ಚಿನ್ನೂ, ತಂಬಿ, ಸ್ಯಾಂಡಿ ಮತ್ತೆ ನಾವು

ಚಿನ್ನೂ, ತಂಬಿ, ಸ್ಯಾಂಡಿ ಮತ್ತೆ ನಾವು 
ಕೂತ್ರೆ ಚಿನ್ನೂ 
ನಿಂತ್ರೆ ಚಿನ್ನೂ 
ಬಾಯಿ ಬಿಟ್ರೆ ಚಿನ್ನೂ 
ಚಿನ್ನೂ ಇಲ್ಲಿ ಬಾರಮ್ಮ
ಚಿನ್ನೂ ಅಲ್ಲಿಗೆ ಹೋಗಮ್ಮ 
ಯಾರ್ ರೀ ಈ ಚಿನ್ನೂ 
ಚಿನ್ನೂ ನನ್ನ ಮಗಳು 
ಚಿನ್ನೂ ಅವಳ ನಿಕ್ ನೇಮ್
ಅಡ್ಡ ಹೆಸರು 
ಅವಳ ಒರಿಜಿನಲ್ ಹೆಸರು 
ಸ್ಫೂರ್ತಿ 
Inspiration ಅಂತ 
ಮಗು ಹುಟ್ಟುವ ಮುಂಚೆ 
ಬಹಳಷ್ಟು ಚರ್ಚೆಮಾಡಿ, 
ಆಗ ಗೂಗಲ್ ಮತ್ತು ಏ ಐ 
ಬಳಕೆಯಲ್ಲಿ ಇರಲಿಲ್ಲಾ 
ಹೆಣ್ಣು ಮಗು ಆದ್ರೇ 
ಸ್ಫೂರ್ತಿ ಹೆಸರು ಆಯ್ಕೆ ಮಾಡಿಟ್ಟಿದ್ವಿ
ಚೂಟಿ, ಚಂಚಲ, ಅಂದದ  
ಮುದ್ದು ಮುದ್ದಾದ ಪುಟ್ಟ ಕಂದ,
ನಮ್ಮ ಮನೆಯ 
ಆಂಗಣದಲ್ಲಿ 
ಗಣೇಶನ ಹಬ್ಬದಂದು 
ಪದಾರ್ಪಣ 
ಮಾಡಿದಾ ಕ್ಷಣ 
ದೇವತೆಯೇ ಧರೆಗಿಳಿದು ಬಂದಂತೆ 
ಆದ್ರೆ ನಾವು ಯಾಕೆ 
ಅವಳನ್ನು ಧರೆಗಿಳಿಸಿ
ನಡೆಯಲು ಬಿಟ್ರೆತಾನೇ 
ತಲೆಯ ಮೇಲೆ 
ಹೆಗಲ ಮೇಲೆ,ತೋಳಲ್ಲಿ, 
ಸೊಂಟ, ಮಡಿಲಲ್ಲಿ,
ಕೈಯಲ್ಲಿ ಹೊತ್ತು ಎತ್ತಿ ನೆಲವ
ನೋಡದೆ ಬೆಳೆದ  
ಚೊಚ್ಚಲ ಹೆಣ್ಣು ಮಗು
ನಮ್ಮ ಮನೆಯ 
ಲಕ್ಷ್ಮಿ, ಸರಸ್ವತಿ,ಪಾರ್ವತಿ
ಏಂಜೆಲ್ ಏನಾದ್ರೂ ಹೇಳಿ 
ಅವಳೇ ನಮ್ಮ ಮನೆಯ 
ದೇವತೆ 
ಆದ್ರೆ ಸದ್ಯಕ್ಕೆ ಆಕೆನಾ 
ಮನೆಯಲ್ಲಿ ಯಾರೂ 
ಸ್ಫೂರ್ತಿ ಅಂತ ಕರೆದಿದ್ದೇ ಇಲ್ಲಾ , 
ಚಿನ್ನೂ 
ಅಂತಾಲೆ ನಾವೆಲ್ಲಾ 
ಕರೆದಿದ್ದು, ಕರೆಯೋದು, 
ಕರೀತಾ ಇರೋದು 
ಅವಳನ್ನ ಯಾಕೆ 
ಚಿನ್ನೂಂತ ಕರೆದೆವು 
ನಮ್ಮಜ್ಜಿ  ಬಂಗಾರಮ್ಮ,ಮಗೂನ್ನ 
ಚಿನ್ನಾ ರನ್ನಾಂತ ಮುದ್ದು ಮಾಡಲು 
ಚಿನ್ನ ಅವಳ ಮುದ್ದು ಹೆಸರಾಗಲು 
ದಿನಗಳು ಕಳೆದು ಚಿನ್ನಾ, 
ಚಿನ್ನೂವಾಗಿ ಅಡ್ಡ ಹೆಸರು 
ಚಿನ್ನೂ ಶಾಶ್ವತವಾಯ್ತು.
ಅದೇನೋ 
ನನಗನಿಸುತ್ತೆ 
ಮಗಳ ಮೇಲೆ ತಾಯಿಯ ಪ್ರೀತಿಗಿಂತಲೂ 
ತಂದೆಯ ವಾತ್ಸಲ್ಯ ಪ್ರೇಮ ಅಕ್ಕರೆ 
ಎಲ್ಲವೂವೆ ಒಂದು ಚೂರು 
ಜಾಸ್ತಿನೇ. ಹಾಗೇನೇ  ಮಗಳಿಗೂ 
ಅಪ್ಪನ ಮೇಲೆ ವಿಶೇಷ ಪ್ರೀತಿ ಅಂತ 
ಅನಿಸುತ್ತೆ ಜಗ ಮೆಚ್ಚಿದ ಮಗನಾದ್ರೂವೆ 
ಅಪ್ಪನಿಗೆ ಮಗಳೇ ಅಚ್ಚು ಮೆಚ್ಚು 
ಅವಳು ಏನು ಕೇಳಿದ್ರೂ ಕೊಡಿಸೋದು 
ಸರ್ವೋಪರಿ... 
ಅದೇ ಸಂಭ್ರಮ ನಮಗೆಲ್ಲರಿಗೂ 
ಮಗ ಹುಟ್ಟಿದಾಗಲೂ ಇತ್ತು 
ಯಶಸ್ವಿ ಎಂದು ಹೆಸರಿಟ್ಟೆವು 
ಎರಡನೇ ಮಗು ತಮ್ಮ, ನಿಕ್ ನೇಮ್ 
ಪುಟ್ಟ, ಚೋಟು ಅಂತ ಕರೆದ್ರೂವೇ 
ತರಕಾರಿ ಮಾರುವವನು
ತಂಬಿ ಅಮ್ಮಾವೇ ಕೂಪ್ಪಿಡೂಂತ 
ತಮಿಳಲ್ಲಿ ಹೇಳಿದ್ದೇ ತಡ 
ಎಲ್ಲರೂ ತಂಬಿ ತಂಬೀಂತ 
ಯಶಸ್ವಿ ಅನ್ನೋ 
ಕ್ಲಿಷ್ಟವಾದ ಹೆಸರ ಬಿಟ್ಟು 
ತಂಬೀ ನ್ನೋ ಬಾಯ್ ತುಂಬಾ ಉಚ್ಚರಿಸಲು 
ಅನುಕೂಲವಾದ ಹೆಸರ ಹಿಡ್ಕೊಂಡುಬಿಟ್ರು 
ಅಂದಿನಿಂದ ಎಲ್ಲರಿಗೂ 
ಈಗ ಆತ ತಂಬಿ 
ಅದೇ ಅಡ್ಡಹೆಸರು ಶಾಶ್ವತವಾಯ್ತು 
ನಾವು ಆಗ ಭೋಪಾಲ್ನಲ್ಲಿದ್ದೆವು 
ಸ್ಫೂರ್ತಿಗೆ ಹತ್ತು ವರ್ಷ ತುಂಬಿದಾಗ 
ಹುಟ್ಟುಹಬ್ಬಕ್ಕೆ ಏನಮ್ಮ ಬೇಕೂಂತ 
ಕೇಳಿದ್ದೇ ತಡ ನಾಯಿ ಮರಿ ಬೇಕು 
ಪಪ್ಪಿ ಬೇಕೂಂತ ಹಠ 
ಪತ್ನಿ ಗೀತಾ ಒಪ್ಪಲೇ ಇಲ್ಲಾ 
ನಾಯಿಯ ಕೂದಲು  
ಮನೆ ತುಂಬಾ ಹರಡಿ 
ಅಲರ್ಜಿ ಆಸ್ತಮಾ ಬರುತ್ತೇಂತ 
ಜೊತೆಗೆ, ಅವಳು ಲೇಡಿ ಡಾಕ್ಟರೂ  
ವೈರಲ್,ಇನ್ಫೆಕ್ಷನ್, ಮಣ್ಣು ಮಸೀಂತ 
ಮತ್ತೆ ಸಾಂಕ್ರಾಮಿಕ ಹರಡತ್ತೇಂತ  
ಹೆದರಿಸಿಟ್ಟಿದ್ದಳು.
ನನ್ನ ಅಭಿನ್ನ ಮಿತ್ರ ಅಜಯ್ ನಾಥ್ 
ಒಬ್ಬ ಅತಿರೇಕ ಶ್ವಾನ ಪ್ರೇಮಿ 
ಅವರ ಮನೆಯಲ್ಲಿ ಲೈಕಾ, ಬಡ್ಡಿ, ಡಾನ್ 
ಅರ್ಧ ಡಜನ್ ನಾಯಿಗಳು, 
ಅಲ್ಶೇಷನ್, ಲಾಬ್ರಾಡೋರ್, 
ಪೋಮೆರಿಯನ್, ಬೀಗಲ್ ಹೀಗೇ 
ಪ್ರಜಾತಿಗೊಂದು,ತಳಿಗೊಂದು.
ಆಸೆಗೊಂದು, ಅಂದಕ್ಕೊಂದು ಆಟಕ್ಕೊಂದೂಂತ 
ನಾಯಿಗಳನ್ನು ಮುದ್ದಿನಿಂದ ಸಾಕಿಟ್ಟಿದ್ದ. 
ಅದ್ಯಾವ್ದೋ  ಒಂದು ಗಳಿಗೆ 
ಅದೃಷ್ಟದ ಗಳಿಗೆ ಇದ್ದಿರಬೇಕು,
1999 ರ ಏಪ್ರಿಲ್ ತಿಂಗಳ 
12 ನೇ ತಾರೀಕು 
ಪತ್ನಿ ಗೀತಾ ಬೆಂಗಳೂರಿಗೆ 
ಹೋಗಿದ್ದ ಸಮಯ, 
ಅಜಯ್ ಮನೆಯಲ್ಲಿ ಸಂಭ್ರಮ 
ಅಲ್ಶೇಷನ್ ನಾಯಿ ರಾಣಿ 
ನಾಲ್ಕುಮರಿಗಳಿಗೆ ಜನ್ಮ ಕೊಟ್ಟಿದ್ದಳು
ಮಗಳು ಚಿನ್ನೂ, ಮಗ ತಂಬಿ 
ಕರೆದುಕೊಂಡು ಮನೆಗೆ ಬಾ ಅಂತ ಕರೆದಿದ್ದ. 
ನಾವೂ ಹೋದ್ವಿ(ನಾನು, ಚಿನ್ನೂ, ತಂಬಿ).  
ಅಜಯ್ ಮನೆ ಗ್ಯಾರೇಜ್ 
ಈಗ ರಾಣಿಯ ಅರಮನೆ 
ಮುದ್ದು ಮುದ್ದಾದ 
ನಾಲ್ಕು ನಾಯಿ ಮರಿಗಳ ಚೆಲ್ಲಾಟ ನೋಡ್ತಾ ಇದ್ದಹಂಗೆ  ಪಪ್ಪಿಯೊಂದು ಚಿನ್ನೂ ಬಳಿ ಓಡಿ ಬಂದು  
ಅವಳ ಪಾದವ  ನಕ್ಕಲು 
ಅವಳು ತಕ್ಷಣ ಮರಿಯನ್ನು ಅಪ್ಪಿ ಕೊಂಡಳು  
ಬೇಕಾಂತ ಅಜಯ್ ಕೇಳಲು 
ಹೂಂತ ತಲೆ ಆಡಿಸಿ 
ನನ್ನತ್ತ ನೋಡಲು ಎಸ್ ಅಂತ
ಸಂಕೋಚವಿಲ್ಲದೆ ಹೇಳಲು 
ಪಪ್ಪೀ ಪಾಲನೆ ಹ್ಯಾಗೆ ಮಾಡೋದು 
ಏನೇನು ತಿನ್ನಲು ಕೊಡಬಹುದು ಕೊಡಬಾರದು 
ಅಜಯ್ ವಿಸ್ತ್ರತವಾಗಿ ಹೇಳಿ ಕೊಟ್ಟ. 
ದುಡ್ಡೇನೋ ತೆಗೆದುಕೊಳ್ಳಲೇ ಇಲ್ಲಾ. 
ನಂಗೊಂದು ಡೌಟ್ 
ಗಂಡೋ ಹೆಣ್ಣೋಂತ
ಗಂಡು ಪಪ್ಪಿ ಮರಿ ಕಣೋ 
ಚೆನ್ನಾಗ್ ನೋಡ್ಕೋ 
ಪ್ರೀತಿಯಿಂದ ಸಾಕು ಅಂತ 
ಭಾರವಾದ ಹೃದಯದಿಂದ 
ಒಲ್ಲದ ಮನಸ್ಸಿಂದ ಒಪ್ಪಿಸಿ
ಬೀಳ್ಕೊಟ್ಟ..
ಹೋಗೋ ರಸ್ತೆಯಲ್ಲಿ 
ನ್ಯೂ ಮಾರ್ಕೆಟ್ ನ ಪೆಟ್ ಶಾಪ್ ನಲ್ಲಿ 
ನಾಯಿ ಮರಿಗೊಂದು ಪುಟ್ಟಕಾಲರ್ 
ಬೆಲ್ಟು, ಊಟಕ್ಕೊಂದು ಬೋಗುಣಿ 
ಹಾಲು ಕುಡಿಯಲು ಮತ್ತೊಂದು, 
ಪುಟ್ಟ ಬೆಡ್ಡು, ಪುಟ್ಟ ಹೊದಿಕೆ,
ಪೆಡಿಗ್ರಿ ಪೆಲ್ಲೆಟ್ಸ್. ಹೀಗೇ 
ನನಗ್ ಜ್ಞಾಪಕ ಬಂದಾಗಿಂದ್ಲು 
ಈ ತರಹದ ವ್ಯವಸ್ಥೆ ಮಾಡಿದ್ದು 
ನನ್ ಜೀವನದಲ್ಲಿ ಇದೇ ಫಷ್ಟು.
ಭೋಪಾಲ್ ನ ಸರ್ಕಾರಿ ಮನೆ 
ವಿಶಾಲವಾಗಿದ್ದು ಹುಲ್ಲಿನ ಉದ್ಯಾನವಿತ್ತು.
ಮನೆಗೆ ಕರೆದು ಕೊಂಡು ಹೋಗಲು 
ಮನೆಯ ಹೊಸ್ತಿಲಲ್ಲಿ ನನ್ನ ನಿಲ್ಲಿಸಿ 
ಮರಿಯನ್ನು ನನ್ನ ಕೈಯಲ್ಲಿಟ್ಟು 
ಒಳಗೆ ಹೋಡಿ ಹೋದ ಚಿನ್ನೂ 
ಬರುವಾಗ ಆರತಿ ತಟ್ಟೆಯಲ್ಲಿ 
ಹರಿಶಿಣ ಕುಂಕುಮ ನೀರಲ್ಲಿ ಕರಗಿಸಿ 
ಕೆಂಪು ಬಣ್ಣದ ತಿಳಿನೀರ ಮೇಲೆ 
ತೇಲಾಡೋ ವೀಳ್ಯದೆಲೆ 
ಅದರ ಮೇಲೆ ಬಿಳಿ ಕರ್ಪೂರ
ಬೆಂಕೀಕಡ್ಡಿ ಹಚ್ಚಿ...
ಎಲ್ಲಿ ಯಾರನ್ನು ನೋಡಿ ಕಲಿತಳೋ
ಆರತಿ ಎತ್ತಿ ನಾಯಿ ಮರಿಗೆ 
ಬೊಟ್ಟಿಟ್ಟು ಮನೆಯೊಳಗೆ
ಪ್ರವೇಶಿಸಿದಾ ಕ್ಷಣ 
ತಂಬಿ ತಮಾಷೆಯಾಗಿ ಟೈಗರ್ 
ಹೆಸರಿಟ್ಟು ಸ್ವಾಗತಸಿದರೆ ಆತ 
ಒಂದು ಎರಡೂ ಮಾಡಿಯೇಬಿಟ್ಟ
ಆಗಷ್ಟೇ ಅರಿವಾಯ್ತು 
ಶಿಟ್...
ಬಾಚೋದು ಗುಡಿಸೋದು 
ಈ ಕೆಲಸವೆಲ್ಲಾ ನನ್ನ ಪಾಲೂಂತ 
ಟೈಗರ್ ಬೇಡಾ ಅವನನ್ನ ಟಾಮೀಂತ 
ಕರೆಯೋಣಾನ್ನೋದು ಚಿನ್ನೂ ಆಸೆ
ಇಬ್ಬರಿಗೂ ಹೆಸರಿಡುವದರಲ್ಲಿ 
ಸೆಣೆಸಾಟ... ಹಾಗೇಯೇ 
ನಾಯಿಮರಿಯನ್ನು 
ಕೈಯಲ್ಲಿ ಕೊಟ್ಟು 
ನಿದ್ದೆ ಹೋದರು 
ನಾಯಿ ಮರಿ ರಾತ್ರಿಯಿಡೀ 
ಕೊಯ್ಯು ಕೊಯ್ಯುಂತ ಅಳುತ್ತಾ 
ನನ್ನನ್ನು ನಿದ್ರಿಸಲು ಬಿಡಲಿಲ್ಲಾ 
ಟೈಗರಂದ್ರೂ ಕೇಳಲಿಲ್ಲಾ 
ಟಾಮಿ ಟಾಮಿಯಂದ್ರೂ ಕೂಡ
ಕೇಳಲಿಲ್ಲಾ... ವಾಪಸ್ಸು ಬಿಟ್ಟು 
ಬರ್ ಲಾಂತ ತೋಚಿದ್ರೂ 
ಚಿನ್ನೂ ಮುಖ ನೋಡಿ 
ಮನಸ್ಸಾಗಲಿಲ್ಲಾ 
ಹಸಿವಾಗಿರಬೇಕೆಂದು 
ಹಾಲು ಬೋಗುಣಿಯಲ್ಲಿಟ್ಟು 
ಕುಡಿಸಿ ಮಲಗಿಸಲು  ಪಟ್ಟ ಪಾಡು 
ನಾಯಿ ಸಾಕೋದು ಬೇಡಾಂತ 
ಯಾಕೇ ಗೀತಾ ಹೇಳಿದ್ಲುನ್ನೋದು
ಆಗಷ್ಟೇ ಅರಿವಾಯ್ತು. ಒಂದೇ ದಿನಕ್ಕೆ 
ಸಾಕೋದು ಸಾಕು ಸಾಕಾಗಿ ಹೋಯ್ತು. 
ಬೆಳಗ್ಗೆನೇ ಹೆಸರಿಗಾಗಿ ಅಕ್ಕಾ ತಮ್ಮನ 
ಕದನ ಶುರುವಾಯ್ತು 
ಟಾಮೀನ ಇಲ್ಲಾ ಟೈಗರ್ ಕಾ ಹುಕಮ್ಮಾ 
ಅಪ್ಪಾ ನೀವೇ ಒಂದು ಹೆಸರಿಡಿ ಅನ್ನಲು 
ಸ್ಫೂರ್ತಿ ಯ S ಹಾಗೂ ಯಶಸ್ವಿಯ Y 
ಸೇರಿದ ಹೆಸರಾದರೆ ಉತ್ತಮ ಎಂದನಿಸಿ 
S and Y ಯ ಸೇರಿಸಿ 
SANDY ಅನ್ನೋ ಹೆಸರಿಡಲು 
ಇಬ್ಬರಿಗೂ ಬಲು ಸಂತೋಷ 
ನನಗೂ ಸಹ ಇದು ಸರಿಯಾದ 
ಹೆಸರೂಂತ ಆನಿಸಿತು ಸ್ಯಾಂಡಿ. 
ಸ್ಫೂರ್ತಿ ನಾಯಿಮರಿಯನ್ನು  
ಸ್ಯಾಂಡಿ ಎಂದು ಕರೆಯಲು 
ಅದೂನೂವೇ ಒಮ್ಮೆ ಕತ್ತೆತ್ತಿ 
ಅವಳನ್ನ ನೋಡಲು, ನಾಯಿಮರಿಗೂ 
ಸ್ಯಾಂಡಿ ಹೆಸರು ಇಷ್ಟವಾಯ್ತುಂತ
ಬೌ ಬೌ ಅಂತ ಬೊಗಳಿ ಅಂಗೀಕರಿಸ್ತು.
ಊರಿಂದ ಮರಳಿ ಬಂದ ಗೀತಾಳಿಗೆ 
ಸ್ಯಾಂಡಿನ ನೋಡಿ ಆಶ್ಚರ್ಯ 
ಅಂತೂ ಹಠ ಸಾಧಿಸಿಯೇ ಬಿಟ್ರೀಂತ 
ಕೋಪ ಮಾಡ್ಕೊಂಡಳು 
ಆದರೆ ಸ್ಯಾಂಡಿ ಅವಳ ಬಳಿ ಬಂದು
ಪ್ರೀತಿಯಿಂದ ಅವಳನ್ನೇ ನೋಡಲು 
ಕೋಪವೆಲ್ಲಾ ಕರಗಿ ಹೋಯ್ತು.
ಚಿನ್ನೂಗಂತು ಸ್ಯಾಂಡಿಯ ಮೇಲೆ 
ಅಪಾರ ಪ್ರೇಮ ಅದಕ್ಕಾಗಿಯೇ 
ಶಾಂಪೂ ಹಾಕಿ ಸ್ನಾನ ಮಾಡಿಸಿ 
ಬೊಟ್ಟಿಟ್ಟು ಶೃಂಗಾರಿಸಿ ಸ್ಯಾಂಡಿ ಯನ್ನು 
ಸ್ಕೂಲ್ ಗೆ ಕರೆದುಕೊಂಡು ಹೋಗಿ 
ಅವಳ ಸ್ನೇಹಿತರಿಗೆಲ್ಲಾ  
ತೋರಿಸಬೇಕೂಂತ ಸಿದ್ಧಳಾದಳು 
ಆದ್ರೆ ಅದೆಲ್ಲಾ ಸಾಧ್ಯವಿಲ್ಲಾಂತ 
ಅವಳಿಗೆ ತಿಳಿ ಹೇಳಿ, ಒಂದು ಶನಿವಾರ 
ಸ್ನೇಹಿತರನ್ನೇ ಮನೆಗೆ ಕರೆದುಕೊಂಡು 
ಬಂದು ದಿನವಿಡೀ ಸ್ಯಾಂಡಿಯ ಜೊತೆ 
ಕಳೆದರು. ಮನೆಯ ಮುಂದಿದ್ದ 
ಹುಲ್ಲಿನ ಉದ್ಯಾನದಲ್ಲಿ ಸಂಜೆ 
ಫುಟ್ ಬಾಲ್ ಆಡಿ ಸ್ಯಾಂಡಿ ಚುಸ್ತಾಗಿ 
ತಂಬಿ ಸುಸ್ತಾಗಿ ಬರುತಿದ್ದರು.
ದಿನಗಳು ಉರುಳಿ ಸ್ಯಾಂಡಿಯ 
ಮೊದಲ ಜನ್ಮದಿನ ಚಿನ್ನೂ 
ಹ್ಯಾಗೋ ಲೆಕ್ಕಾಚಾರ ಮಾಡಿ 
ಏಪ್ರಿಲ್ ಹತ್ತೂಂತ ನಿಗದಿಸಿದ್ದಳು 
ಹುಟ್ಟುಹಬ್ಬ ಜೋರಾಗಿ ಆಚರಿಸಿ
ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನ 
ಜೊತೆಗಾರನಾದ,ಕುಟುಂಬದ  
ಒಬ್ಬ ಸದಸ್ಯನಾದ ಅನ್ನೋದಕ್ಕಿಂತಲೂ  
ಇನ್ನೊಬ್ಬ ಮಗನಾದ... ಸ್ಯಾಂಡಿ 
ಸ್ಕೂಲ್ ಗೆ ಮಕ್ಕಳು ಹೋದ ಮೇಲೆ 
ನಾನೂ ಆಫೀಸಿಗೆ ಹೋದ ಮೇಲೆ
ಒಂಟಿಯಾಗಿದ್ದ ಗೀತಾಳ ಜೊತೆಯಲಿ 
ಓಡಾಡೋದು, ಟಿವಿ ನೋಡೋದು, 
ಬಿಸ್ಕೆಟ್, ಅವಲಕ್ಕಿ, ಮಂಡಕ್ಕಿ, ತಿನ್ನೋದು
ಸ್ಯಾಂಡಿ ಸಹ ಕಲಿತು ಕೊಂಡ.
ಮೊದ ಮೊದಲು ಗುರ್ರ್ ಅನ್ನೋಳು 
ಚಪ್ಪಲಿಯೆಲ್ಲಾ ಕಚ್ಚಿ ಹಾಕೋದು 
ಫುಟ್ ರಗ್ ನ ಎಳೆದಾಡೋದು
ಎಲ್ಲವನ್ನೂ ಸಹಿಸಿ ಕೊಂಡಳು 
ಕೊನೆಗೆ ನಮಗೆಲ್ಲರಿಗಿಂತಲೂ
ಹೆಚ್ಚಾಗಿ ಗೀತಾಳನ್ನು ಹಚ್ಚಿಕೊಂಡುಬಿಟ್ಟ 
ಸ್ಯಾಂಡಿ  ಹ್ಯಾಗೆ ಗೀತಾಳಿಗೆ ದೋಸ್ತೋ 
ಹಾಗೇ  ಗೀತಾ ಸ್ಯಾಂಡಿಯ  ದೋಸ್ತು 
ಮಕ್ಕಳು ಅವನ ಜೊತೆ ಕಳೆಯೋ 
ಸಮಯ ಕಮ್ಮಿಯಾಯ್ತು 
ಹೊರಗೆ ಕರೆದುಕೊಂಡು 
ಹೋಗೋದು ಸುತ್ತಾಡೋ 
ಎಲ್ಲಾ ಜವಾಬ್ದಾರಿ ನನ್ನ ಪಾಲಾಯ್ತು 
ಅದೊಂತರಹ ಇಷ್ಟಪಟ್ಟ 
ಆದ್ರೆ ಕಷ್ಟದ ಜಿಮ್ಮೆದಾರಿ 
ಹೀಗೇ ಸ್ಯಾಂಡಿಯೊಡನೆ ನನಗೇ 
ಗೊತ್ತಿಲ್ಲದೆ ಒಂದು ತರಹ 
ಬಾಂಧವ್ಯ ಉಂಟಾಗಿತ್ತು.
ಆಫೀಸ್ ಗೆ ಹೋಗುವಾಗ ಬಂದು 
ನನ್ನನ್ನು ಬೀಳ್ಕೊಟ್ಟು 
ವಾಪಸ್ ಬರುವಾಗ ಕಾರಿನ ಶಬ್ದ 
ದೂರದಿಂದಲೇ ಗುರುತಿಸಿ 
ಓಡೋಡಿ ಬಂದು ಜಿಗಿಯೋದು 
ಬಾಲವಾಡಿಸೋದು 
ನಾನು ಅವನನ್ನ ಎತ್ತಿ 
ಮುದ್ದು ಮಾಡುವವರೆಗೂ 
ಸುಮ್ಮನಿರಲಾರ.
ಅದೇ ಪ್ರೀತಿ 
ಮನೆಯವರಿಂದ ಅಪೇಕ್ಷಿಸಬಾರದು 
ಮಿಸ್ಸೆಸ್ಸು ಟಿವಿ ಸೀರಿಯಲ್
ನೋಡ್ತಿರೋಳು 
ಹಾಂ ಬಂದ್ರಾ..ಬನ್ನೀ..
ಔಪಚಾರಿಕೆ ನಿಭಾಯಿಸಿ ಮತ್ತೆ 
ಟಿವಿ ನೋಡೋದ್ರಲ್ಲಿ ವ್ಯಸ್ತಳಾದಳು 
ಮಕ್ಕಳು ಅವರವರ ಹೋಮ್ ವರ್ಕ್ನಲ್ಲಿ
ನನಗೇಂತ ಸ್ಯಾಂಡಿಯಂತ 
ಜೀವವೊಂದಿದೇನ್ನೋದೇ 
ನಿಜ, ಸತ್ಯ..ಅದೊಂತರಹ ನೆಮ್ಮದಿ.
(ಈ ವಿಷಯ ಆಕೆಗೆ ಗೊತ್ತಿಲ್ಲಾ 
ಹಾಗೇ ಇರಲಿ ಬಿಡಿ ಬ್ಲಾಗ್ ಗಾಗಿ ). 
ಈ ನಡುವೆ ನನ್ನ ಸ್ಥಾನಾಂತರಣ 
ಚೆನ್ನೈ ಗೆ ಆಯ್ತು. ಭೋಪಾಲ್ ನಿಂದ 
ತಮಿಳುನಾಡು ಎಕ್ಸ್ಪ್ರೆಸ್ ಟ್ರೈನ್ ನಲ್ಲಿ 
ಸ್ಯಾಂಡಿಯನ್ನು ನಮ್ಮ ಜೊತೆ ಬರಲು 
ಬಿಡದ ರೈಲು ನಿಯಮ, 
ಅದಕ್ಕಾಗಿ ಜೊತೆಗೆ ಸೇರಿಸಿದ 
ಗೂಡ್ಸ್ ಪೆಟ್ಟಿಗೆಯ ಗೂಡೊಂದರಲ್ಲಿ 
ಸ್ಯಾಂಡಿ ಒಬ್ಬನೇ ಪ್ರಯಾಣಿಸಿದ. 
ಮಧ್ಯಾಹ್ನ ನಾಗ್ ಪುರ್ ನಲ್ಲಿ ಇಳಿದು
ಸ್ಯಾಂಡಿಗೆ ನೀರು ಆಹಾರ 
ಚಿನ್ನೂ ಜೊತೆ ಹೋಗಿಕೊಟ್ಟ ನಂತರ
ಸಂಜೆ ವಿಶಾಖಪಟ್ಟಣಂ ನಲ್ಲಿ ಇಳಿದು 
ಇನ್ನೊಮ್ಮೆ ನೋಡಿ ಬಂದ್ವಿ  
ಬೆಳಗ್ಗೆ 7 ಘಂಟೆಗೆ ಕಷ್ಟ ಪಟ್ಟು 
ಕ್ಷೇಮವಾಗಿ ಸ್ಯಾಂಡಿ ಜೊತೆ 
ಸಮುದ್ರತೀರದ ಚೆನ್ನೈ ತಲುಪಿದೆವು. 
ಪ್ರಯಾಣದ ಬಳಲಿಕೆ, ಬಾಯಾರಿಕೆ,
ಚೆನ್ನೈಯ ವಿಪರೀತ ಹವಾ ಮಾನ 
ಇದುವರೆಗೂ ಒಂದು ದಿನವೂ 
ಕಾಯಿಲೆ ಬೀಳದ ಸ್ಯಾಂಡಿ ಸುಸ್ತಾಗಿ ಹೋಗಿದ್ದು 
ಅಂದೇ ನೋಡಿದ್ದು.
ಪಶು ಚಿಕಿತ್ಸಕ  ಡಾಕ್ಟರ್ ಕೃಷ್ಣನ್ 
ಬಳಿ ಕರೆದುಕೊಂಡು ಹೋಗಿ  
ವಿಟಮಿನ್ ಮಿಶ್ರಿತ ಗ್ಲುಕೋಸ್ 
ಡ್ರಿಪ್ಸ್ ಹಾಕಿದ ಮೇಲೆ 
ಸುಧಾರಿಸಿಕೊಂಡ ಸ್ಯಾಂಡಿ 
ಬಲು ಬೇಗ ಹೊಸ ವಾತಾವರಣಕ್ಕೆ, 
ಮಕ್ಕಳು ಹೊಸ ಸ್ಕೂಲ್ ಗೆ 
ನಾನು ಹೊಸ ಆಫೀಸಿಗೆ 
ಗೀತಾ ಹೊಸ ಚಿಕಿತ್ಸಾಲಯಕ್ಕೆ 
ಹೊಂದಿಕೊಂಡೆವು.
ಡಿಸೆಂಬರ್ 26, 2004 
ಮರೆಯಲಾಗದ ಒಂದು ದಿನ
ಸ್ಯಾಂಡಿ ಯಾವತ್ತೂ ಇಲ್ಲದೆ 
ಬೆಳಗ್ಗೆ ನಾಲಕ್ಕು ಘಂಟೆಗೆ 
ಚಡಪಡಿಸ ತೊಡಗಿದ,  ಸರಿ 
ಹೊರಗೆ ಕರೆದುಕೊಂಡು 
ಹೋಗಲು ಹಾತೊರೆಯುತ್ತಿದ್ದಾನೆಂದು
ಒಂದು ಸುತ್ತು ಕರೆದುಕೊಂಡು 
ಹೋದ್ರೂವೇ  ಕುಯ್ ಕುಯ್ಂತ 
ಗುನುಗುವ ಶಬ್ದ ಮಾಡ್ತಾನೇ ಇದ್ದ, 
ಸರಿ ಬೆಳಗಾದ ಮೇಲೆ 
ಡಾಕ್ಟರ್ ಹತ್ತಿರ ಕರೆದುಕೊಂಡು 
ಹೋಗೋಣಾಂತ ಅಂದುಕೊಂಡು 
ಮನೆಗೆ ವಾಪಸ್ಸು ಬಂದಿದ್ದಾಯ್ತು.
ನಾವಿದ್ದದ್ದೋ ಸಮುದ್ರ ತೀರದ ಮನೆ
ಬೆಳಗ್ಗೆ ಸುಮಾರು ಎಂಟೂ ಮುಕ್ಕಾಲು 
ಆಗಿರಬೇಕು ಇದ್ದಕ್ಕಿದ್ದ ಹಾಗೇ ಜೋರಾಗಿ 
ಸಮುದ್ರದ ಅಲೆ ಭೂಮಿಯ ಅಪ್ಪಳಿಸಿದ
ಶಬ್ದವಾಯ್ತು  
ಹೊರಬಂದು ಬಾಲ್ಕನಿಯಿಂದ ನೋಡಿದರೆ 
ಮನೆಸುತ್ತಲೂ  ಸಮುದ್ರದ ನೀರು 
ಮೊಣಕಾಲಷ್ಟು ತುಂಬಿತ್ತು. 
ಸುನಾಮಿ ಚೆನ್ನೈ ತೀರವ  ಬಡಿದಿತ್ತು 
ಟಿವಿ ನ್ಯೂಸ್ ಇಂಡೋನೇಷಿಯದ 
ಬಾಲಿ ದ್ವೀಪದ ಬಳಿ ಉಂಟಾದ 
ಭೂಕಂಪದ ಪರಿಣಾಮ ಸುನಾಮಿ 
ರೂಪದಲ್ಲಿ ಭಾರತದ ಪೂರ್ವ ಪಶ್ಚಿಮ 
ತೀರವನ್ನು ಬಲು ತೀವ್ರವಾಗಿ ಅಪ್ಪಳಿಸಲು 
ಸಾವಿರಾರು ಜನರು ಆಹುತಿಯಾಗಿದ್ದರು.
ಸ್ವಲ್ಪ ನೀರಿಳಿದ ನಂತರ  
ಸ್ಯಾಂಡಿ ಹಾಗೂ ಮನೆಯಲ್ಲಿದ್ದವರನ್ನೆಲ್ಲಾ 
ಹತ್ತು ಮಹಡಿ ಚೆನ್ನೈ ಪೋರ್ಟ್ ಟ್ರಸ್ಟ್ ನ  
ಒಂಬತ್ತನೇ ಮಹಡಿಯಲ್ಲಿದ್ದ ನನ್ನ ಆಫೀಸಿಗೆ ರವಾನಿಸಿ ಪೋರ್ಟ್ ನ  ಕಂಟ್ರೋಲ್ ರೂಮ್ಗೆ  ಹೋಗಿ 
ಬಂದರೊಳಗಿನ ಹಡಗುಗಳು 
ತಂಗುದಾಣ ದಲ್ಲಿ ಬಿಗಿಯಾಗಿ 
ಕಟ್ಟಿದ್ದಾರಾ, ಸುರಕ್ಷಿತವಾಗಿದೆಯೆ 
ಅನ್ನೋದನ್ನ ಸುನಿಶ್ಚಿತ ಗೊಳಿಸಿದ್ದಾಯ್ತು 
ಆದ್ರೂವೆ ಒಂದೇ ಒಂದು ಹಡಗಿನ 
ಲಂಗರು ಸರಪಣಿ ತುಂಡಾಗಿದ್ದು 
ನೀರಿನಲೆಗಳ ಪ್ರಭಾವಕ್ಕೊಳಗಾಗಿ 
ಬಂದರೊಳಗೆ ತತ್ತಳಿಸುತಿತ್ತು.
ರೋಗ್ ಶಿಪ್ ಅಂದರೆ ಮದವೆಕ್ಕಿದ 
ಆನೆಯ ತರಹ ದಿಕ್ಕು ದಿಶೆಯಿಲ್ಲದೆ 
ನುಗ್ಗಿ ಸಕ್ಕರೆ ತುಂಬಿದ್ದ ಇನ್ನೊಂದು 
ಹಡಗಿನ ನಡು ಭಾಗಕ್ಕೆ
ಡಿಕ್ಕಿ ಒಡೆಯಲು ಆ ಹಡಗಿನ 
ಉಕ್ಕಿನ ಚಾದರ ಬಿರುಕು ಬಿಟ್ಟು
ಒಳ ಹೋಲ್ಡ್ ನಲ್ಲಿದ್ದ ಸಕ್ಕರೆ 
ಸಮುದ್ರದ ಉಪ್ಪು ನೀರಲ್ಲಿ ಕರಗಲು 
ಚೆನ್ನೈ ಬಂದರಿನ ಉಪ್ಪು ನೀರು ಸಿಹಿಯಾಯ್ತು. 
ಬಲು ಪ್ರಯಾಸಪಟ್ಟು
ಹಿಡಿತಕ್ಕೆ ಬಂದ ಹಡಗನ್ನು ಲಂಗರು 
ದಾಣದ ಹಿಡಿಗೂಟಕ್ಕೆ ಕಟ್ಟಿ ಹಾಕಿ 
ಸಕ್ಕರೆ ಸೋರುತಿದ್ದ ಹಡಗಿನ 
ಬಿರುಕನ್ನು ನಿಯಂತ್ರಣಕ್ಕೆ ತಂದಿದ್ದಾಯ್ತು.
ಮತ್ತೆ ಮತ್ತೆ ಸಣ್ಣ ದೊಡ್ಡ ಅಲೆಗಳ 
ದಾಳಿ ದಿನವಿಡೀ ನಡೆದಿತ್ತು. 
ಸ್ಯಾಂಡಿ ಒಬ್ಬನ್ನ ಬಿಟ್ಟು ಮನೆಯವರೆಲ್ಲಾ 
ನೆಂಟರ ಮನೆಗೆ ಹೋಗಿ ಉಳಿದರು 
ನಾನೂ ಮತ್ತು ಸ್ಯಾಂಡಿ ಇಬ್ಬರೇ 
ಒಂಬತ್ತನೇ ಮಹಡಿಯಲ್ಲಿ 
ಸಮುದ್ರವನ್ನು , ಹಡಗುಗಳನ್ನು 
ಅಲೆಗಳನ್ನ ನೋಡ್ತಾ ನೋಡ್ತಾ   
ರಾತ್ರಿಯಿಡೀ ಕಳೆದೆವು.
ಬೆಳಗ್ಗೆ ಎದ್ದು ಚಡಪಡಿಸಿದ ಸ್ಯಾಂಡಿ 
ನಿಶ್ಚಿಂತೆಯಾಗಿ ನಿದ್ದೆ ಹೋಗಿದ್ದು 
ನೋಡಿ ನನಗನಿಸಿತು, ಇವನಿಗೇನಾದ್ರು 
Extra Sensory Perception(ESP)
ಅಥವಾ Pre monition ನ್ನೋ 
ಅಂದ್ರೆ ಬರಲಿರುವ ಅನಾಹುತಗಳ 
ಗಣಿಸೋ ವಿಶೇಷ ಕ್ಷಮತೆ
ಭೂಕಂಪವೋ ಅಥವಾ ಸುನಾಮಿಯ 
ಬಗ್ಗೆ ಗೊತ್ತಿತ್ತೋ ಏನೋ 
ಅದಕ್ಕಾಗಿಯೇ ಕುಯ್ ಕುಯ್ಂತ 
ಗುಣಗೋದು ಚಡಪಡಿಸಿದ್ದು 
ನಮಗೆ ಎಚ್ಚರಿಸಿತಿದ್ದನೋ ಏನೋ
ಇನ್ನೊಂದು ಘಟನೆ ಅದನ್ನ 
ನಂಬಲೇ ಬೇಕಾಗಿ ಬಂತು 
ಒಮ್ಮೆ ಬಲು ಜೋರಾಗಿ ಬಿರುಗಾಳಿ 
ಬೀಸಿ ಸೈಕ್ಲೋನ್ ಚೆನ್ನೈ ನ ಹಾದು 
ಹೋಗಲು ಜಡಿ ಮಳೆ 
ಜೋ ಅಂತ ಸುರಿಯ ತೊಡಗಿತ್ತು, 
ಆ ಮಳೆಯಲ್ಲೂ 
ಸ್ವಲ್ಪ ಕರ್ತವ್ಯನಿಷ್ಠನಾದ್ದರಿಂದ 
ಆಫೀಸ್ ಗೆ ಹೊರಟ ನನ್ನನ್ನು
ಎಂದೂ ಇಲ್ಲದೆ ಜಿಗಿದು ತಡೆಯಲು 
ಸ್ಯಾಂಡಿಯನ್ನು ಸಮಾಧಾನ ಪಡಿಸಿ 
ನೀಲಿ ಶರ್ಟ್ ಕೊಳಕಾಯ್ತು 
ಆದ್ರೂವೆ ರುಮಾಲಿನಿಂದ ಒರಸಿ 
ಕಾರಲ್ಲಿ ಕುಳಿತು ಹೊರಡಲು 
ಅನುವಾದಾಗ ಕರ್ಕಶ ಶಬ್ದದೊಂದಿಗೆ 
ಮನೆಯ ಮುಂದಿದ್ದ  ವಿಶಾಲವಾದ
ಹಾಗೂ ದೊಡ್ಡ ಗುಲ್ ಮೊಹರ್ ಮರ 
ಬೇರೊಂದಿಗೆ  ನಾನು ಹೋಗಲಿದ್ದ 
ರಸ್ತೆಯ ಮೇಲೆ ಬೀಳಲು 
ಕ್ಷಣ ಮಾತ್ರದಲ್ಲಿ ದೊಡ್ಡದೊಂದು 
ಅನಾಹುತದಿಂದ ತಪ್ಪಿದೆವು 
ಸ್ಯಾಂಡಿ ಮರ ಬೀಳುವದನ್ನ ಗಣಿಸಿ 
ನನ್ನನ್ನು ಹೋಗಲು ಬಿಡದೆ 
ತಡೆ ಹಾಕಿದ್ದು ಇದಕ್ಕೇ ಏನೋ 
ನನ್ನ ಹಾಗೂ ಡ್ರೈವರನ್ನು ಕಾಪಾಡಿದ
ಸ್ಯಾಂಡಿಗೆ ಎಂದೆಂದಿಗೂ ಋಣಿ. 
ಬೆಳೆದು ಸ್ವಲ್ಪ ತೂಕ ಹೆಚ್ಚಾಗಿ  
ಆತನನ್ನು ಎತ್ತಲು ಈಗ ನನ್ನಿಂದ 
ಸಾಧ್ಯವಾಗ್ತಾ ಇರಲಿಲ್ಲಾ 
ಚುಸ್ತು ದುರುಸ್ತಾಗಿಯೇ ಇದ್ದ 
ಹೀಗೇಯೇ ಹತ್ತು ವರ್ಷಗಳು 
ಉರುಳಿ ಸ್ವಲ್ಪ ವಯಸ್ಸಾದ ಹಾಗೇ 
2009ರ ಆಗಸ್ಟ್ ತಿಂಗಳ ಐದನೇ
ತಾರೀಕು ಬೆಳೆಗ್ಗೆ ಚಿನ್ನೂ ಹಾಗೂ ತಂಬಿ 
ಸ್ಕೂಲಿಗೆ ಹೋಗದೆ ನನ್ನ ಬಳಿ ಬಂದು 
ಸ್ಯಾಂಡಿ ಶ್ವಾಸಿಸಲು  ಕಷ್ಟ ಪಡ್ತಾ 
ಇದ್ದಾನೇಂತ ಹೇಳಲು ಕಾರಲ್ಲಿ 
ತಕ್ಷಣವೇ ಡಾಕ್ಟರ್ ಕೃಷ್ಣನ್ ರವರ 
ಆಸ್ಪತ್ರೆಗೆ ಕರೆದುಕೊಂಡು ಹೋಗಲು 
ಕಾರಲ್ಲಿ ಹಿಂದಿನ ಸೀಟಲ್ಲಿ 
ಚಿನ್ನೂವಿನ ಮಡಿಲಲ್ಲಿ ಮಲಗಿದ್ದವನ 
ನೋಡಿ ಕಸಿವಿಸಿಯಾಯ್ತು 
ಡಾಕ್ಟರ್ ಸ್ಯಾಂಡಿಯನ್ನು ಪರೀಕ್ಷಿಸಲು
ಏನೇನೋ ವೈದ್ಯಕೀಯ 
ಭಾಷೆಯಲ್ಲಿ ಡಾಕ್ಟರ್ ವಿವರಿಸಲು 
ಸ್ಯಾಂಡಿ ನಮ್ಮನ್ನು ಅಗಲಿದ್ದಷ್ಟೇ 
ಅರ್ಥವಾಯ್ತು. ಚಿನ್ನೂವಿಗೆ 
ತಾಳಲಾರದ ದುಃಖ ಉಮ್ಮಳಿಸಿ 
ಅಳಲು, ತಂಬಿ ಅತ್ತು ನೋಡಿರದವ 
ಡಾಕ್ಟರ್ ಸಮಾಧಾನ ಗೊಳಿಸಲು
ಸ್ಯಾಂಡಿಯ ಪಾರ್ಥಿವ ಶರೀರವನ್ನು 
ನಮ್ಮ ಕಾರ್ ನಲ್ಲಿ ಮನೆಗೆ ತಂದೆವು  
ನಮ್ಮನ್ನು ಯಾವಾಗಲೂ 
ಬೌ ಬೌ ಅಂತ ಸ್ವಾಗತಿಸುತ್ತಿದ 
ಸ್ಯಾಂಡಿಯ ಧ್ವನಿಯಿಲ್ಲದೆ 
ನಿಶಬ್ದದ ನಡುವೆ ಚೀರಿಕೊಂಡು ಬಂದಿದ್ದು 
ಗೀತಾಳ ಆಕ್ರಂದನ
ಮನೆಯ ನಡುವಿನ ಹಾಲ್ ನಲ್ಲಿ 
ಬಿಳೀ ಚಾದರವ ಹಾಸಿ ಸ್ಯಾಂಡಿಯ 
ಹೂವಿನ ಹಾಸಿಗೆಯ ಮೇಲೆ ಮಲಗಿಸಿ
ಅಂತಿಮ ಶ್ರದ್ಧಾಂಜಲಿ ಅರ್ಪಿಸಿ 
ಮನೆಯ ಹಿಂದೆಯೆ ಅವನನ್ನು 
ಭೂಮಿತಾಯಿಗೆ ಅರ್ಪಿಸಿ
ಸಮಾಧಿಯೊಂದನ್ನ ನಿರ್ಮಿಸಿದೆವು
ಚಿನ್ನೂ, ತಂಬಿ  ಗೀತಾ ಮತ್ತೆ ನನ್ನನ್ನೂ ಸೇರಿ ಸ್ಯಾಂಡಿಯ ಕಳೆದು ಕೊಂಡಿದ್ದು 
ನಮಗೆಲ್ಲಾ ತುಂಬಲಾರದ ಕ್ಷತಿ, 
ಕಳೆದು ಕೊಂಡವರಿಗೇ ಅದರ ನೋವು ಅರ್ಥವಾಗೋದು 
ಆತ್ಮೀಯರೊಬ್ಬರನ್ನು ಕಳೆದುಕೊಂಡ 
ದುಃಖದಿಂದ ಸ್ಥಿತಿ ಸಾಮಾನ್ಯವಾಗಲು 
ಬಲು ದಿನಗಳಾಯ್ತು 
ಮತ್ತೆ ಸ್ಥಾನಾಂತರಣ,  ಚೆನ್ನೈನಿಂದ 
ಭೋಪಾಲ್ ಗೆ ಹೋಗಲು 
ಬೇರೆ ಇನ್ನೊಂದು ಸರ್ಕಾರಿ ಮನೆಯಲ್ಲಿ  
ಸ್ಯಾಂಡಿಯಿಲ್ಲದ ಜೀವನ ಸಾಗುತ್ತಿತ್ತು.
ಈ ನಡುವೆ ಗೀತಾ ಚೆನ್ನೈಗೆ ಹೋಗಿ 
ವಾಪಸ್ಸು ಭೋಪಾಲ್ 
ಬೆಳಗ್ಗೆ ಶತಾಬ್ದಿಯಲ್ಲಿ ಬಂದಿಳಿದು 
ಮನೆಗೆ ಬಂದು ನೋಡಿದರೆ 
ಹೊರ ಆಂಗಣದಲ್ಲಿ 
ಹೂವಿನ ತೊಟ್ಟಿಗಳು ಒಡೆದು 
ಮಣ್ಣೆಲ್ಲಾ ಹರಡಿತ್ತು 
ಅದನ್ನ ದಾಟಿ ಬಂದವಳನ್ನ 
ಹಾದಿಯಲ್ಲಿ ಹರಿದು ಹೋದ 
ಚಪ್ಪಲಿಗಳ ಕಂಡವಳು...
ಅದನ್ನೂ ದಾಟಿ ಮನೆಯೊಳಗೆ 
ಪ್ರವೇಶಿಸಿದ ಗೀತಾಳನ್ನು 
ತಲೆಯ ಮೇಲೊಂದು  
ಅವಳ ಫೇವರೈಟ್ ಟೇಬಲ್ ಕ್ಲಾತ್
ಒಂದನ್ನ ಹೊದ್ದು ಮುಖ ಮಾತ್ರ 
ಒದ್ದಾಡಿ ಒದ್ದಾಡಿ ಹೊರ ಚಾಚಿ 
ಬೌ ಬೌ ಎಂದು ಸ್ವಾಗತಿಸಿತ್ತು 
ಮನೆಯ ಹೊಸ ಸದಸ್ಯ 
ಅದೇ ಸಂತತಿಯ ಅಲ್ಸೇಷನ್ ಪ ಪ್ಪಿ o
ಸ್ಯಾಂಡಿ 
ಹಾಂ 
ಸ್ಯಾಂಡಿ -2










 
 











 






 




 




ಕಾಮೆಂಟ್‌ಗಳು

  1. It is so interesting that in between my cooking, I took several time breaks to read it. When I get some time, I will relate you some my stories when we got our first dog.As I was reading your story, I kind of reminded about our story. Got to run - need to shower and get ready.

    ಪ್ರತ್ಯುತ್ತರಅಳಿಸಿ
  2. Suri,
    I finished reading the story. The ending reminded me of my dog Arya. Till today, I get tears thinking of his last days. I find it hard to write about here. May be one day, I will tell you more about it. I did not realize that I had read most of the story before today. As I have said, this is one of my favorite of the stories that you written so far. Nice work! Keep up the good work and continue to share your God given gift of storytelling🙏🙏🙏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.