ವೆಂಕಟಾಚಲಯ್ಯ ಮತ್ತು ನಾನು
ದಿಸ್ ವೆಂಕಟಾಚಲ
ರೀಡಿಂಗ್ ಟೂ ಮಚ್ಚು
ಬಟ್ಟ್
ನಾಟ್ ಗೆಟಿಂಗು ಮಾರ್ಕ್ಸು
ಇದು ನಮ್ಮ ವೆಂಕಟಾಚಲ
ಮಂಗಳೂರಿನ ಫಿಶರೀಸ್ ಕಾಲೇಜು
ಹಾಸ್ಟೆಲ್ ಪ್ರಾಂಗಣದಲ್ಲಿ
ಟಸ್ಸು ಪುಸ್ಸು ಅಂತಾ
ಇಂಗ್ಲೀಷ್ನಲ್ಲೇ ಮಾತಾಡೊ
ಅವನಿಗಿಂತಲೂ ಎರಡು ವರ್ಷ
ಸೀನಿಯರ್ ಕರ್ತಾರ್ ಸಿಂಗ್ ಗೆ
ಅವನಿಗೇ ಗೊತ್ತಿದ್ದ ಅರ್ಧಂಬರ್ದ
ಇಂಗ್ಲೀಷ್ ಡೈಲಾಗ್ ನಲ್ಲಿ
ಯಾಕೆ ಪರೀಕ್ಷೆಯಲ್ಲಿ
ಕಮ್ಮಿ ಮಾರ್ಕ್ಸ್ ಬಂತೂಂತ
ತಿಳಿ ಹೇಳ್ತಾ ಇದ್ದಾ.
ಸಿಂಗ್ ಗೆ ಅರ್ಥ ಆಯ್ತೋ ಇಲ್ವೋ
ಓಕೆ ಓಕೇಂತ ಹೇಳಿ ತಪ್ಪಿಸ್ಕೊಂಡ
ವಿ.ವೆಂಕಟಾಚಲಯ್ಯ
ಅವನು ತನ್ನನ್ನು ಎಲ್ರುವೆ
ವೆಂಕಟ್ ಅಂತ ಕರೀಬೇಕೂಂತ ಆಸೆ,
ಅಲ್ಲಿಂದ ಇನ್ನು ಯಾರಾದ್ರೂ
ಸಿಕ್ರೆ ಕ್ಲಾಸ್ ಹಾಕೋಣಾಂತ
ಹುಡುಕುತಿದ್ದಾಗ
ನಾನು ಸುರೇಶ, ಅವನ ಕಣ್ಣಿಗೆ ಬಿದ್ದೆ
ನನ್ನ ಹತ್ತಿರ ಬಂದವ್ನು
ನೋಡಣ್ಣ ಈ ಸ್ಪೋರ್ಟ್ಸ್ ಮ್ಯಾನ್ ಗೆ
ಪಾಯಿಂಟ್ ಒಂದು ಅಥವಾ ಎರಡು
ಎಕ್ಸ್ಟ್ರಾ ಕೊಡಬಹುದಲ್ವೇಂತ ಶುರು ಮಾಡಿ
ಅವನು ರಾಯ್ ಚೂರ್ನಲ್ಲಿ ನಡೆದ
ಕಬಡ್ಡಿ ಆಟಕ್ಕೆ ಕಾಲೇಜನ್ನು
ಪ್ರತಿನಿಧಿಸಿದ್ದರಿಂದ ಮಾನ ಉಳಿಸಿದ್ದರಿಂದ
ಒಂದೋ ಎರಡೋ ಅಂಕಗಳನ್ನು ಕೊಟ್ಟು
ಪಾಸ್ ಮಾಡಬಹಾದಲ್ಲಾನ್ನೋದು
ಅವನ ವಾದ ತರ್ಕ ಎಲ್ಲವೂವೇ
ಆದ್ರೆ ಕೇಳುವವರಿಗೆ ತಾಳ್ಮೆ ಇರಬೇಕಲ್ಲಾ
ಹೀಗೇ ಸಂಬಂಧ ಇದೆಯೋ ಇಲ್ಲವೋ
ಅವನಿಗೆ ಮಾತಾಡ್ಬೇಕು
ಎಲ್ಲಾ ವಿಷಯ ಹೇಳಲೇಬೇಕು
ಅವನ ಕಥೆ ರೋಚಕವಾಗಿರಿಸಲು
ಏನಾದ್ರೂವೆ ಬುರುಡೆ ಉರುಳಿಸುತಿದ್ದ.
ಇದಕ್ಕಿಂತಲೂ ಡೈನಿಂಗ್ ಹಾಲ್ನಲ್ಲಿ
ಕುಕ್ ಥಾಮಸ್ ಬಡಿಸೋ ಊಟಾನೇ
ಎಷ್ಟೋ ವಾಸೀಂತ
ಹಾಗೂ ಹೀಗೂ ಹೇಗೋ
ತಪ್ಪಿಸಿ ಕೊಂಡು
ಗುರು, ಊಟಕ್ಕೆ ಹೋಗ್ತಾ ಇದ್ದೀನೀಂತ ಹೇಳಿ ಜಾರಿ ಕೊಂಡೆ.
ನನ್ ಅದ್ರಷ್ಟ ಬಿಟ್ ಬಿಟ್ಟ.
ವಾಲಿಬಾಲ್, ಬ್ಯಾಡ್ಮಿಂಟನ್
ಅಥ್ಲೆಟಿಕ್ಸ್, ಹೀಗೇ
ಸ್ಪೋರ್ಟ್ಸ್ ನಲ್ಲಿ ಬಹುಮುಖ ಪ್ರತಿಭೆ
ಓದುವದರಲ್ಲಿ ಸ್ವಲ್ಪ ಮಂದ
ಅದಕ್ಕಿಂತಲೂ ಮುಖ್ಯವಾದದ್ದು
ಕಾಲೇಜು ದಿನಗಳಲ್ಲಿ ಮೊಟ್ಟ ಮೊದಲ ಬಾರಿಗೆ
ಯೂನಿವರ್ಸಿಟಿ
ಕಬಡ್ಡಿ ಟೀಮ್ ಗೆ ನಮ್ಮ ವೆಂಕಟ್
ಕಾಲೇಜಿನಿಂದ ಸೆಲೆಕ್ಟ್ ಆದ.
ಯೂನಿವರ್ಸಿಟಿ ಆಟಗಾರ
ಅಂತಂದ್ರೆ ಯೂನಿವರ್ಸಿಟಿಯ
ಹಸಿರು ಬಣ್ಣದ ಕೋಟು
ಕೊಡುತ್ತಿದ್ದರು. ಅದನ್ನ ಕಳಚಿ
ರೂಮ್ ನಲ್ಲಿ ತಗಲು ಹಾಕಿದ ಕ್ಷಣ
ಬಕ ಪಕ್ಷಿಗಳಂತೆ ಸೀನಿಯರ್
ಜೂನಿಯರ್ ಅನ್ನೋ
ಯಾವ ವ್ಯತ್ಯಾಸವೂ ಇಲ್ಲದೆ
ಆ ಕೋಟನ್ನು ಹಾಕಿ ಕೊಂಡು
ಗಮ್ಮತ್ತಾಗಿ ಊರ ಸುತ್ತಾಡಲು
ಹಾತೊರೆಯುತ್ತಿದ್ದರು.
ವೆಂಕಟಾಚಲಯ್ಯನ ಬಗ್ಗೆ
ಸಣ್ಣದೊಂದು ಪರಿಚಯದ
ಅವಶ್ಯಕತೆ ಇದೇಂತ ಅನಿಸುತ್ತೆ
ವೆಂಕಟ್ ಸ್ವಲ್ಪ ಬಲಿತ
ಕಂದು ಬಣ್ಣದ ಮುಖ
ಉದ್ದನೆಯ ಬಾಡಿ ಅಂದ್ರೆ ಎತ್ತರದವ
ಕಾಲುಗಳು ಕಿಕ್ ಮಾಡಲು
ಕಬಡ್ಡಿಗೇಂತ,
ಚಾಚೋ ಕೈಗಳು
ವಾಲಿ ಬಾಲ್ ಗೇಂತ
ಮಾಡಿಸಿಟ್ಟ ಹಾಗಿತ್ತು.
ನಾಲಿಗೆ ಮಾತ್ರ ಬುರುಡೆ
ಬಿಡೋದಕ್ಕೆ ಪುಣ್ಯಾತ್ಮಂಗೆ
ಬೇರೇನೂ ಕೆಟ್ಟ ಚಟ ಇರಲಿಲ್ಲಾ
ವೆಂಕಟಾಚಲಯ್ಯನ ಕಥೆ ಒಂದು
ಅಸಾಧಾರಣ ರಾಗ್ಸ್ ಟು ರಿಚೆಸ್ದು
(Rags to Riches)
ಬಡತನದಿಂದ ಸಿರಿವಂತಿಕೆಗೆ
ಹೇಗೆ ನಮ್ಮ ವೆಂಕಟ್ ಸಾಧಿಸಿದನ್ನ
ತಿಳ್ಕೊಳ್ಳೋದಿಕ್ಕೆ ಬನ್ನೀ ನನ್ ಜೊತೆ
ಉತ್ತರ ಬೆಂಗಳೂರು ಜಿಲ್ಲೆಯ
ಅಂತಿಮ ಗ್ರಾಮ, ಅಂದ್ರೆ
ಸರಹದ್ದಿನ ಕೊನೆಯ ಊರು ಹನಿಯೂರು, ಅಲ್ಲಿ ಬುಟ್ಟಿ ಹೆಣೆಯೋ
ವೆಂಕಟರಮಣಪ್ಪ, ಹನುಮಕ್ಕ
ದಂಪತಿಗಳಿಗೆ ಹುಟ್ಟಿದ ವೆಂಕಟಾಚಲ
ಏಳುಮಕ್ಕಳಲ್ಲಿ ಕಿರಿಯೋನು
ಅಮ್ಮನ ಜೊತೆ ಹತ್ತಿರದ
ದೊಡ್ಡ ಬಳ್ಳಾಪುರದ ಸಂತೆಯಲ್ಲಿ
ಇಲ್ಲದಿದ್ದು ಇದ್ದಹಾಂಗೆ
ಇದ್ದದ್ದು ಇಲ್ಲದಿದ್ದಂಗೆ
ಏನೂ ಇಲ್ಲದೇನೇ ಸುಮ್ನೆ ಕಥೆ
ಜೋಡಿಸಿ ಹೇಳಿ ಬುಟ್ಟಿಗಳ ಮಾರಿ
ಕಂಬಿಯಿಲ್ಲದೇ ರೈಲು ಬಿಡೋದು
ಎಳೆ ವಯಸ್ಸಲ್ಲೇ ಕಲಿತುಕೊಂಡ.
ಕನ್ನಡ ಮೀಡಿಯಂ ನಲ್ಲಿ ಓದಿ
ಇಂಗ್ಲೀಷ್ ಕಲಿತು ಅರ್ಥ ಮಾಡಿಕ್ಕೊಂಡು
ಒಂದು ವರ್ಷದ PUC ಓದಿ
ಎರಡು ಬಾರಿ ಡಾಕ್ಟರಾಗಲು ಪ್ರಯತ್ನಿಸಿ
ಜಪಾನ್ ಗೆ ಹೋಗೋ
ಅತಿಯಾಸೆಯಿಂದ ಫಿಶರೀಸ್
ಕಾಲೇಜನ್ನು ಮೊರೆ ಹೊಕ್ಕ.
ನನಗೆ ಒಂದು ವರ್ಷ ಜೂನಿಯರ್ ಆಗಿದ್ರೂವೆ ನಮ್ ಜೊತೆ,
ಸೀನಿಯರ್ ಗಳ ಜೊತೆ
ಓಡಾಡೋದು ಪ್ರತಿಷ್ಠೆಂತ
ಹೆಚ್ಚು ಸಮಯ ಖರ್ಚು ಮಾಡುತಿದ್ದ.
ಕನ್ನಡ ಶಬ್ದಾವಳಿಗೆ "ಚೋಡ್" ಅನ್ನೋ
ಪದವನ್ನ ಸೇರಿಸೋ ಶ್ರೇಯ
ಸ್ರಷ್ಟಿಕರ್ತ ವೆಂಕಟ್ಗೇ ಸೇರಬೇಕು
ಅಷ್ಟೊಂದು ಬುರುಡೆ ಬಿಡ್ತಿದ್ದ
ಹೀಗೇ ಆತ್ಮೀಯವಾಗಿ, ಕೊರೆದೂ
ಕೊರೆದೂ ಹಾಗೂ ರೈಲೂ ಬಿಟ್ಟು
ಪ್ರೀತಿಯಿಂದ ದಕ್ಕಿಸಿಕೊಂಡ ಹೆಸರು
ಚೋಡಾಚಲಯ್ಯ...
ಚೋಡೋದು ಅನ್ನೋದು
ಅದೊಂತರಹ ವಿಶಿಷ್ಟ ಕಲೆ
ಅದು ಎಲ್ರಿಗೂ ಬರೋದಿಲ್ಲರೀ
ಅಂದ್ರೆ ಆ ಉನ್ನತ ಕಲೆಗೆ
ಹಕ್ಕುದಾರರು
ಹಲವಾರು ರಾಜಕಾರಣಿಗಳು
ಇದ್ರೂವೆ ನಾನು ಹೇಳ್ತಾ ಇರೋದು
ಫಿಶರೀಶ್ ಡಿಪಾರ್ಟ್ಮೆಂಟ್ ನ
ಸೇವಾನಿವ್ರತ್ತ ಉಪನಿರ್ದೇಶಕ
ವೆಂಕಟಾಚಲಯ್ಯನವರ ಬಗ್ಗೆ...
ಆ ದಿನಗಳಲ್ಲಿ
ಕಾಲೇಜು ದಿನಗಳು ಮುಗಿಸಿದ ನನ್ನನ್ನು
ವೃತ್ತಿ ಬಾಂಧವ್ಯ ಭುಬನೇಶ್ವರ್ ಗೆ ಕರೆದೊಯ್ದರೆ
ಹಾಗೂ ಹೀಗೂ ಹೇಗೋ
ವೆಂಕಟಾಚಲಯ್ಯ BFSc ಮುಗಿಸಿದ.
ಅದ್ರಷ್ಟ ಆತನನ್ನು
ಬೀದರ್ ಜಿಲ್ಲೆಯ ಸಹಾಯಕ
ಸೂಪರ್ ಇನ್ಟೆಂಡೆಂಟ್ ಹುದ್ದೆಗೆ
ಸೆಳೆದು ಹೋಯ್ತು
ಕಾಲಚಕ್ರ ಹೀಗೇ ಉರುಳಿ
ಸ್ಥಾನಾಂತರಣ ವೆಂಕಟ್ ನ್ನು ಮತ್ತೆ
ಬೆಂಗಳೂರಿಗೆ ಕರೆದುಕೊಂಡು ಬಂತು.
ಕಾಲೇಜು ಹಾಸ್ಟೆಲ್ ಇಲ್ಲಿ ಎಲ್ಲಾ
ವೆಂಕಟ್ ನ ಚೋಡು ಕಥೆಗಳಿಂದ
ತಪ್ಪಿಸಿಕೊಂಡ ನಾನು ಬೆಂಗಳೂರಿನ
ವಸಂತನಗರಕ್ಕೆ ರಜೆಗೆ ಬಂದ್ರೆ
ಅವನು ಚೋಡ್ತಾ ಇದ್ದಾನೇಂತ ಗೊತ್ತಿದ್ದೂ
ಮುಂಬತ್ತಿಯ ಅರಸೋ ಚಿಟ್ಟೆಯಂತೆ
ಅವನನ್ನು ಹುಡುಕಿ ಕೊಂಡು
KR ಸರ್ಕಲ್ ಬಳಿ ಇದ್ದ ಫಿಶರೀಸ್
ಸಂಚಾಲಕರ ಆಫೀಸ್ ಗೆ ಹೋದೆ
ಅಲ್ಲಿ ವೆಂಕಟ್ ಅವರ ಡೈರೆಕ್ಟರ್ ಗೇ
ಕ್ಲಾಸ್ ಹಾಕಿ ಬಿಟ್ಟಿದ್ದ
ನನ್ನಿಂದಾಗಿ ಡೈರೆಕ್ಟರ್
ನಿಮ್ ಫ್ರೆಂಡ್ ಜೊತೆ ಹೋಗೀಂತ
ಹೇಳಿ ತಪ್ಪಿಸಿಕೊಂಡ್ರು
ಹೊರ ಬಂದ ವೆಂಕಟ್
ನನ್ನನ್ನು ನೋಡಿ ಬಾ ಅಂತಾ
ಮತ್ಸ್ಯ ಕಾರ್ಪೋರೇಶನ್ ರವರ
ಮೀನಿನ ರೆಸ್ಟೋರೆಂಟ್ ಗೆ
ಕರೆದುಕೊಂಡು ಹೋದ
ಬಂಗುಡೆ ಹುರಿದ ಗಮ ಬಹಳಷ್ಟು
ಜನರನ್ನು ಆಕರ್ಷಿಸಿತ್ತು.
ಹುರಿದ Rostrelliger kanagurta
ತಿಂದೊಡನೆ ಕಾಲೇಜಿನ ದಿನಗಳು
ರೊಪ್ ಅಂತ ಹಾಸ್ಟೆಲ್ ನ ಈಟಿಂಗ್ ಕಾಂಪಿಟಿಷನ್ ಜ್ಞಾಪಕಕ್ಕೆ ಬಂತು.
ನಮ್ಮ ಮನೆ ವಸಂತನಗರದ ಏಳನೇ ಕ್ರಾಸ್ ಆದ್ರೆ ಐದನೇ ಕ್ರಾಸ್ ನ
ಮುನಿರಾಮಯ್ಯನ ಮಗಳು ಪ್ರೇಮ ರವರ ಜೊತೆ ವೆಂಕಟಾಚಲಯ್ಯನ ಮದುವೆಯಾಗಿ ಅದೇ ಬೀದಿಯ ಕೊನೆಯಲ್ಲಿ ಅವರ ಪತ್ನಿಗೆ ಅವರ
ಹಕ್ಕಿನ ಹಂಚಿನ ಮನೆ ಸಿಗ್ತು.
ವೆಂಕಟ್ ನ ಪ್ರಯಾಸದಿಂದ
ಈಗ ಅದು ನಾಲಕ್ಕು ಮಹಡಿಯ
ಬ್ರಹತ್ ಕಟ್ಟಡ...ಅರಮನೆ
ವೆಂಕಟ್ ನ ವಾಸ ಸ್ಥಳ,
ಹೀಗಾಗಿ ಯಾರನ್ನು ಅವಾಯ್ಡ್ ಮಾಡಬೇಕೂಂತ ಇದ್ದೆನೋ ಆತ
ನಮ್ಮೂರಿಗೇ ಬಂದಿದ್ದಲ್ದೆ ನಮ್ಮ
ಬೀದಿಗೇ ಬಂದಿಳಿದುಬಿಟ್ಟ.
ಹೋದ್ಯಾ ಪಿಶಾಚಿ ಅಂದ್ರೆ ಇಲ್ಲಾ
ಬಂದೆ ಗವಾಕ್ಷೀಲಿ ಅನ್ನೋ ಹಾಗೆ
ಬಂದವನು ನನ್ನ ಪರಮಮಿತ್ರನಾದ.
ಅವನು ಬುರುಡೆ ಬಿಡುತ್ತಿದ್ದ
ಚೋಡುತಿದ್ದ ಮಾತುಗಳು
ಮೊದ ಮೊದಲು ಕೊರೆಯುತಿದ್ದ
ಹಂಗಿದ್ದ ಮಾತುಗಳು ಕಾಲ ಕ್ರಮೇಣ ಸವಿಯಾಗಿಲ್ಲದಿದ್ದರೂ ಹಿತವಾಗಿತ್ತು
ಅವನ ಜೀವನದಲ್ಲಿ ಏನಾದ್ರೂ
ಒಳ್ಳೆಯದು ನಡೆದಿದೆ ಅನ್ನೋದಾದರೆ
ಅದು ಪ್ರೇಮ ವಿವಾಹ
ಲವ್ ಮ್ಯಾರೇಜ್ ಅಲ್ಲಾ
ಪ್ರೇಮಾ ರೊಡನೆ 1980ರಲ್ಲಿ
ನಡೆದ ವಿವಾಹ
ಪ್ರೇಮ ತುಂಬಾ ಒಳ್ಳೆಯವರು
ಆಗಾಗ ಅವರ ಮನೆಗೆ ಹೋಗಿ
ರಾಗಿ ಮುದ್ದೆ ಹಿಚಕು ಬೇಳೆ ಸಾರು
ಕೇಳಿ ತಿಂದದ್ದುಂಟು. ವೆಂಕಟ್ ನ
ಬೇಳೆ ಪ್ರೇಮಾಳ ಮುಂದೆ ಬೇಯಲಿಲ್ಲಾ
ಮೊದಲ ಬಾರಿಗೆ ಅವನ ಚೋಡೋ
ಪ್ರಸಂಗಕ್ಕೆ ಒಂದು ಅಲ್ಪ ವಿರಾಮ.
ವೆಂಕಟಾಚಲಯ್ಯಂಗೆ
ನಮ್ಮಮ್ಮನ ಕಂಡ್ರೆ
ಬಹಳ ಭಯ
ಹೆದರುತ್ತಿದ್ದನೋ ಏನೋ
ಆಮೇಲೆ ಗೊತ್ತಾಗಿದ್ದು
ಪ್ರೇಮ ನಮ್ಮಮ್ಮನ ನೋಡಲು
ಆಗಾಗ ಬರುತಿದ್ದರು
ಸಂಕ್ರಾಂತಿ ಯುಗಾದಿ ಗಣೇಶನ
ಹಬ್ಬಕ್ಕೆ ಮದುವೆಗೇಂತ
ಬರುತ್ತಾ ಹೋಗ್ತಾ ಪರಿಚಯ
ಅವರಿಬ್ಬರ ಅನ್ಯೋನತೆಯ
ಇನ್ನೂ ಹೆಚ್ಚು ಗಾಢವಾಗಿಸಿತ್ತು .
ಪ್ರೇಮರವರಿಗೆ ಎರಡು ಗಂಡು
ಮಕ್ಕಳಾದ ಮೇಲೂ ಈ
ಬಾಂಧವ್ಯ ಮುಂದುವರೆದಿತ್ತು.
ಕೊಳ, ಕೆರೆಗಳನ್ನು
ಮತ್ಸ್ಯಪಾಲನೆಗೆ ಉಪಯೋಗಿಸಿನ್ನೋ
ಫಿಶರೀಸ್ ವಿಭಾಗದ ಯೋಜನೆ
ಯೊಂದನ್ನು ಕ್ರಿಯಾನ್ವಯಗೊಳಿಸಲು
ರಜೆಯಲ್ಲಿ ಬ್ಯಾರಕ್ ಪೋರ್ ನಿಂದ ಬಂದ ನನ್ನನ್ನು ಬಲವಂತ ಮಾಡಿ ಬೆಂಗಳೂರ ಉತ್ತರ ಜಿಲ್ಲೆಯ ಹೆಣ್ಣೂರು ಕೆರೆಯನ್ನು
ಒಂದು ವರ್ಷ ಲೀಸ್ ಬರೀ ಎಂಬತ್ತು ರೂಪಾಯಿಯ ಚಲಾನ್ ಕಟ್ಟಿ
ದೊರಕಿಸಿ ಕೊಟ್ಟ ನಮ್ ವೆಂಕಟ್
ಆ ಕೆರೆ ಮನೆಯಿಂದ ಸುಮಾರು
ಐದು ಕಿಲೋಮೀಟರ್ ದೂರದಲ್ಲಿತ್ತು.
ಈಗಿನ ಬ್ರಹತ್ ಬೆಂಗಳೂರ
ಹೆಣ್ಣೂರು ಬಾನಸವಾಡಿ ಲೇ ಔಟ್
ಆಗಿನ ಹೊಂಗೆ ಸಾಲು ಮರಗಳ
ಕಲ್ಲು ಮಣ್ಣಿನ ಅಣೆ ಕಟ್ಟು
ಅತಿ ಸುಂದರವಾದ ನೀರಾವರಿ
ಯೋಜನೆಯಗಿದ್ದು ನಾಗಾವರ, ದಿನ್ನೂರಿನ ಭತ್ತದ ಫಸಲಿಗೆ
ಉಪಯುಕ್ತ ವಾಗಿತ್ತು.
ಆಗಷ್ಟೇ ಲ್ಯಾಬೋರೇಟರಿಯಿಂದ
ಲ್ಯಾಂಡ್ ಗೆ ಕಾರ್ಯ ಯೋಜನೆಯ
ಓದಿದ್ದಷ್ಟೇ ಅದನ್ನ ಕ್ರಿಯಾನ್ವಯಸಲು
ಹೆಣ್ಣೂರು ಕೆರೆ ಒಂದು ಪರೀಕ್ಷಾ
ಕೇಂದ್ರವಾಯ್ತು. ವೆಂಕಟ್ ನನಗೆ
ಹೇಸರಘಟ್ಟ ಜಲಾಶಯದ ಬಳಿ ಇದ್ದ
ಫಿಶರೀಸ್ ಡಿಪಾರ್ಟ್ಮೆಂಟ್ ನ
ಮೀನು ಬ್ರೀಡಿಂಗ್ ಕೇಂದ್ರದಿಂದ
ಸುಮಾರು ಇಪ್ಪತ್ತೈದು ಸಾವಿರ
ಕಾಮನ್ ಕಾರ್ಪ್ ಮೀನು ಮರಿಗಳನ್ನು
ಎರಡೂವರೆ ಸಾವಿರ ರೂಪಾಯಿ ಕೊಟ್ಟು ವೆಂಕಟ್ ಆಯೋಜಿಸಿದ್ದ ಜೀಪಿನಲ್ಲಿ
ರಾತ್ರೋ ರಾತ್ರಿ ತಂದು ಕೆರೆಯಲ್ಲಿ ಬಿಟ್ಟಿದ್ದಾಯ್ತು
ಹೀಗೇ ಪ್ರಾರಂಭವಾಯ್ತು
ವೆಂಕಟ್ ಪ್ರೇರಿತ ನನ್ನ
ಮೊಟ್ಟ ಮೊದಲ ಮತ್ಸ್ಯಪಾಲನೆ
ರಿಯರಿಂಗು, ಫೀಡಿಂಗು, ಏನೂ
ಮಾಡಲಿಕ್ಕೆ ಹೋಗಲಿಲ್ಲ.
ಸುಮಾರು ಆರು ತಿಂಗಳು ಕಳೆದು
ಹೆಣ್ಣೂರ್ ಕೆರೆ ನೋಡಲು
ಮುಸ್ಸಂಜೆ ಹೋಗಿದ್ದೆ
ಸಂಜೆ ಸೂರ್ಯನ ಕಿರಣ
ನೀರಿನ ಮೇಲೆ ಬಿದ್ದು ಅದರಿಂದ
ಎದ್ದ ಪ್ರತಿಬಿಂಬದಲ್ಲಿ ಮೀನುಗಳ
ಚೆಲ್ಲಾಟ ಬೇರೊಂದು ಲೋಕಕ್ಕೆ
ಕರೆದೊಯ್ತು. ಮರೆಯಲಾಗದಂತ
ಸಂಮೋಹನಗೊಳಿಸಿದ ಈ ದ್ರಶ್ಯ
ಇಂದಿಗೂ ಸ್ಮೃತಿಪಟಲದಲ್ಲಿ ಚಿರಸ್ಮರಣೀಯ
ಸರಿ ಒಮ್ಮೆ ಬಲೆ ಹಾಕಿ ಎಷ್ಟು
ಬೆಳೆದಿದೆ, ನೋಡೋಣ ಅಂದ್ರೆ
ನಾನೇ ರಾಜ, ನಾನೇ ಮಂತ್ರಿ.
ನಾನೇ ಆಳು, ನಾನೇ ಸಂತ್ರಿ
ಎಲ್ಲಾ ಕೆಲಸವನ್ನು ನಾನೇ ಮಾಡಬೇಕು
ಬಲೆ, ವೆಯಿಂಗ್ ಮೆಶಿನ್, ತಕ್ಕಡಿ
ತೆರ್ಮೋಕೊಲ್ ಬಾಕ್ಸ್ ಗಳು,
ಲೆಕ್ಕಾಚಾರಕ್ಕೆ ಲೋಕಲ್ ಹುಡುಗ
ಹೆಲ್ಪರ್ ಮಂಜು
ರಾತ್ರಿ ಉಳಿಯಲು ಟೆಂಟು
ಹಗ್ಗದ ಮಂಚ ಲಾಲ್ಟೇನ್
ಹೀಗೇ ಎಲ್ಲವೂ
ಒಂದಾದ ಮೇಲೆ ಮತ್ತೊಂದು
ಇನ್ವೆಂಟರಿ ಬೆಳೀತಾ ಹೋಯ್ತು.
ಹೆಬ್ಬಾಳದ ಕೆರೆಯಲ್ಲಿ
ಮೀನು ಹಿಡಿಯಲು ಬಂದಿದ್ದ
ಸೇಲಂ ನ ಮೀನುಗಾರರ ತಂಡ
ಹೆಣ್ಣೂರು ಕೆರೆಯಲ್ಲಿಳಿದು
ದೊಡ್ಡದೊಂದು ಡ್ರಾಗ್ ನೆಟ್ ತಂದು
ಉಪಯೋಗಿಸಿ ಎಳೆದ
ಮೊದಲ ಹಾರ್ವೆಸ್ಟ್ ಸುಮಾರು
ಒಂದು ಸಾವಿರ ಕಿಲೋಗ್ರಾಮ್
ಐನೂರು ಮೀನುಗಳು
ಒಂದೊಂದು ಮೀನೂ
ಎರಡು ಎರಡೂವರೆ ಕೆಜಿ ತೂಕ
ಅಭೂತ ಪೂರ್ವ ಗ್ರೋಥ್ ರೇಟ್
ಇಡೀ ಆರು ವರ್ಷಗಳ ಕಾಲೇಜಿನ
ಅನುಭವದಲ್ಲಿ ಇಷ್ಟೊಂದು
ಮೀನುಗಳನ್ನ ಒಟ್ಟಾರೆ ನೋಡಿರಲಿಲ್ಲ
ಅರವತ್ತು ರೂಪಾಯಿ ಗೋಲ್ಡನ್ ಗೆಂಡೆ
ಆರು ರೂಪಾಯಿ ಪ್ರತಿ ಕಿಲೋಗೆ ಕೇಳ್ತಾ ಇದ್ದದ್ದು ಮೀನು ಪೆರಿಷಬಲ್ ಪ್ರಾಡಕ್ಟ್
ಬಿಟ್ರೆ ಅದೂ ದೊರಕದು ಅನ್ನೋ ಸ್ಥಿತಿ
ಓದಿದ್ದು ಯಾವುದೂ ಕೈಕೊಡಲಿಲ್ಲ.
ಊರ ಜನರಿಗೆ ಇಪ್ಪತ್ತು ರೂಪಾಯಿ ಕಿಲೋ ಎಂದು ಮತ್ತೆ ಅದೇ ರೇಟ್ನಲ್ಲಿ
ಸೈಕಲ್ ನಲ್ಲಿ ಮೀನುಗಳು ಮಾರುವವರಿಗೆ ಕೊಟ್ಟಿದ್ದಾಯ್ತು
ಶಿವಾಜಿನಗರದ ರಸ್ಸಲ್ ಮಾರ್ಕೆಟ್ ಗೆ
ತೆಗೆದುಕೊಂಡು ಹೋದರೆ ಒಳಗೆ
ಬಿಡಲಿಲ್ಲಾ, ಅಲ್ಲಿಯ
ಮಾರಾಟಗಾರರು
ಜೊತೆಗೆ ಬಂದಿದ್ದ ವೆಂಕಟ್ ಇದನ್ನ
ಮತ್ಸ್ಯ ನಿಗಮಕ್ಕೆ ಮಾರೋದಿಕ್ಕೆ ಏನಾದ್ರೂ ಐಡಿಯಾ ಮಾಡೋಣಾಂತ
ಹೇಳ್ತಿರುವಾಗಲೇ ಶ್ರೀ ಅಧಿಪ್ ಚೌಧರಿ IAS ಬೆಂಗಳೂರು ರೂರಲ್ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಮಾರ್ಕೆಟ್
ನಿಂದ ಹೊರ ಬಂದರು
ವೆಂಕಟ್ ಅವರಿಗೂ ಕ್ಲಾಸ್ ಹಾಕಿದ್ದಿರಬೇಕು
ತಕ್ಷಣ ಗುರುತಿಸಿ
ವೆಂಕಟ್ ವಾಟ್ ಬ್ರಿಂಗ್ಸ್ ಯು ಹಿಯರ್
ಅಂದಿದ್ದೇ ತಡ ನನ್ನನ್ನು ಸೈಂಟಿಸ್ಟ್ ಅಂತ
ಪರಿಚಯ ಮಾಡಿಸಿದ, ಮತ್ಸ್ಯ ಪಾಲನೆಯ ಬಗ್ಗೆ ಹೇಳಿದ.
ಅವರು ರೂಯಿ ಮಾಚ್
ಕೊಂಡು ಕೊಳ್ಳಲು ಬಂದಿದ್ದರು.
ವೆಂಕಟ್ ಇಸ್ ಎ ಗುಡ್ ವರ್ಕರ್ ಅಂತಂದ್ರು
ಅಷ್ಟರಲ್ಲಿ ಅವರ ಡ್ರೈವರ್ ಬಂದಿದ್ದರಿಂದ
ಅವರು ವೆಂಕಟ್ ನ ಕ್ಲಾಸ್ ನಿಂದ ತಪ್ಪಿಸಿಕೊಂಡರು.
ಈಗಾಗಲೇ ಲೀಸ್ ಮುಗಿಯುತ್ತಾ ಬಂತು
ಕೆರೆಯನ್ನು ಮತ್ತೆ ಲೀಸ್
ತೆಗೆದುಕೊಳ್ಳಲು ತಯ್ಯಾರಿ ನಡೆಸಬೇಕು.
ಹಾಯಾಗಿ ಭುವನೇಶ್ವರದಲ್ಲಿ ಸರ್ಕಾರಿ
ಕೆಲಸ ಮಾಡ್ತಾ ಇದ್ದೋನಿಗೆ ಒಂದೆಡೆ
ಹವ್ಯಾಸ ಅಂತಂದ್ರೆ ಇನ್ನೊಂದೆಡೆ
ಮತ್ಸ್ಯ ಪಾಲನೆಯ ಲಾಭ ವ್ಯವಹಾರದ
ಹುಚ್ಚ ಹಚ್ಚಿಸಿದ ವೆಂಕಟ್ ನ್ನು
ಮರೆಯಲಾರೆ... ಕಾಮನ್ ಕಾರ್ಪ್
ಡಿಮಾಂಡ್ ನಲ್ಲಿತ್ತು ಲೋಕಲ್ ಜನತಾಗೆ
ಅಂದ್ರೆ ಹೆಣ್ಣೂರ್ ನಿವಾಸಿಗಳಿಗೆ
ಹತ್ತು ರೂಪಾಯಿಗೆ ಮಾರಾಟ ಮಾಡಿ
ಅವರೆಲ್ಲಾ ಸಂತೋಷ ಪಟ್ಟಿದ್ದು
ಕಾಮನ್ ಕಾರ್ಪ್ ಅವರ ಹೆಮ್ಮೆಯ
ಮೀನಾಗಿ ಪರಿವರ್ತನೆ ಗೊಂಡಿತು.
ಕೆರೆಯ ನೀರನ್ನು ಕೆರೆಗೆ ಚೆಲ್ಲಿದರೂವೆ
ಎಲ್ಲವೂ ಲಾಭದಾಯಕವಾಗಿತ್ತು.
ಆಮೇಲೆ ಏನಾಯ್ತು
ಅನ್ನೋರಿಗೆ ನಂತರದ ಹರಾಜಿನಲ್ಲಿ
ಸಾವಿರ ರೂಪಾಯಿ ಲೀಸ್ ರಾಶಿ ಕಟ್ಟಬೇಕಾಗಿ ಬಂತು.
ನಾವೊಂದು ಬಯಸಿದರೆ ದೈವ ಇನ್ನೊಂದ ಯೋಚಿಸಿಟ್ಟಿತ್ತು.
ಸರಿ ಮಾರ್ಕೆಟ್ನಲ್ಲಿ ರೋಹು ಮೀನು ಗಳಿಗೆ ಒಳ್ಳೆಯ ಡಿಮಾಂಡ್ ಒಳ್ಳೆಯ ರೇಟ್ ಇದೇಂತ ಮಾರ್ಕೆಟ್ ಸರ್ವೇ ತಿಳಿಹೇಳ್ತು.
ಸರಿ ಈ ವರ್ಷ ರೋಹು ಮೀನ ಸಾಕಣೆಗೆ
ಎಂದು ಇಪ್ಪತೈದು ಸಾವಿರ ಮರಿಗಳ ತಂದು ಬಿಟ್ವಿ. ವೆಂಕಟ್ ಮತ್ತೆ ಮರಿಗಳ ತರಲು ಸಹಾಯ ಮಾಡಿದ
ರೋಹು ಮೀನು ಮರಿಗಳು
ಒಂದು ವರ್ಷ ಕಳೆದ ನಂತರವೂ
ನೂರರಿಂದ ಇನ್ನೂರು ಗ್ರಾಮ್
ಅಷ್ಟೇ ಬೆಳೆದಿದ್ದವು.
ನಷ್ಟ ಅನುಭವವ ನೀಡಿತು.
ವೆಂಕಟ್ ಅವನ ಅನುಭವದಿಂದ
ಹೇಳ್ದ ಕಾಟ್ಲಾ ರೋಹು ಮೀನುಗಳು
ಬೆಳೆಯಲು ದೊಡ್ಡ ಆಳವುಳ್ಳ
ಜಲಾಶಯ ಬೇಕು ಆಗಲೇ
ಅವು ಚೆನ್ನಾಗಿ ಬೆಳೆಯುತ್ತೇಂತ...
ಹೀಗೇ ನನ್ನ ಮತ್ಸ್ಯಪಾಲನೆಯ
ಏರು ಪೇರಿನ ಪ್ರಯಾಸಕ್ಕೆ
ಬೆಂಗಳೂರು ವಿಕಾಸ ಪ್ರಾಧಿಕಾರದ
ವಿಕಾಸ ವಿನ್ಯಾಸ ದಿಂದ ಅಂತ್ಯಗೊಂಡಿತು
HBR ಹೆಣ್ಣೂರ್ ಬಾನ್ಸ್ ವಾಡಿ
ಎನ್ನುವ ಹೊಸದಾದ ಲೇ ಔಟ್ l
ಒಂದನ್ನು ಸ್ರಷ್ಟಿಸಿ ಮನೆ ಕಟ್ಟಲು
ಸೈಟ್ ಗಳ ವಿತರಣೆ ಪ್ರಾರಂಭಿಸಿತು.
ಶಿಶುನಾಳ ಶರೀಫರ ಹಾಡು
ಜ್ಞಾಪಕಕ್ಕೆ ಬಂತು
ಕೋಡಗನ ಕೋಳಿ ನುಂಗಿತ್ತಾ ತಂಗಿ,
ಹಾಡಿನ ತರಹ
BDA ಹೆಣ್ಣೂರ್ ಕೆರೆಯ ನುಂಗಿತ್ತಾ...
ಹೀಗೆಯೇ ಬೆಂಗಳೂರಿನ ಅನೇಕನೇಕ
ಕೆರೆಗಳು ಲೇಔಟ್ ಗಳಾಗಿ ಸ್ವಾಹಾ :
ನೋಡಿ ನನ್ ಕಥೆ ಹೇಳ್ತಾ
ವೆಂಕಟ್ ನ ಬಗ್ಗೆ ಹೇಳಲು ಹಾಗೂ ಮುಂದುವರಿಯಲು ಮರೆತೆ.
2009ರ ವ್ಯಾಲೆಂಟೈನ್ಸ್ ಡೇ
ವೆಂಕಟ್ ಅವನ
ಧರ್ಮಪತ್ನಿ ಪ್ರೇಮಾಳನ್ನು ಕಳೆದುಕೊಂಡು
ದಿಗ್ಬ್ರಮೆ ಹಿಡಿದವನಾಗಿ ತನಗೆ ತಾನೇ
ಚೋಡೋದಿಕ್ಕೆ ಶುರು ಮಾಡಿದ.
ನಾವೆಲ್ಲಾ ಅಂದ್ರೆ ಐಪಿ, ವೆಂಕಟೇಶ,
ಏಕ್ ನಾಥ, ಬಸವರಾಜು, ಸೀನಪ್ಪ
ಸಾಂತ್ವನ ನೀಡಿ ಮಕ್ಕಳ ಓದಿಸಿ
ಅವರ ಜೀವನಕ್ಕಾಗಿ
ದುಡಿಯಲು ಪ್ರೋತ್ಸಾಹಿಸೆದೆವು.
ವೆಂಕಟ್ ನ ದೊಡ್ಡ ಮಗ ಡೆಂಟಿಸ್ಟ್
ಕಿರಿಯವ ಕಾಮರ್ಸ್ ಓದಿ
Morgan and Stanley ಯ
ಈಗ ಸಿಂಗಪೂರ್ ನಿವಾಸಿ.
ಅವನು ಚೋಡೋ ಪ್ರಕಾರ
ದೇವರು ದಿಂಡರು ಇದರಲ್ಲಿ
ರವಷ್ಟು ಆಸಕ್ತಿಯಿಲ್ಲ ಭಕ್ತಿ ಇಲ್ಲಾ
ಆದ್ರೆ ಧರ್ಮಪತ್ನಿ ಪ್ರೇಮಾ
ಅನನ್ಯ ದೈವ ಭಕ್ತೆ
ಪೂಜೆ ಪುನಸ್ಕಾರಗಳಲ್ಲಿ ನಂಬಿಕೆ
ಒಳ್ಳೆಯವರನ್ನು ದೇವ್ರು ಬೇಗ ಕರೆದುಕೊಂಡು ಹೋಗ್ತಾರೆ
ನನ್ನಂತ ನಾಸ್ತಿಕರನ್ನ ಕಷ್ಟ ಅನುಭವಿಸಲು
ಬಿಟ್ಟು ಹೋಗಿದ್ದಾರೇಂತ ಇಂದೂ ಕೊರಗುತ್ತಿದ್ದಾನೆ.
ಸೇವಾ ನಿವ್ರತ್ತನಾಗಿ ಬೆಳಗೆದ್ದು
ನೀರಿನ ಮೋಟಾರ್ ಪಂಪು ಚಾಲು ಮಾಡಬೇಕು
ನಾಲಕ್ಕು ಮಹಡಿ ಕಟ್ಟಡದ ಮೇಂಟೈನನ್ಸ್
ನೋಡ್ಕೋ ಬೇಕು
ಅವನ ಪಾಲಿನ ಜಮೀನಿಗಾಗಿ
ಕೋರ್ಟ್ ಗೆ ಹೋಗಬೇಕು
ಬಾಡಿಗೆ, ಪೆನ್ಷನ್ ಹೀಗೇ ಕೈ ತುಂಬಾ
ಹಣವಿದ್ದೂ ಮಾನಸಿಕವಾಗಿ
ಬಹಳಷ್ಟು ನೊಂದು ಚೋಡಿದ
ದೊಡ್ಡ ಮಗ, ಸೊಸೆ, ಮೊಮ್ಮೊಗ
ಅವನ್ನನ್ನು ಬಿಟ್ಟು ಬೇರೆಡೆ ವಾಸ
ಕಿರಿಯವ ಪ್ರೀತಿ ಪ್ರೇಮ ಅಕ್ಕರೆ
ಅಪ್ಪನಿಗೆ ತೋರಿಸೋವ್ನು ಆದ್ರೆ
ಮಗ ಸೊಸೆ ಇರೋದು
ದೂರದ ಸಿಂಗಪೂರ್ ನಲ್ಲಿ
ಹೀಗಾಗಿ 24 ಘಂಟೆ
ಬ್ಯಾಡ್ಮಿಂಟನ್ ಕ್ಲಬ್ ನಲ್ಲಿ ಆಡಿಕೊಂಡು ಟೂರ್ನಮೆಂಟ್ ನಡೆಸಿಕೊಂಡು
ಲಂಚ್, ಡಿನ್ನರ್ ಎಲ್ಲವೂವೆ ಅಲ್ಲೇ.
ಆತನ ಒಂದೇ ಒಂದು ಕೊರಗು
ಅವನು ಚೋಡೋದಿಕ್ಕೆ
ಅದನ್ನ ಕೇಳೋದಿಕ್ಕೆ
ಶೋತ್ರುಗಳೇ ಇಲ್ಲಾಂತ
ಅವನನ್ನ ನೋಡಿದ್ರೆ
ಅವನಿಂದ
ತಪ್ಪಿಸಿಕೊಂಡು ಹೋಗುವ
ಬ್ಯಾಡ್ಮಿಂಟನ್ ಟ್ರೈನೀಗಳು
ಅಂಕಲ್, ಮನೆಗೆ ಹೋಗ್ ಬೇಕು
ಬಿಟ್ಟ್ ಬಿಡೀ
ಮೆಣಸಿನಕಾಯಿ ಮುಪ್ಪಾದ್ರೂ
ಕಾರ ಹೆಚ್ಚೂಂತ
ಹುಣುಸೇ ಹಣ್ಣು ಸಹ ಹಾಗೆಯೇ
ಹುಳಿ ಹೆಚ್ಚೂಂತ
ವೆಂಕಟ್ ವಯಸ್ಸಾದಷ್ಟು
ಚೋಡೋ ತೀವ್ರತೆ ಹೆಚ್ಚೂಂತ
ಅನುಭವಿಸಿದವರು ಹೇಳ್ತಾರೆ.
ಬೆಂಗಳೂರಿಗೆ ಬಂದಾಗ
ವೆಂಕಟ್ ನ ಆತ್ಮೀಯ ಸತ್ಕಾರ
ಬ್ಯಾಡ್ಮಿಂಟನ್ ಕ್ಲಬ್ ನಲ್ಲಿ
ಸದಾ ನಿಮಗಾಗಿ ಕಾದಿರುತ್ತಾನೆ
ಆದ್ರೆ ಷರತ್ತು ಒಂದು
ಅವನು ಚೋಡೋದನ್ನ ಕೇಳಲು
ತಯ್ಯಾರಾಗಿರಬೇಕು
ಬೆಂಗಳೂರಲ್ಲಿ ನಡೆದ ವೆಂಕಿ ಮಗಳ ಮದುವೆ ರಿಸೆಪ್ಶನ್ ಫೋಟೋ
.
.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ