ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.

ನಾವು ಇಪ್ಪತೈದು, 
ಮುಗಿಸಿದ್ದು ಐವತ್ತು
ನಮ್ದು ಕಿ ಎಪ್ಪತೈದು 
ಇದೇನು ಲೆಕ್ಕಾಚಾರ
ಕುಟುಂಬ ಕಲ್ಯಾಣ ವಿಭಾಗದ ಪ್ರಚಾರವೋ
ಏನೋ ನಾವಿಬ್ಬರು ನಮಗಿಬ್ಬರು ಕೇಳಿದ್ದೀವಿ
ಕೂಡೋದು, ಕಳೆಯೋದು, 
ಗುಣಾಕಾರ, ಭಾಗಾಕಾರ
ಏನಪ್ಪಾ ಈ ನಂಟು
25 ರ ಗಣಿತ 75ರ ಜೊತೆಗೆ
Maths ಬಿಟ್ಟು Bio ತೆಗೊಂಡಿದ್ದು ಈ 
ಗೋಳಿಗೆತಾನೇ 
ಒಂದಕ್ಕೊಂದು ಪೂರಕ ಹಾಗೂ ಅನುಪೂರಕ ಇಪ್ಪತೈದು ಇಲ್ಲದೇ ಎಪ್ಪತೈದು ಇಲ್ಲಾ 
ಹಾಗೇನೇ
ಎಪ್ಪತೈದು ಇಲ್ಲದೇ ಇಪ್ಪತೈದು ಇಲ್ಲಾ
ನಮ್ಮ  BFSc. ಕ್ಲಾಸ್ ನ ವಿದ್ಯಾರ್ಥಿಗಳ ಸಂಖ್ಯೆ
ಇಪ್ಪತ್ತೈದು
ಮತ್ತೆ
ನಾವೆಲ್ರು BFSc.,ಡಿಗ್ರೀ ಮುಗ್ಸಿದ್ದು
ಎಪ್ಪತೈದು
ಹೌದಪ್ಪ., 1975
ಈಗ ಸರಿಹೋಯ್ತಲ್ಲ
ನಾವು ಇಪ್ಪತೈದು, ನಮ್ದು ಕಿ ಎಪ್ಪತೈದು 
ನಾವು ಇಪ್ಪತೈದು BFSc. ಡಿಗ್ರೀ ಧಾರಕರು
ನಾವು pass out ಆದದ್ದು  1975ರಲ್ಲಿ
ಇಂಪಾರ್ಟೆಂಟ್ ವಿಷಯ
ಕಾಲೇಜು ಸೇರಿ ಪಾಸ್ ಔಟ್ ಆಗಿ 
ನಮ್ಮ ಬ್ಯಾಚ್ ಗೆ
2025 ನಲ್ಲಿ 50 ವರ್ಷಗಳು ತುಂಬಿದೆ.  
ಗೋಲ್ಡನ್ ಜುಬಿಲೀ ಇಯರ್
ನಾವು ಇಪ್ಪತೈದು...
ಮುಗಿಸಿದ್ದು ಐವತ್ತು...
ನಮ್ದು ಕಿ ಎಪ್ಪತೈದು...
ಗೋಲ್ಡನ್ ವರ್ಷಗಳು...
ನಾನು ಹೇಳೋದನ್ನ ಪ್ರೂವ್ ಮಾಡ್ತಿದ್ದೀನಿ ನೋಡಿ
ಮೇಲಿರೋ ಫೋಟೋ ಅದಕ್ಕೆ  ಸಾಕ್ಷಿ.  ನಾವು ಫೈನಲ್ ಇಯರ್ BFSc ಯಲ್ಲಿದ್ದಾಗ ಫೇರ್ ವೆಲ್
ಫೋಟೋ, ಬ್ಯಾಚ್ ನಲ್ಲಿ ಇರುವ ಎಲ್ಲರಿಗೂ ಎಲ್ಲರ ಹೆಸರು ಅವರ ಹಿಸ್ಟರಿ ಪುರಾಣ ಎಲ್ಲವೂ ಗೊತ್ತು.
ಮೊದಲು 1971 ರಿಂದ 1975
BFSc.,  ಓದೋದು ಬಿಟ್ಟು ಬೇರೇನೂ ಇಲ್ಲಾ
MFSc... ಹೀಗೇ... ಓದಿನ್ ಮೇಲ್ ಓದು
ಮಿತ್ರರು ಕೆಲವರು BFSc ಯ ಮುಗಿಸಿ
ಕರ್ನಾಟಕ ಸರ್ಕಾರದ ಫಿಶರೀಸ್ ಡಿಪಾರ್ಟ್ಮೆಂಟ್
ಶೋಭೆ ಹೆಚ್ಚಿಸಿದರು ಮತ್ತೆ ಕೆಲವರು ಕಾಲೇಜಿನಲ್ಲೇ MFSc ಮಾಡಲು ಮತ್ತೆ ಕೆಲವರು ವಿದೇಶದಲ್ಲಿ
PG ಮಾಡಲು ನಮ್ಮ 75ಬ್ಯಾಚ್ ನ 25 BFSc
ಪದವಿಧಾರಕರು ಒಬ್ಬರನ್ನೊಬ್ಬರು ಅಗಲಿದರು.
ಕೋರ್ಸ್ ಮುಗಿಯೋ ಮುಂಚೆ  ಶ್ರೀ ರೇವಣಸಿದ್ದಪ್ಪ ಮೆಡಿಕಲ್ ಓದಲು ಹೋದ ಮೇಲೆ 27 ಇದ್ದ ನಾವು 26 ಆದೆವು..NB ಅಶೋಕ್ ಡೆಂಟಲ್ ಓದಲು 
ಬೆಂಗಳೂರಿಗೆ ಹೋದಾದ ಮೇಲೆ 26ರಿಂದ 
25 ಆದೆವು.
ಬನ್ನಿ, ಮೇಲಿರುವ ಫೋಟೋ ನೋಡಿ 
(24 ಇರೋದು P. Ravindran Malaysian ಈ ಫೋಟೋದಲ್ಲಿ ಇಲ್ಲಾ).
ವ್ಯಕ್ತಿ ಹೆಸರು ಊರು ಕಿರು ಪರಿಚಯ.(ಎಡಗಡೆಯಿಂದ ಬಲಕ್ಕೆ)
1. Aejaz Ahmed : BFSc ಕ್ಲಾಸ್ ಮೇಟ್, 
ಕ್ಲಾಸ್ ನ  ಇಂಟರ್ವಲ್ಗಳಲ್ಲಿ ತಲೆಕೂದಲ ಆಗಾಗ ಸರಿಸಿ ಒಂದು ಸಿನಿಮಾಟಿಕ್ ಲುಕ್ ಕೊಟ್ಟು ಮುಂದುವರೆಯುತಿದ್ದ. ಮನೆ ವಿಳಾಸ ಗೊತ್ತಿಲ್ಲ. ಆತನೇ ಹೇಳಿದ ಹಾಗೇ ಬೆಂಗಳೂರಿನ ರಾಜಾಜಿನಗರ, ಸರ್ಕಲ್ ಹತ್ತಿರ ಮನೆ, BFSc ಮುಗಿಸಿ, MS Food Sciences USA ನಲ್ಲಿ ನಂತರ ದುಬೈನಲ್ಲಿ ಸಕ್ಸಸ್ಫುಲ್  ಫಿಶಿರೀಸ್ ಟೆಕ್ನಾಲಜಿಸ್ಟ ಆಗಿದ್ದು, ಕೊನೆಗೆ ಮುಂಬೈ ನಲ್ಲಿ ಭೇಟಿಯಾದವರು ಇದಕ್ಕಿಂತ ಹೆಚ್ಚಿನ ಮಾಹಿತಿ ಕೊಡಲಿಲ್ಲ. ಅಪುಷ್ಟ ಮಾಹಿತಿ ಯ ಪ್ರಕಾರ Aejaz Ahmed ಜೀವಂತವಾಗಿಲ್ಲ.
2.D.Jayakumar : BFSc ಡಿಗ್ರೀ ಮುಗಿಸಿ Assam ನಲ್ಲಿ ಬ್ಯಾಂಕ್ ಒಂದರಲ್ಲಿ ಜಯಕುಮಾರ್ ಕೆಲಸ ಮಾಡ್ತಾ ಇದ್ದಾರೆ ಅನ್ನೋ ವಿಷಯ ಅಷ್ಟೇ ಗೊತ್ತು, ಅವರನ್ನು ಗ್ರೂಪ್ ನಲ್ಲಿ ವೆಡ್ಜ್ ಅಂತ ಪಾಪ್ಯುಲರ್ ಆಗಿ ಕರೆಯುತ್ತಿದ್ದರು ಆದ್ರೆ ಯಾಕೆ ಆ ಹೆಸರೂಂತ ಅವರು ಸಿಕ್ರೆ ಅವರನ್ನೇ ಕೇಳಬೇಕುಂತ ಅವರನ್ನ ಸೋಶಿಯಲ್ ಮೀಡಿಯಾ ಮಾಧ್ಯಮ ದಿಂದ ಹುಡುಕುವ ಪ್ರಯಾಸ ಜಾರಿ.
Professor Shrikar: ನಮ್ಮ ಬಯೋಕೆಮಿಸ್ಟ್ರಿ ಪ್ರೊಫೆಸರ್ ಶ್ರೀಕರ್. ನಮ್ಮ batch ನ ಹಿತೈಷಿ Counsellor.  ಅವರೂ ಸಹ ನಮ್ಮನ್ನ ಅಗಲಿ 
ಬಲು ದೂರ ಹೋದವರು.
ಶ್ರೀ HPC Shetty : ನಮ್ಮ Director of Instruction  ಮೊಟ್ಟ ಮೊದಲಿನ ಫಿಶರೀಸ್ ಕಾಲೇಜ ಬೆಳಸಿ ವಿಶ್ವ ವಿಖ್ಯಾತ ಮಾಡಿದವರು. ಅವರೂ ಇಂದು ನಮ್ಮೊಟ್ಟಿಗಿಲ್ಲ. ನಾವಿದ್ದಾಗ ಅವರು ನಮ್ಮ ಕಾಲೇಜ್ ನ Director of Instruction ಆಗಿದ್ದರು ಎಂದು ಹೇಳುವದಕ್ಕಿಂತಲೂ 
ಅವರು DI ಆಗಿದ್ದಾಗ ನಾವು ಅವರ ಸ್ಟೂಡೆಂಟ್ಸ್ ಆಗಿದ್ವಿ ಅಂತ ಹೇಳಿಕೊಳ್ಳುವದರಲ್ಲಿ ನಮಗೆಲ್ಲಾ ಹೆಮ್ಮೆ. ದಾರಿದೀಪವಾಗಿದ್ದವರು ಇಂದು ನಂದಾದೀಪ. 
3. G.P.Choudhary:   BFSc., ಮುಗಿಸಿ
ಕರ್ನಾಟಕ ಸರ್ಕಾರದ ಮತ್ಸ್ಯ ವಿಭಾಗ ದಲ್ಲಿ ಸೇವೆ.
ಆಂಧ್ರ ಪ್ರದೇಶ ಹಾಗೂ ಕರ್ನಾಟಕ Border ಪಾವಗಡ ಹತ್ತಿರ ಇವರ ಊರು, ಮಾಟ್ಲಾಡೋದು ತೆಲಗು ಕನ್ನಡ. ನಾ ದಗ್ಗರ 100ಎಕರೆ ಜಮೀನು ಉಂದಿ, ಅದರಲ್ಲಿ ರತ್ನ ಕಲ್ಲು ಉಂದಿ 
ಅಂತ ಹೇಳ್ತಾ ಇದ್ದರು, ಆದ್ರೆ ನಿಜಕ್ಕೂ ಬಂಜರು ಭೂಮಿ.ಮತ್ಸ್ಯವಿಭಾಗದಲ್ಲಿ ಸಾಧಿಸಬೇಕೆಂಬ ಛಲದಿಂದ ಹೆಜ್ಜೆಯಿಟ್ಟ Choudhary ಯವರು
ಸೇವಾ ಕಾಲದ  ಪ್ರಾರಂಭದಲ್ಲೇ ತೀರಿಕೊಂಡರು.
4. Mathew M Maliel : ಬೆಂಗಳೂರಿನವರೇ ಆದ್ರೂ ಇಂಗ್ಲೀಷ್ ಸಂಸಾರಿಕ್ಕುಂ ಮಲಯಾಳೀ. 
ಬಹಳ ಆಕ್ಟಿವ್ ನಮ್ಮ ಹಾಸ್ಟೆಲ್ ಕ್ಯಾಂಪಸ್ಗಳಲ್ಲಿ ಯಾವ ಮರದಲ್ಲಿ ಯಾವ ಕಾಯಿ ಯಾವಾಗ ಹಣ್ಣಾಗುತ್ತೆ ಅನ್ನೋ ಅಪರಿಮಿತ ಫೀಲ್ಡ್ ನಾಲೆಡ್ಜ್ 
ಕೊನೆಯದಾಗಿ ವರದಿಯಾದಾಗ ಆಸ್ಟ್ರೇಲಿಯಾದ ಉದ್ದ ಅಗಲ ಅಳಿಯುತ್ತಿದ್ದ ಸುದ್ದಿ. ಅವರನ್ನು ಸಂಪರ್ಕಿಸಲು ಇಮೇಲ್ ಮೂಲಕ ಪ್ರಯತ್ನಿಸಿ
ಜವಾಬಿಲ್ಲ. ಅಡ್ರೆಸ್ ಎಲ್ಲಾ ಸರಿ ಪ್ರಯಾಸ ಜಾರಿ. 
5. K.S. Udaya Kumar:  BFSc. ಜೊತೆಗೆ ಮುಗಿಸಿ IIM Ahmedabad ನಲ್ಲಿ MBA ಮಾಡಿ ಸ್ವತಂತ್ರ ಉದ್ಯೋಗವೊಂದು ಪ್ರಾರಂಭಿಸಿದ್ದ. 
ಹಾಸ್ಟೆಲ್ನಲ್ಲಿ ನನ್ನ ರೂಮ್ ಮೇಟ್, ಒರಟಾಗಿ ಹೊರ ನೋಟಕ್ಕೆ ಕಂಡರೂ ಅಷ್ಟೇ ಮಿತ ಹಾಗೂ ಮೃದು ಭಾಷಿ. ಹೊಸನಗರದಿಂದ ಓದಲು ಬಂದವ, ಬ್ರೈಟ್ ಸ್ಟೂಡೆಂಟ್, ಆದ್ರೆ ಅರ್ಥವಾಗದ ನಿಗೂಢ ರಹಸ್ಯ, 
ರಫ್ ಅಂಡ್ ಟಫ್ ಹೊರ ನೋಟಕ್ಕೆ ಒಳಗೆ ಟೊಳ್ಳು ಏನು ಕೊರಗೋ, ಏನು ಕಾರಣವೋ,ಆತ್ಮಹತ್ಯೆ ಮಾಡಿಕೊಂಡರು. ನಂಬಲಾಗದ ಮೃತ್ಯು.
6.K. Ratnakar: BFSc ಮುಗಿಸಿ ಮಂಗಳೂರು ಉಡುಪಿ ನಡುವೆ  ಗ್ರಾಮದ ನಿವಾಸಿ. ಸುವರ್ಣೋತ್ಸವದಲ್ಲಿ 
ಉಡುಪಿಗೆ ಹೋದಾಗ ಹುಡುಕಿಕೊಂಡು ಹೋದ ನಮ್ಮ ಬಳಗದವರಿಗೆ ಸಿಕ್ಕಿದರು. ಫಿಷರೀಸ್ ಡಿಪಾರ್ಟ್ಮೆಂಟ್ ನಲ್ಲಿ ಕಾರ್ಯರತರಾಗಿದ್ದು  ಅಸ್ವಸ್ತೆಯ ಕಾರಣ VRS ತೆಗೆದು  ಕೊಂಡಿದ್ದಾರೆ.ಅದೇ ಕಾರಣಕ್ಕಾಗಿ  ಸಂಭ್ರಮದಲ್ಲಿ ಪಾಲುಗೊಳ್ಳಲಾಗಲಿಲ್ಲ. ಭಗವಂತ ಅವರಿಗೆ ಆಯುರಾರೋಗ್ಯ ನೀಡಲಿ ಎಂದು ಹಾರೈಸುವ ಹಿತೈಷಿಗಳು.
7. Ram Mohan Menon : BFSc. ಮುಗಿಸಿ IIM Ahmedabad ನಲ್ಲಿ MBA ಮಾಡಿ ಮಲ್ಟಿ ನ್ಯಾಷನಲ್ ಕಂಪನಿ ಯಲ್ಲಿ ಕೋಲ್ಕತ್ತಾದಲ್ಲಿ ಅತಿ ಉನ್ನತ ಹುದ್ದೆಯಲಿದ್ದು
ಬಹಳ ಚಾಲೆಂಜಿಂಗ್ ಅಸೈನ್ಮೆಂಟ್ ಗಳನ್ನು
ಕೈಗೆತ್ತಿಕೊಂಡು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ. ಎವೆರೆಡಿ, ಲಾವಾ ಬ್ಯಾಟರಿಗಳ ಉತ್ಪತ್ತಿ ಮತ್ತೆ ಮಾರಾಟದಲ್ಲಿ ದೇಶವಿದೇಶಗಳಲ್ಲಿ ಸಫಲತೆ.
ಪ್ರೈವೆಟ್ ಉದ್ಯೋಗದಲ್ಲಿ ವಿಜಯ ಪತಾಕೆಯ ಹಾರಿಸಿ ನಿವ್ರತ್ತರಾಗಿ ಬೆಂಗಳೂರು ಇಂದಿರಾನಗರದಲ್ಲಿ ಸೆಟ್ಲ್ ಆಗಿದ್ದುಕೊಂಡು ಅನೇಕ ಯುವಾ ಉದ್ಯಮಿಗಳಿಗೆ ಸ್ಟಾರ್ಟ್ ಅಪ್ ಕನ್ಸಲ್ಟೆಂಟ್ ಆಗಿ ಸಲಹೆ ನೀಡ್ತಿರುತ್ತಾರೆ. 
8. Sudhir B Patil Kulkarni: BFSc ಮುಗಿಸಿ ಕರ್ನಾಟಕ ಫಿಶರೀಸ್ ಡಿಪಾರ್ಟ್ಮೆಂಟ್ ನಲ್ಲಿ ಸೇವೆಯನ್ನು ಸಲ್ಲಿಸಿ ಸದ್ಯಕ್ಕೆ ಬೆಂಗಳೂರಲ್ಲಿ ಸೆಟ್ಲ್ ಆಗಿದ್ದಾರೆ.  ಬೆಂಗಳೂರಲ್ಲಿದ್ದು ಕೊಂಡು ಗ್ರೂಪ್ ಜೊತೆ ಸಂಪರ್ಕದಲಿಲ್ಲ.
9. Vijaykumar M Baragi : BFSc. ಮುಗಿಸಿ MFsc. ಮುಗಿಸಿ ಚಿನ್ನದ ಮೆಡಲ್ ಪಡೆದುಕ್ಕೊಂಡು USA ಗೆ ಇನ್ನೂ ಓದಬೇಕೂಂತ ಹೋದವರು Auburn University ಯಲ್ಲಿ Enzyme Chemistry ಯಲ್ಲಿ Phd ಮಾಡಿ Stubbs School of ಮೆಡಿಸಿನ್ನಲ್ಲಿ Orthopedics ಓದಿ Arthritis ನ expert  ಆದರು. ಮೀನಿನಿಂದ ಮನುಷ್ಯರ ಡಾಕ್ಟರ್ ಆಗಿ ಅಲ್ಲಿಂದ Michigan University ಯಲ್ಲಿ Adjunct Professor ಆಗಿ ಅಲ್ಲೇ ಫ್ಯಾಮಿಲಿ ಸಮೇತ ಸೆಟ್ಲ್ ಆಗಿ ಬಿಟ್ಟರು. ವಿಭಿನ್ನ ಫಾರ್ಮಸುಟಿಕಲ್ ಕಂಪನಿ ಯಲ್ಲಿ ಸೇವೆ ಸಲ್ಲಿಸಿ Pfizer ಕಂಪನಿಯ ಅಪರಿಮಿತ ಬೆಳವಣಿಗೆಗೆ ಕಾರಣರಾಗಿರುತ್ತಾರೆ. ನಿವೃತ್ತರಾದ ಮೇಲೆ Trauma Brain Injury ಯ ರಿಕವರಿಗಾಗಿ ನಡೆಯುತ್ತಿರುವ ಶೋಧ ಕಾರ್ಯದಲ್ಲಿ ವಿಜಯ್ ತಮ್ಮ ಸೇವೆಯ ಸಲ್ಲಿಸುತ್ತಿದ್ದಾರೆ.
10. N.Ashwathnarayana Reddy: BFSc ಮುಗಿಸಿ MFSc ಓದಿ  ಇಡೀ ಕ್ಲಾಸ್ಸಿನ ಸರ್ವಾಧಿಕ  CAGP, ಗೋಲ್ಡ್ ಮೇಡಲಿಸ್ಟ್ ನಮ್ಮ ಬ್ಯಾಚ್ನ ಕ್ಲಾಸ್ ಟಾಪ್ಪರ್.  ನಮ್ಮ ಜೊತೆಯಲ್ಲಿ Agricultural Research Service ಪಾಸು ಮಾಡಿ ಬ್ಯಾರಕ್ಪೂರ್ ಗೆ ಬಂದವರು. ಅವರ ಪ್ರಗತಿಯ ಸಹಿಸಲಾರದ ಅವರ ಬಾಸ್ ಸಿಹಿ ಮಾತಿನ ಕಹಿ ಮನುಷ್ಯ ವಿದೇಶದಲ್ಲಿ ರಿಸರ್ಚ್ ಗಾಗಿ ಆಯ್ಕೆಯಾದ ಅಶ್ವಥ್ ನನ್ನು ರಿಲೀವ್ ಮಾಡದೆ ತಡೆಗಟ್ಟಿದರು
ಒಂದು ಕದ ಮುಚ್ಚಿದರೆ ಇನ್ನೊಂದು ಕದ ತೆರೆದಿರುತ್ತೆ ಅನ್ನುವದು ಎಷ್ಟು ಸತ್ಯ. ಅದಾದ ನಂತರ 
Bank of India ವ ಸೇರಿ ಉನ್ನತ ಹುದ್ದೆಯ ತಲುಪಿ ನಿವೃತ್ತರಾಗಿ  ಈಗ ಬೆಂಗಳೂರಿನಲ್ಲಿದ್ದಾರೆ. 
11. M. Manjunath: BFSc ಹಾಗೂ MFSc ಮುಗಿಸಿ ಅದೇ ಬಿಸಿಯಲ್ಲಿ  ಮುಂಬೈಯಲ್ಲಿದ್ದ Agricultural Finance Corporation ಸೇರಿದ್ರು.
ಮೃದು ಭಾಷಿ, ಮಿತ ಭಾಷಿ, ಸುಮಧುರ ವ್ಯವಹಾರ, 
 ಕಾಲೇಜಿನ ಯಾವುದೇ ಕಾರ್ಯಕ್ರಮವಿರಲಿ ಮಂಜುನಾಥ್ ರವರ ಸ್ವಾಗತ ಗೀತೆಯಿಲ್ಲದೆ
ಪ್ರಾರಂಭವಾಗುತ್ತಿರಲಿಲ್ಲ. ನಮ್ಮ ಕಾಲೇಜಿನ ಗಾನ ಕೋಗಿಲೆ,  AFC ಯ Manjunath ರವರ ಮಾರ್ಗದರ್ಶನದಲ್ಲಿ  ಕೃಷಿ ಕ್ಷೇತ್ರದಲ್ಲಿ ಪ್ರಗತಿಶೀಲ ಬ್ಯಾಂಕಬಲ್ ಪ್ರಾಜೆಕ್ಟ್ ಗಳನ್ನ ಸಿದ್ಧಗೊಳಿಸಿ ಕೊಡುವದು ಒಂದು ಹಂತವಾದರೆ. ಇದೇ ಕ್ಷೇತ್ರದಲ್ಲಿ ವಿಭಿನ್ನ ರಾಜ್ಯಗಳು ಹಾಗೂ ಆಫ್ರಿಕಾದ ಸಣ್ಣ ಪುಟ್ಟ ದೇಶ ಗಳಿಗೆ ವಿಶ್ವ ಬ್ಯಾಂಕ್ ಲೋನ್, ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ ಲೋನ್ ಪ್ರಕರಣಗಳ
ಸ್ವೀಕೃತಿಯವರೆಗೂ ಮಂಜುನಾಥ್ ರವರ ನಿರಂತರ ಪ್ರಯಾಸ ಕಾರಣ ಎನ್ನುವದು ಅಲ್ಲಗಳೆಯಲಾಗದ ಸತ್ಯ. AFC ಯ ಉನ್ನತ ಹುದ್ದೆಯಲ್ಲಿದ್ದು  ನಿವೃತ್ತರಾಗಿ ಈಗ ಬೂದಿಗೆರೆಯಲ್ಲಿ ಸೆಟ್ಲ್ ಆಗಿದ್ದಾರೆ. 
12. S. Ayyappan: BFSc ಮುಗಿಸಿ MFSc ಮುಗಿಸಿ ಬೆಂಗಳೂರು ಯೂನಿವರ್ಸಿಟಿಯಲ್ಲಿ Phd ಮಾಡಿ  ICAR ನಲ್ಲಿ ಸೈಂಟಿಸ್ಟ್ ಆಗಿ ಸೇರಿ ಅದರ ಉನ್ನತ ಶಿಖರವ ತಲುಪಿ DG ಯಾದರು. ಭಾರತ ಸರ್ಕಾರ ಅವರ ಕೃಷಿ ಮತ್ತು ಮತ್ಸ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 2022ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. ಹಾಗೆಯೇ ಕರ್ನಾಟಕ ರಾಜ್ಯ ಅಯ್ಯಪ್ಪನ್ ರವರ ಸೇವೆಯನ್ನು
ಗುರುತಿಸಿ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿದೆ. ಅನೇಕ ವಿಶ್ವ ವಿದ್ಯಾಲಯಗಳ ಕುಲಪತಿಗಳು, ವಿಭಿನ್ನ  ಕ್ಷೇತ್ರಗಳ
Advisor, ಆಗಿದ್ದು ನಿವ್ರತ್ತ ರಾಗಿ ಮೈಸೂರ್ ನಲ್ಲಿ ನೆಲಸಿದ್ದಾರೆ. ಸಭ್ಯ, ಸೌಮ್ಯ, ಸಹೃದಯಿ, ಹೀಗೇ ಹಲವಾರು ಕನ್ನಡದ ಗುಣವಾಚಕಗಳು ಇವರಿಗೆ ಅನ್ವಯಿಸಿದರೂ ಅದ್ಯಾವದನ್ನೂ ಇಚ್ಚಿಸದ 
ಬ್ಯಾಚ್ ನ ಅಚ್ಚುಮೆಚ್ಚಿನ ಐಪಿ.
13.B.R.Jagadeesh: BFSc ಮುಗಿಸಿ  ಇನ್ನೂ ಹೆಚ್ಚು ಓದಬೇಕುಂತ MFSc ಸೇರಿ ಅದನ್ನು ಮುಗಿಸುವ ಆದಮ್ಯ ಇಚ್ಛೆಯ ಬದಿಗಿಟ್ಟು
ಕರ್ನಾಟಕ ಸರ್ಕಾರದ ಫಿಶರೀಸ್ ಡಿಪಾರ್ಟ್ಮೆಂಟ್ನಲ್ಲಿ ಸೇರಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾಗಿ ಬೆಂಗಳೂರಲ್ಲಿದ್ದಾರೆ. ಏನೇ ಕೆಲಸವಾದ್ರೂವೆ ಪರಿಶ್ರಮದಿಂದ ಗುರಿ ಮುಟ್ಟುವವರೆಗೆ ನಿರಂತರ ಪ್ರಯಾಸ ಮಾಡ್ತಾನೆ ಇರುವವರು. ಕಾಲೇಜ್ ದಿನಗಳಲ್ಲಿ  ಸೌಮ್ಯ ಸ್ವಭಾವದವರು. ಈಗ ಉತ್ಸಾಹ ತುಂಬಿ ಎಲ್ಲಾ ಕಾರ್ಯಕ್ರಮಗಳಲ್ಲೂ ಸಹಭಾಗಿ.
14. Rao saheb R. Mohite: BFSc ಮುಗಿಸಿ MFSc ಮುಗಿಸಿ Cornell University NY ನಲ್ಲಿ
Doctorate ಮುಗಿಸಿ. 30 ವರ್ಷ ಗಳಿಗೂ ಹೆಚ್ಚಾಗಿ  Food processing ಫುಡ್ ಪ್ಯಾಕೇಜಿಂಗ್ ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿ ಈಗ ಅದರಲ್ಲಿ Consultant.
ಅವರ ಅನುಭವ ವಿಶಿಷ್ಟ ವಾದದ್ದು Warehousing,
Logistics,ಹಾಗೂ Supply chain ಮ್ಯಾನೇಜ್ಮೆಂಟ್ ನಲ್ಲಿ expert. ಈಗಲೂ ವಿಶಿಷ್ಟತೆಯ ಈ ವಿಷಯದಲ್ಲಿ ಸಲಹೆ, ಕನ್ಸಲ್ಟಂನ್ಸಿ, ಬೆಂಗಳೂರಲ್ಲಿದ್ದುಕೊಂಡು ಆಕ್ಟಿವ್ ಆಗಿದ್ದಾರೆ.
15. Jayasheela Reddy: BFSc ಮುಗಿಸಿ
BDO office ನ Extension ಆಫೀಸರ್ ಆಗಿ ಕಾರ್ಯ ನಿರ್ವಹಣೆ. Revenue department ನಲ್ಲಿ ಕೆಲ ಕಾಲ, Rural Development ವಿಭಾಗ ದಲ್ಲಿ ವಿಶಿಷ್ಟ ಕಾರ್ಯಕಾಲ. ಹಲವಾರು ಜಿಮ್ಮೆದಾರಿಗಳನ್ನು ಏಕ ಕಾಲದಲ್ಲಿ ಯಶಸ್ವಿಯಾಗಿ ನಿಭಾಯಿಸಿ ವರಿಷ್ಟ ಅಧಿಕಾರಿಗಳಿಂದ ಮೆಚ್ಚುಗೆ
ಕರ್ನಾಟಕ ಸರ್ಕಾರದ ಮೀನುಗಾರಿಕೆ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿದ್ದು ಸೇವಾನಿವ್ರತ್ತರಾಗಿ 
ಬೆಂಗಳೂರಲ್ಲಿ ಸೆಟ್ಲ್ ಆಗಿರುತ್ತಾರೆ.
16. PRM Reddy: ಬಳ್ಳಾರಿಯ ಪಲ್ಲೆ ರಾಮ್ ಮೋಹನ್ ರೆಡ್ಡಿ, BFSc ಮುಗಿಸಿ ಕರ್ನಾಟಕ ಸರ್ಕಾರದ ಮೀನುಗಾರಿಕೆ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿದ್ದು ಸೇವಾನಿವ್ರತ್ತರಾಗಿ ಹೊಸಪೇಟೆಯಲ್ಲಿ ಸೆಟ್ಲ್ ಆಗಿರುತ್ತಾರೆ. ನಾವು ಕಲಿತಿದ್ದ ಥಿಯರಿ
ಪ್ರಾಕ್ಟಿಕಲ್ ಎಲ್ಲವನ್ನೂ ನಿಜ ಜೀವನದಲ್ಲಿ ಅಳವಡಿಸಿ ವಿಜಯಿಯಾದರೆ ಮಾತ್ರ ನಾವು ಕಲಿತಿದ್ದು ಉಪಯೋಗಿ. PRM ರೆಡ್ಡಿ ಧೈರ್ಯವಾಗಿ, ಹೊಸಪೇಟೆಯಲ್ಲಿ ಅವರ ಕೃಷಿ ಜಮೀನಿನಲ್ಲಿ 
ಮೀನು ಸಾಕಣೆ, Fish breeding,Fish Hatcheries, Rearing ಅಂಡ್ supplying fish seed to ಪಂಚಾಯತ್  ಅಂಡ್ needy ಯಲ್ಲಿ ಸಫಲತೆ ಹೊಂದಿರುವ ಮತ್ಸ್ಯಯೊದ್ಯಮಿ.
17. Lokanath: BFSc ಮುಗಿಸಿ ಮತ್ಸ್ಯ ವಿಭಾಗದ ಏಣಿ ಹತ್ತಲು ಬಲು ಪ್ರಯಾಸ ಪಟ್ಟು ಕರ್ನಾಟಕ ಸರ್ಕಾರದ ಮೀನುಗಾರಿಕೆ ವಿಭಾಗದಲ್ಲಿ ಸೇರಿದ್ದಾಯ್ತು
BR ಪ್ರಾಜೆಕ್ಟ್ ನಲ್ಲಿ fish seed production ನಲ್ಲಿ ಸಾಧನೆ ಮಾಡಿದರು. Chinese hatcheries Loknath ಮತ್ತೆ Nandeesha ಸೇರಿ  ನಮ್ಮ 
Major Carps ಗೆ ಅನ್ವಯಿಸಿ ಸಫಲತೆಯ ಹೊಂದಿದರು Loknath ರವರು ಫಿಶರೀಸ್ department ನಲ್ಲಿ ಉನ್ನತ ಹುದ್ದೆಯಲ್ಲಿದ್ದು ಸೇವಾನಿವ್ರತ್ತರಾಗಿ ಬೆಂಗಳೂರಲ್ಲಿ ಸೆಟ್ಲ್ ಆಗಿದ್ದಾರೆ. 
18. Dinakar Punja: BFSc ಮುಗಿಸಿ ವಿಜಯ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿದ್ದು ಸೇವಾ ನಿವೃತ್ತರಾಗಿ ಮಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ
19. P. Konda reddy: ಪಾಲಸಮುದ್ರಮ್ ಕೊಂಡಾರೆಡ್ಡಿ BFSc ಮುಗಿಸಿ MFSc ಮುಗಿಸಿ 
ಆರು ವರ್ಷಗಳ ಕಾಲ ಫಿಶರೀಸ್ ಕಾಲೇಜ್ ನಲ್ಲಿ ಪ್ರೊಫೆಸರ್ ಅಗಿ ಕಾರ್ಯರತರಾಗಿದ್ದರು. 
ಸಿಂಗಪೂರಿನ National University of Singapore ನಲ್ಲಿ Phd ಮಾಡಿದರು. 
ಸ್ವಲ್ಪ ಸಮಯ ಅಲ್ಲೇ ಕಾರ್ಯರತರಾಗಿದ್ದರು.  
ಕೆನಡಾದ University of Gueplh Ontario ದಲ್ಲಿ Post Doctoral ಸ್ಟಡೀಸ್ ಮೂರು ವರ್ಷ ಕಾರ್ಯರತರಗಿದ್ದರು. ನಂತರ Biomedical  Sciences Department ನಲ್ಲಿ Research Fellow ಆಗಿದ್ದರು ಅಲ್ಲಿಂದ  ಸಿಂಗಪುರದಲ್ಲಿ Tropical Marine Sciences NUS ನಲ್ಲಿ
Sea Horse ಬಗ್ಗೆ ವಿಶೇಷ ಶೋಧ. ಅಲ್ಲಿಂದ
ಮರಳಿ ಭಾರತಕ್ಕೆ ಬೆಂಗಳೂರಿಗೆ Consultant ಆಗಿ
ಬೆಂಗಳೂರಲ್ಲಿ ನೆಲಸಿರುತ್ತಾರೆ.
20. G. Lakshmipathi: ಗಂಗಾವತಿ ಲಕ್ಷ್ಮೀಪತಿ 
ಹಗರಿಬೊಮ್ಮನಹಳ್ಳಿ ಯ ಹೈದ, BFSc ಮುಗಿಸಿ Seattle Washington DC ಯಲ್ಲಿ MS
Food Sciences ನಲ್ಲಿ PG ಮಾಡಲು ಹೋದ ನಮ್ಮ ಬ್ಯಾಚ್ ನ ಮೊಟ್ಟ ಮೊದಲಿಗ. ಮನೆಯ ಕಾರುಬಾರುಗಳನ್ನ  ಸ್ವಯಂ ನೋಡಿಕೊಳ್ಳ ಬೇಕಾದ ಪರಿಸ್ಥಿತಿ ಉತ್ಪನ್ನವಾದ್ದರಿಂದ ಹಗರಿಬೊಮ್ಮನಹಳ್ಳಿ ಗೆ ವಾಪಸ್ಸು. ಸದ್ಯಕ್ಕೆ ಹೊಸಪೇಟೆ, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ successfull ಪ್ರೈವೇಟ್ ಉದ್ಯಮಿ.
21 . PT Lakshman Reddy: BFSc ಮುಗಿಸಿ ಕರ್ನಾಟಕ ಸರ್ಕಾರದ ಮೀನುಗಾರಿಕೆ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿದ್ದು ಸೇವಾನಿವ್ರತ್ತರಾಗಿ ಮೊಮ್ಮಕ್ಕಳೊಂದಿಗೆ ಚಿತ್ರದುರ್ಗದಲ್ಲಿ ಸೆಟ್ಲ್ ಆಗಿರುತ್ತಾರೆ
22. ಕೆ. ಸುರೇಶ : BFSc ಮುಗಿಸಿ MFSc ಯ ಮುಗಿಸಿ  Chennai ನಲ್ಲಿ Export Inspection Agency ಯಲ್ಲಿTech ಆಫೀಸರ್ ಹುದ್ದೆ, ಜೊತೆಯಲ್ಲಿ Agricultural Research Service ಪಾಸು ಮಾಡಿ ಬ್ಯಾರಕ್ಪೂರ್ ಗೆ ಬಂದವರಲ್ಲಿ ನಾನೂ ಒಬ್ಬ. ಭುವನೇಶ್ವರದಲ್ಲಿದ್ದಾಗ UPSC ಪರೀಕ್ಷೆ pass ಮಾಡಿ IAS ಗೆ ಸೆಲೆಕ್ಟ್ ಆಗಿ Madhya ಪ್ರದೇಶ ದಲ್ಲಿ 33 ವರ್ಷ ಸೇವೆ ಸಲ್ಲಿಸಿ ಉನ್ನತ ಹುದ್ದೆಯಿಂದ 
ನಿವ್ರತ್ತ ನಾಗಿ Chennai ನಲ್ಲಿ ಸೆಟ್ಲ್ ಆಗಿದ್ದೇನೆ Redhills ಹತ್ತಿರ Pisciculture  ಮಾಡಿ ಸಮಯ ಕಳೆಯುತ್ತಿದ್ದೇನೆ.
23.K. ರಾಮಚಂದ್ರನ್: BFSc ಮುಗಿಸಿ MFSC
ಒಂದು ವರ್ಷ ಮುಗಿಸಿ ಕೆನಡಾ ಗೆ ಹೋದವ ಮತ್ತೆ ಅದೇ ಸ್ಪೀಡ್ ನಲ್ಲಿ ವಾಪಸ್ಸು ಬಂದು MFSc ಮುಗಿಸಿ
ಮತ್ತೆ ಕೆನಡಾ ದ Dalhousie ಯಲ್ಲಿ ಡಾಕ್ಟರೇಟ್ ಗೆ ಸೇರಿಕೊಂಡು ಅಧ್ಯಯ್ಯನ ಮುಂದುವರೆಸಿದ. ದಿಢೀರ್ ಅಂತ Research, ಡಾಕ್ಟರೇಟ್ ಎಲ್ಲವನ್ನು ಬದಿಗಿಟ್ಟು, Law ಓದಲು ಶುರು ಮಾಡಿದ, Law ನಿಂದ Love ಆಗಿ Canadian ನ್ನ ಮದುವೆಯಾಗಿ 
ಆ ಊರಲ್ಲೇ ಇದ್ದಾನಂತ  ಕಟ್ಟಕಡೆಗೆ ಕಂಡ ಪರಿಚಿತರೊಬ್ಬರು ಹೇಳಿದರು. ಕಾಲೇಜಿನಲ್ಲಿ ಇದ್ದಾಗಲೇ ವಯಸ್ಸಾದವನ ಹಾಗೇ ಕಾಣಿಸುತ್ತಿದ್ದ ಆದ್ದರಿಂದ  ಅವನ ಪಾಪ್ಯುಲರ್ ಹೆಸರು ಕೆಳವಾಂತ.  
24. M.M.Maragal : ಮೃತ್ಯುಂಜಯ M   Maragal    BFSc ಮುಗಿಸಿ MFSc ಮುಗಿಸಿ ಫಿಶರೀಸ್ ಕಾಲೇಜ್ ನಲ್ಲಿ  ಬಯೋಕೆಮಿಸ್ಟ್ರಿ ವಿಭಾಗ ದಲ್ಲಿ Instructor ಆಗಿ ಸೇರಿಕೊಂಡು ಅಸೋಸಿಯೇಟ್ ಪ್ರೊಫೆಸರಾಗಿದ್ದು ನಿವೃತ್ತರಾಗಿ ಧಾರವಾಡ ದಲ್ಲಿ ಸೆಟ್ಲ್ ಆಗಿದ್ದಾರೆ. Bright and ಬ್ರಿಲಿಯಂಟ್ ಲೆಕ್ಚರರ್.ಯೋಗ ಮತ್ತು TM ನಲ್ಲಿ expert. Maragal ರವರ ಮನೆಯಲ್ಲಿ ಕನ್ನಡ ಸಾಹಿತ್ಯದ ವಿಭಿನ್ನ ವಿಷಯಗಳ ಬಗ್ಗೆ ಪುಸ್ತಕಗಳ ಲೈಬ್ರರಿ,  ಮನೆ ತುಂಬಾ ಪುಸ್ತಕ ಸಂಗ್ರಹಣೆ ಅದೂನುವೆ ಕನ್ನಡ ಪುಸ್ತಕಗಳು ಒಂದು ವಿನೂತನ  likable ಹವ್ಯಾಸ. 
25.P.Ravindran :BFSc ಮುಗಿಸಿ ರವೀಂದ್ರನ್ Malaysia ವಾಪಸ್ಸು ಹೊರಟು ಹೋದ  ಈಗ ಜಪಾನ್ ನಲ್ಲಿ Aquaculture expert. ಅಷ್ಟೇ
ಸುದ್ದಿ..
ಒಂದು Unannounced Quiz 
ತೊಕ್ಕೊಟ್ಟು ದಿನಗಳು ಆಗ ತೆಗದ ಈ ಫೋಟೋ
ಒಬ್ಬರು ಮಾತ್ರ ನಮ್ಮ ಸೀನಿಯರ್
ಉಳಿದವರೆಲ್ಲಾ ನಮ್ಮ ಬ್ಯಾಚ್
ಆ ಒಬ್ಬರು ಯಾರೂಂತ ಕಂಡ ಹಿಡೀರಿ
ಇದಕ್ಕೆ marks ನಿಮಗಿನ್ನೂ Alzheimer ಕಾಯಿಲೆ
ಬಂದಿಲ್ಲ ಬರೋದು ಇಲ್ಲಾ
ಆ ನಾಲ್ಕೋ ಐದೋ ವರ್ಷಗಳು
ಜೊತೆ ಜೊತೆಯಲಿ ಕಳೆದ
ಕನಸ್ಸಿನ ದಿನಗಳು
ಅನ್ಯೋನತೆಯ ಹೆಚ್ಚಿಸಿತು.
ಹಾಸ್ಟೆಲ್ ದಿನಗಳ ಮೆಲಕು ಹಾಕಿ ಕೊಂಡು
ಬಾರೋ ಹೋಗೋಂತ ಕರೆಯುತ್ತಿದ್ದ ದಿನಗಳು
ದಿಢೀರ್ ಅಂತ 35 ವರ್ಷಗಳನ್ನ 
ನಮ್ಮಿಂದ ಕಸಿದು ಕೊಂಡು 
ಮತ್ತೆ ನಮ್ಮ ಜೀವನವನ್ನು 
ಮನೆ ಮಕ್ಕಳು ಮಠಗಳಿಗಾಗಿ 
ಮೂಡಿಪ್ಪಾಗಿಟ್ಟು ಸೇವೆ ಸಲ್ಲಿಸಿ 
ಇದೀಗ,
ನಮ್ಮ ಸಮಯ ನಮಗೆ
ವಾಪಸ್ಸು ಸಿಕ್ಕಿದೆ.
ಬಾರೋ ಹೋಗೋ ಭಾಷೆ 
ಮಾತನಾಡಲು, 
ಬೇರೆ ಯಾರೋ ಅನ್ನುವಷ್ಟು
ಗುರುತು ಸಿಗಲಾರದಷ್ಟು
ಬದಲಾಗಿದ್ದಾರೂವೆ 
ಲೇ ಸುರೇಶಂತ ಯಾರಾದ್ರೂವೆ
ಕರೆದ್ರೆ ಸಾಕು ಮೈ ಜುಮ್ಮಂತ 
ರಿವರ್ಸ್ ಗೇರಿನಲ್ಲಿ 
ಆ ಕನಸ್ಸಿನ ಲೋಕಕ್ಕೆ 
ಕರೆದೊಯ್ಯತ್ತೆ
ನಮಗೆಲ್ಲಾ
ವಯಸ್ಸಾಗಿರಬಹುದು,
ಕೈ ಕಾಲುಗಳು ವೀಕ್ ಆಗಿರಬಹುದು,
ಕಣ್ಣ ದ್ರಷ್ಟಿ ಸ್ವಲ್ಪ ಮಬ್ಬಾಗಿರಬಹುದು,
ಆದ್ರೆ 
ಮನಸ್ಸು ಇನ್ನೂವೆ ಯಂಗ್.
ಒಂದು ಸ್ಟೂಡೆಂಟ್ ಲೈಫ್ಫ್ 
ಅದನ್ನು ಅನುಭವಿಸದ್ದಾಯ್ತು.
ಇನ್ನೊಂದು ರಿಟೈರ್ಡ್ ಲೈಫ್
ಲೈಫ್ ನಿಮಗೆ ಕೊಟ್ಟಿರೊ
ಇನ್ನೊಂದು ಅವಸರ
ಕೂಗಿ ಕರೆದು ಹೇಳ್ತಾ ಇದೆ
ಕನಸ್ಸಿನ ಲೋಕಕ್ಕೆ 
ಬಾರೊಂತ ಕರೆದ್ರೆ 
ತಯಾರಾಗೇ ಇದ್ದೀವಿ
ಸೆಕೆಂಡ್ ಚಾನ್ಸ್ ಗಾಗಿ 
Atleast ಇನ್ನೊಂದು ಐವತ್ತು...
ನೂರು... ಬಾಯಿಗೆ ಸಕ್ರೆ...
ನಾವು ಇಪ್ಪತೈದು, 
ಮುಗಿಸಿದ್ದು ಐವತ್ತು
ನಮ್ದು ಕಿ ಎಪ್ಪತೈದು 
ಬಯಸೋದು ನೂರು
We were15 of us @ Sereno Barn, Chikkamagalur in 2024 and
In 2025, We lost Dr. S. Ayyappan & Mr. N Ashwath narayan reddy. May their soul Rest inPeace

           

ಕಾಮೆಂಟ್‌ಗಳು

  1. An interesting title and angle. Very cleverly narrated. Suresh has succeeded in weaving a free-flowing prose that keeps reader's interest right through....

    ಪ್ರತ್ಯುತ್ತರಅಳಿಸಿ
  2. ಅತ್ಯುತ್ತಮ ಬರಹ. ನಮ್ಮ ಬ್ಯಾಚ್ ನ ಸ್ನೇಹಿತರ ಕಾಲೇಜಿನ ದಿನಗಳ ಜೀವನ, ನಂತರದ ವೃತ್ತಿ ಜೀವನ, ಸಾಧನೆಗಳ ಸಂಕ್ಷಿಪ್ತ ವರದಿ ಚೊಕ್ಕವಾಗಿ ಮೂಡಿ ಬಂದಿದೆ. ಸಾರಾಗವಾಗಿ ಓದಿಸಿಕೊಂಡು ಹೋಗುತ್ತೆ. ಅಚ್ಚರಿ ಮೂಡಿಸುವ ಬರಹ ಶೈಲಿ ನನಗೆ ಬಹಳ ಇಷ್ಟವಾಯಿತು.

    ಪ್ರತ್ಯುತ್ತರಅಳಿಸಿ
  3. ಅಪ್ರತಿಮ ಪ್ರತಿಭಾವಂತರ ತಂಡ. ನಮಗೆ ಜೀವನದ ಆದರ್ಶ, ಮತ್ತು ಮೌಲ್ಯಗಳನ್ನು ತೋರಿಸಿದ ಹಿರಿಯರು. ಶ್ರೀವಿಜಯಕುಮಾರ್ ಬರ್ಗಿ, ಶ್ರೀ ಎಂ ಮಂಜುನಾಥ, ಶ್ರೀ ಕೊಂಡಾ ರೆಡ್ಡಿ, ಶ್ರೀ ಅಶ್ವಥ ನಾರಾಯಣ ರೆಡ್ಡಿ ಇವರುಗಳು ನಮಗೆ ಪಾಠ ಮಾಡಿದ ಗುರುಗಳು. ಎಲ್ಲರಿಗೂ ಪ್ರೀತಿ ಮತ್ತು ಗೌರವ ಪೂರ್ವಕ ಪ್ರಣಾಮಗಳು.

    ಪ್ರತ್ಯುತ್ತರಅಳಿಸಿ
  4. ವೊವ್! What a write up!? Super! So happy to read.ಅಭಿನಂದನೆಗಳು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್