ನೂರೊಂದು ನೆನಪು ಅಧ್ಯಾಯ -1

             ನೂರೊಂದು ನೆನಪು

                 ಅಧ್ಯಾಯ-1
ಒಂದು glimpse
ಕಾರ್ ಹತ್ತುವ ಆ ಎರಡು ಸೆಕೆಂಡ್ ಗಳು
ಒಂದು ಸೆಕೆಂಡಲ್ಲಿ ಅವಳು ಕಂಡಳು ...
ಮತ್ತೊಂದು ಸೆಕೆಂಡಲ್ಲಿ ಮರೆಯಾದಳು...
ಜಯಂತ್ ಕಾಯ್ಕಿಣಿ ಅವರ ಭಾಷೆಯಲ್ಲಿ ಹೇಳಬೇಕೂಂತಂದ್ರೆ 
ಮಿಂಚಾಗಿ ಅವಳು ಬರಲು...
ಯಾರವಳು
ನೋಡಿದಾ ಕ್ಷಣ
ನೂರು ಫ್ಲಾಶ್ ಬಲ್ಬು ಚಿಮ್ಮಿದ ಕಿರಣಗಳು 
ಮೆರೂನ್ ಕಲರ್ ಟೀ ಶರ್ಟ್, ಕಪ್ಪು ಜೀನ್ಸ್,    
ಫ್ರೀಯಾಗಿ ಹಾರಾಡುತಿದ್ದ ಕೂದಲು,
ಕಟ್ಟಿ ಹಾಕಿತ್ತು ಹರ್ಷನ ಹೃದಯವ. 
ಕಣ್ಣು, ಮನಸ್ಸಿನ ಕ್ಯಾಮೆರಾ ಪಟಲದಲ್ಲಿ
ತನು ಮನವ ಗವ್ವಂತ ಆಕ್ರಮಿಸಿದವಳು.
ಸೆಲ್ ಫೋನ್ ಕ್ಯಾಮೆರಾ ಆನ್ ಆಗಿರಲಿಲ್ಲ
ಅವಳ ಇಮೇಜ್, i Cloud ಗೆ ಹೋಗದೆ
ತಳಮಳಗೊಂಡಿತ್ತು.
ಯಾರಿವಳು?ಪ್ರಶ್ನೆ ಕಾಡ್ತಾ ಇತ್ತು, 
ಅವಳನ್ನ ನೋಡೋ ಗುಂಗಲ್ಲಿ
ಅದು ಯಾವ ಕಾರ್, ಯಾವ ಮಾಡೆಲ್, 
ರಿಜಿಸ್ಟ್ರೇಷನ್ ನಂಬರ್ ಏನೂ ನೋಡಲಿಲ್ಲ.
ಅವಳು ನನ್ನ ನೋಡಿದ್ಲಾ,
ಆ glimpse ನಲ್ಲಿ ಒಂದು ಕ್ಷಣ,
ಒಬ್ಬರಿಗೊಬ್ಬರು ನೋಡಿಕೊಂಡಿರಬೇಕು.
ಒಂದು ಊಹೆ ಅಷ್ಟೆ.
ಇನ್ನೊಂದು ಸಲ ನೋಡಿದ್ರೆ
ಖಂಡಿತ ಎಲ್ಲಾ ಆಂಗಲ್ ನಿಂದ 
capture ಮಾಡಿದರೆ ಸರಿಯಾದ ಪಿಕ್ಚರ್ 
ಮೂಡಿ ಬರಬಹುದೇನೋ. ಆಮೇಲೆ
AI ಮೂಲಕ ಫೇಸ್ ಮ್ಯಾಚ್ ಮಾಡಿ
Social ಮೀಡಿಯಾದರಲ್ಲಿ ಎಲ್ಲಾದ್ರೂ 
ಆ ಮಿಂಚು ಕಾಣಿಸ್ತಾಳ ಅಂತ... ಅಲ್ಪಾಸೆ
ಸದ್ಯಕ್ಕೆ ಅವಳನ್ನು
ಮಿಂಚು ಅಂತ ಹೆಸರಿಟ್ಟು 
ಹುಡುಕಲು ಶುರುಮಾಡಿದ ಹರ್ಷ.
ಆದ್ರೆ
15 ದಿನಗಳ ರಜೆಯಲ್ಲಿ ಬಂದಿದ್ದವನ
10 ದಿನಗಳು ಕಳೆದು ಹೋಗಿತ್ತು
ಇನ್ನು ಉಳಿದಿದ್ದು 5 ದಿನಗಳು 
ಇದೊಂದು ಚಾಲೆಂಜ್
ಬೆಂಗಳೂರಲ್ಲಿ ಈಗಷ್ಟೇ MBBS ಮಾಡಿ
Internship ಬ್ರೇಕ್ ನಲ್ಲಿ ಶಿವಮೊಗ್ಗ ಬಂದಿದ್ದ.
ಮೆಡಿಕಲ್ ಕಾಲೇಜಿನಲ್ಲಿ ಜೊತೆ ಓದುತಿದ್ದ,
ಕ್ಲಾಸ್ಮೇಟ್ ಆಗಲಿ, ಸೀನಿಯರ್ ಆಗಲಿ 
ಹಾಗೂ ಜೂನಿಯರ್ ಹುಡುಗಿಯರಾಗಲಿ, ಯಾರಲ್ಲೂ ಇಲ್ಲದ ಆಕರ್ಷಣೆ 
ಮಿಂಚಲ್ಲಿತ್ತು.
ರವಿವರ್ಮನ ಕುಂಚದ ಕಲೆ
ಕವಿ ಕಲ್ಪನೆ ಕಾಣುವ 
ಚೆಲುವೆ ಯ ಸಾಕಾರ ವೋ... 
ಏಪ್ರಿಲ್ 30 ರ ಉರಿ ಬಿಸಿಲು
ವಾಸ್ತವಿಕತೆಯ ಜ್ಞಾಪಿಸಿತು.  
ಇದ್ದಕ್ಕಿದ್ದ ಹಾಗೇ ಬೆಳ್ಳಿ ಮೋಡಗಳು
ದಟ್ಟವಾಗಲು ಕಪ್ಪಾಯ್ತು ಆಕಾಶ 
ಗಾಳಿ ಸ್ವಲ್ಪ ಬೀಸಲು ಹಾಗೆಯೇ 
ಬಿರುಗಾಳಿಯಾಗಿ ಬದಲಾಗಲು 
ಸುಂಟರಗಾಳಿಯಲ್ಲಿ ತಗಡುಗಳು
ಭಯಂಕರವಾಗಿ  ಹಾರಾಡಲು 
ಸಿಡಿಲು ಬಡಿಯಿತು 
ಆ ಒಂದು ಕ್ಷಣ
ಅದೇ ಬಿಳಿ ಬಣ್ಣದ ಕಾರು,
ಕಣ್ಣ ಮುಂದೆ ಹಾದು ಹೋಯ್ತು
ಈ ಸಲ ಅರ್ಧ ಸೆಕೆಂಡ್
ಮಿಂಚು 
ಕಂಡಳು..
ಮತ್ತೆ ಮರೆಯಾದಳು.
ಆವಾಗ ಅನಿಸಿತ್ತು ಯಾವದೋ 
ಒಂದು ಅತೀತ ಶಕ್ತಿ,ಬಿಡದೆ,
ಅವಳನ್ನು ಆಗಾಗ ತೋರಿಸಿ
ಕಣ್ಣಾ ಮುಚ್ಚೆ ಆಟವ ಆಡುತ್ತಿದೆಯೆಂದು. 
ಹರ್ಷ ಈ ಸಲ ದ್ರಢ ನಿಶ್ಚಯ ಮಾಡಿದ್ದ, 
ಹೇಗಾದ್ರು ಕಂಡು ಹಿಡಿಯಲೇ ಬೇಕೆಂದು.
ಶಿವಮೊಗ್ಗ ಏನೂ ದೊಡ್ಡ ಊರಲ್ಲಾ, 
ಭಾರೀ ಕುಳಗಳ ಸಂಖ್ಯೆಯು ಹೆಚ್ಚಿಲ್ಲ.
ಕಾರಿರುವ ಮನೆಯ ಬೆಡಗಿ ಅವಳು.
ಕಂಡು ಹಿಡಿಯ ಬಹುದಲ್ವೆ, 
ಇನ್ನೂ ಉಳಿದ 4 ದಿನಗಳಲ್ಲಿ.
ಹರ್ಷ ಆ ಸಂಜೆನೇ 
ಮೀನಾಕ್ಷಿ ಭವನ್ ನಲ್ಲಿ 
PUC ಕ್ಲಾಸ್ಮೇಟ್ಸ್
ವಾಸು, ವೆಂಕಟ್, ಶಂಕರ್ ರವರನ್ನ 
ಕರೆದಿದ್ದ ಟಿಫನ್ ಗ್ಯಾರಂಟೀಂತ
ಹೇಳಿದ್ ಮೇಲೆ ಎಲ್ರೂ ಬಂದರು.
ಬಿರುಗಾಳಿ ಮಳೆಯಿಂದ 
ಶುರುವಾದ ಮಾತು 
ಮಿಂಚಿನ ಬಗ್ಗೆ ಸುಮ್ಮನೇ ಪ್ರಶ್ನಿಸಿದ. 
ಪರಿಯ  ಶಂಕರ್ ನೋಡಿದ್ದ 
ಸರಿ ಆದ್ರೆಯಾರು ಏನೂಂತ ಗೊತ್ತಿಲ್ಲಾ, 
ವೆಂಕಟೇಶಪ್ಪ ತೀರ್ಥಹಳ್ಳಿಯವ, 
ಲೋಕಲ್ ಮ್ಯಾಟರ್, ದೂರ ಇದ್ದು ಬಿಟ್ಟ.
ವಾಸುಗೆ ಮಾತ್ರ ಆ ಕಾರು 
ಭದ್ರಾವತಿ ಹೊನ್ನಾವರ ರೋಡ್ನಲ್ಲಿ
ನೋಡಿದ ಜ್ಞಾಪಕ... ಅದನ್ನ ಹೇಳ್ದ
ಆ ರಸ್ತೆಯಲ್ಲಿ ಈ ಊರುಗಳು ಬರುತ್ತೇ,
ಭದ್ರಾವತಿ, ಶಿವಮೊಗ್ಗ, ಸಾಗರ, ಜೋಗಫಾಲ್ಸ್, ಸಿದ್ದಾಪುರ, ಹೊನ್ನಾವರ  ಹಾಗಿದ್ರೆ 
ಎಲ್ಲಪ್ಪ ವಾಸು, ಹುಡುಕೋದು.
ಹರ್ಷನಿಗೆ ಡಬಲ್ ಲಾಸ್, ಫಷ್ಟು
ಮಸಾಲ್ ದೋಸೆ, ಕಾಫಿ, ಖರ್ಚು ಆದದ್ದು, 
ಸೆಕೆಂಡ್ ಇನ್ಫಾರಮೇಷನ್ ಜೀರೋ...
ಹುಡುಕುವ ಕಾರ್ಯ ಮತ್ತೆ
ಸ್ಟಾರ್ಟಿಂಗ್ ಪಾಯಿಂಟ್ಗೇ ಬಂದು ನಿಂತ
ಹರ್ಷ. 
ಇನ್ನೂ ಮೂರೇ ದಿನ
ಹೇಳ್ತಾರಲ್ಲ, ನೀವು ಮನಸ್ಸಾರೆ ಒಂದು ವಿಷಯ
ಸಾಧಿಸಲು ಹೊರಟ್ರೆ 
ಪ್ರಕೃತಿಯು ಸಹಕರಿಸುತ್ತೇಂತ.
ಬೆಳಗ್ಗೆ ಬೇಗ ಎದ್ದು ಜಾಗ್ಗಿಂಗ್ ಸೂಟ್ ನಲ್ಲಿ
ಹರ್ಷ ಮನೆಯಿಂದ ಹೊರ ಬಂದು ನೋಡಿದರೆ 
ದಟ್ಟನೆ ಕವಿದ ಮಂಜು, ಯೋಚಿಸಿದ, ಹೋಗೋದೋ ಬೇಡವೊಂತಾ
ಅವಳನ್ನ ನೋಡೋಕೆ ಸಿಗುವ ಪ್ರತ್ಯೇಕ 
ಅವಸರ ಮಿಸ್ ಮಾಡಕೂಡದೂಂತ
ಜಾಗ್ ಮಾಡ್ತಾ ಪಾರ್ಕ್ ಬಂದ. ಆದ್ರೆ
ಎದುರು ಬರುವವರು ಮಬ್ಬಾಗಿ ಕಂಡರು.
ಗೇಟ್ ನ ಹೊರಗಡೆ ಆ ಬಿಳಿ ಕಾರು ಅದೇ...
ಬೆಡಗಿಯ ಬಿಳಿ ಕಾರು ನಿಂತಿತ್ತು.
ಲಕ್ಕಿ ಫೆಲ್ಲೋ
ಮಿಂಚು ಇಂದು ಡೈರೆಕ್ಟ್ ಆಗಿ 
ಎದುರು ದಿಕ್ಕಿನಿಂದ ಹರ್ಷನ್ನ ನೋಡುತ್ತಾ 
ಜಾಗ್ ಮಾಡ್ತಾ ಬಂದಳು.
ಹರ್ಷನಿಗಂತೂ ಹೃದಯ ಡಬ್ ಡಬ್ ಅಂತ 
ಬಾಯಿಗೆ ಬಂದ ಹಾಗಿತ್ತು.
ಗ್ರೀನ್ ಜಾಗಿಂಗ್ ಸೂಟ್ ನಲ್ಲಿ
ಪಿಂಕ್ ವಿಂಡ್ ಚೀಟರ್
Nike ಶೂಸ್, ರಿಸ್ಟ್ ಬ್ಯಾಂಡ್
ರಬ್ಬರ್ ಬ್ಯಾಂಡ್ ಬೇರೆ,
ಪೋನಿ ಟೈಲ್ ಹಾಕಿಕೊಂಡು
ಬೇರೆ ಲೋಕದಿಂದ ಧರೆಗಿಳಿದು ಬಂದ
ಅಪ್ಸರೆಯ ಹಾಗೆ ಕಂಡಳು
ಹಾಳಾದ್ದು, 
ಸೆಲ್ ಫೋನ್ ಜೊತೆ ತರಲುಮರೆತಿದ್ದ. 
ಆಕೆಗೆ ಗುಡ್ ಮಾರ್ನಿಂಗ್ ಹೇಳೋಣಾಂತ, 
ಆದ್ರೆ ಶಬ್ದ ಬಾಯಿಂದ ಬರಲೇ ಇಲ್ಲಾ.
ಧೈರ್ಯ ತಂದು ಹೇಳೋದ್ರೊಳಗೆ 
ಅವಳು ಕ್ರಾಸ್ ಮಾಡಿ ಹೋಗೇ ಬಿಟ್ಟಳು
ಅವಳ ಹಿಂದೇನೆ ಅವರಪ್ಪ ಇರಬೇಕು
ವಾಕಿಂಗ್ ಮಾಡ್ತಾ ಬರುತ್ತಾ ಇದ್ದರು.
ಅರೆ
ಇದೇನಿದು
ಚೀಫ್ ಇಂಜಿನಿಯರ್ ಕೃಷ್ಣಮೂರ್ತಿ ಸಾಹೇಬ್ರು
ಹಾಗಾದ್ರೆ ಮಿಂಚು ಇವರ ಮಗಳು.
ಸಿಡಿಲೊಡೆದ ಹಂಗಿತ್ತು
ಚೀಫ್ ಇಂಜಿನಿಯರ್ ಸಾಹೇಬ್ರುನ್ನು ಕಂಡು
ಗುಡ್ ಮಾರ್ನಿಂಗ್ ಸರ್ ಅಂದ.
ಗುಡ್ ಮಾರ್ನಿಂಗ್ ರಿಟರ್ನ್ ಆಯ್ತು.
ಜಾಗಿಂಗ್ ಮುಗಿಸಿ ಅವಳು ಕಾರ್ ಹತ್ತಿರ
ನಿಂತಿದ್ದಳು. ಅದೇ ಕಾರು 
ಮಂಜುವಿನ ನಡುವೆ ಆ ಮುಖ
ಆದ್ರೆ ಒಂದು ಚೇಂಜ್
ಆಗ ಕಿರು ನಗೆ ಈಗ ಮುಗಳುನಗೆ
ಅದೇ ಮಿಂಚು 
ಅಪ್ಸರೆಯರು ಬ್ಯಾಕ್ ಗ್ರೌಂಡ್ ನಲ್ಲಿ 
ಭೂಮಿನ್ ತಬ್ಬಿದ್ ಮೋಡ್ ಇದ್ದಂಗೆ
ಸಾಫಾಗಿ ಹಳ್ಳ ತಿಟ್ಟಿಲ್ದಂಗೆ ಕೋರಸ್ಸಾಗಿ
ಮಡಿಕೇರಿ ಮೇಲೆ ಮಂಜುಂತ  ಹಾಡಿದ್ರೆ 
ಹರ್ಷನಿಗೆ ಮಿಂಚು ಮಿಂಚು ಮಿಂಚೂಂತ
ಕೇಳಿಸ್ತು.ಶಿವಮೊಗ್ಗಾ ದ್ ಮೇಲ್ ಮಿಂಚು.
ಅವಳೇ ಹತ್ತಿರ ಬಂದವಳು
ನೀನು ಹರ್ಷಾ ಅಲ್ವಾ ಅಂತ ಕೇಳಿದ್ಲು.
ಹರ್ಷ ಬ್ಲಾಂಕು, ಚೇತರಿಸಿ ಹಾo ಎಸ್ಂದ
ನಾನು ನಿನ್ ಕ್ಲಾಸ್ ಮೇಟ್ 
ಯಾರುಂತ ಗೊತ್ತಾಯ್ತಾ...
ಮರೆಯೋಕೆ ಹೇಗೇ ಸಾಧ್ಯ...
ಯುನಿಫಾರ್ಮ್ನಲ್ಲಿ ನೋಡಿದ 
ಆ ಬೊಂಬೆ ನಾ
ಈ ರಂಭೆ
ಕುಶಿ...ಎಸ್... ಎಸ್... ಕುಶಿ
ಕೂಗಿಯೇ ಬಿಟ್ಟ. ಅವರಪ್ಪ ತಿರುಗಿ ನೋಡಿದ್ರು
ಪರಿಚಯಿಸಿದಳು
ಇವ್ನು  ಹರ್ಷ ನನ್ ಕ್ಲಾಸ್ಮೇಟ್ 
ಜೋಗ್ ಫಾಲ್ಸ್ ನಲ್ಲಿ ಒಟ್ಟಿಗೇ ಓದಿದ್ದು
SSLC ಯಲ್ಲಿ ಕ್ಲಾಸ್ ಗೆ ಫಸ್ಟ್
ಓ ಅವಳೇನ ಇವಳು...
ಆವಾಗ ಹೇಗಿದ್ದಳೋ...
ಓದು ಓದು ಓದು ಆದ್ದರಿಂದ 
ಮುಖ ಯಾರದೂ ನೋಡಲೇ ಇಲ್ಲಾ
ಹುಡುಗಿಯರ್ನ ಕಂಡ್ರೆ ದೂರ ಓಡಿ ಹೋಗೋ
ದೂರವ ಮೇಯ್ಂಟೈನ್ ಮಾಡುತಿದ್ದ ಕಾಲ
ಅವರಪ್ಪ ಕೇಳ್ಬೇಕಾದ 
ಮ್ಯಾನ್ಡೇಟರಿ ಪ್ರಶ್ನೆಗಳ ಸುರಿಮಳೆ..
ದಟ್ಟವಾಗಿ ಕವಿದಿದ್ದ ಮಂಜು 
ಕರಗಿಯೇ ಹೋಯಿತು
ಅವಳನ್ನ ಕೇಳ್ದೆ
ಏನು ಮಾಡ್ತಾ ಇದ್ದೀರಾ...
ಬೆಂಗಳೂರಿನ ಇಂಜಿನಿಯರಿಂಗ್ 
ಕಾಲೇಜ್ ನಲ್ಲಿ ಕಂಪ್ಯೂಟರ್ ಸೈನ್ಸ್ MS ಮುಗಿಸಿ
ಕ್ಯಾಂಪಸ್ ಸೆಲೆಕ್ಷನ್ ಆಗಿ ಮೈಸೂರಲ್ಲಿ Infosys 
ಸೇರ್ಕೋಳ್ಳೋ ಗ್ಯಾಪ್ನಲ್ಲಿ ಶಿವಮೊಗ್ಗ ಬಂದಿದ್ದೀನಿ.
ನಾಳೆ ಮೀಟ್ ಮಾಡೋಣ ಇಲ್ಲೇ ಅಂತ ಹೇಳಿ
ಮಿಂಚು ಹೊರಟೇ ಹೋದಳು...
ಮಿಂಚಲ್ಲಾ ಅವಳು ಈಗ ನನ್ನ
ಕುಶಿ...
ಹರ್ಷ ಕುಶಿಯಲ್ಲಿ ಭೂಮಿಮೇಲೆ ಕಾಲಿಟ್ರೆತ್ತಾನೇ...
ಕನ್ನಡ ಸಿನಿಮಾ, ಭಾವ ಗೀತೆಗಳನ್ನು 
ಹಾಡಿ ಕೊಂಡೇ ದಿನವಿಡೀ ಕಳೆದ
ಕುಶಿ ಕುಶಿಯಾಗಿ...
ಸಂಜೆ PUC ಕ್ಲಾಸ್ಮೇಟ್ಸ್ ನ ಕೈ ಬಿಟ್ಟು 
ಕುಶಿಯ ಮನೆ, ಅವರ ಪರಿವಾರ, ಎಲ್ಲಿಯವರು
Facebook ಹಾಗೂ ಟ್ವಿಟ್ಟರ್ ಮತ್ತೆ ಅವಳಪ್ಪನ ಜಾತಕ ಎಲ್ಲಾ info ಗೂಗಲ್ ಮಾಡಿ ಬಹಳಷ್ಟು ವಿಷಯ ಒಟ್ಟು ಮಾಡಿಟ್ಟಿದ್ದ. 
ನಿಷ್ಕರ್ಷ
ಅವಳಿಗಿನ್ನೂ ಮದುವೆಯಾಗಿಲ್ಲಾ.
ರಾತ್ರಿಯಿಡೀ ನಿದ್ದೆ ಬರಲಿಲ್ಲಾ 
ಅವಳು ನೋಡಿ ಮಾತಾಡಿ 
24 ತಾಸು ಆಗಿಲ್ಲಾ  
ಯಾವಾಗ ನಿದ್ದೆ ಹೋದ್ನೋ
ಗೊತ್ತೇ ಆಗಲಿಲ್ಲ 
ಅರೆ ಬೆಳಗಾಗಿ ಹೋಗಿದೆ
ಟ್ರಾಕ್ ಸೂಟ್ ತೊಟ್ಟುಕೊಂಡು, 
ಸ್ಪೋರ್ಟ್ಸ್ ಶೂಸ್ ಹಾಕ್ಕೊಂಡ್ ಹೊರಟವ
ವಾಪಸ್ಸು ಬಂದು ಸೆಲ್ ಫೋನ್ನ ಕೈಯಲ್ಲಿ
ತಗೊಂಡು ಓಡಿದ.
ನಿನ್ನೆ ಇದ್ದ ಮಂಜು ಇಂದಿಲ್ಲ.
ನಿನ್ನೆ ಇದ್ದ ಸ್ಥಿತಿ ಬೇರೇ 
ಇಂದಿನ ಸ್ಥಿತೀನೇ ಬೇರೇ
ಕಾರೂ ಇಲ್ಲಾ ಅವಳೂ ಇಲ್ಲಾ
ಲೇಟ್ ಆಗಿ ಎದ್ದಿದ್ದಕ್ಕೆ 
ತನಗೆ ತಾನೇ ಬೈಕ್ಕೊಂಡು 
ಪಾರ್ಕ್ ನ ಎರಡು ಸುತ್ತು ಹಾಕಿದ.
ಎಲ್ಲೂ ಕಾಣಲಿಲ್ಲ ಕುಶಿ.
ಬಂದಳೋ ಬರಲಿಲ್ಲವೋ 
ಅದೊಂದು ಡೌಟ್?
ಅವಳ ಮನೆ ಅಡ್ದ್ರೆಸ್ ಕೇಳೋದಿಕ್ಕೆ
ಮರೆತುಹೋಗಿದ್ದಕ್ಕೆ ಮತ್ತೆ ಬೈಕ್ಕೊಂಡ.
ಫಸ್ಟ್ ಅವಳಪ್ಪನ ಆಫೀಸ್ಎಲ್ಲಿದೆ? 
ಕೃಷ್ಣಮೂರ್ತಿಯವರನ್ನು ಕಂಡರಿತು, 
ಅವರ ಮನೆ ವಿಳಾಸ ಹುಡುಕಿ 
ಅವಳ ಫೋನ್ ನಂಬರ್ 
ಕಲೆಕ್ಟ್ ಮಾಡಿ ಮಾತಾಡುವ ಐಡಿಯಾ.
ಈಗ ಉಳಿದಿದ್ದು ಒಂದೇ ದಿನ.
ಸರಿ ಮೊದಲು ಮನೆಗೆ ಹೋಗಿ 
ಡ್ರೆಸ್ ಬದಲಿಸಿ ಹುಡುಕುವ ಕಾರ್ಯ
ಆರಂಭಿಸೋಣಾಂತ ಬಂದ್ರೆ, ಮನೆಯ
ಹೊರಗಡೆ ಅದೇ ಬಿಳಿ ಕಾರ್ ನಿಂತಿತ್ತು.
ಎದೆ ಡವ ಡವಾಂತ 
ಹರ್ಷ ಮನೆಯೊಳಗೆ ಪ್ರವೇಶಿಸಿದ. 
ಅಮ್ಮನ ಜೊತೆ ಮಾತಾಡುತಿದ್ಲು ಕುಶಿ. 
ಅವಳು ಟ್ರ್ಯಾಕ್ ಸೂಟ್ ನಲ್ಲಿ  
ಹರ್ಷ ಏನೂ ಮಾತಾಡಲು ಉಳಿದಿರಲಿಲ್ಲ. 
ಅಮ್ಮನಿಗೇನು ಪರಿಚಯ ಮಾಡೋದು. ಅವಳಮ್ಮನೂ ಹರ್ಷನಮ್ಮಾನೂ ದೋಸ್ತು.
ಅದು ಹರ್ಷನಿಗೆ ಅವಾಗಷ್ಟೇ ಗೊತ್ತಾಗಿದ್ದು.
ಅಮ್ಮನಿಗೆ ಅವರ ಮನೆ ಅಡ್ರೆಸ್ ಕೊಟ್ಟಿಟ್ಟಿದ್ದಳು.
ಅವಳಿಗಾಗಲೇ ಅಮ್ಮ ಗೊಜ್ಜವಲಕ್ಕಿ,
ನಿಂಬೆ ಹಣ್ಣ ಜ್ಯೂಸ್ ಕೊಟ್ಟು ಸತ್ಕರಿಸಿದ್ರು.
ಸ್ವಲ್ಪ ಬೆವರ ಒಂದೆರಡು ಹನಿಗಳು 
ಹಣೆಯ ಮೇಲೆ, ಹಾಗೆಯೇ ಬಳುಕಿ
ಲೂಸಾಗಿ ಕಟ್ಟಿದ್ದ ಕಪ್ಪನೆಯ ಕೂದಲು,
ಅವಳ ಸೌಂದರ್ಯವನ್ನ ಇನ್ನೂ ಹೆಚ್ಚಿಸಿತ್ತು 
ಮಾತು ಮಾತಲ್ಲಿ ಅವಳ ಹಾಗೂ ಅಮ್ಮನ 
ಫೋಟೋ ಫೋನ್ ಕ್ಯಾಮೆರಾದಲ್ಲಿ ಕೈದು ಮಾಡಿದ.
ಒಂದು ಸೆಲ್ಫಿ ಬೇರೇ ತೆಗೆದಿದ್ದಾಯ್ತು, 
ಹಾಗೇನೇ ಫೋಟೋ ಕಳಿಸುವ ನೆಪದಲ್ಲಿ 
ನಂಬರ್ ಕೇಳ್ದಾ, ಬರ್ತೀನೀಂತ ನಂಬರ್
ಹೇಳಿ ಹೊರಟೇಬಿಟ್ಲು.
ಅವಳಿಗೆ ಹರ್ಷನ ಮನೆ ಹೇಗೇ ಗೊತ್ತು?
ಹೇಗೇ ಮನೆ ಹುಡ್ಕೊಂಡು ಬಂದಳು?
ಪ್ರಶ್ನೆಗಳಿಗೆ ಉತ್ತರ ಸಿಗದೇ 
ಒದ್ದಾಡುತಿದ್ದ ನಮ್ಮ ಹರ್ಷ.
ಅವಳ ಫೋನ್  ನಂಬರನ್ನು 
ಸ್ಟೋರ್ ಮಾಡಿಟ್ಕೊಂಡ, 
ಏನೂಂತ  ಲವ್, ಹನಿ, ಕುಶಿ 
ಇದ್ಯಾವದೂ ಇಲ್ಲಾ...
ಮಿಂಚು ಅಂತಾಲೆ 
ಕಾಂಟಾಕ್ಟ್ ನಲ್ಲಿ ಸ್ಟೋರ್ ಮಾಡಿಟ್ಟಿದ್ದ.
ಫೋಟೋ ವಾಟ್ಸಪ್ಪ್  ನಲ್ಲಿ ಕಳಿಸಿದ್ದಾಯ್ತು
ಮಾತಾಡೋಣ ಇಲ್ಲಾ ಮೆಸೇಜ್ ಮಾಡೋಣ
ಫೋನ್ನಲ್ಲಿ ವಾಯ್ಸ್ ಕಾಲ್ ಮಿಂಚು ಅಂದ
ಬೇರೊಬ್ಬರ ಜೊತೆಯಲಿ ಮಾತನಾಡುತ್ತಿದ್ದಾರೆ
ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ.
ಸರಿ ಮೆಸೇಜ್ ಕಳಿಸಿದ ಕರೆ ಮಾಡೀಂತ.
ಬೆಳಗ್ಗೆ ಬಸ್ ಹಿಡಿದು ಬೆಂಗಳೂರಿಗೆ ಹೊರಟ
ನೂರಾರು ಕನಸ್ಸುಗಳ ಹೊತ್ಕೊಂಡು.
ಅವಳಿಗೆ ಫೋನ್ ಮಾಡಿದ್ರೆ ಉತ್ತರವಿಲ್ಲ.
ಮಿಂಚು ಮತ್ತೆ ಭೇಟಿಯಾಗಲಿಲ್ಲ.
ಮನಸಲ್ಲಿದ್ದ ಆಸೆ ಮನಸ್ಸಲ್ಲೇ ಉಳಿದು ಹೋಯಿತು, 
ಕುಶಿ ಕೇಳಲೂ ಇಲ್ಲಾ
ಹರ್ಷ ಹೇಳಲೂ ಇಲ್ಲಾ...
ಈಗ ಇದ್ದಿದ್ದೆಲ್ಲಾ  ಬರೀ
ನೆನಪುಗಳು...



ಕಾಮೆಂಟ್‌ಗಳು

  1. Such a graceful read! It was truly amazing to read about how some glimpses can become such cherished memories. The entire blog was incredibly engaging and held our attention right till the end. This was such a light-hearted and fresh one! 🦋✨

    ಪ್ರತ್ಯುತ್ತರಅಳಿಸಿ
  2. Loved it thoroughly..Excellent narration, your description was vivid and captivating.. it was like watching a movie on screen..Refreshing ,one more beautiful blog by you..Vismaya!!

    ಪ್ರತ್ಯುತ್ತರಅಳಿಸಿ
  3. Excellent Narration, Liked the way story was presented..Vivid and captivating..Noorondu nenapu bahala adbhuta ..One more lovely read

    ಪ್ರತ್ಯುತ್ತರಅಳಿಸಿ
  4. ಕುಶಿ ಕೈ ಕೊಟ್ಟಳು
    ಹರ್ಷ ದೇವದಾಸನಾದ
    ಆ ರೀತಿ ಏನೂ ನಡೆಯಲಿಲ್ಲ
    ಮೊಟ್ಟ ಮೊದಲು
    ಲವ್ ಎಲ್ಲಾಯ್ತು?
    ಕೇಳಬೇಕಾದವರು ಕೇಳಲಿಲ್ಲಾ
    ಹೇಳಬೇಕಾದವರು ಹೇಳಲಿಲ್ಲಾ
    ಇದೆಲ್ಲಾ
    ಒಂದು ವಿಷಯಾನೇ ಇಲ್ಲಾ...
    ಅವನಿಗೆ ಇಷ್ಟ, ಅವಳಿಗಿತ್ತಾ.. ಅದೇ ಅಲ್ವಾ ಪ್ರಶ್ನೆ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.