ಯಾರೀ ಬುದ್ಧಿವಂತರು?
ಯಾರೀ ಬುದ್ಧಿವಂತರು?
ಮಾರ್ಚ್ 2025
ಮೊನ್ನೆ ಶುಕ್ರವಾರ ಸಂಜೆ 6.00pm ಕ್ಕೆ
ಹಾಗೇ ಸುಮ್ಮನೇ ಫೋನ್ ಗೂಮಾಯಿಸಿದೆ
Whats app ಗ್ರೂಪ್ ಕಾಲ್ ಮಾಡ್ದೆ
ಒಟ್ಟಿಗೇ ಒಂಬತ್ತು ಕಾಲ್
ಲೈನ್ ನಲ್ಲಿ ಬಂದೇ ಬಿಟ್ರು
ಜಯಶೀಲಾ,ಮಂಜು, ಲೋಕಿ, PTLR, ಅಮೇರಿಕಾ ದಿಂದ ವಿಜಯ್, ಅಶ್ವಥ್, Ram menon,
PRM ರೆಡ್ಡಿ, ಮೋಹಿತೆ ಮತ್ತೆ ನಾನು
ಎಲ್ಲರೂ ಎಲ್ಲರೊಟ್ಟಿಗೆ ಮಾತಾಡಬೇಕಂಬ ಹಂಬಲ
ಎಲ್ರೂವೆ ಈ ಫೋನ್ಗಾಗೆ ಕಾಯ್ತಾ ಇದ್ದರು ಅನ್ನುವದು ಮಾತ್ರ ನಿಜ. ಅವರಿಗೆ ಮಂಜುನಾಥ್ ರವರು ಬೆಂಗಳೂರಿನಿಂದ ಮಹಾಬಲಿಪುರಂ ಹಾಗೂ ಪಾಂಡಿಚೆರಿ ಟ್ರಿಪ್ ಬಗ್ಗೆ ಮಾತಾಡಬೇಕಿತ್ತು
ನಂಗಂತೂ ನಾವು ಇಪ್ಪತೈದು, ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು ಬರೆದಾಗ ಅನ್ನಿಸ್ತಿತ್ತು
ನಮ್ಮ ಈ ಗ್ರೂಪಿನಲ್ಲಿ ಯಾರು ಬುದ್ಧಿವಂತರು ಅಂತ ಒಂದು ಪ್ರಶ್ನೆ ನನ್ನ ಕಾಡ್ತಿತ್ತು
ಆದ್ರೆ ಇಷ್ಟು ಮಾತ್ರ ಸ್ಪಷ್ಟ ನಾನಂತ್ತೂ ಇಲ್ಲಾ, ಕುತೂಹಲ ಏನ್ ಬೇಕಾದ್ರೂ ಹೇಳಿ,
ಟ್ರಿಪ್ ನಲ್ಲಿ ಕಂಡು ಹಿಡಿದೇ ಬಿಟ್ಟೇ
ಟ್ರಿಪ್ ನ ತಯ್ಯಾರಿ ಬಗ್ಗೆ ಯಾಕೆ ಹೇಳಿ ಸಮಯ
ವೇಸ್ಟ್ ಮಾಡೋದುಂತಾ ಸೀದ ಟಾಪಿಕ್ ಗೆ ಬರ್ತೀನಿ
ಅಂತೂ ಇಂತೂ,
ಬಂತು...
ಏಪ್ರಿಲ್ 2ನೇ ತಾರೀಕು 2025, ಬುಧವಾರ...
(DAY-ONE)
ಬೆಳಗ್ಗೆ 6.00ಘಂಟೆ ಗೆ ಹೊರಟ್ವಿ
ಏನಿದು ಇಷ್ಟು ಸಾಧಾರಣವಾಗಿ ಹೇಳಿದ್ರೆ ಹೇಗೇ
ಟೆಂಪೋ ಟ್ರಾವೆಲ್ಲೆರ್ ಕೊಂಡಾರೆಡ್ಡಿಯ ಜಿಮ್ಮೆದಾರಿ
ಅದೂವೇ ಫಸ್ಟ್ ಕ್ಲಾಸ್ 12+1 ಸೀಟರ್ AC ಕೋಚ್
ಎಲ್ರೂವೆ ಏಪ್ರಿಲ್ 2 ಬೆಳಗ್ಗೆ 6.45am ಗೆ ಬೆಂಗಳೂರು ಬಿಟ್ಟು ಹೊಸೂರು ಕಡೆಹೊರಟ್ರು.
ಶ್ರೀಪುರಂ ಗೋಲ್ಡನ್ ಲಕ್ಷ್ಮಿ ಟೆಂಪಲ್ ಕವರ್ ಮಾಡಿ
ಸಂಜೆ 4.00ಘಂಟೆಯ ಒಳಗೆ ಸಮುದ್ರ ತೀರದ ಮಹಾಬಲಿಪುರಂ ಸೇರಬೇಕು. ಇದು ಪ್ರೋಗ್ರಾಮ್.
Distance ಎಷ್ಟು ಗೊತ್ತಾ 326 ಕಿ.ಮೀ.
60ಕಿ.ಮೀ ಪ್ರತಿ ಘಂಟೆ ಸ್ಪೀಡ್ ನಲ್ಲಿ
ಮಿನಿಮಮ್ 6 ಘಂಟೆ ಬೇಕೇ ಬೇಕು.
ಅದಕ್ಕೇ ಪ್ಲಾನಿಂಗ್ ಮಾಡ ಬೇಕು.
ಮಂಜುನಾಥ್ ಹಾಗೂ ಸರಳ
ಇಬ್ರೂವೆ expert organizers.
ಮನೆಯಿಂದ ಇಡ್ಲಿ, ಪುದಿನಾ ಚಟ್ನಿ, ಪೇಪರ್ ಪ್ಲೇಟ್ ತಂದಿದ್ದರು. ಒಂದು ಒಳ್ಳೆ ಸ್ಥಾನ ನೋಡಿ ಗಾಡಿ ನಿಲ್ಲಿಸಿ
7.45am ಗೆ breakfast ಸರ್ವ್ ಮಾಡೇ ಬಿಟ್ರು. . Breakfast ಎಲ್ಲಾ first ಕ್ಲಾಸ್.
ಅದರ ಹಿಂದೆ ಬೆಳಗ್ಗೆ sorry ರಾತ್ರಿ 3.00am ಕ್ಕೇ ಎದ್ದು ಇಡ್ಲಿ ಚಟ್ನಿ ರೆಡಿ ಮಾಡಿ ಲಂಚ್ ಗೆ ಪ್ಯಾಕಿಂಗ್ ಸೇಪರೇಟ್ ಆಗಿ ಮಾಡಿ ತಂದಿದ್ದರು.
ಒಳ್ಳೆ ರೆಸ್ಟೋರೆಂಟ್ ನ ಹತ್ತಿರ ನಿಲ್ಸಿ
ಕಾಫಿ tea ಹೋಟೆಲ್ ನಲ್ಲಿ ಕುಡಿದು
8.00am ಗೆ ಮತ್ತೆ NH 48 Vellore ಕಡೆ ಗಾಡಿ ಓಡ್ತು
ಸಮಯಕ್ಕೆ ಸಮಯ ಉಳೀತು.
Breakfast ಫ್ರೀಯಾಗಿ ಆಯ್ತು, ದುಡ್ಡೂ ಉಳೀತು.(ಸರಳ ಮಂಜುನಾಥ್ ಗೆ ಒಂದು ಜೈ ಮತ್ತೊಂದು Mrs ನಿರ್ಮಲ ಜಯಶೀಲಾ ರೆಡ್ಡಿ
ಗೇ ಜೈ)
Next ಸ್ಟಾಪ್ ಶ್ರೀಪುರಂ ಬಂದೇ ಬಿಡ್ತು
ಟೈಮ್ ನೋಡಿದ್ರೆ 11.30am.
ಸೀನಿಯರ್ ಸಿಟಿಜನ್ಗಳು ನಾವು,
ಸ್ಪೆಷಲ್ ದರ್ಶನ್ ಟಿಕೆಟ್ ತಗೊಂಡು ಮಹಾಲಕ್ಷ್ಮಿದೇವಿಯು ಪ್ರಸನ್ನಳಾಗಿ
ದೈವ ದರ್ಶನ ಎಣಿಸಿದ್ದಕ್ಕಿಂತ ಸುಗಮವಾಗಿ ಆಯ್ತು.
ದೇವಸ್ಥಾನ ದಿಂದ ಹೊರ ಬಂದ್ರೆ
ಸರಳ ಮಂಜುನಾಥ್ ಬಿಡ್ತಾರಾ
ಅವರ ಆತಿಥ್ಯ ಮುಂದುವರೀತು
ಈ ಸಲ ಸವಿಯಾದ ವಾಂಗಿ ಬಾತು ಜೊತೆಗೆ
Mrs ನಿರ್ಮಲ ಜಯಶೀಲಾರೆಡ್ಡಿಯವರು ತಂದಿದ್ದ ಮೊಸರನ್ನ
ತಿಂದವರು ಆಮೇಲೆ ಹಸಿವೂಂತ ಯಾರೂ ಬಾಯಿ ಬಿಚ್ಚಲಿಲ್ಲ.
ಮತ್ತೆ
ರಸ್ತೆ ಬದಲಾಗಿ ಟೆಂಪೋ
ಕಾಂಚೀಪುರಂ ರಸ್ತೆ ಹಿಡೀತು...
ಸುರೇಶ Chennai ನಿಂದ ಬರೋಕೆ ಮುಂಚೆ
ಟೆಂಪೋ ಟ್ರಾವೆಲ್ಲೆರ್,ಇನ್ನೋವಾ ಎಲ್ಲಾ ಸರಿಯಾಗಿ 4.30pm ಗೆ ಮಹಾಬಲಿಪುರಂ ನಲ್ಲಿರುವ
Tamilnadu Tourism Development
ಸಮುದ್ರ ತೀರದ ರೆಸಾರ್ಟ್ ತಲುಪಿತು.
ನನ್ನ ಪ್ಲಾನ್ ಚೆನ್ನೈನಿಂದ ಒಂದು3.30ಗೆ ಬಿಟ್ಟು 4.45pm ಗೆ ಹೋಗಿ ಸೇರಿದ್ರೆ ಸಾಕು ಇವರು 5.00pm ಗೆ ಬರೋಕೆ ಮುಂಚೆ ಅಲ್ಲಿದ್ದು ಸ್ವಾಗತಿಸುವ ಆಸೆ ಯಿಂದ ಹೋದ್ರೆ ಉಲ್ಟಾ ಆಯ್ತು 4.30ಗೇ ಬಂದ ಮಂಜು ಪಾರ್ಟಿ ನನ್ನನ್ನು ಸ್ವಾಗತಿಸಿದರು..
ಸೂಪರಾಗಿದೆ ಎಲ್ಲವೂ Sea facing
50 ಮೀಟರ್ ದೂರದಲ್ಲೇ ಸಮುದ್ರ
ಉಳ್ಳಾಲದ ದಿನಗಳು ಜ್ಞಾಪಕಕ್ಕೆ ಬಂತೂಂತದ್ರು
ಅದು ಅರಬ್ಬೀ ಸಮುದ್ರ ಇದು ಬಂಗಾಳ ಕೊಲ್ಲಿ
ಎಲ್ರೂಬೀಚಿನತ್ತ ನಡೆದೆವು.
ದಿನವಿಡೀ ಬಸ್ಸಲ್ಲಿ ಕುಳಿತು ದಣಿದು ಬಂದ ಸಮುದ್ರವಿಲ್ಲದ ಬೆಂಗಳೂರಿಂದ ಬಂದವರು
ಬಂಗಾಳ ಕೊಲ್ಲಿಯಲ್ಲಿ ಕಾಲಿಟ್ಟರು...
ಅಷ್ಟು ತಣ್ಣಗೂ ಇಲ್ಲಾ
ಅಷ್ಟು ಬಿಸಿನೂ ಇಲ್ಲಾ
ಕಾಲ ಕೆಳಗಿನ ಮರಳು ಹಾಗೇ ಸೆಳೆದೊಯ್ದ
ಸ್ವಲ್ಪ ಸ್ವಲ್ಪ ವಾಗಿ ಕರಗಿ ಹೋದ ಅನುಭವ
ನೀರಿನ ಹತ್ತಿರ ಹೋದಾಗ
ಎನಿಮಿ ಫ್ರೆಂಡ್ಸ್ ಜ್ಞಾಪಕಕ್ಕೆ ಬಂದರು.
ಇಲ್ಲಿ ಯಾರೂ ತಳ್ಳಲಿಲ್ಲ
ಅಲ್ಲೇ ಎಲ್ರು ಕೂತ್ಕೊಂಡು ಎಷ್ಟು ಹರಟೆ ಹೊಡದ್ರೂ
ಸಂಜೆ 6 ಘಂಟೆ ದಾಟಲಿಲ್ಲ ಮತ್ತೆ
ರೆಸ್ಟೋರೆಂಟ್ ಗೆ ದಾಳಿ
ಎಲ್ರೂವೆ ಬ್ರೆಡ್ ಬಟರ್ ಆಮ್ಲೆಟ್ಟು ತಿಂದು
ಟೀ ಕಾಪಿ ಕುಡಿದು ಬೀಚ್ ನ ನೋಡ್ತಾ ಇದ್ವಿ
7.00pm ಆದ ಮೇಲೆ ಎಲ್ರೂ ಬಾರ್ ಗೆ ಹೋದ್ವಿ
7.00pm ಆಗೋದನ್ನೇ ಕಾಯ್ತಾ ಇದ್ಧಾಂಗೆ.
ಬೆಳಗ್ಗೆ ಊಟ ತಿಂಡಿಯಲ್ಲಿ ಉಳಿಸಿದ ದುಡ್ಡು
ಹೇಗಾದ್ರೂ ಖರ್ಚಾಗ ಬೇಕಲ್ಲಾ
ಇಲ್ಲಾ
ಖರ್ಚು ಮಾಡ ಬೇಕಲ್ಲಾ
ಚಿಲ್ಡ್ ಬಿಯರ್ ಎಲ್ರೂ ಆರ್ಡರ್ ಮಾಡಿದ್ರು
ವಿಚಿತ್ರವೇನೆಂದ್ರೆ ಡ್ರಿಂಕ್ಸ್ ಜೊತೆ ಮಿಕ್ಸ್ ಚರ್
ರಸಂವಡೆ, ಸುಂಡಲ್, ಚಿಪ್ಸ್ ಎಲ್ಲವೂ free....
ಎಲ್ರೂ ಅವರವರ
ಮನ್ ಕೀ ಬಾತ್ ಹೇಳೋಕೆ ಶುರು ಮಾಡಿದ್ರು
ಲೇಡೀಸ್ ಇದ್ದದರಿಂದಲೋ ಏನೋ
ಮಾತು ಕಥೆ ಎಲ್ಲಾ ಡೀಸೆಂಟ್ಆಗಿತ್ತು
ನನ್ ಪ್ರಕಾರ ರಸಂ ವಡೆಯ ರುಚಿ
ಕಹಿ ಬಿಯರ್ ಗಿಂತಲೂ ಚೆನ್ನಾಗಿತ್ತು ಮತ್ತೆ
ರತ್ನನ್ ಪ್ರಪಂಚಕ್ಕೆ ಕರ್ಕೊಂಡ್ ಹೋದ್ರು
ಡಿನ್ನರ್ ಟೈಮ್ Buffet ಊಟ
ರೋಟಿ, ದಾಲ್, ವಡೆ,ಸಬ್ಜಿ, ಸಾಂಬಾರ್, ರಸಂ
ಒಂದು fish ಫ್ರೈ, ಚಿಕನ್ ಕರ್ರಿ ಜೊತೆಗೆ
food was ok
ಅಂತ ಎಲ್ಲರೂ ಊಟ ಮುಗಿಸಿ
ರಾತ್ರಿ ಬೀಚಿನ ಮರಳ ಮೇಲೆ ಮಲಗಿ ಆಕಾಶ ನೋಡಿದ್ರೆ ತಾರೆಗಳು ಕಾಣೆ ಎಲ್ಲವೂವೆ ಮೋಡಗಳ ಹಿಂದೆ ಅಡಗಿ ಕೊಂಡಿವೆ ಅಂತ ಹೇಳ್ದ ಮೆನನ್. ಇವತ್ತು ಅವನು ನನ್ನ ರೂಮ್ ಮೇಟ್.
ಇದುವರೆಗೂ ಅವನ ಬಗ್ಗೆ
ಜೀರೋ ಇತ್ತು ನಾಲೆಡ್ಜ್,
ಕತ್ತಲಾದರೆ ಉಪಯೋಗಿಸೋದು
ಒಂದು ಮೋಮ್ಬತ್ತಿ ಇನ್ನೊಂದು ಟಾರ್ಚ್
ಟಾರ್ಚ್ ಗೆ ಬೇಕು ಬ್ಯಾಟರಿ
ಬ್ಯಾಟರಿ ಅಂದ್ರೆ ಅದು Eveready
Eveready ಅಂದ್ರೆ
ಅದು
ರಾಮ್ ಮೋಹನ್ ಮೆನನ್.
ಅದರ ಕಥೆ ಇನ್ನೊಮ್ಮೆ
ರಾಮ್ ಮೋಹನ್ ಮೆನನ್ ನ ರಾಮಾಯಣ
ಏಪ್ರಿಲ್ 3ನೇ ತಾರೀಕು 2025, ಗುರುವಾರ...
(DAY -TWO)...
ಬೆಳಗಾಯ್ತು 5.45am ಗೆ ಎದ್ದು
ಈಸ್ಟ್ ಕೋಸ್ಟ್ ಅಂದ್ರೆ ಸೂರ್ಯೋದಯ
ಸನ್ ರೈಸ್ ಅದನ್ನ ನೋಡಕ್ಕೇಎಲ್ರೂ ಎದ್ದರೆ
ಮೋಡ ಕವಿದು ಬೆಳಕು ಹರಿದು
ಜಗವೆಲ್ಲಾ ತೊಯ್ದ,
ನಿಜಕ್ಕೂಮಳೆ ಬಂದು ಎಲ್ರೂ
ವಾಪಸ್ಸು ರೂಮ್ಗೆ.
ಸೂರ್ಯ ಮೋಡಗಳ ಹಿಂದೆ ಬಚ್ಚಿಟ್ಕೊಂಡು
ದರ್ಶನ ಕೊಡದೆ ರೈಸ್ ಆಗಿ ಬಿಟ್ಟಿದ್ದ.
ಎಲ್ಲರೂ ಬೆಳಗ್ಗೆ 8.00am ಗೆ buffet breakfast
Fruits, ಬ್ರೆಡ್, ಬಟರ್, ಇಡ್ಲಿ, ವಡೆ, ಪೊಂಗಲ್ ಉಪ್ಪಿಟ್ಟು, ಆಲೂಪರೋಟ ಹೀಗೇ... ಹಲವಾರು
8.30am ಗೆ ಸ್ಟೋನ್ Statue ಪಾರ್ಕ್ ನೋಡಿದ್ವಿ.
ಮಹಾಬಲಿಪುರಂ ಮೇಲೆ ಒಂದಲ್ಲ ಒಂದು ಸಮಯ ಚೋಳ, ಚಾಲುಕ್ಯ, ಪಲ್ಲವ, ರಾಷ್ಟ್ರಕೂಟ, ವಿಜಯನಗರ ಸಾಮ್ರಾಟ ರ ಪ್ರಭಾವ
ಶಿಲ್ಪಕಲೆಯ ಕೇಂದ್ರೀಕ್ರತವಾಗಿದ್ದು ,
ಕಲೆಯಲ್ಲವಿದು ಶಿಲ್ಪಕಲೆಯ ಬೀಡು
ಶೋರ್ ಟೆಂಪಲ್ ನೋಡಲು ಹೊರಟ್ವಿ
ಬೇಸಿಗೆಯಲ್ಲಿ ಒಂದು ಮಳೆ
ಕಾಗೆಗೂ ನರಿಗೂ ಮದುವೆಯಂತೆ
೭ಬಿಟ್ಟು ಬಿಟ್ಟು ಮಳೆ
ಬಿಟ್ಟು ಬಿಟ್ಟು ಮೋಡ ಕವಿದ ಬಿಸಿಲು
ನಾವು ಆರ್ಡರ್ ಮಾಡಿ ಕೇಳಿದಂತ
ಕೂಲ್ ವಾತಾವರಣ
ಫೋಟೋ ನೋಡಿ ಮತ್ತೆ ಓದಿ
ಯಾವಾಗ ಕಟ್ಟಿದ್ದು?
ಯಾಕೆ? ಅನ್ನೋದನ್ನ ಸ್ವಲ್ಪ ತಿಳ್ಕೊಂಡ್ರೆ ಒಳ್ಳೇದಲ್ವಾ
ಪಲ್ಲವ ರಾಜವಂಶದ
ರಾಜ ನರಸಿಂಹವರ್ಮನ್-II ದ್ವಾರ
8ನೇ ಶತಮಾನ ADಯಲ್ಲಿ ಕಟ್ಟಲಾಯಿತೂಂತ.
ಆಗ ಮಹಾಬಲಿಪುರಂ ಒಂದು ಬಂದರು ನಗರ.
ಇದೇ ತರಹ ಏಳು ಶೋರ್ ಟೆಂಪಲ್ಗಳ ಸಮೂಹ
ಇರಬಹುದೂಂತ ಇತ್ತೀಚಿಗೆ 2004 ಸುನಾಮಿ ಯ ಬಳಿಕ ದೊರೆತ ಅವಶೇಷಗಳ ಶೋಧನೆಯಿಂದ Marco Polo ಉಲ್ಲೇಖಿಸಿದ ಏಳು ಪಗೋಡಗಳು ಇರಬೇಕೆಂಬ ವಾದಕ್ಕೆ ಬಲ ಸಿಗುತ್ತೆ.
1984 ರಲ್ಲಿ Unesco World Heritage Site ಎಂದು ಘೋಷಿಸಲಾಗಿದೆ. ನೋಡ್ತಾ ನೋಡ್ತಾ ಇದ್ದಕ್ಕಿದ್ದ ಹಾಗೇ ಮತ್ತೆ ಮಳೆ ಶುರವಾಯ್ತು.
ಅರ್ಜುನನು ತಪಸ್ಸು ಮಾಡಿದ ಜಾಗ,
(ಎಷ್ಟು ಧೈರ್ಯ ನೋಡಿ ಬಂಡೆ ಉರುಳಿದ್ರೆ ಚಟ್ನಿ)
ಎಲ್ಲಾ ನೋಡಿ ಮುಗಿಸಿ ಗಂಟು ಮೂಟೆ ಕಟ್ಟಿಕೊಂಡು 11.30 am ಗೆ ಹೊರಟೇ ಬಿಟ್ವಿ.
Bye Bye Mahabalipuram
ಮಧ್ಯಾಹ್ನ 2.30pm ಗೆ ಪಾಂಡಿಚೆರಿ ತಲುಪಿದೆವು
ಹಸಿವು ಕಣ್ಣುಗಳು ಕಟ್ಟಿದ ಹಾಗೇ ಇತ್ತು ಅದೂನುವೆ ಸೀನಿಯರ್ ಸಿಟಿಜೆನ್ ಗಳು ಸಕ್ಕರೆ ಡೌನ್ ಬೇರೆ. ರಸ್ತೆಯಲ್ಲಿ ಸಿಗುವ first ಹೋಟೆಲ್ ಅಂದೆ,
PRM reddy ಯವರ ಮೊಮ್ಮಗ ಪ್ರಥಮ ಹೇಳ್ದ ಅಂಕಲ್ ಕರೆಕ್ಷನ್ first Non Veg ಹೋಟೆಲ್ ಅಂದ. ಹೇಳಿದ ಎರಡನೇ ನಿಮಿಷ...
ತಲಪಾಕಟ್ಟಿ ಹೋಟೆಲ್ ಸಿಗ್ತು.
ಗಡಗಡನೆ ಎಲ್ರೂವೆಇಳಿದ್ರು.
ಬಿಸಿ ಬಿಸಿ ಮಟನ್, ಚಿಕೆನ್,, ಪನೀರ್, ವೆಜ್ ಬಿರಿಯಾನಿ ತಂದಿಟ್ಟರು ಮಟನ್ ಕೋಲಾ ಫ್ರೈ
ಬಿರ್ ನೆ ತಿಂದು ಸರ್ ನೇ ಹೊರಟ್ವಿ.
ಹೋಟೆಲ್ ಆನಂದಾ ಇನ್ ಕನ್ವೆನ್ಷನ್ ಹಾಲ್ ನಲ್ಲಿ ಮಂಜು ವ್ಯವಸ್ಥೆ ಮಾಡಿದ್ದರು. ಎಲ್ರೂ ರೂಮ್ ಗಳಿಗೆ ಹೋಗಿ ಬಟ್ಟೆ ಬದಲಿಸಿ
5.00pm ಗೆ ಆರೋಬಿಂದೊ ಆಶ್ರಮಕ್ಕೆ ಹೊರಟೆವು. 5.30pm ಗೆ ತಲುಪಿದೆವು.
ಪಾಂಡಿಚೆರಿಯಲ್ಲಿರುವ ಶ್ರೀಆರೋಬಿಂದೊ ಹಾಗೂ ಮದರ್ ರವರ ಆಧ್ಯಾತ್ಮಿಕ ವಿಚಾರದ ಕಮ್ಯೂನಿಟಿ,
ಅವರ ಅನುಯಾಯಿಗಳು ಅದನ್ನ ಅವಲಂಬಿಸಿ ನಡೆಸುವ ಆಶ್ರಮವಾಗಿದೆ.ಫೋನ್ ಸ್ವಿಚ್ ಆಫ್ ಮಾಡಿಸಿ ಒಳಗೆ ಬಿಟ್ಟರು.
ಧ್ಯಾನದಲ್ಲಿ ಐಕ್ಯವಾದ
ಆ ಐದು ನಿಮಿಷಗಳು,
ಲೈಬ್ರರಿ ಯಲ್ಲಿ ಆಧ್ಯಾತ್ಮಿಕ
ಚಿಂತನೆಯ ಪುಸ್ತಕಗಳು
ನಮ್ಮಲ್ಲಿ ಕೆಲವರು ಕೊಂಡುಕೊಂಡರು.
ಹೊರಗೆ ಬಂದೊಡನೆ ಅಲ್ಲಿಂದ
5 ನಿಮಿಷ ವಾಕಿಂಗ್ ದೂರದಲ್ಲಿ
next stop
ಮಣಕ್ಕುಳ ವಿನಾಯಗರ್ ಟೆಂಪಲ್
ಅರುಳ್ಮಿಗು ಮಣಕ್ಕುಳ ವಿನಾಯಗರ್ ಕೋವಿಲ್
ಫ್ರೆಂಚ್ ದೊರೆ Dupleix ನ ಸಿಪಾಹಿಗಳು,
ಬ್ರಿಟಿಷ್ ಹಾಗೂ ಡಚ್ ರವರ ದಾಳಿಯನ್ನ
ಲೋಕಲ್ ಹಿಂದೂಗಳು ವಿರೋಧಿಸಿ
ಕಾಪಾಡಿಕೊಂಡು ಬಂದಿರೋದ್ರಿಂದ
ಐತಿಹಾಸಿಕ ದೇವಸ್ಥಾನವಾಗಿದೆ
ಗಣೇಶನ ಒಳ್ಳೆ ದರ್ಶನದ ಬಳಿಕ
ನಡೆದು ಕೊಂಡು ಹೋಗುವ ದೂರದಲ್ಲಿ
ಪಾಂಡಿಚೆರಿಯ ರಾಕಿ ಬೀಚ್ ಹಾಗೂ ಮಹಾತ್ಮಾ ಗಾಂಧೀಜಿ ಯವರ ಬೀಚ್ ಗೆ ಪ್ರಸ್ತಾನಿಸಿದೆವು.
ರಾಕಿ ಬೀಚ್ ನ ವರೆಗೆ
ನಮಗೆ ಹೋಗಲು ಶಕ್ತಿ ಇರಲಿಲ್ಲಾ.
ರಾಕಿ ಬೀಚ್ ನಲ್ಲಿದ್ದವರಿಗೆ
ಗಾಂಧೀಜಿ ಬೀಚ್ ದೂರವಾಯ್ತು
ಎಲ್ರೂವೆ ವಾಪಸ್ಸು ಹ್ಯಾಗಾದ್ರೂ ಹೋಗಿ
ಸೇರಿದ್ರೆ ಸಾಕಾಗಿತ್ತು ಸಕತ್ತು tired ಆಗಿದ್ವಿ.
ಎಲ್ರೂ ರಾತ್ರಿ 8.00ಘಂಟೆಗೆ ಹೋಟೆಲ್ ತಲುಪಿದೆವು.
Lakshmipathi ಬರಬೇಕಾಗಿತ್ತು
ಆದ್ರೆ ಏನೋ ಕೊನೆಯ ನಿಮಿಷ
ಕಾರೋ ಬಾರ್ ಇದ್ದದ್ದರಿಂದ
ಬರಲಿಕ್ ಆಗಲಿಲ್ಲಾ.
ಆದ್ರೆ ಅವನ ಹೆಸರಲ್ಲಿ ಇದ್ದ
ರೂಮ್ ಕ್ಯಾನ್ಸಲ್ ಮಾಡಲು ಸಾಧ್ಯವಾಗಲಿಲ್ಲ.
ಅದರ ಸದುಪಯೋಗ ಮಾಡಲು ನಿರ್ಣಯಿಸಿದೆವು.
ನಮ್ ಕಾರ್ ಡ್ರೈವರ್ ಹೆದರು ಪುಕ್ಕ
ನಮ್ಮ ಹೋಟೆಲ್ ನಲ್ಲಿ ಬಾರ್ ಇದ್ದದರಿಂದ
ರೂಮ್ನಲ್ಲಿ ಕುಡಿಯಲು ಅನುಮತಿಯಿಲ್ಲ ಅಂತಂದ. ಸರಿ ಅವನ ಮಾತ ಕೇಳಿ
ಲಿಕರ್ ಶಾಪ್ ನಿಂದ ದುಡ್ಡು ಕೊಟ್ಟು,
ಬಿಯರ್, ವಿಸ್ಕಿ ಬಾಟಲಿಗಳನ್ನು ಖರೀದಿಸಿ,
ಟ್ರಾವೆಲ್ ಬ್ಯಾಗ್ ನಲ್ಲಿ ಬಚ್ಚಿಟ್ಟು, ರಿಸೆಪ್ಶನ್ ನಲ್ಲಿರುವವರ ಕಣ್ಣ ತಪ್ಪಿಸಿ,
20ಕೆಜಿ ಹೊತ್ತುಕೊಂಡು ಬಂದು
ರೂಮ್ ನಂಬರ್ 516 ಕ್ಕೆ ಸೇರಿಸಿದ
ರಾಮ್ ಮೋಹನ್ ಮೆನನ್ ಗೆ ಒಂದು ಬಿಗ್ ಜೈ.
ಎಲ್ರೂ ರೂಮ್ನಲ್ಲಿ ಕಾಯುತಿದ್ದರು
ಆಮೇಲೆ ನಾನು ಹೋಗಿ ಕಿಚನ್ ನಲ್ಲಿ ಕೇಳ್ದೆ
ರೂಮ್ ಸರ್ವಿಸ್ ನಲ್ಲಿ ಇದೆಲ್ಲವೂ
ಅಲ್ಲೋಡ್ಅಂತಂದ. ಅದನ್ನ ಬಂದು ಹೇಳ್ದಾಗ
ಎಲ್ರೂವೆ ಬಿದ್ದು ಬಿದ್ದು ನಕ್ಕಿದ್ದಾಯ್ತು.
ಮತ್ತೆ ಸೆಷನ್ ಶುರುವಾಯ್ತು.
ಎಲ್ರೂ ಫಾರ್ಮ್ ನಲ್ಲಿದ್ದರು
ಎಲ್ರೂ ಮನ ಬಿಚ್ಚಿಮಾತನಾಡಿದರು
ಎಲ್ರೂ ಎಲ್ಲಾನ್ನೂ ಮಾತಾಡಿದ್ರಿಂದ
ಕ್ಷಮಿಸಿ...
ಇಲ್ಲಿ ಹಂಚಿ ಕೊಳ್ಳಲು ಏನೂ ಉಳಿಯಲಿಲ್ಲಾ
ಆದ್ರೆ
ಒಂದು ಮಿಸ್ ಮಾಡಿಕೊಂಡ ವಿಷಯ
Mr and Mrs ಅಯ್ಯಪ್ಪನ್,
Mr and Mrs ವಿಜಯ್ ಕುಮಾರ್ ಬರಗಿ
Mr and Mrs ಜಗದೀಶ
Mr and Mrs M. M. Maragal.
ಇವರೂ ಜೊತೆಗೂಡಿದ್ದರೆ ಇನ್ನೂ ಚಲೋ ಇರುತಿತ್ತು.
ಒಂದು ಒಳ್ಳೆಯ ವಿಷಯ
ರಾಮ್ ಮೋಹನ್ ಮೆನನ್ ಇದು ಅವನು
ಕೊಡುತೊ ಇರೋ ಪಾರ್ಟಿ ಅಂದ.
ಬೆಳಗ್ಗೆ 7.30am ಗೆ ಎಲ್ಲಾ ಕೆಳಗೆ
Buffet Breakfast ಬರಲು ಮಂಜು
ನಿರ್ದೇಶಿಸಿ/ಉಪದೇಶಿಸಿ/ಮನವಿ /ಬನ್ರೋಂತ...
ಬೆಳಗ್ಗೆ ಆದ್ಮೇಲೆ ನೋಡ್ಕೊಳ್ಳೋಣಂತ
ಎಲ್ರೂ ಇನ್ನೊಂದು ಸಲ
ಬೋಲೋ
ರಾಮ್ ಮೋಹನ್ ಮೆನನ್ ಕೀ... ಜೈ...
ಸೂಪರ್ ಆಗಿ ರಾತ್ರಿ ಕಳೆದು ಹೋಯ್ತು..
ಆದ್ರೆ
ಏಪ್ರಿಲ್ 4 ನೇ ತಾರೀಕು 2025, ಶುಕ್ರವಾರ...
(DAY-THREE)
ಬೆಳಗ್ಗೆ 7.30am ಗೆ ನಾವೆಲ್ಲಾ ರೆಡಿ ಯಾಗಿ ಕೆಳಗೆ ಬಂದ್ವಿ. ನಮಗಾಗಿ ಮಂಜು ಬಿಳಿ ಟೋಪಿ ಬಿಳಿ ಟೀ ಶರ್ಟ್ ಅವರವರ ಸೈಜ್ ಗೆ ಅನುರೂಪವಾಗಿ ಕೊಟ್ಟು
ಹಾಕಿಕೊಂಡು ಬರಲು ಆಗ್ರಹಿಸಿದರು. ಎಲ್ರೂ ಹೊಸ ಬಟ್ಟೆ ಹಾಕ್ಕೊಂಡು ಬಂದ್ವಿ ನಮ್ಮ ಬ್ಯಾಚ್
1975 ರಲ್ಲಿ pass out ಆಗಿ ಐವತ್ತು ವರ್ಷಗಳು ತುಂಬಿದನ್ನ ಕೊಂಡಾಡಲು ಬಂದಿದ್ವಿ.
ಈ ವರ್ಷ Tee Shirts and Caps
ಮಂಜು ಮತ್ತು ಕೊಂಡಾರವರು sponsorers.
Buffet Breakfast ಆಯ್ತು
ಎಲ್ರೂ ಕಾರಿಡಾರ್ ನಲ್ಲಿ ಸೇರಿದ್ವಿ.
“ We are Golden together- 50” - a short, sweet, and memorable slogan that captures not only the years together but also our love and comradeship. Wonderful idea.
ಇಷ್ಟು ಸ್ಪಷ್ಟವಾಗಿ ಇಷ್ಟು ಸಂಕ್ಷಿಪ್ತವಾಗಿ ಯಾರೂ ಅಭಿಪ್ರಾಯ ವ್ಯಕ್ತ ಗೊಳಿಸಿರಲಾರರು.
(ಬಲದಿಂದ ಎಡಕ್ಕೆ ಶ್ರೀಮತಿ ಸರ್ಪಿಣಿ ಕೊಂಡಾ ರೆಡ್ಡಿ, ಶ್ರೀಮತಿ ಮನಿಷಾ ಮೋಹಿತೆ ಶ್ರೀಮತಿ ನಿರ್ಮಲ ಜಯಶೀಲಾ ರೆಡ್ಡಿ ಶ್ರೀಮತಿ ಶಶಿ PRM ರೆಡ್ಡಿ, ಶ್ರೀಮತಿ ಸರಳ ಮಂಜುನಾಥ್ and ಶ್ರೀಮತಿ ಪದ್ಮಲಕ್ಷ್ಮಣ್ ರೆಡ್ಡಿ ಜೊತೆಗೆ ಬುದ್ಧಿವಂತರು)
ನಮ್ಮ ಈ ಟ್ರಿಪ್ ಇಷ್ಟು ಚೆನ್ನಾಗಿ ಮೂಡಿ ಬರಲು ಕಾರಣರಾಗಿದ್ದ ಮಹಿಳೆಯರಿಗೆ ವಿಶೇಷ ವಿಶೇಷ ಧನ್ಯವಾದಗಳು ಶ್ರೀಮತಿ ಸರಳ ಮಂಜುನಾಥ್ ರವರಿಗೆ ಸ್ಪೆಷಲ್ ವಿಶೇಷ ಧನ್ಯವಾದಗಳು. ಯಾತ್ರೆ ಇನ್ನೂ ಮುಂದುವರಿಯುವುದು
ನನ್ನ ಬಿಟ್ಟು ಮಿತ್ರರೆಲ್ಲಾ ತಿರುವಣ್ಣಾಮಲೈಗೆ ಹೋಗಬೇಕು. ಅಲ್ಲಿಂದ ಬೆಂಗಳೂರಿಗೆ
ನಮ್ಮ ಯಾತ್ರೆ ನನಗಿಲ್ಲೇ ಸಮಾಪ್ತವಾಗುತ್ತಿದೆ.
ನಾನು ಸದ್ಯಕ್ಕೆ Chennai ವಾಪಸ್ಸು ಹೋಗ್ಬೇಕು ತುಂಬಾ ಥ್ಯಾಂಕ್ಸ್.
ಮುಂದಿನ ಪಯಣದ ಬಗ್ಗೆ ಈ ಬ್ಲಾಗ್ ನ್ನು
ಮುಂದುವರಿಸುವ ಜಿಮ್ಮೆದಾರಿ ಈ ನಾಲ್ಕು
ಯುಗಪುರುಷರಿಗೆ, ಮಹಾಪುರುಷರಿಗೆ
ಸೇರಿದ್ದು, ಮೊದಲೇ ಪ್ರಶ್ನೆ ಮಾಡಿದ್ದನಲ್ಲ
ಅದರ ಉತ್ತರ ಇಲ್ಲಿದೆ ಇವರೇ ಆ ನಾಲ್ವರು
ಮಂಜು, ಕೊಂಡಾ, ರಾಮ್ ಮತ್ತೆ ಅಶ್ವಥ್
ನಮ್ಮ Golden Together ನ ಪಯಣ, ಮಾರ್ಗ ಮಧ್ಯೆ ಕಳೆದ ಸುಂದರ ಕ್ಷಣಗಳು, ಮಹಾಬಲಿಪುರಂ ಮತ್ತು ಪುದುಚೆರಿಯಲ್ಲಿ ನೋಡಿದ ಪ್ರೇಕ್ಷಣಿಯ ಸ್ಥಳಗಳು ಹಾಗೂ night ಪಾರ್ಟಿಯ ಅನುಭಗಳನ್ನು ಯಥಾವತ್ತಾಗಿ ಈ blog ನಲ್ಲಿ ಸುಮಧುರವಾಗಿ ಕೆ ಸುರೇಶ್ ಅವರು ಚಿತ್ರಿಸಿರುತ್ತಾರೆ. ಬರೆಯುವ ಶೈಲಿ ಸುಲಲಿತವಾಗಿದೆ. ನನಗೆ ಬಹಳ ಇಷ್ಟವಾದ ಕಥನ. ಹೀಗೆ ಬರೆಯುತ್ತಿರಿ ಸುರೇಶ್.
ಪ್ರತ್ಯುತ್ತರಅಳಿಸಿWhat a delightful read! The blog beautifully captured the warmth, laughter, and timeless bond of the ಸುವರ್ಣ ೫೦ crew—so fresh and full of energy, easily rivaling any youngster crew! Truly inspiring! The captions for the pictures stole the show, making us feel part of every moment. Loved how the fun and rich historical insights were blended—so informative yet heartwarming. Eagerly waiting for more ಜೋಶ್ಫುಲ್ ಪ್ರವಾಸ ಕಥೆಗಳು from this wonderful bunch! 😄✨🦋
ಪ್ರತ್ಯುತ್ತರಅಳಿಸಿ