ರಿಕೋಶೇಯ್ ಅಧ್ಯಾಯ-1 𝗥𝗶𝗰𝗼𝗰𝗵𝗲𝘁

ರಿಕೋಶೇಯ್
Ricochet
ಅಧ್ಯಾಯ-1
ಸನ್ನಿವೇಶ, ಕಥಾ ಪಾತ್ರಗಳು,ಘಟನೆಗಳು, ಎಲ್ಲವೂವೆ ಕಾಲ್ಪನಿಕ, ❤️ಹೊಂದಾಣಿಕೆ ಇದ್ರೆ ಅದು ಕೇವಲ ಆಕಸ್ಮಿಕ
 ಲೊಕೇಶನ್ : DCP ವೈಟ್ ಫೀಲ್ಡ್  Zone                                     ಆಫೀಸ್, ಬೆಂಗಳೂರು

ಅಸಿಸ್ಟೆಂಟ್ ಕಮಿಷನರ್ 
ಅಭಿ ಅನ್ನೋ ಅಭ್ಯುದಯ IPS 
ಪ್ರೊಬೇಶ್ನರ್,ಪ್ರಶಿಕ್ಷಣಾರ್ಥಿ,
ಸುಮಾರು 23-24 ವಯಸ್ಸಿನ ಯುವಕ
ಪೊಲೀಸ್ ಯುನಿಫಾರ್ಮ್ ನಲ್ಲಿ ಇನ್ನೂ
ಹೆಚ್ಚು ಸ್ಮಾರ್ಟ್ ಆಗಿ ಕಾಣಿಸುತಿದ್ದ.
ಕರ್ನಾಟಕ ರಾಜ್ಯಕ್ಕೆ ಕೇಂದ್ರ ದ್ವಾರ ನಿಗದಿಸಿ
ಕಳುಹಿಸಿದ ಭಾರತೀಯ ಪೊಲೀಸ್ ಸರ್ವಿಸ್
(IPS) ಅಧಿಕಾರಿ. ಬೆಂಗಳೂರು ಡೆಪ್ಯೂಟಿ ಪೊಲೀಸ್ ಕಮಿಷನರ್ DCP (ವೈಟ್ ಫೀಲ್ಡ್) ರವರನ್ನು 
ಗೌರವ ನಿಮಿತ್ತ ಭೇಟಿಯಾಗಿ,
ಡ್ಯೂಟಿ ಗೆ ರಿಪೋರ್ಟ್  ಮಾಡಿಕೊಳ್ಳಲು
Lounge ನಲ್ಲಿ ಕಾಯುತಿದ್ದ.
DCP ಸಾಹೇಬ್ರ ಮುಂದೆ ಒಂದು ಬಿರುಸಾದ ಸಲ್ಯೂಟ್ ಹೊಡೆದು ಜಾಯ್ನಿಂಗ್ ಪೇಪರ್ಸ್ ಕೊಟ್ಟ.
ಉಭಯ ಕುಶಲೋಪರಿಯ ನಂತರ,
ಖಾಲಿಯಿದ್ದ ವರ್ತೂರ್ ಪೊಲೀಸ್ಸ್ಟೇಷನ್ ನ
ಇನ್ ಚಾರ್ಜ್ ಇನ್ಸ್ ಪೆಕ್ಟರ್ ಆಗಿ 
ಪದಸ್ಥಾಪನೆ ಆದೇಶ ಜಾರಿ ಮಾಡಿದರು.
ಅಭಿ ಜೀಪ್ ಹತ್ತಿ ಸೀದಾ
ವರ್ತೂರ್ ಪೊಲೀಸ್ ಸ್ಟೇಷನ್ 
ಬಂದಿಳಿದಾಗ  11.00am ಆಗಿತ್ತು.
ಇನ್ಸ್ ಪೆಕ್ಟರ್ ಪದವಿ ಕಾಲಿ ಇದ್ದದ್ದರಿಂದ
ಸೀದಾ ಜಾಯಿನಿಂಗ್ ರಿಪೋರ್ಟ್ ನಲ್ಲಿ
ಸಹಿ ಹಾಕಿ ಸೇರ್ಕೊಂಡ.
ಅಭಿ ಅನ್ನೋ ಅಭ್ಯುದಯ 
ಈಗ ಇನ್ಸ್ ಪೆಕ್ಟರ್ ಅಭ್ಯುದಯ
ಸಬ್ ಇನ್ಸ್ ಪೆಕ್ಟರ್ ವೀರಣ್ಣ 
ಅಭ್ಯುದಯ AC ಯವರನ್ನು ಸ್ವಾಗತಿಸಿ 
ಠಾಣೆಯಲ್ಲಿ ಕಾರ್ಯರತರಾಗಿದ್ದ 
ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್
ಹೆಡ್ ಕಾನ್ಸ್ ಟೇಬಲ್, ಕಾನ್ಸ್ ಟೇಬಲ್,
ಪೊಲೀಸ್ ಸಶಸ್ತ್ರ ಪಡೆ, ಗಾರ್ಡ್ಸ್,
ರೈಟರ್ ಮತ್ತಿತರನ್ನು ಪರಿಚಯಿಸಿದ.
ಎಲ್ಲರೊಟ್ಟಿಗೆ ಚರ್ಚೆಯ ಮಾಡಿ ತಾನೇನು ಮಾಡಬೇಕೂಂತ ಇದ್ದೀನಿ ಮತ್ತೆ
ಜನರ ಅಪೇಕ್ಷೆ  ಅದಕ್ಕೆ ಅನುಗುಣವಾಗಿ
ಕೆಲಸ ಮಾಡಿ ಎಂದು ಲೆಕ್ಚರ್ ಕೊಟ್ಟು
ಒಂದು ರೌಂಡ್ ಕಾರ್ಯಕ್ಷೇತ್ರವ 
ಅರಿತು ಕೊಳ್ಳಲು ಸಬ್ ಇನ್ಸ್ ಪೆಕ್ಟರ್ 
ವೀರಣ್ಣನ ಜೊತೆ ಹೊರಟ. 
ಅನ್ಯ ಪೊಲೀಸ್ ಔಟ್ ಪೋಸ್ಟ್ ಗಳನ್ನು
ವೀಕ್ಷಿಸಿ ಸಮುಚಿತ ನಿರ್ದೇಶಗಳ ಕೊಟ್ಟು 
ಸಂಜೆ 5 ಘಂಟೆಗೆ ವಾಪಸ್ಸು 
ವರ್ತೂರ್ ಪೊಲೀಸ್ ಸ್ಟೇಷನ್ ಗೆ ಬಂದ.
ಡೈಲಿ ಕ್ರೈಮ್ ರಿಪೋರ್ಟ್ನ ಅವಲೋಕಿಸಿದ. 
ಒಂದು ಕಡೆ
ಹಳೆಯ ಪ್ರಕರಣಗಳ ನಿರಾಕರಣೆ
ಇನ್ನೊಂದು ಕಡೆ 
ಹೊಸ ಕ್ರೈಂ ನಡೆಯದೆ ತಡೆಯಲು 
ಕೈ ಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು.
ಹೊಸ ಡ್ಯೂಟಿ ಚಾರ್ಟ್ ಒಂದನ್ನು 
ತಯಾರಿಸಲು ರೈಟರ್ ಗೆ ಹೇಳಿ 
ಹಲಸೂರ್ ನಲ್ಲಿದ್ದ ಸ್ವಂತ ಮನೆಗೆ ಹೊರಟ.
ನಾಳೆ ಭಾನುವಾರ ರಜೆ ಹಾಗೇ
ಫ್ರೆಶ್ ಆಗಿ ಸೋಮವಾರ ಬರೋಣವೆಂದು 
ಮನಸ್ಸಲ್ಲೇ ಕನಸ್ಸ ಕಾಣ ತೊಡಗಿದ.
ಚಿಕ್ಕ ಹುಡುಗರಾಗಿದ್ದಾಗ ಕಳ್ಳ ಪೊಲೀಸ್ 
ಆಟದಲ್ಲಿ ಪೊಲೀಸ್ ಆಗಿ ಆಡಿದ್ದಷ್ಟೇ, 
ಅಮ್ಮ ಆಗಿನಿಂದಾಲೇ ಅಭಿಯನ್ನು
ಪೊಲೀಸ್ ಪೊಲೀಸ್ ಎಂದೇ ಬೆಳೆಸಿದ್ದಳು.
ಅಭಿ ಬೇರೆ ಏನೂ ಯೋಚಿಸಲಿಲ್ಲ. 
ಪ್ರಯತ್ನ ಪಟ್ರೆ ಎಲ್ಲವೂ ಸಾಧ್ಯಾನ್ನೇ.
IPS ಪಾಸು ಮಾಡಿ ಈಗ ಪೊಲೀಸ್ ಅಧಿಕಾರಿ.
ಆತನಿಗೇನು ಗೊತ್ತಿತ್ತು,
ಪೊಲೀಸ್ ಕೆಲಸ 24x7 ಕೆಲಸವೆಂದು
ಅದೂನೂವೆ ಜಾಯಿನ್ ಆದ ಆ ರಾತ್ರಿ,
ಅವನ ಪೊಲೀಸ್ ಜೀವನದ
ಹೊಸ ಅಧ್ಯಾಯ ಪ್ರಾರಂಭವಾಗಲಿದೆಯೆಂದು...
ಶನಿವಾರ ರಾತ್ರಿ ಅಂದ್ರೆ 
11.30pm ಇರಬೇಕು, 
ವರ್ತೂರು ಮೇನ್ ರೋಡ್ನಿಂದ
ವೈಟ್ ಫೀಲ್ಡ್ ಕಡೆ ಹೋಗುವ ರಸ್ತೆಯಲ್ಲಿ
ಆಕ್ಷನ್ ಬ್ಯಾಂಕ್ ಎದುರಿದ್ದ ಸ್ಟ್ರೀಟ್ ಲೈಟ್
ಟೊಳ್ಳಂತ ಶಬ್ದದೊಡನೆ ಕತ್ತಲಾಯ್ತು.
ಕಂಬಳಿ ಹೊದ್ದು ಕೊಂಡು ಮಲಗಿದ್ದ 
ಪಂಚಮ್  ಏಕ್ ದಮ್ ಎದ್ದು ಕೂತ
ಬ್ಯಾಂಕಿನ ಮುಂದೆ ಡ್ಯೂಟಿಯಲ್ಲಿದ್ದ ಆತ
ತಕ್ಷಣವೇ ತನ್ನ ಬಗಲಲ್ಲೆ ಮಡಗಿದ್ದ
0.22mm ಲಾಂಗ್ ಗನ್ ತೋಳಿಗೆ
ತಗಲು ಹಾಕಿ ಕೊಂಡು ಎದ್ದು ನಿಂತು 
ಟಾರ್ಚ್ ಲೈಟ್ ಹಚ್ಚಿದ. 
ಎದುರು ಚೆಲ್ಲಿದ ಬೆಳಕಲ್ಲಿ ಬಿಳಿ ಬಣ್ಣದ
ಮಹಿಂದ್ರಾ ಬೊಲೆರೋ ಜೀಪೊಂದು 
ನಿಂತಿದ್ದು ಕಂಡು ಬಂತು. 
ಅದರಿಂದ ದಿಡುದಿಪ್ಪಂತ 
ಡ್ರೈವರ್ನ ಬಿಟ್ಟು ಮೂವರು ಇಳಿದರು.
ದಾಂಡಿಗರು ಅಂತ ಹೇಳುವಂತ ಅಗಲ ಇಲ್ಲಾ
ಟಾಲ್ ಅಂದ್ರೆ  ಮೂವರ ಸರಾಸರಿ ಹೈಟ್ ಆರಡಿ ಇರಬಹುದೇನೋ,  ಕಣ್ಣನ್ನು ಬಿಟ್ಟು 
ಮುಖಕ್ಕೆ ಕಪ್ಪು ಮಾಸ್ಕು, ಇಬ್ಬರು 
ನೀಲಿ ಜೀನ್ಸ್, ಬ್ಲಾಕ್ ಟೀ ಶರ್ಟ್ ಹಾಕಿದ್ದರು.
ಒಬ್ಬ  ಮಾತ್ರ ನೀಲಿ ಜಾಕೆಟ್, ಕಪ್ಪು ಪ್ಯಾಂಟ್
ಮತ್ತೆ ಬ್ಲಾಕ್ ಟೀ ಶರ್ಟ ಹಾಕಿದ್ದ. 
ಗುರುತು ಹಿಡಿಯೋದು ಕಷ್ಟವಾಗಿತ್ತು
ಬೌನ್ಸರ್ಸ್ ಅನ್ನೋದಕ್ಕಿಂತಲೂ 
ಕೌ ಬಾಯ್ಸ್ ತರಹ ಇದ್ದ ಮೂವರೂ ಇಳಿದು 
ಪಂಚಮ್ ಹತ್ತಿರ ಬಂದರು. ಪಂಚಮ್ ತನ್ನ ಹತ್ತಿರವಿದ್ದ 0.22mm ಲಾಂಗ್ ಗನ್ನನ್ನು 
ಮೂವರಲ್ಲಿ ಒಬ್ಬನ್ನ ಗುರಿಯಿಟ್ಟು ಹಾರಿಸಿದ
ಆತ ಬಗ್ಗಿ  ತಪ್ಪಿಸಿ ಕೊಂಡ. ಆ ರೊಯ್ಯಂತ ಹಾದು ಹೋದ ಬುಲೆಟ್ ಎಲ್ಲೋಯ್ತೋ ಗೊತ್ತಾಗಲಿಲ್ಲ
ಒಬ್ಬೊಬ್ಬರು ಒಂದೊಂದು ಕೆಲಸವನ್ನ
ತಮ್ಮಲ್ಲೇ ಹಂಚಿಕೊಂಡರು.
ಅವರಲ್ಲಿ ಒಬ್ಬ ಲೀಡರ್ ಇರಬೇಕು
ನೀಲಿ ಜಾಕೆಟ್ ಹಾಕಿದ್ದವನನ್ನು  
ಕ್ಯಾಪ್ಟನ್ಅಂತ ಕರೆಯುತ್ತಿದ್ದರು.
ಆತ ಪಂಚಮ್ ನ ಗುರಿ ಮಾಡಿ
ಏನೂ ಮಾತನಾಡಲು ಬಿಡಲಿಲ್ಲಾ 
ಒಂದೇ ಕರಾಟೆ ಏಟು ಕುಸಿದು ಬಿದ್ದ ಪಂಚಮ್
ಜಾಕೆಟ್ನಿಂದ ಚಾಕೊಂದ ತೆಗದ ಅದೇ ಸ್ಪೀಡ್ ನಲ್ಲಿ ಸರ್ಂತ ಅವನ ಜಗ್ಯುಲರ್ ರಕ್ತ ನಾಳ ಕತ್ತರಿಸಿದ
ರಕ್ತ ಧಾರೆಯಾಗಿ ಚಿಮ್ಮಿ ಹರಿಯಿತು
ಪಂಚಮ್ ಸೈಲೆಂಟ್ ಆದ. 
ಇನ್ನೊಬ್ಬ ಪಂಚಮ್ ನ ಗನ್ ತಗೊಂಡು 
ಅದರ ಬಟ್ಟ್ ನಿಂದ  CCTV ಕ್ಯಾಮೆರಾ 
ಒಡೆದು ಹಾಕಿದ. ಮೂರನೇಯವ 
ಅಲಾರಾಂ ಬೆಲ್ ನ ಸಾವಧಾನವಾಗಿ 
ಸದ್ದಿಲ್ಲದೇ ಡಿಸ್ ಆರ್ಮ್ ಮಾಡಿದ. 
ಬಹಳ ಅನುಭವಿಗಳ ತರಹ ವ್ಯವಹಾರ
ಹೊರ ಬಾಗಿಲ ತೆಗೆಯೋದಾಗಲಿ, 
ಒಳಗಿನ ಲಾಕರ್ ನ ತೆರೆಯೋದಾಗಲಿ
ಸದ್ದಿಲ್ಲದೇ ಮಾಡಿದ. ಹಾಗೆಯೇ ಒಬ್ಬ 
ತಿಜೋರಿಯ ಚಾವಿಯಿಲ್ಲದೇ ತೆಗೆಯೋಕೆ 
ಮಾಡ್ರನ್ ಕಟಿಂಗ್ ಪ್ಲಯರ್, ಸಣ್ಣ ಗ್ಯಾಸ್ ಕಟರ್ ಎಲ್ಲಾಉಪಯೋಗಿಸಿ ಬಹು ಸಿಸ್ಟಮ್ಯಾಟಿಕಲ್
ದರೋಡೆ ಮಾಡಿ ಬ್ಯಾಂಕಲ್ಲಿದ್ದ ಧನ ಚಿನ್ನ ಬೆಳ್ಳಿ
ಸಮಸ್ತ ಐಶ್ವರ್ಯ ಗಳನ್ನ ತಂದಿದ್ದ ಕಪ್ಪು ಚೀಲಗಳಲ್ಲಿ ತುಂಬಿಸಿ ಹೊರಟರು ಜೀಪನ್ನು ವೈಟ್ ಫೀಲ್ಡ್ ನತ್ತ ಸಾಗಿಸಿದರು.
ಇನ್ನೊಂದೆಡೆ 
ವರ್ತೂರ್ ಕೆರೆ, 
ಕೆರೆಯ ತೀರ, 
ಬಂಡು ಪ್ರದೇಶ, ಇವೆಲ್ಲವನ್ನೂ
ಕಾರಿರುಳು ಆವರಿಸಿತ್ತು. 
ಅದೇ ಶನಿವಾರ ರಾತ್ರಿ ಸುಮಾರು
10.00pm ಇರಬೇಕು, 
ವರ್ತೂರ್ ಕೆರೆಯ ಕಾರ್ನರ್ ನಲ್ಲಿ 
ಅಧಿಕ ನೀರು ಹರಿದು ಹೋಗುವ 
ಮಡುವ ಪಕ್ಕದ ಕಲ್ಲು ಚಪ್ಪಡಿಯ 
ಮೇಲೆ ಕುಳಿತಿದ್ದ ಎಡವಯ್ಯ.  
ಕೈಯಲ್ಲಿ ಗಾಳ, ಗಾಳದ ಮೊನೆಯ 
ಹುಕ್ಕಿಗೆ ಎರೆ ಹುಳವ ಸಿಕ್ಕಿಸಿ ರೋಯ್ಯಂತ  
ಟ್ವಾಯಿನ್ ದಾರವ ಬಲು ದೂರ ಕೆರೆಯೊಳೆಗೆ
ಎಸೆದ. ಚಳಿ ಗಾಳಿ ಸೋಂಕಲು 
ಚಡ್ಡಿಯ ಪಾಕೆಟ್ ನಿಂದ ಗಣೇಶ್ 
ಬೀಡಿ ಬಂಡಲ್ ಹೊರ ಬಂತು 
ಅದರಿಂದ ಬೀಡಿಯೊಂದ ಹೊರ ತೆಗೆದು 
ಒಂದು ತರಹ ಪ್ರೇಮದಿಂದ ಮೂಸಿ 
ಬಾಯ ತುದಿಯಲ್ಲಿಟ್ಟು 
ಬೆಂಕಿ ಕಡ್ಡಿಯೊಂದ ಒರಸಿ ಬೀಡಿ ಹಚ್ಚಿ,
ದೀರ್ಘವಾದ ಹೊಗೆ ಒಳ ಎಳೆದು
ನಿಟ್ಟುಸಿರೊಡನೆ ಹೊಗೆ ಗೋಲಾಕರದಲ್ಲಿ ಬಿಟ್ಟ.
ದಾರ ಸರ್ರೆನೆ ಎಳೆದದ್ದ ಕಂಡು 
ಬೀಡಿಯನ್ನು  ಬಾಯಲ್ಲಿ ಕಚ್ಚಿ ಕೊಂಡು 
ಟ್ವಾಯಿನ್ ದಾರವ ಎಳೆದ 
ಸದ್ದಿಲ್ಲದ ವಾತಾವರಣದಲ್ಲಿ 
ಚಟ್ ಪಟ್ ಚಟ್ ಪಟಾಂತ
ನೀರು ಗಾಳಿಯ ಇಂಟರ್ ಫೇಸ್ ನಲ್ಲಿ 
ಕ್ಯಾಟ್ ಫಿಶ್  ಗಾಳಕ್ಕೆ ಸಿಕ್ಕಿ ತಡಪಡಿಸುತಿತ್ತು. 
ಅನುಭವದ ಕೈಚಳಕ 
ಮೀನನ್ನು ಗಾಳದಿಂದ ಬಿಡಿಸಿ 
ಜೊತೆ ತಂದಿದ್ದ ಪ್ಲಾಸ್ಟಿಕ್ ಕೈ ಚೀಲದೊಳಗೆ ಹಾಕಿದ
ಮೊದಲೇ ಹತ್ತು ಮೀನುಗಳಿಂದ ತುಂಬಿತ್ತು 
ರಾತ್ರಿ 11.30pm ಆಗಿತ್ತು
ಇವತ್ತಿಗೆ ಇಷ್ಟು ಸಾಕೂಂತ 
ಗಾಳವ ರೋಲ್ ಮಾಡಿ 
ಕೈ ಚೀಲ ಎತ್ಕೊಂಡು 
ಹೊರಡಲು ಅನುವಾದ.
ಅಯ್ಯೋ ಅಮ್ಮಾಂತ 
ಕೂಗಿ ಕುಸಿದು ಬಿದ್ದ ಎಡವಯ್ಯ
ತಲೆಯ ಹಿಂಭಾಗದಲ್ಲಿ ಪೆಟ್ಟಾಗಿ ಮುಂದೆ
ಹಣೆಯ ಬಿರುಕಿನಲ್ಲಿ ರಕ್ತ ಧಾರಾಕಾರವಾಗಿ
ಹರಿಯ ತೊಡಗಿತ್ತು.
ದೊಪ್ಅಂತ ಚಪ್ಪಡಿಯ ಅಪ್ಪಿಕೊಂಡು 
ಮುಖದ ಮೇಲೆ ಬಿದ್ದ. 
ಕೈ ಚೀಲದಲ್ಲಿದ್ದ ಮೀನುಗಳು
ತಡಪಡಿಸುತಿತ್ತು. 
ಏನೊಂದೂ ಸದ್ದಿಲ್ಲದೆ ಅದರ ಪಕ್ಕದಲ್ಲೇ
ಎಡವಯ್ಯನ ಮೃತ್ಯು.
ಬೆಳಗ್ಗೆ ಪಕ್ಕದ ರಾಮಗೊಂಡನ ಹಳ್ಳಿಯವರು
ಎಡವಯ್ಯನ ಗುರುತಿಸಿ, 
ಪೊಲೀಸ್ ಸ್ಟೇಷನ್ ಗೆ ಸುದ್ದಿ ತಿಳಿಸಿದರು.. 
ಅಲ್ಲಿಗೊಂದು ಪೊಲೀಸ್ ಟೀಮ್ ಕಳುಹಿಸಿದ ನಂತರ
ಬ್ಯಾಂಕ್ ದರೋಡೆ ಮತ್ತೆ ಗಾರ್ಡ್  ಪಂಚಮ್ ನ ಮೃತ್ಯು ಸೂಚನೆ ಇನ್ಸ್ ಪೆಕ್ಟರ್ ಅಭಿಗೆ 
ತಿಳಿಸಿದ್ದಾಯ್ತು. ಇದು ಸ್ವಲ್ಪ ಸೆನ್ಸೇಷನಲ್ ನ್ಯೂಸ್
ಮ್ಯಾನೇಜರ್ ಮೊದಲು ವೈಟ್ ಫೀಲ್ಡ್ ಠಾಣೆ ಗೆ
ಫೋನ್ ನಲ್ಲಿ ತಿಳಿಸಲು ಅವರು ವರ್ತೂರ್ ಪೊಲೀಸ್ ಸ್ಟೇಷನ್ ಸೀಮೆಗೆ ಸೇರಿದ್ದು ಅವರನ್ನು ಸಂಪರ್ಕಿಸಿ ಎಂದು ತಿಳಿ ಹೇಳಿದರು. 
ಒಂದು ಕಡೆ ದರೋಡೆ ಮತ್ತು ಕೊಲೆ
ಇನ್ನೊಂದು ಕಡೆ
ನಿಗೂಢ ಮೃತ್ಯು, 
ಯಾರು ಮಾಡಿದರು?
ಯಾಕೆ ಮಾಡಿದರು? 
ಯಾರು ಇದರ ಮುಖ್ಯ ನಿಶಾನೆ?
ಈ ಎರಡು ಘಟನೆಗಳು ಶನಿವಾರ ರಾತ್ರಿ ನಡೆದಿತ್ತು.




ಕಾಮೆಂಟ್‌ಗಳು

  1. Just read Part 1 of Ricochet — what a thrilling start! 🌪️
    It’s both surprising and exciting to come across a suspense thriller blog series from you. So lovely to know you write across so many genres! The plot is already so gripping, and with six parts out, I can't wait to catch up and read more about the sharp and energetic ಅಭ್ಯುದಯ IPS. Looking forward to the journey ahead! 🔥

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.