ರಿಕೋಶೇಯ್ ಅಧ್ಯಾಯ -2 𝗥𝗶𝗰𝗼𝗰𝗵𝗲𝘁

ರಿಕೋಶೇಯ್  
Ricochet 
ಅಧ್ಯಾಯ-2
ಸನ್ನಿವೇಶ, ಕಥಾ ಪಾತ್ರಗಳು,ಘಟನೆಗಳು, ಎಲ್ಲವೂವೆ ಕಾಲ್ಪನಿಕ, ❤️ಹೊಂದಾಣಿಕೆ ಇದ್ರೆ ಅದು ಕೇವಲ ಆಕಸ್ಮಿಕ
            ( ವರ್ತೂರ್ ಕೆರೆ ಘಟನಾ ಸ್ಥಳ )
ಅಭಿ ಭಾನುವಾರ ಬೆಳಗ್ಗೆ ಬೇಗ ಎದ್ದು ತೈಯಾರಾಗಿ
ಅಮ್ಮನಿಗೆ ಹೇಳ್ದ, 
ಹೇಗಾದ್ರು ಕೇಸ್ ಬೇಗ ಪರಿಹರಿಸಲು 
ಆಶೀರ್ವಾದಿಸಿ ಕಳಿಸಮ್ಮಂತ, 
ಕಾಲಿಗೆ ಬಿದ್ದು ಹೊರಡಲು ಅನುವಾದ.
ದೇವರಿಗೆ ದೀಪ ಹಚ್ಚಿ ಆಶೀರ್ವದಿಸಿ, 
ಹೋಗಪ್ಪಾ ನಿನಗೆ ಸೋಲೇ ಇಲ್ಲಾಪ್ಪ 
ಅಂತ ಕಳುಹಿಸಿ ಕೊಟ್ಟರು.
ವರ್ತೂರ್ ಪೊಲೀಸ್ ಸ್ಟೇಷನ್ ಬಂದು ಸೇರಿದಾಗ
ಬೆಳಗ್ಗೆ ಎಂಟು ಘಂಟೆ ಯಾಗಿತ್ತು.
ಪೊಲೀಸ್ ಸ್ಟೇಷನ್ ಕ್ಷೇತ್ರದಲ್ಲಿ
ನಡೆದ ಘಟನೆಗಳ ಕಾರಣ 
ಠಾಣೆ ಬಲು ಬ್ಯುಸಿ ಯಾಗಿತ್ತು.
ರಾತ್ರಿ ಅಜ್ಞಾತ ಕಾರಣಗಳಿಂದ 
ಮೃತ ಪಟ್ಟ ಎಡವಯ್ಯನ ಬಗ್ಗೆ   
S.I. ವೀರಣ್ಣ ವಿವರಿಸಿ,
ವೈರ್ ಲೆಸ್ ಮೆಸೇಜ್ ನಿಂದ ಕೆರೆಯ
ಸ್ಪಾಟ್ ನಲ್ಲಿದ್ದ ವರ್ತೂರ್ ಠಾಣೆಯ 
ಇನ್ನೊಬ್ಬ S I ಸಲೀಮ್ ಗೆ ಅಭಿ 
ಬರುವದನ್ನ ಸೂಚಿಸಿದರು.
ಹಾಗೆಯೇ ತಾನು ಬ್ಯಾಂಕ್ ದರೋಡೆಯ 
ಸ್ಪಾಟ್ ಗೆ ಹೋಗಲು ಅಭಿಯಿಂದ 
ಅನುಮತಿ ಕೋರಿ 
ಮೋಟಾರ್ ಬೈಕ್ ನಲ್ಲಿ ಹೊರಟ.
ಅಭಿ ಸ್ಟೇಷನ್ನಿಂದ ತಕ್ಷಣವೇ  
ಎಡವಯ್ಯ ಮೃತ ಹೊಂದಿದ ಸ್ಪಾಟ್ ಗೆ
ಜೀಪಲ್ಲಿ ತೆರಳಿದ.
ಕೆರೆಯ ಬಳಿ ಬಂದಿಳಿದ ಅಭಿಯನ್ನು 
S I  ಸಲೀಮ್ ಸ್ವಾಗತಿಸಿ 
ಸಲ್ಯೂಟ್ ಹೊಡೆದು 
ಕ್ರೈಂ ನಡೆದ ಸ್ಥಳಕ್ಕೆ ಕರೆದೊಯ್ದರು.
ಚಪ್ಪಡಿಕಲ್ಲ ಮೇಲೆ ಅಪ್ಪಿಕೊಂಡು ಬಿದ್ದ 
ಮೃತ ಎಡವಯ್ಯನ ದೇಹವ ನೋಡಿದ,
ಚಾಕ್ ಪೀಸ್ ನಿಂದ ದೇಹದ ಹೊರ 
ನಿಶಾನೆ ಬರೆಯುತಿದ್ದರು.
ರಕ್ತ ಹರಿದ ಧಾರೆ 
ಕೆಂಪಿನಿಂದ ಒಣಗಿ ಕಪ್ಪಾಗಿತ್ತು.
ಮೃತ ದೇಹವನ್ನು 
ಫೋರೆನ್ಸಿಕ್ ಟೀಮ್ ಪರೀಕ್ಷಿಸಿ  
ಫೋಟೋಗ್ರಾಫರ್ಸ್ ವಿಭಿನ್ನ  
ಆಂಗಲ್ನಲ್ಲಿ ಫೋಟೋ ತೆಗೆದುಕೊಂಡು ಅವರವರಕಾರ್ಯವನ್ನು 
ರುಟೀನ್ ತರೀಕೆಯಲ್ಲಿ ಮುಗಿಸಿ,
ಆಂಬುಲೆನ್ಸ್ ನಲ್ಲಿ ಶವವನ್ನಿರಿಸಿ 
ಪೋಸ್ಟ್ ಮಾರ್ಟೆಮ್ಗೆ ವಿಕ್ಟೋರಿಯಾ 
ಆಸ್ಪತ್ರೆಗೆ ರವಾನಿಸಿದರು.  
ಪೋಸ್ಟ್ ಮಾರ್ಟೆಮ್ 
ಬೆಂಗಳೂರು ಮೆಡಿಕಲ್ ಕಾಲೇಜಿನ 
ಫೋರೆನ್ಸಿಕ್ ಸೈನ್ಸ್ and HOD ಯ
ನಿಗರಾನಿಯಲ್ಲಿ ನಡೆಯೋದ್ರಿಂದ 
ರಿಪೋರ್ಟ್ ಗಳಲ್ಲಿ ಪ್ರೊಫೆಷನಲಿಸಂ 
ಹಾಗೂ ನಿಷ್ಪಕ್ಷತೆ ಕಂಡು ಬರುತಿತ್ತು.
ಗಂಭೀರವಾಗಿ ಅಭಿ ಸುತ್ತ ಮುತ್ತ ಎಲ್ಲಿಂದ ಬುಲೆಟ್ ಪ್ರಹಾರ ನಡೆದಿರಬೇಕು ಎನ್ನುವ ಆಂಗಲ್ ನಲ್ಲಿ ನೋಡಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ನಕ್ಷೆಯ ಬರೆದು ಹತ್ತಿರದ ರಸ್ತೆ, ಮನೆಗಳು ಅದರಲ್ಲಿ ಮಾರ್ಕ್ ಮಾಡಿ ಕೊಂಡ.ನಂತರ ಸಬ್ ಇನ್ಸ್ಪೆಕ್ಟರ್ ಸಲೀಮ್ ಗೆ ನಿರ್ದೇಶಿಸಿ ಬ್ಯಾಂಕ್ ನತ್ತ ಹೊರಟ.
ಸಾರ್ ಆಕ್ಷನ್ ಬ್ಯಾಂಕ್ ರಾಬ್ಬರಿ ಸ್ಪಾಟ್ಗೆ, ಬನ್ನಿ 
SI ವೀರಣ್ಣ ನ ವೈರ್ ಲೆಸ್  ಮೆಸೇಜ್...
ಎಲ್ರೂ ಇಲ್ಲಿ ಕಾಯ್ತಾ ಇದ್ದಾರೆ
ಲೊಕೇಶನ್ ಕಳುಹಿಸುತ್ತಿದ್ದೇನೆ ಸಾರ್.
ಫೋರೆನ್ಸಿಕ್ ಟೀಮ್, ಫೋಟೋಗ್ರಾಫರ್
ಹಾಗೇ  Dog squad ಎಲ್ಲಾ 
ಸ್ಪಾಟ್ ಗೆ ಬಂದಿದ್ದಾರೆ ಅಂದ.
ಅಭಿ ಅಲ್ಲಿ ಹೋಗಿ ಸೇರೋದ್ರೊಳಗೆ
ವರ್ತೂರ್ ಮೇನ್ ರೋಡ್ ನಲ್ಲೇ ಇದ್ದ 
ಆಕ್ಷನ್ ಬ್ಯಾಂಕ್ ಹತ್ತಿರ ಜನ ಸಮೂಹ ಕೂಡಿತ್ತು
ಸಬ್ ಇನ್ಸ್ ಪೆಕ್ಟರ್ ವೀರಣ್ಣ 
ಇನ್ಸ್ ಪೆಕ್ಟರ್ ಅಭಿಯನ್ನ ಕರೆದುಕೊಂಡು ಬ್ಯಾಂಕ್ ಮ್ಯಾನೇಜರ್ ರೂಮ್ಗೆ ಹೋದ. 
ಮ್ಯಾನೇಜರ್ ತನ್ನನ್ನು ರವಿ ಎಂದು 
ಪರಿಚಯಮಾಡಿ ಕೊಂಡ ಹಾಗೆಯೇ
ಅಭಿಗೆ ಎಲ್ಲವನ್ನು ವಿವರವಾಗಿ ಹೇಳಲು ಪ್ರಾರಂಭಿಸಿದ. 
ಪ್ರತಿ ದಿನದಂತೆ ನಿನ್ನೆ ಯು 
ಬ್ಯಾಂಕಿನ ಕಾರೋಬಾರ್ 
ಎಲ್ಲವನ್ನೂ ಚೆಕ್ ಮಾಡಿ 
ಮುಗಿಸಿ ಹೊರಡುವಾಗ
ರಾತ್ರಿ ಎಂಟು ಘಂಟೆಯಾಗಿತ್ತು.  
ಸುರಕ್ಷಾ ಗಾರ್ಡ್ ಪಂಚಮ್ ರಾತ್ರಿ ಡ್ಯೂಟಿಗೆ ಬಂದಿದ್ದ.
ಸುರಕ್ಷಾ ಗಾರ್ಡ್ ಜಮುನಾನ ಪಾಳಿ ಮುಗಿದಿತ್ತು.
ಆತನೂ ಇದ್ದ. ಜಾಗ್ರತೆಯಾಗಿರು ಎಂದು ಹೇಳಿ
ನಾವೆಲ್ಲಾ ಒಂದು ಎಂಟು ಕಾಲು ಆದಾಗ 
ಮನೆಗೆ ತೆರೆಳಿದೆವು ಸಾರ್.
ಮರು ದಿವಸ ಭಾನುವಾರ ಬೆಳಗ್ಗೆ 
ಎಂದಿನಂತೆ, ಬ್ಯಾಂಕ್ ಪಕ್ಕದ 
ಹಾಲಿನಂಗಡಿಯ ಬಾಗಿಲು ತೆರೆಯ 
ಬಂದ  ರಮೇಶ್ ರವರು 
ಬ್ಯಾಂಕ್ ನ ಬಾಗಿಲ ಮುಂದೆ
ರಕ್ತದ ಮಡುವಲ್ಲಿ ಪಂಚಮ್ ನ 
ದೇಹವ ನೋಡಿ ಅವಾಕ್ಕಾಗಿ ಚೀತ್ಕರಿಸಿ,
ವರ್ತೂರ್ ಪೊಲೀಸ್ ಸ್ಟೇಷನ್ ಗೆ
ಹಾಲು ಪ್ಯಾಕೆಟ್ ಮಾರುವ ರಮೇಶ್ 
ಅವರು ಫೋನ್ ಮಾಡಿ ಸೂಚನೆ ನೀಡಿದರು.
ಡೆಡ್ ಬಾಡಿಯನ್ನು ಮೊದಲು ನೋಡಿದವರೂ 
ಅವರೇ ಸಾರ್,  ಇನ್ನೊಂದು ವಿಷಯ
ರಮೇಶ್ ನಿನ್ನೆ ರಾತ್ರಿ 12 ಘಂಟೆಗೆ 
ಒಂದು ವೈಟ್ ಬೊಲೆರೋ ಜೀಪ್ 
ನಿಂತಿದ್ದು ನೋಡಿದ್ರಂತೆ.
ಆದರೆ ಗಾಡಿಯಲ್ಲಿ ಯಾರೂ ಇರಲಿಲ್ಲವಂತೆ
ಇದರ ಬಗ್ಗೆ ಅಭಿಗೆ ವಿವರಿಸುತ್ತಾ 
ಬ್ಯಾಂಕ್ ನ ಅವಲೋಕನೆಗಾಗಿ
ಇನ್ಸ್ ಪೆಕ್ಟರ್ ಅಭಿಯನ್ನ ಕರೆದುಕೊಂಡು 
ಹೋದರು ಮ್ಯಾನೇಜರ್.
ಲಾಕ್ ತುಂಡಾಗಿ ಹೊರ ಬಿದ್ದಿತ್ತು. 
ಹಾಗೆಯೇ ಅರ್ಧ ತೆಗೆದಿದ್ದ 
ಶಟರ್ ಓಪನ್ ಮಾಡಿ ಒಳಗೆ ಎಂಟರ್ 
ಆದ್ರೆ   ಹಾಲ್, ಕೌಂಟರ್, ಮ್ಯಾನೇಜರ್ ರೂಮ್ ಎಲ್ಲವೂ ಇದ್ದಹಾಗೆ ಇತ್ತು. 
ಹಾಲ್ ನಲ್ಲಿದ್ದ CCTV ಕ್ಯಾಮೆರಾ ಒಡೆದಿತ್ತು
ಗಾಜಿನ ಚೂರುಗಳು ನೆಲದಲ್ಲಿ ಬಿದ್ದಿತ್ತು
ಇನ್ನೂ ಡಿಜಿಟಲ್ ಸೆಕ್ಯುರಿಟಿಯ ಅಳವಡಿಸಿರಲಿಲ್ಲಾ
ಲಾಕರ್ ರೂಮ್ ಬಾಗಿಲು ತೆರೆದಿತ್ತು. 
ಇನ್ಸ್ ಪೆಕ್ಟರ್ ಅಭಿಯನ್ನ ಕರೆದುಕೊಂಡು 
ತೋರಿಸಲು, ಲಾಕರ್ ಗಳೆಲ್ಲಾ ಚಲ್ಲಾಪಿಲ್ಲಿ ಯಾಗಿ ರೂಮ್ ತುಂಬಾ ಹರಡಿತ್ತು.
ಲಾಕರ್ಗಳನ್ನು ಜಬರ್ದಸ್ತಿ ತೆರೆದ ನಿಶಾನೆಯಿತ್ತು.
ಅದರೊಳಗಿದ್ದ ವಸ್ತುಗಳು ಕಾಣೆಯಾಗಿತ್ತು.
ಹಾಗೆಯೇ ದೊಡ್ಡ ತಿಜೋರಿಯು ತೆರೆದಿತ್ತು 
ಒಳಗಿದ್ದ ಹಣವೆಲ್ಲವ ದೋಚಿ ಕೊಂಡು 
ಸ್ಯಾಂಪಲ್ ಗೆ 500 ರೂಪಾಯಿ ನೋಟೊಂದನ್ನು ಬಿಟ್ಟು ಹೋಗಿದ್ದು ,
ಕಂಡು ಹಿಡಿರಯ್ಯ ನಾನು ಯಾರೂಂತ
ಚಾಲೆಂಜ್ ಮಾಡಿದ ಹಂಗೆ ಇತ್ತು.
ಇನ್ನೂ ಹಣ, ಚಿನ್ನದ ಒಡವೆಗಳ 
ಆಂಕಲನ ಮಾಡ್ತಾ ಇದ್ದೀವಿ ಎಷ್ಟು ಟೋಟಲ್ಲಾಗಿ ಕಳುವಾಗಿದೇಂತ  ಆಮೇಲೆ ಹೇಳಬಹುದು.
ಜಮುನಾ, ಮ್ಯಾನೇಜರ್ ರವಿ ಮತ್ತೆ ರಮೇಶ್ 
ಸಂಜೆ ಸ್ಟೇಷನ್ ಕರೆ ತರಲು ಸಬ್ ಇನ್ಸ್ ಪೆಕ್ಟರ್ ವೀರಣ್ಣನಿಗೆ ಹೇಳಿ
ಅಭಿ ಸ್ಟೇಷನ್ಗೆ ಹೊರಟ.
ಸ್ಟೇಷನಲ್ಲಿ
ಮನೆಯಿಂದ ಅಮ್ಮ ಟಿಫನ್ ಕ್ಯಾರಿಯರ್
ಕಳಿಸಿದ್ದರು.ಲಂಚ್ ಮಾಡಿದೊಡನೆ
S. I. ಸಲೀಮ್  ಜೊತೆ ಎಡವಯ್ಯನ ಬಗ್ಗೆ 
ವಿಚಾರಿಸಲು ಅದರ  ಸಾರಾಂಶ ವಿಷ್ಟೇ...
ಆತ ಸೆಂಟ್ರಿಂಗ್ ಕೆಲಸ ಮಾಡ್ತಾ ಇದ್ದ.
ರೆಗ್ಯುಲರ್ ಕಾರಿಗಾರ
ಜೊತೆ ಕೆಲಸ ಮಾಡುವವರೊಂದಿಗೆ 
ಯಾವೊಂದು ವೈಮನಸ್ಯತೆಯು ಇರಲಿಲ್ಲಾ.
ವಾಪಸ್ಸು ಠಾಣೆ ತಲುಪಿದರೆ
ಎಡವಯ್ಯನ ಜೊತೆ ಕೆಲಸ ಮಾಡುತಿದ್ದ 
ಮಣಿ, ಶಂಕರ್ ಮತ್ತೆ ಸಂತೋಷನ್ನು 
ವಿಚಾರಣೆಗಾಗಿ ಸ್ಟೇಷನ್ ಕರೆದಿದ್ದರು.
ಅಭಿ ವಿಚಾರಿಸಿದ.
ಪರಿಶ್ರಮಿ, ಕೆಟ್ಟ ಚಟವೇನೂ ಇರಲಿಲ್ಲಾ
ಗಣೇಶ್ ಬೀಡಿ ಸೇದೋದು ಬಿಟ್ರೆ
ಯಾವ/ಯಾರ ಗೋಜಿಗೂ ಹೋಗದವ, 
ಜೊತೆಗಾರರಿಂದ ವಿಶೇಷ ಮಾಹಿತಿ ದೊರಕಲಿಲ್ಲ.
PM ರಿಪೋರ್ಟ್ ಬಂತಾ ಎಂದು ಕೇಳಿದ
ಇನ್ನೂ ಇಲ್ಲಾ ಸಾರ್, 
ಸಂಡೇ ಇವತ್ತು PM ಮಾಡ್ತಾರಾ,
ಮಾಡ್ತಾರೆ ಸಾರ್
ಅಭಿಗೆ ಅನಿಸ್ತು ಒಂದು ಸಲ ವಿಕ್ಟೋರಿಯಾ
ಆಸ್ಪತ್ರೆಗೆ ಹೋಗಿ PM ರಿಪೋರ್ಟ್
ನೋಡೋಣವೆಂದು, ಜೊತೆಗೆ 
ಎಡವಯ್ಯನ ಹಾಗೂ ಪಂಚಮ್ ನ 
ಮೃತ ದೇಹ ಗಳಲ್ಲಿ ಬೇರೇ ನಾದರೂ 
ಪೆಟ್ಟು, ಗಾಯ ಇದೆಯಾ ಎಂಬುದನ್ನ 
ಉರ್ಜಿತ ಮಾಡಿಕೊಳ್ಳಲು
S. I. ಸಲೀಮ್ ನ ಕರೆದುಕೊಂಡು
ವಿಕ್ಟೋರಿಯಾ ಆಸ್ಪತ್ರೆಗೆ ಹೊರಟ.
ಎಡವಯ್ಯನ ಫ್ಯಾಮಿಲಿ ಅಂದ್ರೆ 
60 ವಯಸ್ಸಿನ ಅಮ್ಮ, ಹೆಂಡ್ತಿ ಲಕ್ಷ್ಮವ್ವ,
ಎಂಟು ವರ್ಷದ ಮಗ ರುದ್ರ. 
ಚಿಕ್ಕ ಚೊಕ್ಕ ಸಂಸಾರ
ಸರ್ಕಾರ ಕಟ್ಟಿಕೊಟ್ಟ ಪುಟ್ಟ ಮನೆ
ಎಡವಯ್ಯನ ಸಂಪಾದನೆಯ 
ನಂಬಿ ನಡೆಯುತ್ತಿದ್ದ ಸಂಸಾರ.
ಅಷ್ಟರಲ್ಲಿ ವಿಕ್ಟೋರಿಯಾ ಆಸ್ಪತ್ರೆಯ 
Mortuary ಮಾರ್ಚುವರಿ ಬಂದು ಸೇರಿದರು.
ಹೊರ ಬಾಗಿಲ ಗೇಟ್ ಹತ್ತಿರ
ಎಡವಯ್ಯನ ಅಮ್ಮ, ಹೆಂಡತಿ ಲಕ್ಷ್ಮವ್ವ,
ಮಗ ರುದ್ರ ಮತ್ತಿತರರು ನಿಂತಿದ್ದರು.
ಅಭಿ ಅವರ ಮುಂದೆ ಹೋಗಿ ನಿಂತ
ಬಿಕ್ಕಿ ಬಿಕ್ಕಿ ಅಳುತಿದ್ದವರು 
ಸ್ವಲ್ಪ ಅಳು ನಿಲ್ಲಿಸಲು. 
ನಿನ್ನೆ ಇದ್ದ ಹಾಗೇ ಇಂದು ಇಲ್ಲಾ
ಒಂದು ಕ್ಷಣದಲ್ಲಿ ಏನೂ ಇಲ್ಲಾ..
ಅಭಿಗೂ ಸಹ ಮಾತು ಹೊರ ಬರಲಿಲ್ಲ
ಮನಸ್ಸಿಗೆ ಸ್ವಲ್ಪ ಚುರುಕ್ ಅನಿಸಿತು
ಈ ಸ್ಥಿತಿಯ ತಂದವರನ್ನು
ಕಂಡು ಹಿಡಿಯಬೇಕು 
ನ್ಯಾಯ ದೊರಕಿಸಬೇಕೂಂತ
ಅಭಿ ಮನಸ್ಸಲ್ಲೇ ನಿಶ್ಚಯಿಸಿದ
ಅಷ್ಟರಲ್ಲಿ
S.I.ಸಲೀಮ್ ಪಿಎಂ ರಿಪೋರ್ಟ್ ತಂದಿದ್ದ
ಅದನ್ನೊಮ್ಮೆ ಓದಿ ನೋಡಿದ ಅಭಿ
ಫೋರೆನ್ಸಿಕ್ ವಿಭಾಗದ HOD ಯೊಡನೆ 
ಚರ್ಚಿಸಲು ಇಚ್ಚಿಸಿದ. 
ಫೋರೆನ್ಸಿಕ್ ಸೈನ್ಸ್ ಪ್ರೊಫೆಸರ್ ಮತ್ತು HOD ಗೋವಿಂದ್ ರವರ ಜೊತೆ ನಡೆದ ಡಿಸ್ಕಶನ್ ನಲ್ಲಿ
ಮೂರು ಮುಖ್ಯ ವಿಷಯ ತಿಳಿಯ ಬಂತು.
ಒಂದು
Impact of gun shot injury
ಲಾಂಗ್ ಗನ್ ಶಾಟ್ಟಿನ ಪ್ರಭಾವ
ಮೆದುಳಿಗೆ ಹೋಗೋ ರಕ್ತ ನಾಳ ತುಂಡರಿಸಿ
ರಕ್ತ ಸ್ರಾವ, ಹೆಮೋರೇಜ್. 
ತತ್ ಕ್ಷಣ ಮೃತ್ಯು.
ಎರಡು
Retrieval of 0.22 mm bullet 
ಮಂಡೆ ಹಾಗೂ ಮೃದು ಅಂಗಾಂಶ ಗಳ ನಡುವೆ
ಸಿಕ್ಕ 0.22mm ಬುಲೆಟ್ ಹೊರ ತೆಗೆದದ್ದು, 
ಸಾಫ್ಟ್ ಲ್ಯಾಂಡಿಂಗ್, ಬುಲೆಟ್ ಆಕಾರ ಮತ್ತೆ 
ಗುಂಡಾದ ಡಿಸೈನ್ ಸಿಡಿಯಲು ಅನುವಾಗಿರಲಿಲ್ಲ.
ಕಲ್ಲಂಗಡಿ ಹಣ್ಣಿನ ತರಹ ತಲೆ ಸಿಡಿದು ಚದುರಲಿಲ್ಲ.
    (ಲಾಂಗ್ ರೈಫಲ್ 0.22mm ತೋಟಾಗಳು)
ಮೂರು
Richochet ರಿಕೋಶೆಯ್ ಅಂದ್ರೆ ಪುಟಿದೇಳು 
ಯಾವದಕ್ಕೋ ತಗಲಿ ಚಿಮ್ಮಿದ ಬುಲೆಟ್ 
ಮಂಡೆಯ ಹಿಂಬಾಗ ಪ್ರವೇಶಿಸಿ 
ಎಡವಯ್ಯನ ಮೃತ್ಯುಗೆ ಕಾರಣವಾಗಿದ್ದು.
ಗನ್ ಶಾಟ್ ಮೂಲಕ ನೇರವಾಗಿ ನಡೆದ ಹಲ್ಲೆಯಲ್ಲ.
ಬುಲೆಟ್ ಪ್ರವೇಶಿಸಿದ ಎಂಗಲ್, ವೇಗ ಹಾಗೂ
ಪ್ರಭಾವದ ಆಧಾರದ ಮೇಲೆ ಇದೊಂದು
ರಿಕೋಶೇಯ್ ಮೃತ್ಯು Richochet death 
ಎಂದು ನಿಷ್ಕರ್ಶೆಗೆ ಬಂದಿದ್ದರು.
ರಿಕೋಶೇಯ್ ಅಂದ್ರೆ 
ಯಾರಿಗೋ ಅಥವಾ ಯಾವುದಕ್ಕೋ ಗುರಿಯಿಟ್ಟು ಗನ್ನಿಂದ ಹೊರಟ ಬುಲೆಟ್ ಯಾವದೋ ಒಂದು ಪ್ಲೇನ್ ಮತ್ತು ಸ್ಮೂತ್ ಆದ ಹಲಗೆ ಅಥವಾ ತಗಡು
ಸರ್ಫೇಸ್ ನ್ನು ತಗುಲಿ ಅಲ್ಲಿಂದ ಡಿಫ್ಲೆಕ್ಟ್ ಆಗಿ ಚಿಮ್ಮಿ
ಬೇರೆಡೆ ಪ್ರವೇಶಿಸಿ ಅನಿರೀಕ್ಷಿತ ಪರಿಣಾಮ ಉಂಟು ಮಾಡುವದಕ್ಕೆ ಇಂಗ್ಲಿಷ್ನಲ್ಲಿ ರಿಕೋಶೇಯ್ Richochet ಎಂದು ಹೇಳ್ತಾರೆ. ಉದಾಹರಣೆಗೆ ಕ್ರಿಕೆಟ್ ಫಾಸ್ಟ್ ಬೌಲರ್ ನ ಬೌಲಿಂಗ್ ಬ್ಯಾಟ್ಸಮನ್ ಹೆಲ್ಮೆಟ್ ಗೆ ತಗುಲಿ ಅಲ್ಲಿಂದ ಚಿಮ್ಮಿದ ಬಾಲು ಎದುರು ಕ್ಯಾಚ್ ಹಿಡಿಯಲು ನಿಂತಿದ್ದ ಫೀಲ್ಡರ್ ಮುಖವ ಬಡಿಯಿತು.
ಬಾಲು ಹೆಲ್ಮೆಟ್ ತಗುಲಿ ರಿಕೋಶೇಯ್ ಆಯ್ತು.
ಅಭಿಗೆ ಸ್ಪಷ್ಟವಾಯ್ತು ಯಾರದೋ ಕೈವಾಡವೆಂದು
ಯಾರಿಗೋ ಇಟ್ಟ ನಿಶಾನೆ  
ಎಡವಯ್ಯನಿಗಾಗಿ ಕಾದಿತ್ತು 
ಅನಾಹುತ. 
ಬ್ಯಾಂಕ್ ದರೋಡೆಯ ಪಂಚಮ್ನ ಶವ
ಈಗಷ್ಟೇ PM ಗಾಗಿ ಬಂದಿತ್ತು ಅದರ ರಿಪೋರ್ಟ್ ನಾಳೆ ಸಿಗುತ್ತೆ ಎಂದು ಹೇಳಿದ ಬಳಿಕ
ವಿಕ್ಟೋರಿಯಾ ಆಸ್ಪತ್ರೆ ಯಿಂದ 
ವರ್ತೂರ್ ಪೋಲೀಸ್ ಠಾಣೆಗೆ ಹೊರಟ.
ದೇವ್ರೇ ಒಂದು ಕೇಸ್ ಕೊಡಿ ಅಂದ್ರೆ
ಒಟ್ಟಿಗೇ ಒಂದಲ್ಲಾ ಮೂರು ಕೊಟ್ಟುಬಿಟ್ಟಿಯಲ್ಲ
ಇದಲ್ಲದೇ ಹಳೆಯ ಪ್ರಕರಣಗಳು ಬೇರೆ
ದೇವ್ರೇ one at a time ಕೊಡಿ
ಸರಿ ಮೊದಲು ಎಡವಯ್ಯನ ಆಸಾಮಾಯಿಕ
ಮೃತ್ಯು ವನ್ನು ನಿರಾಕರಿಸೋಣವೆಂದು ಯೋಚಿಸಿದ.ಅಭಿಗೆ ರಸ್ತೆಯಲ್ಲಿ 
ಫೋರೆನ್ಸಿಕ್ ಸೈನ್ಸ್  ಪ್ರೊಫೆಸರ್ ಗೋವಿಂದ್
ರವರು ಹೇಳಿದ ವಿಷಯ ತಲೆಯ ಕೊರೆಯಿತು
ರಿಕೋಶೆಯ್ Ricochet ಆಗಲು ಲೊ ಎಂಗಲ್ 
ಮತ್ತೆ ಬುಲೆಟ್ನ ವೇಗ ನಿರ್ಧಾರಿಸುತ್ತೆ ಅಂದ್ರೆ
0.22 ಬುಲೆಟ್ ನ Ricochet ರಿಕೋಶೆಯ್
ಆಗಿದ್ರೇ ಘಟನೆ ಘಟಿಸಿದ ದೂರ 
ಅಲ್ಲೇ100 ಮೀಟರ್ ಸುತ್ತಳತೆಯಲ್ಲಿ  
ಲಾಂಗ್ ಗನ್ನನ್ನು ಫೈರ್ ಮಾಡಿರಬೇಕು
ಆ ವ್ಯಕ್ತಿ ಅಲ್ಲೇ ಎಲ್ಲೋ ಇದ್ದಿರಬೇಕು.
ಯಾರಿರಬಹುದು?
ಯಾಕೆ ಅಲ್ಲಿದ್ರು?
ಯಾರಿಗೆ ಗುಂಡು ಹಾರಿಸಿದ್ರು?
ಹಾಗೇ ಚಿಂತಿಸ್ತಾ 
ವರ್ತೂರ್  ಠಾಣೆ 
ವಾಪಸ್ಸು ಬಂದ.










ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.