ರಿಕೋಶೇಯ್ ಅಧ್ಯಾಯ - 3 𝗥𝗶𝗰𝗼𝗰𝗵𝗲𝘁

ಸನ್ನಿವೇಶ, ಕಥಾ ಪಾತ್ರಗಳು,ಘಟನೆಗಳು, ಎಲ್ಲವೂವೆ ಕಾಲ್ಪನಿಕ, ❤️ಹೊಂದಾಣಿಕೆ ಇದ್ರೆ ಅದು ಕೇವಲ ಆಕಸ್ಮಿಕ

Lego ಗೇಮ್ಸ್ ನ puzzles ತುಂಡುಗಳು 
ಟೇಬಲ್ ಮೇಲೆ ಇತ್ತು. 
ಅಭಿ ಅವುಗಳನ್ನ ಒಂದೊಂದಾಗಿ  
ಜೋಡಿಸ್ತಾ, ಬೀಳಿಸ್ತಾ ಇದ್ದ. 
ರಾತ್ರಿ ಮನೆಗೆ ಹೋಗದೆ 
ಸ್ಟೇಷನ್ ನಲ್ಲೇ ಕುಳಿತು 
Zomato ದಲ್ಲಿ ಪ್ಲೇನ್ ಚೀಜ್ ಪಿಜ್ಜಾ
ಆರ್ಡರ್ ಮಾಡಿದ.
ಎಡವಯ್ಯ್ ನ ಪ್ರಕರಣಕ್ಕೂ 
ಬ್ಯಾಂಕ್ ದರೋಡೆಗೂ
ಏನೋ ಸಂಬಂಧ ಇದೆ ಅಂತ ಅನಿಸಿತ್ತು 
ಆದ್ರೆ ಪುರಾವೆ ಬೇಕಲ್ಲಾ...
 ಆ 0.22mm ಬುಲೆಟ್..
ಎಡವಯ್ಯನ ಮಂಡೆಯೊಳಗೆ.. ಹ್ಯಾಗೇ
ಅಷ್ಟರಲ್ಲಿ  ಫೋರೆನ್ಸಿಕ್ ಸೈನ್ಸ್ ನ ಪೊಲೀಸ್
ವಿಭಾಗದ DSP ಸುಧೀರ್ ಮಾತನಾಡಿದ
ಸಾರ್ ಬ್ಯಾಂಕ್ ದರೋಡೆ ಯಲ್ಲಿ 
ಸಿಕ್ಕ ಫಿಂಗರ್ ಪ್ರಿಂಟ್ಸ್ ಒಬ್ಬನದು, 
ಹಳೆಯ ದರೋಡೆ ಪ್ರಕರಣದಲ್ಲಿ ಸಿಕ್ಕ 
ಆರೋಪಿಯ ಫಿಂಗರ್ ಪ್ರಿಂಟ್ಸ್ 
ಮ್ಯಾಚ್ ಆಗ್ತಾ ಇದೆ.  
ಆತನ ಫೋಟೋ scan ಮಾಡಿ 
ನಿಮಗೆ ವಾಟ್ಸಪ್ಪ್ ನಲ್ಲಿ ಕಳುಹಿಸುತ್ತಿದ್ದೇನೆ.
ಆತನ ಹೆಸರು ಕ್ಯಾಪ್ಟನ್ ದೇವಿ ಸಿಂಗ್.
That's ರಿಯಲ್ ಫಾಸ್ಟ್ 
ಎಂದು ಅಭಿ ಸಣ್ಣದಾಗಿ ಶಿಳ್ಳೆ ಹೊಡೆದ.
ಕ್ಯಾಪ್ಟನ್ ದೇವಿಸಿಂಗ್ ಅಪರಾಧಿ ಬಲು ಸ್ಮಾರ್ಟ್ 
ಸೇಲಂ ನಿಂದ  ಜೋಲಾರ್ ಪೇಟೆಯ ನಡುವೆ ಓಡುವ
ಟ್ರೈನ್ ನಲ್ಲಿ ರೂಫ್ ಗೆ ಕನ್ನ ಹಾಕಿ ಒಳಗಿಳಿದು
ಸಂಬಳದ ಟ್ರೇಜರಿ ಚೆಸ್ಟ್ ಹಣವನ್ನು ಕದ್ದು 
ಹಣವನ್ನು ಉಪಯೋಗಿಸುವಾಗ 
ಸಿಕ್ಕಿ ಕೊಂಡು ಜೈಲಲ್ಲಿದ್ದ. ಪರೋಲ್ ನಲ್ಲಿ 
ಹೊರ ಬಂದವ ಬ್ಯಾಂಕ್ ದರೋಡೆಗೆ
ಕೈ ಹಾಕಿರ ಬಹುದು.ಅವನನ್ನು 
ಹೇಗಾದ್ರು ಹಿಡಿಯಲೇ ಬೇಕೂಂತ 
ಅಭಿ ಮನಸಲ್ಲಿ ನಿಶ್ಚಯಿಸಿದ್ದ.
ಎಲ್ಲಾ ನಾಕೆ ಗಳಿಗೂ, ಬಸ್ ಸ್ಟಾಂಡ್ 
ರೈಲ್ವೆ ಸ್ಟೇಷನ್, ಏರ್ ಪೋರ್ಟ್ ಗಳಿಗೆಲ್ಲಾ
ಫೋಟೋ ಕಳಿಸಲು  ನಿರ್ದೇಶಿಸಿ, 
ಸಂದೇಹಾಸ್ಪದ ವ್ಯಕ್ತಿಗಳನ್ನು 
ವಾಚ್ ಮಾಡಲು ನಿರ್ದೇಶಸಿದ.
S I ವೀರಣ್ಣ ಬಂದು ಬ್ಯಾಂಕಿನ ದರೋಡೆ 
ವಿವರಣೆ ನೀಡಿದ. 
ಸುಮಾರು 1.2 ಕೋಟಿ ರೂಪಾಯಿ ಕ್ಯಾಶ್
62 ಲಕ್ಷದಷ್ಟು ಚಿನ್ನ ಬೆಳ್ಳಿ  ಕೊಳ್ಳೆ 
ಹೊಡೆದು ಕೊಂಡು ಹೋಗಿದ್ದಾರೆ.
ಆ ಮೂವರಲ್ಲಿ ಒಬ್ಬ ಬ್ಯಾಂಕ್ ನ 
ಇನ್ನೊಬ್ಬ ಸುರಕ್ಷಾ ಗಾರ್ಡ್ ಜಮುನಾ 
ಕಾಣೆಯಾಗಿದ್ದಾನೆ. 
ಬೆಳಗ್ಗೆ ಡ್ಯೂಟಿಗೆ ಬರಬೇಕಾದವನು 
ಬರಲೇ ಇಲ್ಲಾ.
ಸಾರ್ ಬ್ಯಾಂಕ್ ಮ್ಯಾನೇಜರ್ ಬಂದಿದ್ದಾರೆ.
ಸರಿ ಕರೆಯಿರಿ,
ಒಂದು ನಿಮಿಷ ಇರಿ ಎಂದು ಹೇಳಿ,
DCP ಸಾಹೇಬ್ರಿಗೆ  ಫೋನ್ ಹಚ್ಚಿದ. 
ಪ್ರಕರಣದ ಸಂಪೂರ್ಣ ಮಾಹಿತಿಯನ್ನು 
ನೀಡಿ ಇಂಪ್ರೆಸ್ ಮಾಡಿದ. 
ಗುಡ್, ಆದಷ್ಟು ಬೇಗ ಅಪರಾಧಿಗಳನ್ನ
ಹಿಡಿದು ಕೇಸ್ ಕ್ಲೋಸ್ ಮಾಡಿ 
ಎಂದು ಹೇಳಿದ್ರು.
ಬಳಲಿ ಸುಸ್ತಾಗಿ ಬಂದ ಮ್ಯಾನೇಜರ್
ರವಿಯವರನ್ನು ಕುಳಿತುಕೊಳ್ಳಲು ಹೇಳಿ,
PC ಗೆ ಕಾಫಿ ತರಲು ಸಂಜ್ಞೆ ಮಾಡಿದ.
ಹೇಳಿ ಏನಾಯ್ತುಂತ  ಅಭಿ ಕೇಳಿದ್ರು
ಸಾರ್ ಇನ್ನೊಬ್ಬ ಸುರಕ್ಷಾ ಗಾರ್ಡ್ 
ಜಮುನಾ ಕಾಣೆ ಯಾಗಿದ್ದಾನೆ. 
ಅವನ ಜೊತೆ ಲಾಂಗ್ ಗನ್ ಸಹ ಮಿಸ್ಸಿಂಗ್.
ಪಂಚಮ್ ಬಳಿಯಿದ್ದ ಲಾಂಗ್ ಗನ್, 
ಘಟನೆಯ ಬಳಿಕ ಕಾಣೆಯಾಗಿದೆ. 
ನೈಟ್ ಡ್ಯೂಟಿ ಮಾಡಿದ ಪಂಚಮ್ ಕೊಲೆಯಾದ.
ಡೇ ಡ್ಯೂಟಿಗೆ ಬರಬೇಕಾದ ಜಮುನಾ, 
ಬರಲೇ ಇಲ್ಲಾ ಸಾರ್. 
ಅವನೂ ಈ ದರೋಡೆಯಲ್ಲಿ 
ಜೊತೆ ಸೇರಿದನೇನೋ, 
ಅವರ ಬೆಂಗಳೂರು ಬಾಡಿಗೆ ಮನೆಯಲ್ಲಿ 
ಯಾರೂ ಇಲ್ಲಾ.
ಅವನ ಆಧಾರ್ ಕಾರ್ಡ್ 
ಆಫೀಸ್ ಫೈಲ್ ನಲ್ಲಿತ್ತು
ತೆಗೊಳ್ಳಿ ಸಾರ್ ಅಂತ ಕೊಟ್ರು.
ಅಭಿ ಗೆ ತಕ್ಷಣ ಫ್ಲಾಶ್ ಆಯ್ತು.
ನಾಲ್ಕು ಜನರ ಟೀಮ್ ನಲ್ಲಿ ಇಬ್ಬರನ್ನು ಗುರುತಿಸಲಾಯ್ತು. ಇನ್ನೂ ಇಬ್ಬರು,
ಡ್ರೈವರ್ ಒಬ್ಬ
ಗ್ಯಾಸ್ ಕಟರ್, ಇನ್ನೊಬ್ಬ.
ಆ ಸೂಚಿ ಶಾರ್ಟ್ ಲಿಸ್ಟ್ ಮಾಡಬೇಕು. 
ಸ್ಟೇಷನ್ನಿಂದ  ಸೀದಾ ಕಂಟ್ರೋಲ್ ರೂಮ್ ಗೆ ಹೊರಟ.. 
           ಪೊಲೀಸ್ ಕಂಟ್ರೋಲ್ ರೂಮ್ 
ಟ್ರಾಫಿಕ್ ಕಂಟ್ರೋಲ್ ರೂಮ್ಗೆ 
ಹೋಗಿ ತಾನೇ ಪರಿಚಯಿಸಿಕೊಂಡು
ವೈಟ್ ಬೊಲೆರೋ ಗಾಡಿ ಚೆಕ್ ಮಾಡಿ,
ಆಧಾರ್ ಕಾರ್ಡ್ ಫೋಟೋ ನ ದೊಡ್ಡದು 
ಮಾಡಿ ಎಲ್ಲಾ ನಾಕೆ, ಬಸ್ ಸ್ಟಾಂಡ್, 
ರೈಲ್ವೆ ಸ್ಟೇಷನ್ ಗಳಿಗೆ ಫ್ಲಾಶ್ ಮಾಡಿದ್ದಾಯ್ತು.  
ಯಾವುದಾದರೂ ಬೊಲೆರೋ ಜೀಪ್  
ಮಿಸ್ಸಿಂಗ್, ಕದ್ದಿರೋ ಕಂಪ್ಲೇಂಟ್ 
ಇದ್ದರೆ ಸೂಚಿಸಿ. 
ಯಾವ ಫೋನ್ನಿಂದ  ಶನಿವಾರ 
ರಾತ್ರಿ11ರಿಂದ ವರ್ತೂರ್ ಹತ್ತಿರ 
ಟವರ್ ಫ್ರೀಕ್ವೆನ್ಸಿ, ಆಕ್ಯೂಪಂನ್ಸಿ, ಡೇಟಾ ಬೇಕು
ಎಲ್ಲಿಗೆ, ಯಾರಿಗೆ, ಯಾರು ಅನ್ನುವವರೆಗೂ  
ಅದಕ್ಕೂ ತಾಕೀತು ಮಾಡಿದ್ದಾಯ್ತು.
ಲಾಂಗ್ ಗನ್ ಹೊಂದಿರುವವರ ಪಟ್ಟಿ 
DCP ಆಫೀಸ್ ನಲ್ಲಿ ಇರಬೇಕು.
ಅಂದುಕೊಂಡು ಫೋನ್ ಮಾಡಿದ್ರೆ 
ಯಾರೂ ಫೋನ್ ಎತ್ತಲಿಲ್ಲ.
time ನೋಡಿದ ರಾತ್ರಿ 
11 ಘಂಟೆಯಾಗಿತ್ತು. 
ಸರಿ ಇವತ್ತಿಗೆ ಇಷ್ಟು ಸಾಕು ಅಂತ
ಮನೆಗೆ ಹೊರಟ.
ರಸ್ತೆಯಲ್ಲಿ  ಸ್ಟ್ರೀಟ್ ಫುಡ್ 
ಮಾರುತ್ತಿದ್ದವನ ಹತ್ತಿರ ಜೀಪ್ ನಿಲ್ಲಿಸಿ 
ಬಿಸಿ ಬಿಸಿ ಸೆಟ್ ದೋಸೆ  
ಶೇಂಗಾ ಚಟ್ನಿ ಗುಳಂ ಗುಳಂ ಅಂತ ತಿಂದ.
ಜೊತೆಗೆ ಡ್ರೈವರ್ ಪ್ರವೀಣ್ ಗೆ ಹೇಳ್ದ. 
ಬಾರೋ ಲೈಟಾಗಿ ತಿನ್ನುಂತ 
ಹೇಳಿ ಎಲ್ಲಕ್ಕೂ ಫೋನ್ ಪೇ ಮಾಡಿ 
ಹೊರಟಾಗ ರಾತ್ರಿ 12 ಘಂಟೆ.
ಜೀಪ್ ಹತ್ತಿದಾಗ ವೈರ್ ಲೆಸ್ ಬಡ್ಕೊಂತು.
ಸರ್ ಕಂಟ್ರೋಲ್ ರೂಮ್ ನಿಂದ 
ಶಂಕರ್ ಮಾತಾಡ್ತಾ ಇದ್ದೀನಿ ಸರ್.  
ವೈಟ್ ಬೊಲೆರೋ ಗಾಡಿಯ 
ಲೊಕೇಶನ್ ಸಿಕ್ಕಿದೆ. 
ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ 
ಪಾರ್ಕಿಂಗ್ ನಲ್ಲಿದೆ. 
ಫೋರೆನ್ಸಿಕ್ ಟೀಮ್,ವರ್ತೂರ್ PS 
ಮತ್ತೆ ಉಪ್ಪಾರಪೇಟೆ PS ನಿಂದ 
ಹೊರಟಿದ್ದಾರೆ ಓವರ್ ಅಂತ  
ಅದಕ್ಕೆ ಅಭಿ ರೋಜರ್ ಅಂತ 
ಹೇಳಿ ವೈರ್ ಲೆಸ್  ಕ್ಲೋಸ್ ಮಾಡಿದ.. 
ಪ್ರವೀಣ್ ಗಾಡಿ ಸಿಟಿ ಸ್ಟೇಷನ್ಗೆ ಓಡಿಸಿ,
ಅಂತ ಹೇಳಿ ಕಾತುರದಿಂದ ಕುಳಿತಿದ್ದ ಅಭಿ.
ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್  ಬಂತು.
ಅಲ್ಲಿ ಬೊಲೆರೋ ಸುತ್ತಿ ಪೊಲೀಸ್ ನವರು.
SI ವೀರಣ್ಣ ಬಂದು ವಿವರಿಸಿದರು 
ಗಾಡಿಯಲ್ಲಿ ಒಂದು ಲಾಂಗ್ ಗನ್ ಸಿಕ್ಕಿದೆ, 
ಫಿಂಗರ್ ಪ್ರಿಂಟ್ಸ್ ಗಾಗಿ ಜಪ್ತಿ ಮಾಡಿದ್ದೀವಿ. 
ಬೇರೇನೂ ಸಿಗಲಿಲ್ಲಾ. 
ಅಪರಾಧಿಗಳು ಟ್ರೈನ್ ಹತ್ತಿ ಹೋಗಿರಬೇಕು. 
ಜಮುನಾ ಅಡ್ರೆಸ್  ಮಧ್ಯಪ್ರದೇಶದ  
ಗುಣಾ ಜಿಲ್ಲೆಯ ಕುಂಭರಾಜ್ ಅನ್ನುವ ಊರು. 
ಅಲ್ಲಿಗೇ ಹೋಗಿರಬೇಕು.ಅಲ್ಲಿಂದ ಪಕ್ಕದಲ್ಲಿ ದೇವಿಸಿಂಗ್  ಚಾಚೋಡ ಅನ್ನೋ ಊರು. 
ಹಾಗಿದ್ರೆ ಭೋಪಾಲ್ ಹೋಗುವ 
ಟ್ರೈನ್ ಹತ್ತಿರಬೇಕು. 
ರೈಲ್ವೆ SP ಯ ಸಂಪರ್ಕಿಸಿ 
CCTV ಫೂಟೇಜ್ ವೀಕ್ಷಿಸಿ 
ಯಾವ ಟ್ರೈನ್ ಹತ್ತಿದರೂಂತ  
ಕಂಡು ಹಿಡಿಯೋದ್ರೊಳಗೆ 
ಬೆಳಗ್ಗೆ 4 ಘಂಟೆ ಯಾಯ್ತು. 
ರಾತ್ರಿ 8.00pm ಗೆ
ಕರ್ನಾಟಕ  ಎಕ್ಸ್ ಪ್ರೆಸ್ ಹತ್ತಿ ಹೋಗಿದ್ದಾರೆ 
ಅಂತ ಕನ್ಫರ್ಮ್ ಆದ ಮೇಲೆ  
ಒಂದು ಅಡ್ವಾನ್ಸ್ ಟೀಮ್ 
ಭೋಪಾಲ್ ಗೆ ವಾಯು ಯಾನ ಮಾಡಿ 
ಲೋಕಲ್ ಪೊಲೀಸರ ಸಹಾಯದಿಂದ
ಅಪರಾಧಿಗಳು ಭೋಪಾಲ್
ರೈಲ್ವೆ ಸ್ಟೇಷನ್ ರಾತ್ರಿ 11.00pm ಕ್ಕೆ 
ಇಳಿಯುವಾಗ ಸುಸಜ್ಜಿತರಾಗಿ 
ಸೆರೆ ಹಿಡಿಯುವ
ನಂತರ ಬೆಂಗಳೂರು ವಾಪಸ್ಸು 
ತರುವ ವಿಚಾರ. 
ಮನೆಗೆ ವಾಪಸ್ಸು ಬಂದಾಗ
ಬೆಳಗ್ಗೆ 6 ಘಂಟೆ ಅಮ್ಮ ಬಾಗಿಲಲ್ಲೇ ಸಿಕ್ಕಳು
ಚಿಕ್ಕ ಮಕ್ಕಳು ತರಹ 
ಅಭಿ ಹೇಳೋ ಒಂದೊಂದು
ಮಾತನ್ನು ಅನುಭವಿಸಿ ಕೇಳ್ತಾ 
ಆಮೇಲೆ ಆಮೇಲೆಂತ...
ಆಮೇಲೆ ತಲೆ ಮೇಲೆ ಹೂ ಮಾಲೇ ಅಂತ ಹೇಳಿ
ಸ್ನಾನ ಮಾಡಿ ಫ್ರೆಶ್ ಅಪ್ ಆಗಲು ಹೋದ
 ಅಭಿ.
 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.