ರಿಕೋಶೇಯ್ ಅಧ್ಯಾಯ -5 𝗥𝗶𝗰𝗼𝗰𝗵𝗲𝘁

ಸನ್ನಿವೇಶ, ಕಥಾ ಪಾತ್ರಗಳು,ಘಟನೆಗಳು, ಎಲ್ಲವೂವೆ ಕಾಲ್ಪನಿಕ, ❤️ಹೊಂದಾಣಿಕೆ ಇದ್ರೆ ಅದು ಕೇವಲ ಆಕಸ್ಮಿಕ

ಧರ್ನಾವದ ಗ್ರಾಮದಲ್ಲಿ ಒಂದು ಚಿಕ್ಕ 
ಪೊಲೀಸ್ ಔಟ್ ಪೋಸ್ಟ್ ಇತ್ತು. 
ಅಲ್ಲಿ ತೈನಾತಾಗಿದ್ದ PC 
ವೈರ್ ಲೆಸ್ ಮೆಸೇಜ್ ಒಂದನ್ನ
ಗುಣಾ ಜಿಲ್ಲೆ ಯ ಕಂಟ್ರೋಲ್ ರೂಮ್ಗೆ ಕಳಿಸಿದ. 
ಹೊಸ ಪಾರ್ಧಿಗಳ ಓಡಾಟ 
ಊರಲ್ಲಿ ಕಂಡು ಬಂದಿದೆಯೆಂದು 
ಅವರು ಸೇಠ್ ಮನೆಗೆ ಹೋಗಿ 
ಬಂದದ್ದನ್ನು ತಪ್ಪದೆ ಉಲ್ಲೇಖಿಸಿದ್ದ.
ಮೆಸೇಜ್ ಅಭಿಯನ್ನು ತಲುಪಲು 
ಸೋಮವಾರ ಬೆಳಗ್ಗೆ 11ಘಂಟೆಯಾಗಿತ್ತು. 
ಸಂಯಮದಿಂದ ಇನ್ಸ್ ಪೆಕ್ಟರ್ ಅಭಿ 
ಮತ್ತೆ ಇನ್ಸ್ ಪೆಕ್ಟರ್ ತೋಮರ್ 
ಸ್ಕೆಚ್ ಹಾಕಿ ಅಧಿಕ ಫೋರ್ಸ್ 
ಬೇಕಾಗ ಬಹುದು ಎಂದು 
ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ಕಳಿಸಿ 
ಮಧ್ಯಾಹ್ನ 12 ಘಂಟೆಗೆ 
ಎಲ್ಲರೂ ಧರ್ನಾವದಗೆ ಹೊರಟರು. 
3000 ಜನಸಂಖ್ಯೆ ಉಳ್ಳ ಊರು 
ಪಾರ್ಧಿಗಳು ಸುಮಾರು 400 -500 
ಜನ ಸಂಖ್ಯೆ ಇರಬಹುದು. 
ಅನ್ಯರಲ್ಲಿ  ಒಂದೇ ಸಮಾಜದವರ 
ಜನ ಸಂಖ್ಯೆ ಸ್ವಲ್ಪ ಹೆಚ್ಚು.
ಇತ್ತ ಗುಣಾ ಜಿಲ್ಲೆ ಯ ರೇಪಿಡ್ ಫೋರ್ಸ್ 
ಎರಡು ಪೊಲೀಸ್ ಬಸ್ಸು ಗಳು ತುಂಬಿ 
ಗುಣಾ ದಿಂದ ಹೊರಟು 
ರುಟಿಯಾಯಿ ಗ್ರಾಮದಲ್ಲಿ ನಿಂತಿದ್ದವು.
ಧರ್ನಾವದ ಗ್ರಾಮದಿಂದ 
ನಾಲ್ಕು ದಿಕ್ಕುಗಳಿಗೆ ಪೊಲೀಸರು ಕವರ್ ಮಾಡಿದ್ದಾಯ್ತು.
ಪಾರ್ಧಿಗಳ ಮನೆಯತ್ತ ಹೋದೊಡನೆ 
ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ 
ಸಮ್ಮುಖದಲ್ಲಿ ಲೌಡ್ ಸ್ಪೀಕರ್ ನಲ್ಲಿ 
ಅನೌನ್ಸಮೆಂಟ್ ಮಾಡಿದರು. 
ಅಪರಾಧಿಗಳಾದ ಕ್ಯಾಪ್ಟನ್ ದೇವಿಸಿಂಗ್, 
ಜಮುನಾ, ದಿಲೀಪ್ ಮತ್ತೆ ಮೂಲ್ ಸಿಂಗ್ 
ಇವರೆಲ್ಲರ ವಿರುದ್ದ ಕ್ರಿಮಿನಲ್ ಕೇಸ್ 
ಇರುವದರಿಂದ ಅರೆಸ್ಟ್ ಮಾಡಲು 
ಬಂದಿದ್ದೀವಿ, ಅವರನ್ನ ಒಪ್ಪಿಸಿ. 
ಇಷ್ಟರಲ್ಲಿ ಜಮುನಾ ಬಂದ, 
ಮೂಲ್ ಸಿಂಗ್ ಮತ್ತೆ ದಿಲೀಪ್ 
ಏನೊಂದು ತೊಂದರೆ ಕೊಡದೆ 
ಹೊರಬಂದು ಶರಣಾದರು.
ಕ್ಯಾಪ್ಟನ್ ದೇವಿಸಿಂಗ್ ಶರಣಾಗಲಿಲ್ಲ. 
ಪೊಲೀಸರು ನುಗ್ಗಿ ಆತನನ್ನು ಹೊರ ತಂದರು. 
ಅವರ ಮನೆಯ ಹೆಣ್ಣುಮಕ್ಕಳು 
ಘೇರಾವ್ ಮಾಡಿ 
ಅವರನ್ನು ಹೊರಬಿಡಲಿಲ್ಲ.
ಹೆಣ್ಣು ಕಾನ್ಸ್ಟೇಬಲ್ ಗಳು ಅವರನೆಲ್ಲ
ದಬಾಯಿಸಿ ಕಳಿಸಿದರು. 
ಹಣವಿದ್ದ ಕಪ್ಪು ಚೀಲಗಳನ್ನು 
ಹೊತ್ತು ತಂದರು.
ಹೆಚ್ಚು ಕಮ್ಮಿ ಎಲ್ಲಾ ಹಣವೂ ಸಿಕ್ಕಿತು.
ಎಣಿಸಿ ನೋಡಬೇಕಷ್ಟೆ.
ಆದ್ರೆ ಚಿನ್ನ ಬೆಳ್ಳಿ ಸಿಗಲಿಲ್ಲಾ.
ಎಷ್ಟು ಕೇಳಿದರೂ ಎಲ್ಲಿದೇಂತ  ಹೇಳಲಿಲ್ಲಾ. 
ಬೆಳಗ್ಗೆ ಮೆಸೇಜ್ನಲ್ಲಿ ಸೇಠ್ ಮನೆಗೆ ಹೋಗಿ 
ಬಂದದನ್ನು ಜ್ಞಾಪಿಸಿದರು. 
ಹಾಗಾದ್ರೆ ಊರಲ್ಲೇ ದೊಡ್ಡ ಮನೆ. 
ಕೋಟೆ ತರಹ ದೊಡ್ಡ ದೊಡ್ಡ ಬಾಗಿಲು. 
ಅದುವೇ ಸೇಠ್ ನ ಮನೆ.
ಇನ್ಸ್ ಪೆಕ್ಟರ್ಗಳಾದ  ಅಭಿ ಮತ್ತೆ ತೋಮರ್ 
ಇಬ್ಬರೂ ಮನೆ ಒಳಗೆ ಹೋದರು.
ಮನೆಯ ಹಿರಿಯ ಸೇಠ್  90 ತೊಂಬತ್ತು ವಯಸ್ಸಾಗಿರಬೇಕು. 
ಹಿರಿಯ ಅಜ್ಜಾ
ಬನ್ನಿ ಬನ್ನಿ ಎಂದು ಹೇಳಿ ಸ್ವಾಗತಿಸಿ, 
ಕೂರಿಸಿ ಕಾಫಿ ಟೀ ಏನಾದ್ರೂ ಕುಡೀತೀರಾ?
ಇನ್ಸ್ ಪೆಕ್ಟರ್ ತೋಮರ್ ಹೇಳಿದ್ರು, 
ಅದಕ್ಕಾಗಿ ಬಂದವರಲ್ಲ,ಪಾರ್ಧಿಗಳು 
ನಿಮ್ಮಲ್ಲಿ ಅಡವಿಟ್ಟಿರುವ  
ಚಿನ್ನ ಬೆಳ್ಳಿಯ ಜಪ್ತಿ ಮಾಡಲು 
ಬಂದಿದ್ದೀವಿ. 
ಕಳ್ಳತನದ ಮಾಲ್ಇಟ್ಟುಕೊಂಡ್ರೆ 
ನಿಮ್ಮ ಮೇಲು ಕೇಸ್ ಹಾಕ್ತೀವಿ.
ನೀವಾಗಿ ಮುಂದೆ ಬಂದು ಕೊಟ್ರೆ ಒಳ್ಳೇದು. 
ಅಂತ ರಫ್ ಅಂಡ್ ಟಫ್ ಆಗಿ ಹೇಳೋದನ್ನ ಅವಾಕ್ಕಾಗಿ ನೋಡ್ತಾ ಇದ್ದ. 
ಕರ್ನಾಟಕದ ಅಭಿ.
ಆದ್ರೂವೆ ಅಜ್ಜ ಮೌನವಾಗೇ ಇದ್ದ.
ಹೀಗೇ ಬೆಳ್ಳಗಾಗಲಿಲ್ಲಾ ತಲೆ ಬಿಳಿಕೂದಲು.
ಎಷ್ಟು ನೀರು ಕುಡಿದು, ಎಷ್ಟು ನೀರು ಕುಡಿಸಿರಬೇಕು.
ಇದಕ್ಕೆಲ್ಲಾ ಬಗ್ಗೋ ಆಳಲ್ಲ ಸೇಠ್.
ತೋಮರ್ ಎಲ್ಲಾ PC ಗಳನ್ನು ಒಳ ಬರಲು ಹೇಳಿ,
ಹುಡುಕಲು ಹೇಳಿದ.ಒಳಗೆ ದೊಡ್ಡ ಹಾಲ್, 
ನಡುವೆ ಗೋಧಿಯ ಗೋಪುರ,
ಒಳಗೆಲ್ಲೂ ತಿಜೋರಿಯಾಗಲಿ 
ಅಲಮಾರಿಗಳಾಗಲಿ ಇರಲಿಲ್ಲಾ 
ಹಾಗಾದ್ರೆ ಚಿನ್ನದ ಒಡವೆಗಳಾಗಲಿ 
ಬೆಳ್ಳಿ ಯಾಗಲಿ ಎಲ್ಲಿ ಬಚ್ಚಿಟ್ಟಿದ್ದಾರೋ?
ಇನ್ಸ್ ಪೆಕ್ಟರ್ ತೋಮರ್ ಎದ್ದರು.
ಹಾಲ್ ಗೆ ಹೋಗಿ 
ಗೋಧಿಯ ಗೋಪುರದೊಳಗೆ ಕೈ ಹಾಕಿದರು. 
ಗೋಲ್ಡ್ ಚೈನ್, ಗೋಲ್ಡ್ ಬಳೆ ಎಲ್ಲಾ ಸಿಕ್ಕಿತು. 
PC ಗಳು ಗೋಧಿ ಗೋಪುರವ 
ನೆಲ ಸಮ ಮಾಡಿದರು.
ಒಂದನ್ನೂ ಬಿಡದೆ ಎಲ್ಲವನ್ನು 
ತೂಕ ಹಾಕಿ ಪಟ್ಟಿ ಮಾಡಿ 
ಬೆಂಗಳೂರ ಒಡವೆಗಳು ಪ್ರತ್ಯೇಕ ವಾಗಿ 
ಬಂಡಲ್ ಮಾಡಿಟ್ಟರು. ಮತ್ತೆ ಉಳಿದವನ್ನ 
ಇನ್ನೊಂದು ಬಂಡಲ್ ನಲ್ಲಿ ಕಟ್ಟಿಟ್ಟರು.
ಅಜ್ಜನ ಹೆಬ್ಬೆಟ್ಟು ನಿಶಾನೆ ಹಾಕಿಸಿಕೊಂಡ್ರು 
ಆದ್ರೆ ಅಜ್ಜ ಒಪ್ಪಲಿಲ್ಲಾ. 
ಒಡವೆಗಳನ್ನು ಜಪ್ತಿ ಮಾಡಲು ಬಿಡಲಿಲ್ಲಾ.
ಒಬ್ಬ PC ಅಜ್ಜನ್ನ ಸ್ವಲ್ಪ ಜೋರಾಗಿಯೇ ತಳ್ಳಿದ.
ಅಜ್ಜ ಕಾಲು ಎಡವಿ ಕೆಳಗೆ ಬಿದ್ದ. 
ತಲೆ ಢಮಾರ್ಂತ, ಜಮೀನು ಹದ ನೋಡಿತ್ತು.
ಅಜ್ಜ ಮೂರ್ಛೆ ಹೋದ.
ಲಘುವಾಗಿ ಕಿವಿಯಿಂದ ರಕ್ತ ಸೋರ ತೊಡಗಿತ್ತು 
ಇನ್ಸ್ ಪೆಕ್ಟರ್ ತೋಮರ್ 
ಅಜ್ಜನ ಮೂಗಿನ ಹತ್ತಿರ ಬೆರಳು ಆಡಿಸಿ
ಇಸ್ ಕೋ ಉಟಾವೋ ಅಂತ ಹೇಳಿ 
ಅಜ್ಜನ್ನ ಜೀಪಿನಲ್ಲಿ ಕೂರಿಸಿದ. 
ಒಡವೆಗಳ ಗಂಟು ಅಭಿಯ ಜೀಪಿನಲ್ಲಿ. 
ಕ್ಯಾಪ್ಟನ್ ದೇವಿ ಸಿಂಗ್,ಜಮುನಾ, 
ದಿಲೀಪ್ ಮತ್ತೆ ಮೂಲ್ ಸಿಂಗ್ 
ಅಪರಾಧಿಗಳನ್ನು ಇನ್ನೊಂದು ವ್ಯಾನ್ನಲ್ಲಿ 
ಬಂದೋಬಸ್ತ್ ಆಗಿ ಧರ್ನಾವದ 
ನಿಂದ ಹೊರಟರು.
ರುಟಿಯಾಯಿ ಬಳಿ ಗಾಡಿ ನಿಲ್ಲಿಸಿ, 
ಇನ್ಸ್ ಪೆಕ್ಟರ್ ತೋಮರ್ ಅಭಿಯೊಡನೆ ಚರ್ಚೆಮಾಡಿದರು.
ಮ್ಯಾಜಿಸ್ಟ್ರೇಟ್ ಮುಂದೆ
ಅಪರಾಧಿಗಳನ್ನು ಹಾಜರಿ ಪಡಿಸಿ 
ಅವರನ್ನು ಬೆಂಗಳೂರು ಕರೆದುಕೊಂಡು 
ಹೋಗಲು ಅನುಮತಿ ಕೊಡಿಸಬೇಕು. 
ಮತ್ತೆ ಬ್ಯಾಂಕ್ ನ ಒಡವೆಗಳ ಮತ್ತು
ಹಣವನ್ನು ಲೆಕ್ಕಾಚಾರ ಮಾಡಿ
ಹ್ಯಾಂಡ್ ಓವರ್ ಮಾಡಬೇಕು. 
ಅದಕ್ಕೂ ಮ್ಯಾಜಿಸ್ಟ್ರೇಟ್ ಒಪ್ಪಿಗೆ ನೀಡಬೇಕು. 
ಈಗ ಅದಕ್ಕಿಂತಲೂ ಕ್ರಿಟಿಕಲ್ 
ಅಜ್ಜ ತೀರ್ ಕೊಂಡಿದ್ದು.
ಹಿಡಿಯಲು ಹೋಗಿದ್ದು ಪಾರ್ಧಿ ಗಳನ್ನ 
ಆದರೆ ಆಕಸ್ಮಿಕವಾಗಿ ಧಕ್ಕಾ ಮುಕ್ಕಿಯಲ್ಲಿ ಬಲಿಯಾದದ್ದು  ಪ್ರತಿಷ್ಟಿತ ಸೇಠ್. 
ಅವರ ಪರಿಜನರು, ಹಿತೈಷಿಗಳು
ಇದನ್ನೊಂದು ಪೋಲೀಸರ ಅತ್ಯಾಚಾರ 
ಎಂದು ದೊಡ್ಡ ಲಾ ಅಂಡ್ ಆರ್ಡರ್ 
ಪ್ರಶ್ನೆ ಯಾಗಿ ಉದ್ಭವಿಸುವದು ನಿಶ್ಚಯ. 
ಇನ್ಸ್ ಪೆಕ್ಟರ್ ತೋಮರ್
ಹತ್ತಿರದಲ್ಲೇ ಇದ್ದ ರಾಘೋಗಡ್ ತಹಸೀಲ್ನಲ್ಲಿ
ಮ್ಯಾಜಿ ಸ್ಟ್ರೇಟ್ ಮುಂದೆ ಅಪರಾಧಿಗಳನ್ನು 
ಹಾಜರಿ ಪಡಿಸಿ, ಒಡವೆಗಳ ವಿಂಗಡಣೆ ಪಡಿಸಿ, 
ಕಪ್ಪು ಚೀಲದಲ್ಲಿದ್ದ ಹಣವನ್ನ ಹಸ್ತಾಂತರಿಸಿ 
ಜೀಪ್ ಒಂದನ್ನು  ಇಂದೋರ್ ಗೆ 
ಅಭಿ ಮತ್ತು ಅನ್ಯರನ್ನು ಕಳಿಸಿ,
ಇನ್ನೊಂದು ಜೀಪಿನಲ್ಲಿ ಅಪರಾಧಿಗಳು 
ಪೊಲೀಸ್ ನವರು ವೇಗವಾಗಿ 
ಆಗ್ರಾ ಮುಂಬೈರೋಡ್ ಹಿಡಿದು 
ಇಂದೋರ್ ರಾತ್ರಿ ತಲುಪಿದರು
ಅತ್ತ
ಇನ್ಸ್ ಪೆಕ್ಟರ್ ತೋಮರ್ ಉಳಿದ ಒಡವೆ, 
ಹಣ ಕಾಸು,ಮತ್ತೆ ಅಜ್ಜನ ಮೃತ ದೇಹವನ್ನು 
ತೆಗೊಂಡು ಗುಣಾ ಜಿಲ್ಲೆ ಗೆ ಹೊರಟರು.
ಇತ್ತ
ರಾತ್ರಿ ಏರ್ ಪೋರ್ಟ್ ಠಾಣೆಯಲ್ಲೇ 
ಎಲ್ಲರೂ ಉಳಿದು 
ಬೆಳಗ್ಗೆ ವಿಮಾನದಲ್ಲಿ
ಬೆಂಗಳೂರು  ಹೋಗಿ ಸೇರಿದಾಗ 
ಬುಧವಾರ11.00am ಆಗಿತ್ತು. 
DCP ವೈಟ್ ಫೀಲ್ಡ್ ಸ್ವತಃ
ಏರ್ ಪೋರ್ಟ್ ಬಂದು ಅಭ್ತ್ಯುದಯ್ IPS
ವರ್ತೂರ್ ಪೊಲೀಸ್ ಇನ್ಸ್ ಪೆಕ್ಟರ್,  
ಸಬ್ ಇನ್ಸ್ ಪೆಕ್ಟರ್ ವೀರಣ್ಣ ಮತ್ತೆ 
ಅವರ ಟೀಮ್ ನ ರಿಸೀವ್ ಮಾಡಿ 
ಪ್ರೋತ್ಸಾಹಿಸೋದು ಪೊಲೀಸ್ನಲ್ಲಿ
ಸಾಧಾರಣ ವಿಷಯವೇ ಇಲ್ಲಾ..
ಅಭಿಗೆ ಈ ಪ್ರಕರಣದ ಮುಖ್ಯ ಬಿಂದು
Ricochet  ರಿಕೋಶೇಯ್
ಪಂಚಮ್ ನ ಲಾಂಗ್ ಗನ್ ನಿಂದ ಹೊರಟ
ಬುಲೆಟ್ ಅಪರಾಧಿ ಮೂಲ್ ಸಿಂಗ್
ಬಗ್ಗಿದ್ದರಿಂದ ಎದುರೇ ದೂರದಲ್ಲಿದ್ದ
ಸ್ಟೀಲ್ ಲೈಟ್ ಕಂಬಕ್ಕೆ 
ತಗುಲಿ ರಿಕೋಶೇಯ್ ಆಗಿ 
ಎಡವಯ್ಯನ ದುರಾದ್ರಷ್ಟ, 
ಮಂಡೆಯ ಹೊಕ್ಕು 
ಸಾವಿಗೆ ಕಾರಣವಾಯ್ತು.
ಬ್ಯಾಂಕ್ ನ ಹಣ ಕಾಸು
ಒಡವೆ ಎಲ್ಲವೂ ವಾಪಸ್ಸು ದೊರಕಿದ್ದರಿಂದ
ಪಂಚಮ್ ನ ಪರಿವಾರಕ್ಕೆ ಇಪ್ಪತ್ತು ಲಕ್ಷ ಚೆಕ್ಕು 
ಹಾಗೇ ಎಡವಯ್ಯನ ಪರಿವಾರಕ್ಕೆ 
ಹತ್ತು ಲಕ್ಷ ರೂಪಾಯಿಗಳು ಮತ್ತೆ
ಎಡವಯ್ಯನ ಪತ್ನಿಗೆ ಬ್ಯಾಂಕ್ ನಲ್ಲಿ ಕೆಲಸ.
ಅಮ್ಮ ಹೇಳಿದ್ಲು 
ಒಳ್ಳೆ ಕೆಲಸ ಮಾಡಿದೆ ಕಂದ
ಕಳ್ಳ ಪೊಲೀಸ್ ಆಟದಲ್ಲಿ 
ಯಾತನೆಯನ್ನು ಅನುಭವಿಸುವ 
ಬಡವರನ್ನ ಕೈ ಬಿಡ ಬಾರದು 
ಅವರಿಗಾದ ಅನ್ಯಾಯವ ಸರಿ ಪಡಿಸಿ 
ನ್ಯಾಯ ದೊರಕಿಸೋದು ಒಂದಾದರೆ  
ಅವರ ಜೀವನೋದ್ಧಾರಕೆ ದಾರಿ ತೋರಿಸಬೇಕು.
ಅಮ್ಮನ ಮುಖದಲ್ಲಿ ಸಂತೋಷ ಹೆಮ್ಮೆ 
ಎರಡೂ ಸೇರಿ ಅಭಿಯ ನೋಡಿ ಕೊಂಡೇ ದ್ರಷ್ಟಿ 
ಕಳೆದರು.
ಹಿಡಿಯಲು ಹೋಗಿದ್ದು ಧರ್ನಾವದ
ಗ್ರಾಮದ ಬ್ಯಾಂಕ್ ದರೋಡೆ ಗಾರರನ್ನ.
ಆದ್ರೆ, ಧಕ್ಕಾಮುಕ್ಕಿಯಲ್ಲಿ  ಆದ ಆಕಸ್ಮಿಕ
ಮೃತ್ಯು ವಯೋವ್ರದ್ಧ ಅಜ್ಜನದು. 
ಇದೊಂತರಹ
Ricochet ರಿಕೋಶೇಯ್ ಅಲ್ಲವೇ







ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.