ರಿಕೋಶೇಯ್ ಅಧ್ಯಾಯ -6 𝗥𝗶𝗰𝗵𝗼𝗰𝗵𝗲𝘁
ಸನ್ನಿವೇಶ, ಕಥಾ ಪಾತ್ರಗಳು,ಘಟನೆಗಳು, ಎಲ್ಲವೂವೆ ಕಾಲ್ಪನಿಕ, ❤️ಹೊಂದಾಣಿಕೆ ಇದ್ರೆ ಅದು ಕೇವಲ ಆಕಸ್ಮಿಕ
ಒಂದು ಕಡೆ ವರ್ತೂರ್,
ಬೆಂಗಳೂರು ನಗರ
ಬ್ಯಾಂಕ್ ನ ಸುರಕ್ಷಾಗಾರ್ಡ್
ಪಂಚಮ್ ನ ಕೊಲೆ,
ಲಾಂಗ್ ಗನ್ ಬುಲೆಟ್
ರೆಕೋಶೇಯ್ ನಿಂದ
ಉಂಟಾದ ಎಡವಯ್ಯನ
ಆಕಸ್ಮಿಕ ಮೃತ್ಯು.
ಇನ್ನೊಂದು ಕಡೆ ಧರ್ನಾವ್ದ ಗ್ರಾಮ,
93 ವರ್ಷದ ಅಜ್ಜ,
ಕಳ್ಳತನದ ಮಾಲು ಜಪ್ತಿಯ
ತಡೆಯಲು ಪ್ರಯತ್ನಿಸಿ
ಪೊಲೀಸರ ರೈಡ್ ನ
ಧಕ್ಕಾಮುಕ್ಕಿಯಿಂದ ಬಿದ್ದು
ಉಂಟಾದ ಆಕಸ್ಮಿಕ ಮೃತ್ಯು.
ಬೆಂಗಳೂರಿನ ಒಂದು ಮೂಲೆಯಲ್ಲಿ
ನಡೆದ ಬ್ಯಾಂಕ್ ರಾಬರಿ, ಕೊಲೆ,
ಅದರ ಪ್ರಭಾವ,
ಮಧ್ಯ ಪ್ರದೇಶದ ಗುಣಾ ಜಿಲ್ಲೆಯ
ಧರ್ನಾವ್ದ ಗ್ರಾಮದಲ್ಲಿ ಸಂಭವಿಸಿದ
ಅಜ್ಜನ ಮೃತ್ಯು.
ಅದಕ್ಕೆ ಮೂಲ ಕಾರಣಕರ್ತರಾದ,
ಕ್ಯಾಪ್ಟನ್ ದೇವಿಸಿಂಗ್, ಜಮುನಾ, ದಿಲೀಪ್
ಮತ್ತೆ ಮೂಲ್ ಸಿಂಗ್ ಎಂಬ ಅಪರಾಧಿಗಳನ್ನ
ಬೆಂಗಳೂರಿನಿಂದ ಬಂದ
ಇನ್ಸ್ ಪೆಕ್ಟರ್ ಅಭಿಯವರ ತಂಡದವರು
ಗುಣಾ ಜಿಲ್ಲೆಯ ಪೊಲೀಸ್ ತಂಡದೊಂದಿಗೆ
ನಡೆಸಿದ ಜಾಯಿಂಟ್ ಆಪರೇಷನ್ನಲ್ಲಿ
ಬಂಧಿಸಿ, ಬ್ಯಾಂಕಿನಲ್ಲಿ ಕಳುವಾದ
ಚಿನ್ನ,ಬೆಳ್ಳಿ, ಕ್ಯಾಶ್ ನ ವಶ ಪಡಿಸಿಕೊಂಡು
ಬೆಂಗಳೂರು ತೆರಳಿದರು.
ಇನ್ಸ್ ಪೆಕ್ಟರ್ ತೋಮರ್ ಗೆ
ಥ್ಯಾಂಕ್ಸ್ ಹೇಳ ಬೇಕಿತ್ತು ಮತ್ತೆ
ಅಜ್ಜನ ಪ್ರಕರಣ ಏನಾಯ್ತುಂತ
ತಿಳಿದುಕೊಳ್ಳಲು ಬೆಂಗಳೂರಿನಿಂದ
ಇನ್ಸ್ ಪೆಕ್ಟರ್ ಅಭಿ, ಗುಣಾ ಜಿಲ್ಲೆಯ
DSP ತೋಮರ್ ಸಾಹೇಬ್ರಿಗೆ
ಫೋನ್ ಹಚ್ಚಿದ.
ಇನ್ಸ್ ಪೆಕ್ಟರ್ ತೋಮರ್
ಅಭಿಯವರ ಟೀಮ್ ಬೆಂಗಳೂರು ಹೊರಟ
ನಂತರ ನಡೆದ ಘಟನೆಗಳ
ಬಗ್ಗೆ ಹೇಳಲು ಮುಂದಾದರು.
ಸಂಜೆ ಸುಮಾರು ಆರು ಘಂಟೆಯಿರಬಹುದು,
ಅಜ್ಜನ ಮೃತ ದೇಹವನ್ನು
ಅಜ್ಞಾತ ವಾಹನವೊಂದು
ಧರ್ನಾವ್ದ ಗ್ರಾಮದಿಂದ
ಗುಣಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ
ಪ್ರಾಂಗಣದ ತುರ್ತುಚಿಕಿತ್ಸೆ ಮುಂದಿದ್ದ
ಸ್ಟ್ರೆಚರ್ ಮೇಲಿಟ್ಟು, ಬಂದ
ಸ್ಪೀಡ್ ನಲ್ಲೇ ಹೊರಟು ಹೋಗಿತ್ತು.
ಹೊರಗಿದ್ದ ಅಟೆಂಡರ್ಸ್
ಸ್ಟ್ರೆಚರ್ ಮೇಲಿದ್ದ ಅಜ್ಜನನ್ನು
ಎಮರ್ಜೆನ್ಸಿ ಕಕ್ಷಕ್ಕೆ ತಳ್ಳಿ ಕೊಂಡು ಹೋದರು.
ಅಜ್ಜನ ಪರೀಕ್ಷಿಸಿದ ಡಾಕ್ಟರ್ ಗಳು
ಅಜ್ಜ ಬ್ರಾಟ್ ಡೆಡ್ ಅಂದ್ರೆ
ಆಸ್ಪತ್ರೆ ತಲುಪುವ ಮುನ್ನ
ಪ್ರಾಣ ಪಕ್ಷಿ ಹಾರಿ ಹೋಗಿದ್ದದನ್ನು
ಖಚಿತ ಪಡೆಸಿದರು.
ಉಂಟಾದ ಅಜ್ಜನ ಸಾವಿನ ಸುದ್ದಿ
ಕಾಡಗಿಚ್ಚಿನಂತೆ ಗುಣಾ ನಗರದ ಎಲ್ಲೆಡೆ ಹಬ್ಬಿತ್ತು.
ಸಾವಿರಾರು ಜನರು ಗುಣಾ ಜಿಲ್ಲೆಯ
ಆಸ್ಪತ್ರೆಯ ಘೇರಾವ್ ಮಾಡಿ
ಪೊಲೀಸರ ವಿರುದ್ಧ
ಮುರ್ದಾಬಾದ್ ಘೋಷಣೆ ಎಬ್ಬಿಸಿದರು.
ಸತ್ತ ಅಜ್ಜ, ಬಹು ಸಂಖ್ಯೆಯ ಸಮಾಜದವರು
ಧನಾಡ್ಯರು, ಸಮಾಜದ ಹಿರಿಯರು,
ರಾಜಕೀಯ ಪಕ್ಕ ಬಲ ಉಳ್ಳವರು,
ಎಲ್ಲರಿಗೂ ಸುದ್ದಿ ತಲುಪಿ,
ಅಜ್ಜನ ಸಾವು ಪೊಲೀಸ್ ದೌರ್ಜನ್ಯದಿಂದ ಉಂಟಾಯಿತು ಎಂದು
ಪೊಲೀಸರ ವಿರುದ್ಧ ಪ್ರಕರಣ ನೋಂದಾಯಿಸಿ
ಎನ್ನುವ ಬೇಡಿಕೆಯೊಂದಿಗೆ
ಸಣ್ಣದಾಗಿ ಪ್ರಾರಂಭವಾದ ಗುಂಪು,
ಹೆಚ್ಚು ಜನ ಸೇರುತ್ತಲೇ
ಅನಿಯಂತ್ರಿತ ಜನ ಸಮೂಹವಾಯ್ತು.
ತಪ್ಪಿತಸ್ಥರಿಗೆ ತಕ್ಕ ದಂಡನೆ ಕೋರಿ
ಪೊಲೀಸರ ದೌರ್ಜನ್ಯವ ಖಂಡಿಸಿ
ಉಗ್ರವಾಗ ತೊಡಗಿತು.
ಇಷ್ಟೆಲ್ಲಾ ನಡೆಯುತ್ತಿದ್ದರೂ
ಓಬ್ಬ ಪೊಲೀಸರೂ ಕಾಣೆ.
ನಂತರ SP ಹಾಗೂ ಕಲೆಕ್ಟರ್
ಜೊತೆ ನಡೆದ ಮಾತುಕತೆ ಯಲ್ಲಿ
ಸಮಾಜದ ಡಾಕ್ಟರ್ ಗಳನ್ನೊಳಗೊಂಡ
4 ಜನರ ಸಮಿತಿ ಅದರಲ್ಲಿ ಮೃತರಾದ
ಅಜ್ಜನ ಹಿರಿಯ ಮಗ ಸದಸ್ಯ
ಮತ್ತಿಬ್ಬರು ಪ್ರತಿಷ್ಟಿತ ಡಾಕ್ಟರ್ ಗಳು
ಜಿಲ್ಲೆಯ ಲಯನ್ಸ್ ಕ್ಲಬ್ ಪ್ರೆಸಿಡೆಂಟ್ ಒಬ್ಬರು
ಪೋಸ್ಟ್ ಮಾರ್ಟೆಮ್ ಸಮೀಕ್ಷೆ ಹಾಗೂ ಮೃತ್ಯುಗೆ ಕಾರಣಗಳ ವಿವರವನ್ನು ಪೊಲೀಸರು ಸಮಿತಿ ಯ ಜೊತೆ ಹಂಚಿ ಕೊಳ್ಳಬೇಕು. ರಾತ್ರಿಯಾದ್ದರಿಂದ ಬೆಳಗ್ಗೆ
7 ಘಂಟೆಗೆ ಪೋಸ್ಟ್ ಮಾರ್ಟೆಮ್ ಎಂದು ನಿರ್ಣಯವಾದ ಮೇಲೆ ಎಲ್ಲರೂ
ಅವರವರ ಮನೆಗಳಿಗೆ ತೆರಳಿದರು
ಜೊತೆಗೆ ಜನ ಸಮೂಹವು....
ರಾತ್ರಿ 12 ಘಂಟೆ,
ಪೊಲೀಸರ ಜೊತೆ ಅಜ್ಜನ
ಹಿರಿಯ ಮಗ ಚರ್ಚೆಗಾಗಿ
ಠಾಣೆ ಗೆ ಹೋಗಿದ್ದರು.
ಚರ್ಚೆಯಲ್ಲಿ ಅಜ್ಜನ ಹಿರಿಯ ಮಗ
ಟೌನ್ ಇನ್ಸ್ ಪೆಕ್ಟರ್ ಹತ್ತಿರ
ಪ್ರಸ್ತಾವಿಸಿದ
ನೋಡಿ ಆಗೋದು ಆಗಿ ಹೋಯ್ತು
ಇನ್ನೂ ಏನು ಮಾಡಿದರೂ
ಅಜ್ಜನ ಜೀವ ವಾಪಸ್ಸು ಬರೋಲ್ಲ.
ನಾವೊಂದು ಕಾಂಪ್ರೊಮೈಸ್ ಫಾರ್ಮುಲಾಗೆ ಬರೋಣ..ಅದೇನೂಂತಂದ್ರೆ..
ನೀವು ಸೀಜ್ ಮಾಡಿರುವ
ಚಿನ್ನ, ಬೆಳ್ಳಿ, ಒಡವೆಗಳನ್ನು ನಮಗೇ
ವಾಪಸ್ಸು ಕೊಟ್ಟುಬಿಡಿ, ನಾವೇನೂ
ಹೋರಾಟ ಮಾಡೋಲ್ಲಾ,
ತೊಂದರೆ ಕೊಡೋಲ್ಲ,
ಅದಕ್ಕೆ ಗುಣಾ ಟೌನ್ ಇನ್ಸ್ ಪೆಕ್ಟರ್
ಅರರೇ ನಿಲ್ಸಯ್ಯಾ
ಕೊಳ್ಳೆ ಹೊಡೆಯೋದು ನೀವು,
ಕೊಳ್ಳೆ ಪ್ಲಾನ್ ಮಾಡೋದು ನೀವು,
ಅದನ್ನ ಬೆಂಬಲಿಸೋದು ನೀವು
ಪ್ರೋತ್ಸಾಹಿಸೋದು ನೀವು
ಕೊಳ್ಳೆ ಮಾಲು ಕೊಳ್ಳೋರು ನೀವು
ಹೋರಾಟ ಮಾಡೋದು ನೀವು,
ಅದೆಲ್ಲಾ ಬಿಡಿ,
ಮಾಲು ನಿಮ್ಮ ಹತ್ತಿರ ಹ್ಯಾಗೆ ಬಂತು
ಅದನ್ನ ಮೊದಲು ಹೇಳಿ..
ಸಾರ್ ಸಾರ್, ನೂರಾರು ವರುಷಗಳಿಂದ
ನಡೆದು ಬಂದಿರೋ ವ್ಯಾಪಾರವಿದು
ಪಾರ್ಧಿಗಳು ಮಾಲು ತರೋದು,
ಕೊಡೋದು, ನಾವು ಖರೀದಿಸೋದು
ಅವರ ಅವಶ್ಯಕತೆಗೆ ಹಣ ಕೊಡೋದು
ಕಾಲಾ ಕಾಲದಿಂದ ನಡೆದು ಬಂದಿರೋ
ಸಿಸ್ಟಮ್. ಅದರಲ್ಲಿ ನಿಮ್ಮ ಪಾಲು ಸಹ ಇದೆ.
ಈ ಸಲ ಬೆಂಗಳೂರಲ್ಲಿ
ಕೈ ಹಾಕಿ ತಪ್ಪು ಮಾಡಿ ಬಿಟ್ರು,
ನೀವು ಅದನ್ನ ಫಾಲೋ ಅಪ್ ಮಾಡಿ
ಒಡವೆ ಚಿನ್ನ ಬೆಳ್ಳಿಯೆಲ್ಲಾ
ಅವರಿಗೇ
ವಾಪಸ್ಸು ಕೊಟ್ಟುಬಿಟ್ಟೆವೆಲ್ಲಾ, ಸಾರ್
ನಿಮ್ಮ ಹೆಸರನ್ನೂ ಕಾಪಾಡಿದ್ದೇವೆ.
ಹಾಗೇ ನಮಗೂ ಸೆಟಲ್ಮೆಂಟ್ ಮಾಡಿಬಿಡಿ.
ಬಹಳ ಚರ್ಚೆಗಳಾದ ಮೇಲೆ
ಎಲ್ಲಾ ಪೇಪರ್ ಡಾಕ್ಯುಮೆಂಟುಗಳು
ಕೃಷಿ ಭೂಮಿ ಖರೀದಿ ಪತ್ರಗಳು
ಅಜ್ಜನ ಹಿರಿಯ ಮಗನಿಗೆ ವಾಪಸ್ಸು ಕೊಟ್ವಿ.
ಹಣ, ಚಿನ್ನ, ಬೆಳ್ಳಿ, ಒಡವೆ
ಮೂರು ಭಾಗಗಳಾಗಿ ಮಾಡಿ
ಒಂದು ಭಾಗ ಸರ್ಕಾರಕ್ಕೆ
ಒಂದು ಭಾಗ ಪೊಲೀಸರಿಗೆ
ಒಂದು ಭಾಗ ಅಜ್ಜನ ಹಿರಿಯ
ಮಗನಿಗೇಂತ ಡೀಲ್ ನಿರ್ಣಯವಾಯ್ತು.
ತತ್ ಕ್ಷಣವೇ, ಅಜ್ಜನ ಹಿರಿಯ ಮಗ
ಸಮಾಜದವರೊಂದಿಗೆ ಮಾತನಾಡಿ
ಅವರ ಒಪ್ಪಿಗೆಯ ನಂತರ
ಅಜ್ಜನ ಪೋಸ್ಟ್ ಮಾರ್ಟೆಮ್
ಅತಿ ಮುಂಜಾನೆ 4 ಘಂಟೆ
ಬ್ರಹ್ಮ ಮಹೂರ್ತ ದಲ್ಲಿ ಮುಗಿಸಿ
ಮೃತ ದೇಹವನ್ನು ಪೊಲೀಸ್ ವ್ಯಾನ್ ನಲ್ಲಿ
ಧರ್ನಾವದ ಗ್ರಾಮಕ್ಕೆ ಸಾಗಿಸಿ
ಪಾರ್ವತಿ ನದಿ ತೀರದಲ್ಲಿ
ಚಿತೆಗೆ ಬೆಂಕಿಯಿಟ್ಟು
ಅಜ್ಜನ ಹಿರಿಯ ಮಗ
ಅಂತಿಮ ಸಂಸ್ಕಾರವ ನೆರವೇರಿಸಿದರು.
ಬೆಳಗ್ಗೆ ಗುಣಾ ಜಿಲ್ಲೆಯಲ್ಲಿ
ಆಸ್ಪತ್ರೆಯ ಮುಂದೆ
ಪ್ರತಿರೋಧಿಸಲು ಸಹ ಜನರಿರಲಿಲ್ಲ.
ಧಮಾಕೆಯಿಲ್ಲ, ಶಬ್ದವಿಲ್ಲ
ಟಾಯ್ ಟಾಯ್ ಫುಸ್ ಫುಸ್ಂತ
ನೀರಸವಾಗಿ ಮುಗಿದು ಹೋಯ್ತು.
ನೀರ ಮೇಲಿನ ಗುಳ್ಳೆ ನಿಜವಲ್ಲ ನರಹರಿಯೇ...
ಕ್ರಿಮಿನಲ್ ಟ್ರೈಬ್ಸ್ ಎಂದು ಪರಿಗಣಿಸಲ್ಪಟ್ಟ
ಪಾರ್ಧಿಗಳು ಶೋಷಿತ ವರ್ಗ,
ಆದ್ರೆ ಅದಕ್ಕೂ ಹೆಚ್ಚಾಗಿ
ಅವರನ್ನು ಹೀಗೆಯೇ ಬಾಳಲು,
ಪ್ರೆರೇಪಿಸಿ
ಅದರಿಂದ ಲಾಭ ಕಾಣುವ
ಇನ್ನೊಂದು ವರ್ಗ..
ಈ ಚಕ್ರವ್ಯೂಹವ ಭೇಧಿಸಿ
ಸಮಾಪ್ತಗೊಳಿಸ ಬೇಕಾದವರೇ
ಪ್ರೋತ್ಸಾಹಿಸೋದು...
ಎಲ್ಲಿಯವರೆಗೆ
ಎಷ್ಟರವರೆಗೆ..
ಫೋನ್ ಕಟ್ ಆಯ್ತುಂತ ಕಾಣಿಸುತ್ತೆ...
ಅಜ್ಜನ ಹಿತೈಷಿಗಳು ಸಮಾಜದವರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ