ಗಂಡಾಂತರ
ಗಂಡಾಂತರ
ಲಕ್ಕವಳ್ಳಿಯಲ್ಲಿದ್ದಾಗ
ಅಮ್ಮ, ಅಪ್ಪ, ಅಣ್ಣಂದಿರು,ಅಕ್ಕಂದಿರು,
ಸೋದರಮಾವ ಎಲ್ಲಾ ಸೇರಿ ಕುಟುಂಬ
ಎನ್ನುವ ಹಾಯಾಗಿದ್ದ ಗುಂಪಿಗೆ
1955 ರಲ್ಲಿ ಹೊಸದಾಗಿ
ನಾನೂ ಸೇರಿ ಕೊಂಡೆ
ಹೇಗಂತೀರಾ...
ನಾನು ಹುಟ್ಟಿದ್ದು ಲಕ್ಕವಳ್ಳಿಯಲ್ಲಿ
ಜನ್ಮಸ್ಥಳ ಲಕ್ಕವಳ್ಳಿ
ಆಗ ಅದು ಶಿವಮೊಗ್ಗ ಜಿಲ್ಲೆಯಲ್ಲಿತ್ತು
ಈಗ ಚಿಕ್ಕಮಗಳೂರು ಜಿಲ್ಲೆಯ
ಭದ್ರಾ ಜಲಾಶಯದೊಂದಿಗೆ ವಿಹಂಗಮ
ದ್ರಶ್ಯದ ಪುಟ್ಟ ಸುಂದರ ಗ್ರಾಮವಾಗಿಇತ್ತು, ಇದೀಗ ಪುಟ್ಟ ನಗರವಾಗಿದೆ,
ಮುಂದೇನಾಗುತ್ತೋ .
ನಮ್ಮಪ್ಪರವರ ಸಹಯೋಗಿ
ಸಹಾಯಕ ಯಂತ್ರಿಯಾಗಿದ್ದ
ಶ್ರೀ ಕೆಂಡಗಣ್ಣಸ್ವಾಮಿಯವರು .
ಅಲ್ಪ ಸ್ವಲ್ಪ ಜ್ಯೋತಿಷ್ಯ ಜ್ಞಾನ ತಿಳಿದವ್ರು
ಜಾತಕ ನೋಡೋದು,
ಭವಿಷ್ಯವ ಹೇಳೋದು,
ಅದೂನೂವೇ ಫ್ರೀಯಾಗಿ
ಮಾಡ್ತಾ ಇದ್ದರು,ಕೇಳಿದ್ರೇ
ಎಲ್ಲಾ ಒಂದು ಆತ್ಮ ತೃಪ್ತಿಗಾಗೀಂತ ಹೇಳೋವ್ರು
ಆದ್ರೆ ಕೆಟ್ಟದ್ದು,
ಹಾಳಾದ್ದು, ಪರಿಹಾರ
ಅದೂ ಇದೂಂತ
ಮಾತ್ರ ಹೇಳ್ತಾ ಇರಲಿಲ್ಲಾ
ನಮ್ಮಪ್ಪ ಲೆಫ್ಟಿಸ್ಟ್
ಅಂದ್ರೆ ಎಡಪಂಥಿ, ನಾಸ್ತಿಕರು,ಬೇರೆ
ಜಾತಕ, ಜ್ಯೋತಿಷ್ಯದಲ್ಲಿ
ಶುದ್ಧವಾಗಿ ನಂಬಿಕೆ ಇಲ್ಲ..
ಜಾತಕ ನೋಡ ಬೇಕೂಂತ
ಇಷ್ಟ ಪಟ್ಟಿದ್ದು ನಮ್ಮಮ್ಮ ಹಾಗೂ
ಸೋದರಮಾವ ಪದ್ಮನಾಭ,
ಎಲ್ರು ಬಚ್ಚು ಮಾಮಂತಲೇ
ಕರೀತಿದ್ರು, ಹಾಗೆಯೇ
ಮಾವ ಕಂಸಾನೂ ಅಲ್ಲಾ,
ನಮ್ಮ ಮನೆಯ ಎಂಟನೇ ಮಗುವಾದ
ನಾನೇನು ಕೃಷ್ಣಾನೂ ಅಲ್ಲಾ
ಶ್ರೀ ಕೆಂಡಗಣ್ಣ ಸ್ವಾಮಿ ಯವರ ಬಳಿ
ನಮ್ ಮಾವ ಹೋಗಿ
ಹುಟ್ಟಿದ ಸಮಯ,
ಹುಟ್ಟಿದ ಊರು
ಹುಟ್ಟಿದ ವರ್ಷ
ತಿಂಗಳು ದಿನದ
ವಿವರಣೆಯನ್ನು ನೀಡಿ
ಸ್ವಲ್ಪ ಒಳ್ಳೇ ಜಾತಕ
ಬರೀರಿ ಅಂತ ಕೇಳಿಕೊಂಡರು
ಕೇಳ್ದಂಗೆ ಬರಿಯೋಕೆ
ಇದೇನೂ ಪ್ರಬಂಧ ಅಲ್ವಲ್ಲಾ
ಹಣೆ ಬರಹ
ಸ್ವಾಮಿಯವರು ಪುಟ್ಟ ಇಳಿ ಜಾರು
ಮೇಜಿನ ಡ್ರಾಯರ್ ನಿಂದ
ಒಂಟಿಕೊಪ್ಪಲ್ ಪಂಚಾಂಗ ಮತ್ತೆ
ಒಂದು ನೋಟು ಪುಸ್ತಕ ತೆಗೆದ್ರು
ಪೆನ್ಸಿಲ್ನಿಂದ ಒಂದು ಚೌಕಟ್ಟು ಹಾಕಿ
ಅದರೊಳಗೆ ಸಣ್ಣ ಚಚ್ಚೌಕಾರದ
ಚೌಕಗಳ ಬರೆದು ಒಂದೂ ಎರಡೂಂತ
ಗುಣಾ ಭಾಗಾ ಎಲ್ಲಾ ನೋಡಿ
ವ್ರಶ್ಚಿಕ ರಾಶಿ, ಜೇಷ್ಟಾ ನಕ್ಷತ್ರ
ತುಲಾ ಲಗ್ನಾಂತ ಬರೀತಾ ಹೋದ್ರು
ರಾಶಿಗೆ ಅಧಿಪತಿ ಮಂಗಳ ಗ್ರಹ
ಚಂದ್ರಂಗೂ, ನೀರಿಗೂ ಇರೋ
ಸಂಬಂಧ, ಉಚ್ಚ ನೀಚಾನ್ನೋದು
ವ್ರಶ್ಚಿಕ ರಾಶಿಯ ಗುಣ ಲಕ್ಷಣಗಳು
ನೀರಲ್ಲೇ ಉದ್ಯೋಗ
ಅಥವಾ
ನೀರ ಮೇಲೇ ಕೆಲಸ
ನೀರಲ್ಲೇ ಗಂಡಾಂತರವೂ ಇದೆ
ಜಾಗ್ರತೆಯಾಗಿರಿ.ಅಂತ ಹೇಳ್ ಬಿಟ್ರು
ಜಲವೇ ಜೀವನ ಸಾಕ್ಷಾತ್ಕಾರ
ಮಾರ್ಚ್ ಏಪ್ರಿಲ್ ತಿಂಗಳಿದ್ದಿರಬೇಕು
ಅದೇ ಲಕ್ಕವಳ್ಳಿ,
ಆರು ತಿಂಗಳು ಮಗುವಾಗಿದ್ದ ನನ್ನನ್ನು
ಅಮ್ಮನ ಮಡಿಲಿಂದ ಎತ್ಕೊಂಡು
ಅದೂ ಮುಸ್ಸಂಜೆಯ ರಾತ್ರೀಲಿ
ಮನೆಯ ಮುಂದೆ ಪಲ್ಲಕ್ಕಿಯಲ್ಲಿ
ವಾದ್ಯ ಮೇಳಗಳೊಂದಿಗೆ ಹೊರಟಿದ್ದ
ದೇವಿ ಮಾರಮ್ಮನ ಉತ್ಸವದ
ಮೆರವಣಿಗೆಯ ನೋಡಲು ಓಡಿ ಬಂದವಳು
ಅದರ ಹಿಂದೆಯೇ
ಪಕ್ಕದ ರಸ್ತೆಯ ಮೊನೆಯಲ್ಲಿ
ಕವಲುದಾರಿ ಕಾಲುವೆಯವರೆಗೆ ಹಿಂಬಾಲಿಸಿದಳು
ಆರತಿ ಎತ್ತಲು
ನಿಂತು ನೋಡ್ತಾ ಇದ್ದವಳು
ಪೂಜಾರಿ ಎಸೆದ ಬಾಳೆ ಹಣ್ಣಿಗಾಗಿ
ನನ್ನ ಕೈ ಬಿಟ್ಟಳು
ಅವಳ ಕೈಯಿಂದ ಜಾರಿದವ
ಕೊಳಕು ನೀರಿನ ಕಾಲುವೆಯಲ್ಲಿ ಬಿದ್ದೆ
ನೀರಲ್ಲಿ ಮುಳುಗುತ್ತಿದ್ದ
ನನ್ನ ಮೂಗು ಬಾಯಿಯೊಳಗೆಲ್ಲಾ ನೀರು
ತಕ್ಷಣವೇ
ಹತ್ತಿರದಲ್ಲೇ ಇದ್ದ ದಸ್ತಗೀರ್ ರವರು
ನನ್ನನ್ನು ನೀರಿಂದ ಮೇಲೆತ್ತಿ ಕಾಪಾಡಿದರು
ನೀರಿನ ಗಂಡಾಂತರದಿಂದ ತಪ್ಪಿಸ್ಕೊಂಡೆ
ನಿಜವೋ ಸುಳ್ಳೋ, ಅವಳು ಹೇಳಿದ್ದು
ಆದ್ರೆ ಅಕ್ಕ ಹೇಳ್ತಾನೆ ಇರುತ್ತಾಳೆ
ಬೆಳ್ಳಗಿದ್ದ ನಾನು ಮೋರಿಯ
ಕೊಳಕು ನೀರಲ್ಲಿ ಬಿದ್ದಿದ್ದ ರಿಂದ
ನಸು ಕಪ್ಪಾದೇಂತ...
ಜೋಗ ಜಲಪಾತದ ಬಳಿ ಇರುವ
ಮೈಸೂರು ಸ್ಟೇಟ್ ಎಲೆಕ್ಟ್ರಿಸಿಟಿ
ಬೋರ್ಡ್ ಹೈಯರ್ ಸೆಕೆಂಡರಿ
ಸ್ಕೂಲ್ ನಲ್ಲಿ ಓದುತ್ತಿದ್ದೆ
ಒಂಬತ್ತನೇ ಕ್ಲಾಸ್ ರಿಸಲ್ಟ್ ಬಂತು
ಮಮತ ಫಸ್ಟ್, ಪ್ರಭಾ ಶಂಕರ್ ಸೆಕೆಂಡು,
ನಾನು ಥರ್ಡ್...
ಒಂದು ಕಡೆ ಪಾಸ್ಸಾದ ಸಂತೋಷ
ಮತ್ತೊಂದು ಕಡೆ ಫಸ್ಟ್ ಬರಲಿಲ್ಲಾನ್ನೋ ವ್ಯಥೆ,
ಚಿಂತೆ ಮಾಡ ಬ್ಯಾಡೋಂತ ಹೇಳಿ
ಜೊತೆಗೇ ದಾಂಡೇಲಿಗೆ ಕರೆದುಕೊಂಡು
ಹೋದ್ರು ನಮ್ ಬಚ್ಚು ಮಾಮ
ಅವರು ಕಾಳಿ ನದಿ ಹೈಡೆಲ್
ಪ್ರಾಜೆಕ್ಟ್ ನಲ್ಲಿ ದೊಡ್ಡ ಕಂಟ್ರಾಕ್ಟರ್
ಬೆಲ್ ಬಾಟಮ್ ಪ್ಯಾಂಟ್ ನೀಲಿ ಬಣ್ಣದ್ದು
ಕಪ್ಪು ಲೈನಿನ ಬಿಳಿ ಶರ್ಟ್ ಮತ್ತೆ
ಪಾಯಿಂಟೆಡ್ ಕಪ್ಪು ಶೂ ಗಳು
ಬ್ಯಾಡ, ಮಾಮಂದ್ರೂ ಕೇಳಲಿಲ್ಲಾ
ಕೊಡಿಸಿದ್ರು. ಟಿಪ್ ಟಾಪಾಗಿ
ಅವರ ಜೀಪಿನಲ್ಲಿ ಹತ್ತಿರದ ಸೂಪಾ ನಲ್ಲಿ
ಅವರು ನಿರ್ವಹಿಸುತ್ತಿದ್ದ ಕೆಲಸ
ತೋರಿಸಲು ಕರೆದುಕೊಂಡು ಹೋಗ್ತಿದ್ರು
ಅವರ ಮನೆ ದಾಂಡೇಲಿಯಲ್ಲಿತ್ತು
ಹೊಸ ಊರು
ಸರಿಯಾಗಿ ಮಧ್ಯಾಹ್ನ ಒಂದು ಘಂಟೆಗೆ
ಊರು ತುಂಬಾ ಕೆಟ್ಟ ವಾಸನೆ
ಏನಪ್ಪಾ ಯಾರಪ್ಪಾ
ಬಚ್ಚು ಮಾಮ ಹೇಳಿದ್ರು
ಇದು ಯಾರೂ ಬಿಟ್ಟಿದ್ದಲ್ಲಾ
ಬಂಗಾರೂ ಪೇಪರ್ ಮಿಲ್ಸ್ ನ
ಬಂಬೂ ಸ್ಟೀಮ್ ಹೊರಬಿಟ್ಟ
ವಾಸನೆಯಿದೂಂತ ಹೇಳಿದ್ ಮೇಲೇ
ಆ ಊರಿಗೇ ಆ ವಾತಾವರಣಕ್ಕೇ
ಆದ್ರೂವೇ ಮೂಗು ಮುಚ್ಚಿಕೊಂಡು
ಒಂದರ್ಧ ಘಂಟೆ ಆ ವಾಸನೆಗೆ ಹೊಂದಿಕೊಂಡ್ವಿ,
ಕಾರ್ಗಲ್ ನಿಂದ
ಬಂದ ನಮಗೆ ದಾಂಡೇಲಿ ಒಂದು
ತರಹ ಮಾಡರ್ನ್ ನಗರವಾಗಿ ಕಾಣಿಸ್ತು
ಹರಿಯುತ್ತಿದ್ದ ಕಾಳಿ ನದಿಯ ನೋಡಲು
ಈಜಲು ಬರದಿದ್ದ ನಾನೂ
ಮಾವನ ಮಕ್ಕಳೊಟ್ಟಿಗೆ ಹೋಗಿದ್ದೆ
ದಡದಲ್ಲಿ ನಿಂತು ನೋಡ್ತಿದ್ದ ನಾನು
ಯಾವಾಗ ನೀರಲ್ಲಿ ಇಳಿದೇಂತ
ನನಗೇ ಗೊತ್ತಾಗಲಿಲ್ಲ
ಹಿಮ್ಮಡಿವರೆಗೂ ಹರಿಯುತ್ತಿದ್ದ
ನದಿಯ ನೀರು ತಣ್ಣಗೆ ಆಹ್ಲಾದಕರವಾಗಿತ್ತು.
ಇನ್ನೂ ಸ್ವಲ್ಪಮುಂದೆ
ಆಳವಾದ ನೀರಲ್ಲಿ ನನ್ನ ತಮ್ಮ
ಕರೆಯಲು
ನೀರಿನ ಆಕರ್ಷಣೆಯೋ
ಅಥವಾ
ಗಂಡಾಂತರ ಬಾ ಬಾ ಅಂತ
ಕರೆದಿರಬೇಕು
ಅವನ ಬಳಿ ಹೋಗುವ ಮುಂಚೆ ಜಾರಿದವ ಬೆನ್ನಿನ ಮೇಲೇ
ಮಗುಚಿ ಬಿದ್ದೆ ನೀರು ನಿಧಾನವಾಗಿ
ಮೂಗಿನ ಹೊಳ್ಳೆಯಲ್ಲಿ ಪ್ರವೇಶಿಸಲು
ತಲೆಯ ಒಮ್ಮೆ ಜಾಡಿಸಿ ನೀರಿನಿಂದ ಹೊರಬಂದು ಕಿರುಚಿದರೆ
ಶಬ್ದಾನೇ ಹೊರಬರಲಿಲ್ಲಾ
ಕೆಮ್ಮು ಬಂದು ಅಕ್ಕ ಪಕ್ಕದಲ್ಲಿದ್ದವರು
ಎತ್ತಿ ಹೊರಗೆ ದಡ ಸೇರಿಸಿದರು
ಜೀವ ಉಳಿಸಿದರು
ಬೇಡಪ್ಪಾ ಈ ನೀರಿನ ಸಹವಾಸಾಂತ
ಮೂಟೆ ಕಟ್ಟಿ ಕಾರ್ಗಲ್ ವಾಪಸ್
ಬಂದಿದ್ದಾಯ್ತು
ಮರೆಯಲಾಗದ ಅನುಭವವಾಗೇ ಉಳಿಯಿತು
ಈ ಗಂಡಾಂತರ
PUC ಮುಗಿಸಿದ ತಕ್ಷಣವೇ ,
ಅಪ್ಲೈಮಾಡಿದ್ದೋ ವೈದ್ಯರಾಗಬೇಕೂಂತ
ಆದ್ರೆ ಆಗಿದ್ದು ಮತ್ಸ್ಯ ವಿಜ್ಞಾನಿ
MBBS ಸೀಟು ಸಿಗಲಿಲ್ಲಾ
ನನಗಾಗ ಫಿಶರೀಸ್ ಕಾಲೇಜು
ಬಗ್ಗೆ ಗೊತ್ತೇ ಇರಲಿಲ್ಲಾ
ನಮ್ಮಣ್ಣನ ಪ್ರಯಾಸ, ಅಪ್ಲೈ ಮಾಡಿದ್ದ
ಪರೀಕ್ಷೆ ಬರೆದೆ, ಸೆಲೆಕ್ಟ್ ಆದೆ,
ಹೀಗೇ ಫಿಶರೀಸ್ ಕಾಲೇಜು ಸೇರಿದ್ದು
By Default... ಪೂರ್ವ ನಿಯೋಜಿತ...
ಆಗ ಯೋಚಿಸಲೂ ಇಲ್ಲಾ
ಈ ಕೋರ್ಸ್ ನಲ್ಲಿ ನೀರಿನ ಮೇಲೇ
ನೀರಿನೊಳಗೆ limnology ಯಿಂದ
Oceanography ವರೆಗೂ
Fresh Water ನಿಂದ
Brackish Water ವರೆಗೂ
ಉಪ್ಪು ನೀರು, ಸಿಹಿ ನೀರು, ಹಿನ್ನೀರು
ಹೀಗೇ ಎಲ್ಲಾ ಬಗೆಯ
ನೀರು, ನೀರು, ನೀರು
ಎಲ್ಲವೂವೇ ನೀರು
ಜ್ಯೋತಿಷಿ ಹೇಳಿದ್ದು
ನಿಜವಾಗ್ತಾ ಇದೆಯಲ್ಲಾ
BFSc ಯಲ್ಲಿ
ಕೊಳ, ಕೆರೆ, ಬ್ಯಾಕ್ ವಾಟರ್, ಲಗೂನ್
ಸಮುದ್ರ, ಸಾಗರ, ಹೀಗೇ ಎಲ್ಲಾ
Water bodies ನೋಡಿದ್ದಾಯ್ತುಂತ
ಅಂದುಕೊಂಡಾಗ Oceanography ಯಲ್ಲಿ dissertation ಮಾಡಬೇಕಾಗಿ
ಬಂತು ಮತ್ತೆ ಎಲ್ಲವೂವೇ
ಪೂರ್ವನಿಯೋಜಿತ ಅಲ್ಲವೇ
ಅದೂನೂವೇ ಅರಬ್ಬೀ ಸಮುದ್ರದ
ಮೇಲೇ ಸುತ್ತ ಮುತ್ತಲೂ ಬರೀ
ನೀರೇ ನೀರು ಏನ್ ಹೇಳೋದು
ಡಾಕ್ಟರ್ MPM Reddy ಯವರ
guidance ನಲ್ಲಿ MFSc ಮಾಡಿ ಮುಗಿಸಿದೆ.
ಸೋಮೇಶ್ವರದ ಬೀಚ್ ನಲ್ಲಿ ಹುಣ್ಣಿಮೆಯ ರಾತ್ರಿ ಅಲೆಗಳೊಂದಿಗೆ
ಯಾರೋ ಎನಿಮಿ ಫ್ರೆಂಡ್ಸ್ ನೀರಲ್ಲಿ
ತಳ್ಳಿದ್ದು, ಸುಧಾರಿಸಿಕೊಂಡು ಎದ್ದಿದ್ದು
ಗಂಡಾಂತರದ ವ್ಯಾಖ್ಯಾನಕ್ಕೆ ಕಳಂಕ
ಹೀಗೇ career ಪ್ರಯಾಣ
ಮತ್ಸ್ಯ ವಿಜ್ಞಾನಿಯಾಗಿ ನೀರ
ಮೇಲೇ ಪ್ರಾಂತಗಳ ದಾಟಿ ವಿಭಿನ್ನ
ಶೋಧ ಕೇಂದ್ರಗಳಲ್ಲಿ ನೀರಿನೊಳಗಿರುವ
ಮೀನುಗಳ ಬಗ್ಗೆ ಶೋಧ ಕಾರ್ಯ ಮುಂದುವರಿಯಿತು
ನೀರಿನಿಂದ ಗಂಡಾಂತರ ಇದೆ
ಅನ್ನೋದು ಅತಿಶಯೋಕ್ತಿ
ಎಲ್ಲಿಂದಲಾದರೂ,
ಯಾರಿಂದಲಾದರೂ,
ಯಾವಾಗ ಬೇಕಿದ್ರೂ,
ಯಾರಿಗಾದ್ರೂವೆ, ಬರಬಹುದು,
ಅನಾಹುತವಾಗಬಹುದು.
ಅದಕ್ಕೇ ಬರೀ ನೀರನ್ನು ದೂಷಿಸೋದು
ಯಾವ ವಿಧದಲ್ಲಿ ನ್ಯಾಯ?
ಬೀಸೋ ದೊಣ್ಣೆ ತಪ್ಪಿದ್ರೆ
ಸಾವಿರ ವರುಷ ಆಯಸ್ಸು
ಒಂದು ಗಂಡಾಂತರ ತಪ್ಪಿಸಿಕೊಂಡ್ರೆ
ಇನ್ನೊಂದು ಗಂಡಾಂತರ
ಬರುವವರೆಗೂ ನಿಶ್ಚಿಂತೆಯಾಗಿರು
ಮತ್ತೆ ನಾನು IAS ಪರೀಕ್ಷೆ ಪಾಸು ಮಾಡಿದ್ದು ಬೇರೇ ಹೊಸ ಉದ್ಯೋಗದ
ಲೈನ್ ಹಿಡಿದು career ಪಯಣ
ಬೆಳೆಸಿದ್ದು, ಇನ್ನೊಮ್ಮೆ ಇನ್ನೊಂದು
Blog ನಲ್ಲಿ...
ಎಂತಾ ವಿಡಂಬನೆ ನೋಡಿ
IAS ನ ಹೊಸ ಹುದ್ದೆ ಸುತ್ತ ಮುತ್ತ
ಸಮುದ್ರವೇ ಇಲ್ಲದ ಮಧ್ಯ ಪ್ರದೇಶಕ್ಕೆ
ಕರೆದುಕೊಂಡು ಹೋದ ಅದ್ರಷ್ಟಾನ್ನಿ
ಅಥವಾ ವಿಧಿಯೋ
ಅಮರಕಂಟಕದಿಂದ ರಾಜ್ಯದ ಉದ್ದಕ್ಕೂ
ಹರಿದು ಹಲವಾರು ಜಿಲ್ಲೆಗಳ
ಜೀವನಾಡಿಯಾಗಿದ್ದು
ಗುಜರಾತ್ ನ ಸೂರತ್ ಬಳಿ ಸಾಗರವ
ಸೇರಿ ಸಂಗಮಿಸುವ
ತಾಯಿ ನರ್ಮದೆಯೇ ಪೂಜ್ಯ
ಹರ ಹರ ನರ್ಮದೇ
ನರ್ಮದಾ ನದಿ ತೀರದ
ಹರ್ ದಾ ಜಿಲ್ಲೆಯ SDO
ಆಗಿ ನೇಮಕ ಗೊಂಡಿದ್ದು
ಅಲ್ಲಿಯ ಮುಂಗಾರು ಮಳೆ ಪ್ರವಾಹ
ಗಂಡಾಂತರಗಳಿಗೆ ಕೊರತೆ ಇಲ್ಲದಂತೆ
ಜೀವನ ಕ್ಷಣ ಕ್ಷಣಕ್ಕೂ ರೋಚಕವಾಗಿ
ಚಾಲೆಂಜಿಂಗ್ ಆಗಿ ಕಳಿಯಿತು .
ಪ್ರಯಾಣಿಗಳೊಂದಿಗೆ ಬಸ್ ಒಂದು
ಹಂಡಿಯ ಸೇತುವೆ ಪಾರು ಮಾಡಲು
ನರ್ಮದಾ ನದಿಯ ಪ್ರವಾಹಕ್ಕೆ ಕೊಚ್ಚಿಕೊಂಡು
ಹೋದದ್ದು ಅನಿರೀಕ್ಷಿತ ಅನಾಹುತ
ಇವೆಲ್ಲವೂ ರಾತ್ರಿಯಲಿ ಯಾಕೆ ಆಗುತ್ತೋ
ಆ ದೇವರಿಗೇ ಗೊತ್ತು
ಅಲ್ಲಲ್ಲಿ ಸಿಕ್ಕ ತೀರ ಸೇರಿದ ಶವಗಳು
21 ಜನ ಆಹುತಿಗೆ ಬಲಿಯಾದರು
ಗಂಡಾಂತರಗಳ ಅವಾಂತರವ
ಬಟ್ಟ ಬಯಲಿಗೆಳೆದಿತ್ತು ಈ ಅನಾಹುತ
ನನಗಾದ ಆಗಬಹುದಾದ ಗಂಡಾಂತರ
ಒಂದು ಕಡೆ, ಜನ ಸಾಮಾನ್ಯರಿಗೆ
ಗಂಡಾಂತರ ಇನ್ನೊಂದು ಕಡೆ
ಬರುವ ಮುನ್ನ ಹ್ಯಾಗೆ ರಕ್ಷಿಸೋದು
ಬಂದ ಮೇಲೇ ಹ್ಯಾಗೆ ಕಾಪಾಡೋದು ಕೆಲವೊಂದು ವಿಪತ್ತು ಪ್ರಕೃತಿಯಾದಾದರೆ
ಹಲವಾರು ಮಾನವ ನಿರ್ಮಿತ ವಿಪತ್ತುಗಳು
ಸದ್ಯಕ್ಕೆ ನನಗಾದ ಕ್ಲೋಸ್ ಶೇವ್
ಸಾವಿನ ದವಡೆಯ ಸನಿಹಕ್ಕೆ ಕೊಂಡೊಯ್ದ ಕೆಲವೊಂದು
ಘಟನೆಗಳು ಇದ್ರೂವೆ
ಮುಖ್ಯವಾದದ್ದು
ಗಂಡಾಂತರ ನಂಬರ್ ಒಂದನ್ನ
ಹಂಚಿ ಕೊಳ್ಳುತ್ತಿದ್ದೀನಿ
2008ರಲ್ಲಿ ಚೆನ್ನೈಬಂದರು
ಟ್ರಸ್ಟಿನ ಚೇರ್ಮನ್
ಆಗಿದ್ದ ನಾನು ಜೊತೆಗೆ
ಸೇತು ಸಮುದ್ರಮ್ ಶಿಪಿಂಗ್ ಚಾನೆಲ್
ಯೋಜನೆಯ ಕ್ರಿಯಾನ್ವಯ ಗೊಳಿಸಲು
ಅತಿರಿಕ್ತ ಭಾರವನ್ನು ಕೊಟ್ಟಿದ್ದರು,
ಅಂದ್ರೆ SSSCP ಸೇತು ಸಮುದ್ರಮ್
ಶಿಪಿಂಗ್ ಚಾನೆಲ್ ಪ್ರಾಜೆಕ್ಟ್ ನ ಪ್ರಭಾರಿ ಚೇರ್ಮನ್
ಪಾಕ್ ಜಲಸಂಧಿಯ ಬಳಿ
ಸೇತು ಸಮುದ್ರಮ್ ಶಿಪಿಂಗ್
ಚಾನೆಲ್ ಯೋಜನೆಯ
ಸಮುದ್ರ ತಳವ ಆಳಪಡಿಸುವ dredging
ಕಾರ್ಯ ಜಾರಿ ಇತ್ತು
ಆ ಕಾರ್ಯವನ್ನು ಕಾಂಟ್ರಾಕ್ಟ್ ಮೂಲಕ
ಡ್ರೆಡ್ಜಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ
(Dredging Corporation of India DCI)
ಮಣ್ಣೆತ್ತುವ ಯಂತ್ರ ಹೊಂದಿದ
ಜಹಾಜು ಅಕ್ವಾರಿಸ್ Aquaris
ದ್ವಾರ ಕಾರ್ಯಗತ ಗೊಳಿಸಲಾಗಿತ್ತು
ಕ್ಯಾಪ್ಟನ್ ತಿವಾರಿಯವರ
ಆಹ್ವಾನ ಸ್ವೀಕರಿಸಿ
ಅದಕ್ಕಾಗಿ ಚೆನ್ನೈನಿಂದ ನಾಗಪಟ್ಟಣಂ
ರಸ್ತೆ ಮೂಲಕ ಪಯಣಿಸಿ ಅಲ್ಲಿಯ ಬಂದರಿನಿಂದ mechanised
ಬೋಟ್ ಒಂದರಲ್ಲಿ
ಒಂದು ಘಂಟೆ ಪ್ರಯಾಣದ ನಂತರ
ಆಳವಾದ ಬಂಗಾಳ ಕೊಲ್ಲಿಯಲ್ಲಿ
ಗಂಭೀರವಾಗಿ ನಿಂತಿದ್ದ Aquaris
ಅಕ್ವಾರಿಸ್ ಬಳಿ ಅಲ್ಲಾಡಿ ತತ್ತರಿಸಿ
ನಮ್ಮ ಬೋಟ್ ನಿಂತಿತು
ಹಗ್ಗದ ಏಣಿಯ ಹತ್ತಿದ ನಮ್ಮನ್ನು
Aquaris ಅಕ್ವಾರಿಸ್ ಜಹಾಜಿನ ಕ್ಯಾಪ್ಟನ್ ಸ್ವಾಗತಿಸಿದಾಗ ಮಧ್ಯಾಹ್ನ ಎರಡು ಘಂಟೆ
dredging ಸಮುದ್ರದ ತಳ ಕೊರೆಯುವ
ಆಪರೇಷನ್ ಹ್ಯಾಗೆ ನಡೆಯುತ್ತಿದೆ
ಅನ್ನುವದನ್ನ ತೋರಿಸಿದರು
ಸ್ವಲ್ಪಾಹಾರದ ನಂತರ
ಮತ್ತೆ ಹಗ್ಗದ ಮೂಲಕ ಕೆಳೆಗಿಳಿಯುವಾಗ
ಬೋಟ್ ದೂರವಾಗಿ ಹಗ್ಗವ ಹಿಡಿದು
ನೀರ ಮೇಲೇ ನೇತಾಡುತಿದ್ದ
ನನ್ನ ಕೈ ಜಾರಿ ಆಳ ಸಮುದ್ರದಲ್ಲಿ ಬಿದ್ದಿದಷ್ಟೇ ಬೋಟ್ ಮತ್ತೆ
ಅಲೆಯೊಂದಿಗೆ ಜಹಾಜನ್ನ ಡಿಕ್ಕಿ ಹೊಡೆಯಲು ನೀರಿನ
ಅಲೆಯೊಂದಿಗೆ ಮೇಲೇ
ಬಂದ ನನ್ನನ್ನು ಹಾಗೇ ಲಪಕ್ಂತ
ಹಿಡಿದು ಮೇಲೆತ್ತಿದರು
ಸಾಕಷ್ಟು ಉಪ್ಪು ನೀರು
ಮೂಗು ಬಾಯೊಳಗೆಲ್ಲಾ ಹೋಗಿದ್ದು
ವಾಂತಿಯಾಯ್ತು
ಮೀನುಗಾರರ ಸಾಹಸದಿಂದ
ಜೀವ ಉಳಿಯಿತು ಅವರೇ
ನನ್ನ ಕಾಪಾಡಿದ ದೇವರು
ನನ್ನ ಜೊತೆ ನೀರಲ್ಲಿ ಬಿದ್ದ
ಬಂಗಾಲಿ ಪಾಲ್ ನನ್ನು
ಎತ್ತಿದರು, ಅಷ್ಟರಲ್ಲಿ ಜೋರಾಗಿ
ಎದ್ದ ಅಲೆ ಬೋಟ್ ಮತ್ತು
ಜಹಾಜುಗಳ ನಡುವೆ ಸಿಕ್ಕಿ
ಕಾಲಿನ ಹಿಮ್ಮಡಿಗೆ ಪೆಟ್ಟಾಯ್ತು
ಓರೆ ಬಾಬಾಂತ ಕೂಗಾಡಲು
ಬೋಟ್ ನಲ್ಲಿದ್ದ ಫಸ್ಟ್ ಏಡ್ ನಲ್ಲಿ
ಪಟ್ಟಿ ಕಟ್ಟಲು ತ್ವರಿತವಾಗಿ ಅಲ್ಲಿಂದ
ಚೆನ್ನೈಗೆ ಕರೆದುಕೊಂಡು ಬಂದು
MIOT ಹಾಸ್ಪಿಟಲ್ ನಲ್ಲಿ
ಡಾಕ್ಟರ್ ಗಳಿಗೆ ಹೇಳಿ
ಉತ್ತಮ ಚಿಕಿತ್ಸೆ ನೀಡಲು ನಿರ್ದೇಶಿಸಿ
ಮನೆಗೆ ಬಂದಾಗ ರಾತ್ರಿ
ಹತ್ತು ಘಂಟೆಯಾಗಿತ್ತು
ದೇವರಿಗೊಂದು ದೀಪ ಹಚ್ಚಿದ
ಮೇಲೆ ನಿಯಂತ್ರಣಕ್ಕೆ ಬಂತು ಮನಸ್ಸು
ನೀರಲ್ಲಿ ಗಂಡಾಂತರ ಮತ್ತೊಮ್ಮೆ
ಜ್ಞಾಪಕಕ್ಕೆ ಬಂದು ಎಚ್ಚರಿಸಿತು
ಜಾಗ್ರತೆಯಾಗಿದ್ದಿರ ಬೇಕೂಂತ
ಈಗ ಸೇವಾನಿವ್ರತ್ತನಾದ ಮೇಲೆ
ಇನ್ನೆಲ್ಲಿ ನೀರಿನ ಮೇಲೆ ಕೆಲಸ
ಅಂತ ಅಂದುಕೊಂಡು
ಬಾತ್ ರೂಮ್ ಗೆ ಹೋಗಿದ್ದೆ
ಶಾಂಪೂ ಹಾಕಿ ಸ್ನಾನ ಮಾಡಿ
ನೀರ ಹಾಕಿ ತೊಳೆದ ಮೇಲೂ
ಸೋಪಿನ ನೊರೆ ಇನ್ನೂ ಹೋಗಿರಲಿಲ್ಲ
ಸೋಪಿನ ನೊರೆ ಹಾಗೂ
ನುಣುಪಾದ ಟೈಲ್ಸ್
ಭಯಂಕರ ಕಾಂಬಿನೇಶನ್
ಕಾಲಿಟ್ಟಿರಬೇಕು ಜೋಯ್ಯಂತ
ಜಾರಿ ಬೀಳುವುದನ್ನ ಕಾಯ್ತಾ ಇತ್ತು
ಹೆಜ್ಜೆ ಹೆಜ್ಜೆಗೂ...
ಗಂಡಾಂತರ
(ಜೋಕೆ... ಎಚ್ಚರಿಸಲಿಲ್ಲಾಂತ ಹೇಳ್ಬೇಡಿ, ನನಗಷ್ಟೇ ಅಲ್ಲಾ
ಎಲ್ಲರಿಗೂವೆ )
Vijay Baragi: Suri,
ಪ್ರತ್ಯುತ್ತರಅಳಿಸಿFinished reading - hilarious and suspenseful. There are many passages that made me laugh out loud. I think it is easier to talk about it than to write about it.
It was so interesting that I could not keep my phone down. Moreover, there were no interruptions. Also, my school has not started 🤣
Dr.Narayanappa reviewed it
ಪ್ರತ್ಯುತ್ತರಅಳಿಸಿReviews are as follows
GANDANTHARA'..is an extremely well written, captivating and thought-provoking masterpiece. What truly stands out is your extraordinary memory power and your meticulous documentation. The rare and invaluable photographs you have preserved for decades are a treasure. It requires a very rare and gifted personality like you to preserve such old photos so carefully to script the living memories of GANDANTHARA.. (Danger.. Risk. )
You were blessed to be born in a large, affectionate joint family with loving parents, brothers, sisters and uncles in the serene and beautiful village of *Lakkavanahalli*. It is fascinating how your family, who did not believe in astrology, and where an uncle took the initiative to write about the future of a child to local Pandith, is so beautifully and humorously narrated n attendin the village festival of Maramma.
The description of not getting a seat in MBBS as astrologically predicted, and instead joining a unique course to study different kinds of fishes in different types of water bodies, is sketched with great emotion and wit.
Finally, your illustrious journey after joining the IAS is truly adventurous and inspiring. The grave dangers you bravely faced as SDO in Harda District near the mighty Narmada River, and later as the Chairman of Chennai Port Trust where you had a miraculous escape from great danger during the deep-sea drilling by the Dredging Corporation of India, keeps the reader spellbound.
The narration is so lucid, beautiful and heartfelt that it takes every reader along with you, making them live every moment of your incredible life.
Sir, How do you bring life to words, memories and narrations? IF I said fabulous etching to this grippingmasterpiece it is is gross understatement n way below an apt summing. Man... how many ಗಂಡಾಂತರಗಳು, ಸರ್... from a baby to thus far... Your dredger ship experience is too close to my own saving while getting on from a passenger ship to small boat in Lakshdweet. An alert n skillful local boatman grabbed me on to the tossing boat in the nick of time n without soaking me in seawater on that rough weather day... some 30 years ago...
ಪ್ರತ್ಯುತ್ತರಅಳಿಸಿWaiting for the next feast from your unfathomable memories n of the superlative suturing of the words n events that simply hop on into my "smritipatala". Grateful thanks for helping me hone my Kannada