ ತಿಳಿ ಮಾಡಿ ಕಲಿ
ತರಹ ಸುಲಭವಾಗಿಲ್ಲ
ಅವರವರೆ ಅನುಭವಿಸಬೇಕು
ಅವರವರೇ ಪರಿಹರಿಸಬೇಕು
ಹಿಂದಿ ರೇಡಿಯೋ ಅಡ್ವೇರ್ಟೈಸ್ಮೆಂಟ್
ಹರ್ಷನಿಗೆ ಜ್ಞಾಪಕಕ್ಕೆ ಬಂತು
ಮೆಲೋಡಿ ಕಾವ್, ಖುದ್ ಜಾನ್ ಜಾವ್ ಅಂತ
ಸಂಕೋಚ, ಡೌಟು ಎಲ್ಲಾ ಬದಿಗಿಟ್ಟು
ಧೈರ್ಯವಾಗಿ ಹ್ಯಾಂಡಲ್ ಮಾಡು ಹರ್ಷಾಂತ
ತನಗೆ ತಾನೇ ಹೇಳ್ಕೊಂತಾ ಊಟ
ಮಾಡಿ ಬಂದು ಆಸ್ಪತ್ರೆ ಯಲ್ಲಿ ಕಾದಿದ್ದ...
ಊಟ ಮಾಡಿ ಡ್ರೆಸ್ ಬದಲಿಸಿ
ಅವಳಿಗೆ ಇಷ್ಟವಾದ ಬ್ಲೂ ಡೆನಿಮ್ ಪ್ಯಾಂಟ್ಕು
ಬ್ರಿಕ್ ರೆಡ್ ಕಲರ್ ನ ಕುರ್ತಿ ಹಾಕ್ಕೊಂಡು
ಕುಶಿ ಒಬ್ಬಳೇ ಜೀಪಿನಲ್ಲಿ
ಆಸ್ಪತ್ರೆಯ
ಬಳಿ ಬಂದಿಳಿದಿದ್ದಳು.
ಡಾಕ್ಟರ್ ರೂಮ್ ಒಳಗೆ
ಸದ್ದಿಲ್ಲದೆ ಪ್ರವೇಶಿಸಿದಳು.
ಹರ್ಷ ಏನೋ ಪುಸ್ತಕ ಓದುತಿದ್ದ
ತೆಳು ನೀಲಿ ಬಣ್ಣದ ಶರ್ಟ್, ಬಿಳಿಕೋಟ್,
ಕಪ್ಪು ಜೀನ್ಸ್ ಪ್ಯಾಂಟ್, ಜೊತೆಗೇ ಇರೋ
ಜೊತಾಡ್ತಿರೋ ಸ್ಟೇತೋಸ್ಕೋಪ್
ಮುಖವ ಬಿಟ್ಟಗಲದ ಮುಗುಳ್ನಗೆ
ನೋಡ್ತಾ ನೋಡ್ತಾ ಕುಶಿಗೆ
ಒಂದಷ್ಟು ಲವ್ವು ಹೆಚ್ಚಾಯ್ತೋ ಏನೋ
ನಿಂತಲ್ಲೇ ರಂಗೋಲಿ ಹಾಕುತಿದ್ದಳು.
ಸಡನ್ ಆಗಿ
ಹರ್ಷ ತಲೆ ಎತ್ತಿ ನೋಡಲು
ಕುಶಿಯು ನೋಡಲು
ಒಂದು ಕ್ಷಣ ಇಬ್ಬರೂ ಫ್ರೀಜ್.
ಬನ್ನಿ ಬನ್ನೀಂತ ಸ್ವಾಗತಿಸಿ, ಆಸ್ಪತ್ರೆಯನ್ನು
ಒಂದು ರೌಂಡ್ ತೋರಿಸಿದ
ಲ್ಯಾಬ್ ಅಟೆಂಡೆಂಟ್ ಮರಿಯಪ್ಪ
ಇಬ್ಬರಿಗೂ ಕಾಫಿ ತಂದಿಟ್ಟ.
ಕಾಫಿ ಕುಡಿಯುತ್ತಾ ಮಾತು ಕಥೆ
ಮುಂದುವರಿಯಿತು, ಹಾಗೇ ಹೊರಬಂದು
ಬೆಟ್ಟ ಒಂದರಿಂದ ಹರಿದು ಬಂದ ನಾಲೆ
ಆಸ್ಪತ್ರೆಯ ಮುಂದೆ ಜುಳು ಜುಳೂಂತ
ನೀರು ಹರಿದು ಹೋಗುತಿತ್ತು.
ಅಲ್ಲೇ ಇದ್ದ
ಸಿಮೆಂಟ್ ಕಟ್ಟೆ ಮೇಲೆ ಕುಳಿತು
ಇಬ್ಬರೂ ಸೂರ್ಯಾಸ್ತಮವ ನೋಡುತ್ತಾ ಇದ್ದರು
ಮನಸ್ಸು ಮನಸ್ಸು ಒಂದಾದ ಮೇಲೆ
ಒಬ್ಬರನ್ನೊಬ್ಬರು ಅರಿತು ಕೊಳ್ಳಲು
ಹರ್ಷ ಪ್ರೊಪೋಸ್ ಮಾಡಿದ್ನ ಇಲ್ಲಾ
ಕುಶಿ ಪ್ರೊಪೋಸ್ ಮಾಡಿದಳಾ
ಆಮೇಲೇನು ಮಾತಾಡಿಕೊಂಡರು
ಮದುವೆ ಆಯ್ತಾ
ಹೀಗೇ ನೂರಾರು ಪ್ರಶ್ನೆಗಳು ನಮಗೆ
ಹರ್ಷ ಕುಶಿ ಒಂದಾದರೆ ಸಂತೋಷ ಅಲ್ಲವೇ
ಹರ್ಷ ಅಂಡ್ ಕುಶಿ=ಹ್ಯಾಪಿ
ಅವರನ್ನ ಅವರ ಪಾಡಿಗೆ ಬಿಡಿ
ಇನ್ನು ಮುಂದೆ ಎಲ್ಲವೂವೆ
ನೂರೊಂದು ಸವಿ ನೆನಪುಗಳು.
It was a beautiful read! Loved how Kushi and Harsha met — unknowingly, yet with a sense of familiarity. The emotional and shy nature of Harsha combined with Kushi’s bold yet tender character created such a lovely mix of emotions. Eagerly waiting for the next blog!🌻🕊️
ಪ್ರತ್ಯುತ್ತರಅಳಿಸಿWhat a narration, I enjoyed reading line by line n courageously both met n was thrilling for both .it reminds a true story during monsoon n their initial jobs which made them to concentrate more on job front ..excellent
ಪ್ರತ್ಯುತ್ತರಅಳಿಸಿ