ರಿಕೋಶೇಯ್ ಅಧ್ಯಾಯ -4 𝗥𝗶𝗰𝗼𝗰𝗵𝗲𝘁

ಸನ್ನಿವೇಶ, ಕಥಾ ಪಾತ್ರಗಳು,ಘಟನೆಗಳು, ಎಲ್ಲವೂವೆ ಕಾಲ್ಪನಿಕ, ❤️ಹೊಂದಾಣಿಕೆ ಇದ್ರೆ ಅದು ಕೇವಲ ಆಕಸ್ಮಿಕ

ಒಂದು ಕಡೆ, ಕೋಟ ರಾಜಸ್ಥಾನ್.
ಇನ್ನೊಂದು ಕಡೆ ಕುಂಭರಾಜ್, ಮಧ್ಯ ಪ್ರದೇಶ್. 
ಇವೆರಡರ ನಡುವೆ ಹರಿದು ಹೋಗುವ 
ಹಾಗೂ ವಿಭಾಜಿಸುವ ನದಿ ಪಾರ್ವತಿ, 
ನೀರಿರುವ ಎಡದು ಭಾಗ ರಾಜಸ್ಥಾನ್ ಬಲದ ಭಾಗ ಮಧ್ಯ ಪ್ರದೇಶದ್ದು
ಪಕ್ಕದಲ್ಲೇ ಇರುವ ಗ್ರಾಮ ಧರ್ನಾವದ, 
ರಾಘೋಗಡ್ ತಹಸೀಲ್, 
ಗುಣಾ ಜಿಲ್ಲೆ, ಮಧ್ಯ ಪ್ರದೇಶ.  
ಈ ಊರಲ್ಲಿ ಅಲ್ಪ ಸ್ವಲ್ಪ ಉಳಿದಿರೋ 
ಪಾರ್ಧಿ ಸಮುದಾಯದ ವಸಾಹತು 
ಅಂತ ಹೇಳ್ಬಹುದೊ ಏನೋ. 
1871ರವರೆಗೂ  ಪಾರ್ಧಿ ಸಮುದಾಯದವರು ಯೋಧರು, ರಾಜಪೂತ ಸಮಾಜಕ್ಕೆ ಸೇರಿದವರಾಗಿದ್ದರು. ಅವರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ 1857 ರ ಸಿಪಾಯಿ 
ಕದನದಲ್ಲಿ  ಭಾಗವಹಿಸಿದ್ದರು.
ಪಾರ್ಧಿ ಸಮುದಾಯದ ಯೋದ್ಧರು 
ಬ್ರಿಟಿಷ್ರ ವಿರುದ್ಧ ಯಶಸ್ವೀ 
ಗೆರಿಲ್ಲಾ ದಾಳಿ ನಡೆಸಿದ್ದರು. 
ಒಮ್ಮೆಪಾರ್ವತಿ ನದಿ ಮತ್ತೆ
ಚಂಬಲ್ ನದಿಗಳು ಸಂಗಮಿಸುವ 
ತೀರದ ಕಣಿವೆ ಯೊಂದರಲ್ಲಿ ಕಾದಿದ್ದು 
ಹೊಂಚು ಹಾಕಿ  ಬ್ರಿಟಿಷರ ವಿರುದ್ಧ 
ನಡೆಸಿದ ambush ದಾಳಿಯಲ್ಲಿ ಹಲವಾರು
ಬ್ರಿಟಿಷರನ್ನು ಕೊಚ್ಚಿ ಹಾಕಿದರ ಪರಿಣಾಮ, 
ಬ್ರಿಟಿಷರು ಪಾರ್ಧಿ ಸಮುದಾಯದವರನ್ನು 
ಕ್ರಿಮಿನಲ್ ಟ್ರೈಬ್ಎಂದು 1871ರ 
ನೋಟಿಫಿಕೇಶನ್ ಜಾರಿ ಮಾಡಿ 
ಅವರ ವಿರುದ್ಧ ಸಕತ್ ಕಾರ್ಯವಾಹಿ 
ಶುರು ಮಾಡಿದರು. 
ಹೀಗಾಗಿ ಸಮಾಜದಿಂದಲೂ ತಿರಸ್ಕರಿಸಲ್ಪಟ್ಟ 
ಪಾರ್ಧಿ ಸಮಾಜದವರಾಗಿ ಎಲ್ಲೂ ನೆಲೆ ಗೊಳ್ಳದೆ ನಿರ್ಗತಿಕರಾಗಿದ್ದರು.
ಅವರು ಜೀವನ ಸಾಗಿಸಲು ಕಳ್ಳತನ, 
ದರೋಡೆ ಕೊಲೆ ಕೊಳ್ಳೆ ಯಂತ
ಕ್ರಿಮಿನಲ್ ಚಟುವಟಿಕೆ ಗಳನ್ನು 
ಮುಂದುವರಿಸಿದರು.
1952 ರಲ್ಲಿ ಭಾರತ ಸರ್ಕಾರ ಇವರನ್ನು 
ಶೆಡ್ಯೂಲ್ಡ್ ಟ್ರೈಬ್ ಎಂದು ಕೆಲವು ರಾಜ್ಯಗಳು 
ಶೆಡ್ಯೂಲ್ಡ್  ಕ್ಯಾಸ್ಟ್ ಎಂದು ಘೋಷಿಸಿ 
ಇವರ ಕ್ರಿಮಿನಲ್ ಸ್ಟೇಟಸ್ ನ್ನು 
ಸಮಾಪ್ತಿ ಗೊಳಿಸಿತ್ತು.
ಬ್ಯಾಂಕ್ ದರೋಡೆಯಲ್ಲಿ ಭಾಗವಹಿಸಿದ
ಕ್ಯಾಪ್ಟನ್ ದೇವಿಸಿಂಗ್, ಜಮುನಾ, ದಿಲೀಪ್
ಮತ್ತೆ ಮೂಲ್ ಸಿಂಗ್ ಇವರೆಲ್ಲರೂ
ಪಾರ್ಧಿಸಮುದಾಯದ ಪ್ರತಿಷ್ಠಿತರು
ಆದರೆ ಇವರೆಲ್ಲರೂ 
ಬ್ಯಾಂಕ್ ದರೋಡೆ, ಕೊಲೆ, ಕೊಳ್ಳೆ
ಮಾಡಿರುವ ಅಪರಾಧಿಗಳು.
ಹಳೆಯ ಕ್ರಿಮಿನಲ್ ರೆಕಾರ್ಡ್ಸ್ ನ 
ಫಿಂಗರ್ ಪ್ರಿಂಟ್ಸ್ ದರೋಡೆಯಾದ 
ಬ್ಯಾಂಕ್ ನ ತಿಜೋರಿಗಳ ಮೇಲೆ ದೊರಕಿದ
ಫಿಂಗರ್ ಪ್ರಿಂಟ್ಸ್ ಒಂದೇ ಆದ ಕಾರಣ
ವರ್ತೂರ್ ಬ್ಯಾಂಕ್ ದರೋಡೆಯನ್ನು 
ಇವರೇ ಮಾಡಿರಬಹುದು 
ಎನ್ನುವ ಸಂಶಯದ ಆಧಾರದ 
ಮೇಲೆ  ಕರ್ನಾಟಕದಿಂದ 
ವರ್ತೂರ್ ಪೊಲೀಸ್ ಸ್ಟೇಷನ್
ಟೀಮ್ ಒಂದು ಇನ್ಸ್ ಪೆಕ್ಟರ್ ಅಭಿಯ 
ನೇತೃತ್ವದಲ್ಲಿ ಘಟನೆ ಸಂಭವಿಸಿದ 
48 ಘಂಟೆಗೊಳಳಗೆ,  ಅಂದರೆ 
ಸಂಜೆ 5 ಘಂಟೆಗೆ 
ಭೋಪಾಲ್ ವಿಮಾನ ನಿಲ್ದಾಣ 
ಬಂದು ಇಳಿದರು. 
IPS ನ ಮುಖ್ಯ ಅಂಶ ಹಾಗೂ ಅಡ್ವಾಂಟೇಜ್ 
ಅಂದ್ರೆ ಅದು ಅಖಿಲ ಭಾರತೀಯ ಸೇವೆ ಅನ್ನೋದೊಂದು. 
ವೈಟ್ ಫೀಲ್ಡ್ DCP ಯವರು 
ಅಭಿಯ  ಆಪರೇಷನ್ ವರ್ತೂರ್ 
ಪ್ರಕರಣದ ಬಗ್ಗೆ
ಭೋಪಾಲ್ DCP ಯವರ ಜೊತೆ ಮಾತನಾಡಿದ್ದು
ಅಭಿಯ ಮಿತ್ರ ಹಾಗೂ ಬ್ಯಾಚ್ ಸಂಗಾತಿ 
ಅನಿಲ್ ಕುಮಾರ್ ಭೋಪಾಲ್ ಜಿಲ್ಲೆಯಲ್ಲಿ ಪ್ರಶಿಕ್ಷಣಾರ್ಥಿಯಾಗಿ ಇದ್ದದ್ದು 
ಅಭಿ ಅವರೊಡನೆ ಸಂಪರ್ಕ ಸಾಧಿಸಿ 
ಕೋರಿದ ಸಹಾಯಕ್ಕೆ 
ಸಂಪೂರ್ಣ ಬೆಂಬಲ ದೊರಕಿತು.
ಇನ್ಸ್ ಪೆಕ್ಟರ್ ಅಭಿ, ಸಬ್ಇನ್ಸ್ ಪೆಕ್ಟರ್ ವೀರಣ್ಣ
ಮತ್ತೆ ಇಬ್ಬರು ಯುವ ಪೊಲೀಸ್ ಕಾನ್ಸ್ಟೇಬಲ್ ಗಳು
ಒಂದು ಜೀಪಿನಲ್ಲಿ. 
ಗುಣಾ ಜಿಲ್ಲೆಯ SP ಯವರನ್ನು ಫೋನ್ ನಲ್ಲಿ 
ಸಂಪರ್ಕಿಸಿ ಕೋರಿದ 
ಸಶಸ್ತ್ರ ಪಡೆಯ ಟೀಮ್ ಒಂದು 
ಇನ್ಸ್ಪೆಕ್ಟರ್ ತೋಮರ್ ನೇತೃತ್ವದಲ್ಲಿ
ರಾತ್ರಿ ಎಂಟು ಘಂಟೆಗೆ ಜೀಪೋಂದರಲ್ಲಿ 
ಭೋಪಾಲ್ ರೈಲ್ವೆ ಸ್ಟೇಷನ್ ಬಂದು ಸೇರಿದರು.
ಅಭಿಯ ಟೀಮ್ ಮೊದಲೇ ಬಂದಿತ್ತು. 
ಎಲ್ಲರೂ ಸುಸಜ್ಜಿತರಾಗಿ 
ಕರ್ನಾಟಕ ಎಕ್ಸ್ ಪ್ರೆಸ್ ಗಾಗಿ ಕಾಯುತಿದ್ದರು.
ರಾತ್ರಿ 11 ಘಂಟೆಗೆ 
ಕರ್ನಾಟಕ ಎಕ್ಸ್ ಪ್ರೆಸ್ ದಡ್ ದಡ್ ಕ್ ಅಂತ 
ಪ್ಲಾಟ್ ಫಾರ್ಮ್ ನಂಬರ್ 
ಒಂದನ್ನು ಬಂದು ಸೇರಿತು. 
ಅಭಿ ಮುಂದಿನ ಗೇಟ್ ನಂಬರ್ ಒಂದರಲ್ಲಿ 
ಇನ್ಸ್ ಪೆಕ್ಟರ್ ತೋಮರ್ ಗೇಟ್ ನಂಬರ್ 
ಎರಡರ ಎದುರಿನಲ್ಲಿ ಕಾಯುತಿದ್ದರು.
ಅಭಿ ಹುಡುಕುತಿದ್ದ ಯಾರೂ ಗಾಡಿಯಿಂದ ಇಳಿದವರಲ್ಲಿ ಇರಲಿಲ್ಲಾ.
ಟ್ರೈನ್ ನ ಇನ್ನೊಂದು ಬಾಗಿಲಲ್ಲಿ 
ಇಳಿಯಬಹುದೂಂತ ಊಹಿಸಿ 
ಇಬ್ಬರು PC ಗಳು ಪ್ಲಾಟ್ ಫಾರ್ಮ 
ಎರಡರಲ್ಲಿ ಕಾಯುತಿದ್ದರು.
ಟ್ರೈನ್ ಗಾರ್ಡ್ನ ವಿಚಾರಿಸಿದಲ್ಲಿ ಭೋಪಾಲ್ 
ಔಟರ್ ನಲ್ಲಿ ಗಾಡಿ ಸ್ಲೋ ಆದಾಗ 
ನಾಲಕ್ಕಯಿದು ಆದ್ಮಿ ಇಳಿದರೂಂದ
ಕರ್ನಾಟಕ ಎಕ್ಸ್ ಪ್ರೆಸ್ ಹೊರಟಿತು 
ಕೈಗೆ ಸಫಲತೆ ದೊರಕಲಿಲ್ಲಾ.
GRP ರೈಲ್ವೆ ಸುರಕ್ಷಾ ಪಡೆಗೆ 
ಠಾಣೆಯಿಂದ ವೈರ್ಲೆಸ್ ಮೆಸೇಜ್
ಕಳುಹಿಸಿ ಹುಡುಕಲು
ನಾಲ್ಕು ಜನ ಯಾವದೋ 
ಜೀಪ್ ಹತ್ತಿ ಹೋದರೂಂತ 
ಟ್ಯಾಕ್ಸಿ ಸ್ಟಾಂಡ್ ನಲ್ಲಿದ್ದವರು ಹೇಳಿದರು. 
ಕುಂಭರಾಜ್ ಗೆ ಹೋಗಲು ವಿಚಾರಿಸುತಿದ್ದರು
ಕುಂಭರಾಜ್ ಆಗ್ರಾ ಮುಂಬೈ ರೋಡ್ ನ 
ಜಂಜಾಲಿ ಗ್ರಾಮದಿಂದ 
ಬಲಕ್ಕೆ 👈🏽 ಹೋದರೆ ಸಿಗುವ ಗ್ರಾಮ. 
ಪೊಲೀಸ್ ಗಾಡಿಗಳು ಒಂದರ ಹಿಂದೆ ಒಂದು  ಕ್ಯಾಪ್ಟನ್ ದೇವಿಸಿಂಗ್ ಮತ್ತು ಅವರ ಜೊತೆಗಾರರ ಕಣ್ಣ ಮುಂದೆ ವಿರ್ ವಿರ್ ರ್ಂತ ಹೊರಟವು. ಕ್ಯಾಪ್ಟನ್ ದೇವಿ ಸಿಂಗ್ ಗ್ಯಾಂಗ್  
ಡಾಬಾದಲ್ಲಿ ಕುಳಿತು ರೋಟಿ, ದಾಲ್ ಮತ್ತೆ ಆಲುಬೆಂಗನ್ ಸಬ್ಜಿ ಬಲು ಆರಾಮಾಗಿ ಊಟ
ಮಾಡುತಿದ್ದರು.ನಂತರ ಪೊಲೀಸರು ಹೋದ 
ಅಪ್ಪೋಸಿಟ್ ದಿಕ್ಕಲ್ಲಿ ಪಯಣಿಸಿ
ಮಕ್ಸೂಧನ್ ಘಡ್ ನಲ್ಲಿ ನೆಲಸಿದ್ಧ 
ಬೀಸ್ ಭುಜಿ ದೇವಿ ಮಂದಿರ್ ಬಳಿ
ಬಂದಿಳಿದು ಸ್ನಾನ ಮಾಡಿ 
ದೇವಿಯ ದರ್ಶನ ಮಾಡಿ
ಕಾಣಿಕೆ ಅರ್ಪಿಸಿ ಹೊರಟರು . 
ಪಾರ್ಧಿ ಸಮುದಾಯದವರು ಬೇಟೆಗಾರರು  
ಬೇಟೆಗೆ ಹೋಗುವ ಮುಂಚೆ, 
ದೇವಿಯ ಆಶೀರ್ವಾದ ಪಡಕ್ಕೊಂಡು 
ಮತ್ತೆ ವಾಪಸ್ಸು ಬೇಟೆಯ ಜೊತೆ ಬಂದು 
ಅವರವರ ಶಕ್ತಿಗೆ ಅನುಗುಣವಾಗಿ ಕಾಣಿಕೆ 
ದೇವಿಗೆ ಸಲ್ಲಿಸೋದು ರೂಢಿಯಾಗಿತ್ತು.
ನ್ಯಾಷನಲ್ ಹೈವೇ -3  ಆಗ್ರಾ ಮುಂಬೈ 
ರಸ್ತೆಯಲ್ಲಿ ರುಟಿಯಾಯಿ ಗ್ರಾಮದ ಬಲಕ್ಕೆ 
ತಿರುಗಿದರೆ ಬರುವ ಊರು ಧರ್ನಾವದ. 
ಇವರ ಜೀಪ್ ಧರ್ನಾವದ ಕಡೆ ತಿರುಗಿತು.
ಇವರ ಪ್ಲಾನ್ ಪೊಲೀಸರಿಗೆ ಗೊತ್ತೇ ಆಗಲಿಲ್ಲಾ.
50 ಕಿಲೋಮೀಟರ್ ದೂರದಲ್ಲಿ
ಅಭಿ ಯವರ ಟೀಮ್ ಕುಂಭರಾಜ್ 
ತಲುಪಿದರೆ ಅಲ್ಲಿ ಯಾರೂ ಸಿಗಲಿಲ್ಲಾ. 
ರಾತ್ರಿ ಹತ್ತಿರದಲ್ಲೇ ಇದ್ದ 
ಚಾಚೋಡ ಸರ್ಕಾರಿ ಗೆಸ್ಟ್ ಹೌಸ್ ನಲ್ಲಿ 
ಉಳಿದು ಸ್ವಲ್ಪ ರೆಸ್ಟ್ ತೆಗೆದುಕೊಂಡರು.
ಬೆಳಗ್ಗೆ ಕ್ಯಾಪ್ಟನ್ ದೇವಿಸಿಂಗ್ ಮತ್ತೆ ಅವರ ಜೊತೆಗಾರರು ಧರ್ನಾವದ  ಸೇಠ್ ರ 
ಬಳಿ ಚಿನ್ನ ಬೆಳ್ಳಿ ಒಡವೆ ಗಳನ್ನು ಒಪ್ಪಿಸಿ 
ಅಲ್ಲಿಂದ ಅವರವರ ಮನೆಗಳಿಗೆ ಹೋಗಿ 
ನಿಶ್ಚಿಂತೆ ಯಾಗಿ ನಿದ್ದೆ ಹೋದರು.
ಇಲ್ಲಿ ಹೊಸ ಜಾಗ ನಿದ್ದೆ ಬರಲೇ ಇಲ್ಲಾ
ಕೀ ಕೀ ಅಂತ ಮೆಸೇಜ್ ಶಬ್ದ
ಒಳ್ಳೆಯ ಮೆಸೇಜ್ ಒಂದು ಬಂದಿತ್ತು
ಫೋರೆನ್ಸಿಕ್ ಸೈನ್ಸ್ ಡಿಪಾರ್ಟಮೆಂಟ್ನ 
ಸುಧೀರ್ ಮೆಸೇಜ್ ಮಾಡಿದ್ದರು. 
ಮೃತನಾದ ಎಡವಯ್ಯನ 
ಮಂಡೆಯೊಳಗಿಂದ ಸಿಕ್ಕ ಬುಲೆಟ್ಟು 
ಪಂಚಮ್ ನ ಲಾಂಗ್ ಗನ್ನಿನಿಂದ 
ಫೈರ್ ಆದ ಬುಲೆಟ್ಟು ಒಂದೇ ಎಂದು.
ಬ್ಯಾಲಿಸ್ಟಿಕ್ ಎಕ್ಸ್ ಪರ್ಟ್ ನ ಅಭಿಮತ.
ಅಭಿ ಮೆಸೇಜ್ ಓದಿ ಮತ್ತೊಮ್ಮೆ ಲೈಟಾಗಿ
ಶಿಳ್ಳೆ ಹೊಡಿದ....



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.