ಎಂಟರ ನಂಟು

ಎಂಟರ ನಂಟು 
1974-75 ರ ಡಿಸೆಂಬರ್ ತಿಂಗಳು  
ನಮ್ಮಮಂಗಳೂರಿನ ಗೋರಿಗುಡ್ಡದ
ಫಿಶರೀಸ್ ಕಾಲೇಜಿನ ಹುಡುಗ್ರಿಗೂ 
ಕೊಡಿಯಾಲ್ ಬೈಲ್ ನ 
ಸೈನ್ಟ್ ಅಲಾಯ್ಶಿಯಸ್ 
ಕಾಲೇಜಿನ ಹುಡುಗ್ರಿಗೂ 
ಅಷ್ಟಕ್ಕಷ್ಟೇ,
ಆಗಾಗ ಸಣ್ಣ ಪುಟ್ಟ ಜಗಳ 
ಆಗಿದ್ದೂ ಉಂಟು, 
ಆದ್ರೆ, ಇಬ್ಬರನ್ನೂ 
ಆಕರ್ಷಸಿತ್ತಿದ್ದದ್ದು 
ಮತ್ತೆ ವೈಮನಸ್ಯತೆಗೆ 
ಕಾರಣವಾಗಿದ್ದು ಕಂಕನಾಡಿಯ 
ಸೈನ್ಟ್ ಎಗ್ನೇಸ್ ವಿಮೆನ್ಸ್ ಕಾಲೇಜಿನ 
ವಿದ್ಯಾರ್ಥಿನಿಯರು 
ಬೆಡಗಿನ ಯುವತಿಯರು
ಇಬ್ಬರೂ ಅರಸಿ ಹೋಗುತ್ತಿದ್ದ 
ಮತ್ತೊಂದು ಕೇಂದ್ರವೆಂದ್ರೆ ಅದು 
ಮಂಗಳೂರ ವೆಲೆಂನ್ಸಿಯಾದಲ್ಲಿದ್ದ 
ರೋಶಿನಿ ನಿಲಯ. 
ಕಾಲೇಜು ಹುಡುಗ್ರು 
ಯಾಕ್ ಅಲ್ಲಿಗೆ 
ಹೋಗ್ ತಿದ್ರೂ ಅನ್ನೋದು 
ಎಲ್ರಿಗೂ ಗೊತ್ತಿದ್ದ ವಿಷಯ 
ಕ್ರಿಸ್ಮಸ್ ಗೆ ಸರಿಯಾಗಿ 
ಒಂದು ವಾರದ ಮುಂಚೆ 
ಅಂದ್ರೆ ಡಿಸೆಂಬರ್ 17ನೇ ತಾರೀಕು 
ರೋಶನಿ ನಿಲಯದಲ್ಲಿ ಮ್ಯೂಸಿಕ್ 
ಫೆಸ್ಟಿವಲ್ ನಡಿಯುತ್ತಿತ್ತು.
ನಾವೂ ಹೋಗಿದ್ವಿ 
ನಾವೂ ಅಂದ್ರೆ ನಾನು, ವೆಂಕಿ 
ಅಶ್ವಥ್, ಮಂಜು, ಕೊಂಡಾ,ಮತ್ತಿತರರು 
ತಂಬೋಲಾ, ಹೌಸಿ ಹೌಸಿ ಜರುಗಿತ್ತು 
ಅದ್ರಷ್ಟವ ಅಳೆಯಲು 
10 ರೂಪಾಯಿ ಟಿಕೆಟ್ 
ತೆಕ್ಕೊಂಡಿದ್ವಿ. ಮೈಕ್ ಹಿಡಿದು 
ಒಂದೊಂದು ನಂಬರ್ ಗಳ 
ಹೇಳ್ತಾ ಹೇಳ್ತಾ ಕೊನೆಗೆ  
ಫುಲ್ ಹೌಸ್ ಗಾಗಿ 
ಅನ್ ಲಕ್ಕಿ ಫಾರ್ ಸಮ್ 
ಲಕ್ಕಿ ಫಾರ್ ಸಮ್...
ಸಿಂಗಲ್ ನಂಬರ್ ಎಯಿಟ್ ..
ಸಿಟ್ಟಿಂಗ್ ಟಾಯ್ಟ್ .
ಎಯಿಟ್... ಎಂಟು ಅಂತ
ಹೇಳಿದ್ ತಕ್ಷಣ  ಕೂಗಿದೆ 
ಹಿಯರ್ ಹಿಯರ್ಂತ
ಓ ಅಂತ ಎಲ್ಲರೂ ಒಟ್ಟಾಗಿ 
ಕೂಗಲು  ಗೆದ್ದ ನಾನು 
ಸ್ಟೇಜ್ ನತ್ತ  ಓಡಿದೆ. 
ಸಮಯ ಆಗ ಸರಿಯಾಗಿ 
ರಾತ್ರಿ ಎಂಟು ಘಂಟೆಯಾಗಿತ್ತು 
ಫುಲ್ ಹೌಸ್ ನ ವಿಜೇತ ನನಗೆ 
ಐನೂರು ರೂಪಾಯಿಗಳನ್ನು ಕೊಟ್ರು.
ಆಗ ಮೈಕ್ ಹಿಡಿದವ 
ಸುಮ್ಮನಿರಲಾರದೆ 
ನಿಮ್ಮ ಲಕ್ಕಿ ನಂಬರ್ ಎಂಟು ಅಂತ ಹೇಳಿ 
ನೀವು ಯಾವತ್ತು ಹುಟ್ಟಿದ್ರಿ ಅಂತ ಕೇಳ್ದ 
ನಾನೂ ಯೋಚಿಸದೆ 
ಇಪ್ಪತ್ತಾರು ಅಂತ್ತಂದೆ 
ನೋಡಿ ಎರಡು ಆರು 
ಸೇರಿದ್ರೆ ಎಂಟು 
ಇನ್ನೂ ಮುಂದುವರಿಸುತ್ತಾ 
ಯಾವ ತಿಂಗಳು ಹುಟ್ಟಿದ್ದು 
ಆಗಸ್ಟ್...ಅಂದೆ 
ಅಂದ್ರೇ...ಎಂಟನೇ ತಿಂಗಳು 
ಅಷ್ಟೇ ಆತ ಲಕ್ಕಿ ಫೆಲ್ಲೋ
ಹುಟ್ಟಿದ ದಿನ ಎಂಟು 
ಹುಟ್ಟಿದ ತಿಂಗಳು ಎಂಟು 
ನಿಮ್ಮ ಲಕ್ಕಿ ನಂಬರ್ ಎಂಟು 
ಸಮಯ ನೋಡಿ ಎಂಟಾಗಿದೆ 
ಇವತ್ತು ಡಿಸೆಂಬರ್ ಹದಿನೇಳು
ಅದೂನೂವೇ ಎಂಟು, ನಿಮ್ಮ 
ಅದ್ರಷ್ಟದ ಸಂಖ್ಯೆ ಎಂಟು ಅಂತ
ಸುಮ್ಮನಿರಲಾರದೇ 
ನಿಮ್ಮ ಲೈಫ್ನಲ್ಲಿ ನಡದಿರೋದು 
ನಡೀತಿರೋದು ನಡೆಯಲಿರೋದು 
ಎಲ್ಲವೂವೆ ಎಂಟನ್ನೇ ಅಂಟಿದೇಂತ 
ಎಂಟಿಗೂ ನನಗೂ ಗಂಟು ಹಾಕಿದ.
ಖುಷಿ ಖುಷಿಯಾಗಿ ಗೆದ್ದ 
ಐನೂರು ರೂಪಾಯಿಯ 
ಪುರಸ್ಕಾರವನ್ನ ಸೀದಾ 
ಸ್ನೇಹಿತರೊಂದಿಗೆ ಕಂಕನಾಡಿಯ 
ಹಾಲಿವುಡ್ ಬಾರ್ ಗೆ ಧಾರೆ ಎರದಿದ್ದು 
ಪೆಪ್ಪರ್ ಪೋರ್ಕ್ ಫ್ರೈ ಚೆನ್ನಾಗಿತ್ತಾ 
ಅಥವಾ ತಣ್ಣನೆಯ ಬಿಯರ್ರಾನ್ನೋ 
ಚರ್ಚೆ ಇವೆರಡೂ ಐಟಂಗಳು ಗುಳಂ
ಅಲ್ಲಿಂದ ಹಾಸ್ಟೆಲ್ ಗೆ ಸುರಾಂಗನಿ 
ಹಾಡ ಹಾಡಿ ಕೊಂಡು ಹೋಗೋದು 
ಇನ್ನೂ ಹಚ್ಚ ಹಸಿರಾಗಿ ನೆನಪಿದೆ.
ಹಾಸ್ಟೆಲ್ ರೂಮ್ಗೆ ಹೋಗಿ ಮಲಗಿದ್ರೆ 
ರಾತ್ರಿಯಿಡೀ ಎಂಟರ ಕನಸ್ಸು.
ರಾ ರಾ ರಾಮಯ್ಯ ಎಟ್ಟುಕ್ಕುಳ್ಳೆ 
ಉಲಗಂ ಇರುಕ್ಕು ರಾಮಯ್ಯಂತ 
ರಜಿನಿಕಾಂತ್ ಸಿನಿಮಾ ಹಾಡನ್ನ 
SPB ಯವರ ಸುಶ್ರಾವ್ಯ ಧ್ವನಿಯಲಿ 
ಅದೂನೂವೆ ತಮಿಳಲ್ಲಿ 
ಎಂಟು ಎಂಟಾಗಿ ಬಿಡಿಸಿ
ಜೀವನದ ಸಾರವನ್ನ 
ನನ್ನ ಫಿಲಿಪ್ಸ್ ಟ್ರಾನ್ಸಿಸ್ಟರ್ ಒದರುತ್ತಿತ್ತು. 
ಲಕ್ಕಿ ನಂಬರ್ ಗಳೆಲ್ಲವೂ 
ಅದ್ರಷ್ಟ ದೇವತೆಯ 
ಸುವರ್ಣ ಸಂಖ್ಯೆಗಳು 
ಅವೆಲ್ಲಾ ಸಾಧ್ಯ ಅಸಾಧ್ಯಗಳ 
ನಡುವಿನ ಪ್ರೊಬಬಿಲಿಟಿಯ 
ಒಂದು ಬಿಂದು ಆಕಸ್ಮಿಕವಾಗಿ 
ಅಂದು ನನ್ನ ಸೇರಿತ್ತು ಅಷ್ಟೇ...
ಜೀವನದಲ್ಲಿ ಸಾಧಿಸಲು 
ಬಹಳಷ್ಟು ಇರಲು 
ವೈಚಾರಿಕತೆಯ ಧ್ಯೇಯ 
ಯುವ ಮನಸ್ಸ ತುಂಬಿದ್ದಾಗ 
ಅದ್ರಷ್ಟ ಗಿದ್ರಷ್ಟ ಏನ್ ಮಾಡತ್ತೆ 
ಅನ್ನೋ ಮೊಂಡು ಧೈರ್ಯ 
ಅದರ ಬಗ್ಗೆ ಹೆಚ್ಚು ಚಿಂತೆ ಮಾಡದೆ 
ಮರೆತೇ ಹೋದೆ... ಎಂಟನ್ನ...
ಮತ್ತೆ ಏಳೆಂಟು ವರ್ಷ ಕಳೆದು 
IAS ಪರೀಕ್ಷೆ ಬರೆಯಲು 
ಅಪ್ಲಿಕೇಶನ್ ತುಂಬಿಸಲು ಕುಳಿತಾಗ
ಜನ್ಮ ದಿನಾಂಕವ ನಮೂದಿಸಲು 
ಸ್ವಲ್ಪ ದಪ್ಪ ಹಾಳೆಯ 
SSLC ಮಾರ್ಕ್ ಶೀಟ್ ನ ನೋಡಿದೆ 
ಹೆಸರು, ನಂತರ ಜನ್ಮದಿನ 
ಅಚ್ಚಾಗಿದ್ದ ಅಂಕ ಪತ್ರಿಕೆಯ 
ಅಕಸ್ಮಾತಾಗಿ ಅದೇನೋ 
ಗೊತ್ತಿಲ್ಲಾ...ದ್ರಷ್ಟಿ 
ರೋಲ್ ನಂಬರ್ ಮೇಲೆ ಬೀಳಲು 
135269  ಸಂಖ್ಯೆಯನ್ನು 
ಉತ್ಸುಕತೆಯಿಂದ 
ಜೋಡಿಸಿ ನೋಡಿದೆ 
ಅದರ ಒಟ್ಟು ಮೊತ್ತ ಎಂಟು 
ಕುತೂಹಲ ಕೆರಳಿ  
PUC ಯ ಮಾರ್ಕ್ ಶೀಟ್ 
ಮಡಿಚಿಟ್ಟ ತಿಳಿ ಹಸಿರು ಬಣ್ಣದ 
ಕೊನೆ ಹರಿದ ಅಂಕ ಪತ್ರವನ್ನು 
ತೆಗೆದು ನೋಡಲು ಅದರ 
ರೋಲ್ ನಂಬರ್ 6020
ಅದನ್ನ ಜೋಡಿಸಲು 
ಅದೂ ಎಂಟಾಗಿ ಬರಲು 
ಮೈ ಜುಮ್ ಅಂತು.
ನನಗೆ ಗೊತ್ತು BFSc ಯ 
ID ನಂಬರ್  FG126
ಜೋಡಿಸಿದೆ ಒಂಬತ್ತಾಯ್ತು.
ಸ್ವಲ್ಪ ವಿಚಾರ ಮಾಡಿದೆ 
FG1 ಅಂದ್ರೆ ನಾವೆಲ್ಲಾ ಫಿಶರೀಸ್ 
Graduate ಆದ ಬ್ಯಾಚ್ 1971
ಹೀಗಾಗಿ ಅದನ್ನ ಸೂಚಿಸೋದೆ 
ಈ FG1 ಹಾಗಿದ್ರೆ ನನ್ನ ನಂಬರ್ 
26 ಇಪ್ಪತ್ತಾರು ಮತ್ತೆ ಎಂಟು 
MFSc ದು PFG ID ನಂಬರ್ 
ಹುಡುಕಲು ಮಾರ್ಕ್ ಶೀಟ್ 
ಕಳೆದು ಹೋಗಿತ್ತು. ನನಗನಿಸುತ್ತೆ 
ಅದೂನೂವೆ ಎಂಟೇ ಆಗಿರಬೇಕು 
ಅದಾದ ಮೇಲೆ ARS (Agricultural 
Research Service) ಸ್ಪರ್ಧಾತ್ಮಕ ಪರೀಕ್ಷೆ 
ರೋಲ್ ನಂಬರ್ ಸರಿಯಾಗಿ 
ಜ್ಞಾಪಕವಿಲ್ಲ, 
ಆದ್ರೆ ARS ನಲ್ಲಿ ಎಂಟನೇ rank.
ವಿಜ್ಞಾನಿಯಾಗಿ ICAR ನ ಸೇರಿದ ಬಳಿಕ 
ಎಂಟು ಹುಡುಕುವ ಪರಿಪಾಟಿಗೆ 
ಒಂದು ಪೂರ್ಣ ವಿರಾಮ ಕೊಟ್ಟೆ .
ಆದ್ರೂವೆ ಟ್ರೈನ್ ಹತ್ತುವಾಗ 
ಬರ್ಥ್ ನಂಬರ್ ಹುಡುಕುವಾಗ 
ಸ್ತುಪ್ತ ಮನಸ್ಸಲ್ಲಿ 
ಎಂಟನ್ನು ಬಯಸುತ್ತಿತ್ತು 
ಹೋಟೆಲ್ 
ರೂಮ್ ನಂಬರ್ ಗಳು ಎಂಟಾಂತ
ನೋಡ್ತಾ ನೋಡ್ತಾ ನನಗೇ ಗೊತ್ತಾಗದೇ 
ಎಂಟರ ಇಚ್ಛೆ ಆದಮ್ಯವಾಯ್ತು. 
ಲಾಟರಿ ಟಿಕೆಟ್ ತೆಕ್ಕೊಂಡರೆ 
ಅದರ ಟೋಟಲ್  
ಎಂಟಾಂತ ನೋಡಿ ನೋಡಿ 
ಕೊಂಡುಕೊಳ್ಳುವವರೆಗೂ 
ಸ್ವಲ್ಪ ಸ್ವಲ್ಪ ವಾಗಿ ಎಂಟರ 
ಹುಚ್ಚುಹೆಚ್ಚಾಗಿ, 
ಹೆಚ್ಚು ಹುಚ್ಚಾಗಿದ್ದಾಗ 
IAS ಹಾಲ್ ಟಿಕೆಟ್ ಬಂತು 
ರೋಲ್ ನಂಬರ್ ಜೋಡಿಸಿ 
ನೋಡಿದೆ ಎಂಟು ಬರಲಿಲ್ಲಾ 
ಗುಣಿಸಿ ನೋಡಿದೆ ಬರಲಿಲ್ಲಾ 
ಸ್ವಲ್ಪ ನಿರಾಶೆಯಾಯಿತು. ಆದ್ರೂವೆ 
ಎಂಟನ್ನ ಬದಿಗಿಟ್ಟು ಪರೀಕ್ಷೆ ಬರೆದೆ 
ಸಫಲನಾದೆ ಎಂಟರ ನಂಟಿಲ್ಲದೇನೆ 
ಆದ್ರೆ IAS ಸೆಲೆಕ್ಟ್ ಆದ ಆದೇಶ 
82 ರ ಆಗಸ್ಟ್ ಎಂಟರಂದು 
ಕೈ ತಲುಪಲು  ಖುಷಿಗೆ ಎಲ್ಲಿದೆ ಎಲ್ಲೆ 
ಮನೆಯಲ್ಲಿ ಅಪ್ಪ ಅಮ್ಮ ಅಣ್ಣ ಅಕ್ಕ
ಬಹಳ ಸಂತೋಷಪಟ್ಟರು 
ತಮ್ಮ ತಂಗಿ ಎಲ್ಲರೂ ಕುಣಿದಾಡಿದರು.
ಆಗ ಎಲ್ಲರೂ ಕುಳಿತಿದ್ದಾಗ 
ಅಮ್ಮನಿಗೆ ನನ್ನ ಎಂಟರ ಪುರಾಣ ಹೇಳ್ದೆ
ಎಲ್ಲರೂ ವಿಸ್ಮಯದಿಂದ 
ನನ್ನನ್ನು ನೋಡ್ತಾ ಇದ್ರೆ 
ಅಮ್ಮಮಾತ್ರ ಹೆಮ್ಮೆಯಿಂದ ಹೇಳಿದ್ರು 
ಇದರಲ್ಲಿ ಆಶ್ಚರ್ಯಪಡಕ್ಕೇನಿದೆ 
ನೀನು ಶ್ರೀ ಕೃಷ್ಣನ ತರಹ 
ಎಂಟನೇ ಸಂತಾನಾಪ್ಪಂತ 
ಲೆಕ್ಕ ಹೇಳಲು ದೊಡ್ಡಣ್ಣ ಸುಂದರ್ 
ಅಕ್ಕಂದಿರು ರಾಜೇಶ್ವರಿಯಕ್ಕ ನಿರ್ಮಲಕ್ಕ ,
ಸಜಂತಕ್ಕ , ರಜಿನಿಯಕ್ಕ ಮೇಧಾವಿಅಣ್ಣ, ಸುಜಾತಕ್ಕ ಎಂಟನೇ ನಂಬರ್ ಮಗ 
ನೀನೇ 
ಸುರೇಶ 

PS : ಇದಾದ ನಂತರ ಹಲವಾರು ಘಟನೆಗಳು, ಸಂಭವಗಳು 
ಎಂಟನ್ನ ತಬ್ಬಿ, 
ಹಾಗೆಯೇ ಎಂಟ್ಟಿಲ್ಲದೆ 
ಜೀವನ ಪ್ರಯಾಣದಲ್ಲಿ  ಹಾದು ಹೋದರೂ ನಾನೀಗ ಅದಕ್ಕೆಲ್ಲಾ ಹೆಚ್ಚು ಮಹತ್ವ ಕೊಡ್ತಾ ಇಲ್ಲಾ ಅದ್ರಷ್ಟ, ವಿಧಿ ಎಲ್ಲವೂ ನಮ್ಮ ಕೈಯಲ್ಲಿಲ್ಲಾ.... ಹಾಗೆಯೇ ಎಂಟರ ನಂಟು ಕೂಡ 




















ಕಾಮೆಂಟ್‌ಗಳು

  1. ಎಂಟರ ನಂಟು ಬಾಳೆಲ್ಲ ನಂಟು ಸರ್, ತುಂಬಾ ಚೆನ್ನಾಗಿದೆ ಸರ್ 🙏🙏

    ಪ್ರತ್ಯುತ್ತರಅಳಿಸಿ
  2. ತಮ್ಮ ಎಂಟರ ನಂಟಿನ ವರ್ಣನೆ ಅತೀ ಮನೋಹರ. And look at the numero 8 during most of uour illustrious sojourn. Thanks to the housie housie conductor who brought up so many pleasing g n awe insping coincidences which enticingly engrossed the 8th sibling. 8 888

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.