ಗಣೇಶನ ಸ್ಟೂಲ್

ಗಣೇಶನ ಸ್ಟೂಲ್

ಎಲ್ಲರ ಮನೆಯಲ್ಲಿಯು ಇರುವಂತೆ 
ನಮ್ಮ ಮನೆಯಲ್ಲೂ ಇತ್ತು, ಇದೆ...
ಏನೂಂತೀರ ?
ಕಾಲುಮಣೆ 
ಹಾಂ ಸ್ಟೂಲ್ ಕಣಪ್ಪ 
ಅದೇ ಹಳೆಯ ಕಾಲದ 
ನಾಲಕ್ಕು ಕಾಲಿನ ಮರದ ಸ್ಟೂಲ್,
ನಮ್ಮ ಮನೆ ಸ್ಟೂಲ್ ಸ್ವಲ್ಪ ಭಿನ್ನ 
ಅದರ ವಿಶಿಷ್ಟತೆಯ ಬಗ್ಗೆ 
ವಿಚಾರ ಹಂಚಿ ಕೊಳ್ಳಲು 
ಪುಟ್ಟದೊಂದು ಆಸೆ 
ಮೊಣಕಾಲು ಎತ್ತರದ ಕಾಲುಮಣೆ,
ಅಂತಿಂತ ಮಣೆಯಲ್ಲಪ್ಪ ಅದು 
ಬೀಟೆ ಮರದ್ದು ಮಣೆ 
ಹೀಗೇ ಅದಕ್ಕೊಂದು ಹಿಸ್ಟರಿ, 
ಜಾಗ್ರಫಿ,ಎಲ್ಲವೂ ಇದೆ. 
ತಿರುಮಕೂಡಲ ನರಸೀಪುರದ 
ಅರಣ್ಯ ಕ್ಷೇತ್ರದಲ್ಲಿ ಬೆಳೆದ 
ರೋಸ್ ವುಡ್ಡೇ ಈ ಬೀಟೆ ಮರ 
ಹ್ಯಾಗೆ ಒರಿಸ್ಸಾ ಸಾಮ್ರಾಜ್ಯದ  
ಆವಂತಿಯ ರಾಜ ಇಂದ್ರದುಮ್ನನ 
ಕನಸ್ಸಲ್ಲಿ ದೇವ್ರು ತೋರಿ 
ಹತ್ತಿರದ ಘನ ದಂಡಕಾರಣ್ಯದಲ್ಲಿ ರೆಂಬೆಗಳೇ ಇಲ್ಲದ ಉದ್ದನೆ ಆಕಾಶ ನೋಡಿ ಬೆಳೆದ ಒಳ್ಳೆಯ ಗಾತ್ರದ 
ನೀಲಿ ಬಣ್ಣದ ತೇಗಿನ ಮರ ಸಮುದ್ರದಿಂದ ತೇಲಿ ಬರುತ್ತೆ 
ಅದರಿಂದ ಲಾರ್ಡ್ ಜಗನ್ನಾಥ 
ಲಾರ್ಡ್ ಬಲಭಧ್ರ ಹಾಗೂ 
ದೇವಿ ಸುಭಧ್ರ ದೇವರುಗಳ 
ಆಕ್ರುತಿಗಳ ಮಾಡಿ ಅವರನ್ನ 
ಪುರಿ ಸಮುದ್ರ ತಟದಲ್ಲಿ 
ದೇವಸ್ಥಾನ ಸ್ಥಾಪಿಸಲು ಪ್ರೇರೇಪಿಸಿದನಂತೆ.
ಈ ಸ್ಟೂಲ್ ಗೆ ಅಥವಾ ಅದರ ಮೂಲ 
ಬೀಟೆ ಮರಕ್ಕೆ ಅಷ್ಟೆಲ್ಲಾ ದೊಡ್ಡ ಇತಿಹಾಸವೇನಿಲ್ಲಾ. 
ಅಪ್ಪ ಟಿ. ನರಸೀಪುರದಲ್ಲಿ ಇಂಜಿನಿಯರಾಗಿದ್ದಾಗ 
ಕಬಿನಿ ನದಿಯ ಪ್ರವಾಹದಲ್ಲಿ 
ಕೊಚ್ಚಿಕೊಂಡು ಬಂದ ಕಪ್ಪು ಬಣ್ಣದ ರೋಸ್ ವುಡ್ ಮರಗಳನ್ನ 
ಅರಣ್ಯ ವಿಭಾಗದವರಿಂದ ಫಾರೆಸ್ಟ್ ರೇಂಜರ್ ಆಗಿದ್ದ ರಾಮಣ್ಣ ಒದಗಿಸಿದ್ದರು.
ತಲಕಾಡಿನ ಬಡಗಿ ಚೆಲುವರಾಜನಿಂದ ತೊಟ್ಟಿಲು, ಮಕ್ಕಳಿಗೆ ನಡೆಯೋಗಾಡಿ ಮೂರುಚಕ್ರದ್ದು, ,ಖುರ್ಚಿ, ಟೇಬಲ್, ಮಾಡಿಸ್ಕೊಂಡ್ರು,
ಆದ್ರೆ ಮನೆಯಲ್ಲಿ ಎಲ್ಲರ
ಅಚ್ಚು ಮೆಚ್ಚಿನ ಫರ್ನಿಚರ್ 
ಅಂದ್ರೆ ಅದು 
ನಾಲಕ್ಕು ಕಾಲುಳ್ಳ ಮಣೆ 
ಕುಳಿತುಕೊಳ್ಳಲು ಅನುಕೂಲವಾದದ್ದು, 
ಎದ್ದು ಅದರ ಮೇಲೆ ನಿಂತರೆ 
ಬಲ್ಬ್ ಬದಲಿಸಲು, 
ಕ್ಯಾಲೆಂಡರ್ ತಗಲಿಸಲು 
ಜೇಡರ ಬಲೆಯ ಬಿಡಿಸಲು 
ಧೂಳು ಒರಸಲು ಉಪಯುಕ್ತವಾಗಿತ್ತು. 
ಆದರೆ ಸರಿಯಾಗಿ ಪ್ರತಿ ವರ್ಷ 
ಭಾದ್ರಪದ ಶುಕ್ಲದ ಚೌತಿಯಂದು 
ಆ ಕಾಲು ಮಣೆಗೆ ಶಾಪವೋ 
ಪಾಪವೋ ವಿಮೋಚನೆ ಆಗ್ತಿತ್ತು 
ಸ್ಟೂಲ್ ಜನ್ಮ ಫಲವ ಪಡೆಯುತ್ತಿತ್ತು 
ತ್ರತೀಯ ಅಂದ್ರೆ ಚೌತಿಗೆ ಒಂದು ದಿನ ಹಿಂದೆ ಮಣೆಗೆ ಸೋಪು ಶಾಂಪೂ ಹಾಕಿ ನೀರಲ್ಲಿ ಸ್ನಾನ ಮಾಡಿಸಿ ಗಣೇಶ ಕೂರಿಸುವದಕ್ಕೆ ತಯ್ಯಾರಿ ನಡೆದಿತ್ತು.
ಮನೆ ಕೆಲಸ ಹಾಗೂ ಅಮ್ಮಂಗೆ 
ಸಹಾಯ ಮಾಡಲು ಚಂದ್ರು 
ಜೊತೆಗೆ ಇರುತ್ತಿದ್ದ. ಅವನೊಟ್ಟಿಗೆ 
ಮನೆ ಹಿಂದೆಯಿದ್ದ ಕಾಡಲ್ಲಿ 
ಗಣೇಶಂಗೆ ಎಕ್ಕದ ಹೂವ ಮತ್ತೆ ಗೌರಿ ಹೂವ ತರಲು ಹೋದಾಗ 
ಕಪ್ಪು ದಟ್ಟವಾದ ಕೂದಲು ತುಂಬಿದ 
ಕರಡಿಯೊಂದು ನೆಲವ ಮೂಸಿ ನಡೆದು ಬರುತಿತ್ತು, ಅದು ನಮ್ಮನ್ನು ನೋಡುವ 
ಮುಂಚೆ ನಾವು ಅಲ್ಲಿಂದ ಒಂದೇ ಓಟ
ಮನೆಗೆ ಬಂದು ನಿಟ್ಟುಸಿರು ಬಿಟ್ಟಿದ್ದಷ್ಟೇ 
ಇನ್ನೂ ಹಚ್ಚ ಹಸಿರಾಗಿ ಮನಸ್ಸಲ್ಲಿ 
ಬೇರೂರಿದೆ. 500 ಮನೆಗಳಿಗೂ 
ಹೆಚ್ಚಾಗಿ ಜೀವಂತವಾಗಿದ್ದ 
ಕಾರ್ಗಲ್ ಕಾಲೋನಿಯಲ್ಲಿ ನಾವು 
ನಮ್ಮ ಮನೆಯಲ್ಲಿ 
ಆಚರಿಸಿದ ಆಚರಿಸುತಿದ್ದ 
ಗಣೇಶನ ಹಬ್ಬ 
ಮರೆಯುವಂತದ್ದೇ ಇಲ್ಲಾ
ಯಾರ ಮನೆ ಗಣೇಶನ 
ಅಲಂಕಾರ ಮತ್ತೆ ಡೆಕೋರೇಷನ್ ಚೆನ್ನಾಗಿದೇನ್ನೋ ಪೈಪೋಟಿ.
ನಮ್ಮ ಮನೆಯಲ್ಲಿ ಬೇರೇ ಹಬ್ಬ ಆಚರಿಸ್ತೀವೋ ಇಲ್ಲವೋ 
ಗಣೇಶನ ಹಬ್ಬವಂತೋ ನಮಗೆ 
ಬಲು ದೊಡ್ಡ ಮನೆ ಹಬ್ಬ. 
ಮನೆಯ ದೊಡ್ಡ ಹಾಲ್ ನಲ್ಲಿ 
ಗಣೇಶನ್ನ ಕೂರಿಸಲು ಆಯ್ಕೆ 
ಮಾಡಿದ್ದಾಯ್ತು. ರಾತ್ರಿಯಿಡೀ 
ನಾವೆಲ್ಲಾ ಒಂದೊಂದು ಕೆಲಸ
ಹಂಚಿಕೊಂಡು ಶೃಂಗಾರಿಸಲು 
ನನ್ನ ಪಾಲಿಗೆ ಬಣ್ಣ ಬಣ್ಣದ 
ಕಾಗದದ ರಿಬ್ಬನ್ ಗಳ 
ಸುತ್ತಿದ್ದೇ ಸುತ್ತಿದ್ದು 
ದೊಡ್ಡ ಹಾಲಿನ ನಡುವಿನ ಪಂಕಕ್ಕೆ 
ಒಂದು ಕೊನೆ, ಇನ್ನೊಂದು ಕೊನೆ ನಾಲಕ್ಕೂ ಸೈಡಿನ ಗೋಡೆಗಳಿಗೆ ಸಮನಾಗಿ ಅನ್ನದ ಗೋಂದಿನಿಂದ ಅಂಟಿಸೋದು ಹೀಗೇ ಕೋಣೆ 
ತುಂಬಾ ಕಾಗದದ ಬಣ್ಣ ಬಣ್ಣದ 
ರಿಬ್ಬನ್ ತೋರಣ ಅಂಟಿಸಿದ್ದಾಯ್ತು. 
ರಾತ್ರಿ ಹನ್ನೆರಡು ಘಂಟೆಗೆ ಸರಿಯಾಗಿ 
ಅಮ್ಮನ ಮರದ ಪೆಟ್ಟಿಗೆ ಹೊರಗೆ ಬಂತು 
ಅದರೊಳಗಿಂದ ಎಂಬ್ರಾಯಿಡ್ರಿ ಕಸೂತಿ ಮಾಡಿದ ಪರದೆ, ಟೇಬಲ್ ಕ್ಲಾತ್ ಮತ್ತೆ ಬೆಳ್ಳಿ ದೀಪ ಸ್ಥಂಭಗಳು, ಕಾಮಾಕ್ಷಿ ದೇವಿಯ ದೀಪ, ಆರತಿ ತಟ್ಟೆ, ಹಣ್ಣುಗಳು 
ಜೋಡಿಸಿಡಲು ಬೆಳ್ಳಿ ಟ್ರೇ, ತೀರ್ಥದ ಚೊಂಬು ಎಲ್ಲವೂ ಹೊರಬಂತು. ಎಲ್ಲವನ್ನು ಅಚ್ಚುಕಟ್ಟಾಗಿ ತೊಳೆದು ತಂದಿಡಲು ಸುಜಾತಕ್ಕನಿಗೆ 
ಈ ಕೆಲಸ ನಿಶ್ಚಯವಾಗಿತ್ತು 
ಎರಡಡಿ ಎತ್ತರದ ಮರಪೆಟ್ಟಿಗೆ ಪಶ್ಚಿಮಾಭಿಮುಖವಾಗಿ ಗಣೇಶ
ನಮ್ಮನ್ನು ಆಶೀರ್ವಾದಿಸಲು  
ಗಣೇಶನ ವಿಗ್ರಹವಿಡಲು 
ಯೋಗ್ಯವೆಂದು ನಡುವಿನಲ್ಲಿ 
ಗೋಡೆಗೆ ಸೇರಿಸಿ ತಳ್ಳಿಟ್ಟಿದ್ವಿ.
ಪೆಟ್ಟಿಗೆ ಮೇಲೊಂದು ಬಿಳಿ 
ಟೇಬಲ್ ಕ್ಲಾತ್ ಅದರಲ್ಲೇ ನಡುವೆ 
ಅಮ್ಮ ಬಿಡಿಸಿದ್ದ ರೆಕ್ಕೆ ಪಂಕ ಗರಿಯ 
ಜೋಡಿ ನವಿಲುಗಳ  ಹೂ ಬಳ್ಳಿಯ ಕಸೂತಿ ಅತಿ ಸುಂದರ. 
ಅಮ್ಮ ಇದನ್ನೆಲ್ಲಾ ಎಲ್ಲಿ ಯಾವಾಗ 
ಕಲಿತರೋ ಗೊತ್ತಿಲ್ಲಾ 
ಅದರ ಮೇಲೆ ನಮ್ಮ ಮನೆಯ 
ಮ್ಯಾನ್ ಆಫ್ ದಿ ಮ್ಯಾಚ್ 
ನಾಲಕ್ಕು ಕಾಲಿನ ಮಣೆ 
ಮರದ ಸ್ಟೂಲ್ ನ್ನು 
ಉಲ್ಟಾ ಪುಲ್ಟಾ ಮಾಡಿ 
ನಾಲಕ್ಕೂ ಕಾಲುಗಳು 
ಆಕಾಶ ನೋಡಲು 
ನಡುವಿದ್ದ ಚೌಕಾಕರದ 
ಸಮತಟ್ಟಾದ ನಡು ಸ್ಥಳ   
ದೇವರನ್ನು ಕೂರಿಸಲು 
ಉಚಿತವಾಗಿತ್ತು 
ಒಂದೊಂದು ಕಾಲಿಗೆ ರಟ್ಟಿನಿಂದಾದ ಅರಮನೆಯ ಕಂಬಗಳ ಹೋಲುವಂತಹ 
ಡಿಸೈನ್ ಕತ್ತರಿಸಿ ಅದರ ಮೇಲೆ ಚಿನ್ನದ ಬಣ್ಣದ ಚಿನ್ನಾರಿಗಳನ್ನು ಗೋಂದಿನಿಂದ 
ಅಂಟಿಸಿ ಟ್ವಾಯ್ನ್ ದಾರದಿಂದ ಕಾಲಿಗೆ ಕಟ್ಟಿ ಮರ ಎಲ್ಲೂ ಕಾಣಿಸದಿದ್ದ ಹಾಗೇ 
ಅರಮನೆಯ ಸಿಂಹಾಸನ ಗಣೇಶನಿಗಾಗಿ
ಕಾಯುತ್ತಾ ಇತ್ತು. ಸಾಧಾರಣ ಸ್ಟೂಲ್ ಗೆ 
ಇಷ್ಟೊಂದು ಬುರುಡೆನಾ 
ಆದ್ರೆ ನೋಡಿ ಆ ಸ್ಟೂಲ್ 
ಮಾಡಿದ ಪುಣ್ಯ ಇರಬೇಕು 
ಹಬ್ಬದ ದಿನ ತನ್ನ ಮಡಿಲಲ್ಲಿ ಗಣೇಶನ್ನ ದಿನವಿಡೀ ಕೂರಿಸಿ ಕೊಳ್ಳುತ್ತಿದ್ದದ್ದು 
ಎಲ್ಲರೂ ಗಣೇಶನ ಜೊತೆಗೇ 
ಸ್ಟೂಲ್ ಗೂ ಕೈ ಮುಗೀತಿದ್ದದ್ದು 
ಅದರ ಜೀವನ ಸಾರ್ಥಕ ಅನಿಸುತ್ತಿತ್ತು. 
ಇದೆಲ್ಲಾ ಹ್ಯಾಗೆ ಶುರುವಾಯ್ತುಂತಂದ್ರೆ
1959ರ ಗಣೇಶನ ಹಬ್ಬ 
ಕಾರ್ಗಲ್ ನಲ್ಲಿ 
ಪಕ್ಕದ್ಮನೆ ರಾಮನಾಥ್ ಮತ್ತೆ 
ಅವರ ಮಗಳು ಸಾವಿತ್ರಿ 
ಗಣೇಶನ ಹಬ್ಬದ ದಿವಸ ಬೆಳಗ್ಗೆ 
ನಮ್ಮಣ್ಣ ಮೇಧಾವಿಗೆ 
ಪಂಚೆ ಉಡಿಸಿ ಮಾರ್ಕೆಟ್ ಗೆ ಕರೆದುಕೊಂಡು ಹೋದರು.
ಅಲ್ಲಿ ಅವನು ಮಣ್ಣಲ್ಲಿ ಮಾಡಿದ 
ಅಂದ ಚಂದದ ಪುಟ್ಟ ಬಣ್ಣಹಚ್ಚಿದ 
ಗಣೇಶನ ವಿಗ್ರಹವ ಎತ್ಕೊಂಡ  
ಸಾವಿತ್ರಿ ಮತ್ತೊಂದನ್ನ ಎತ್ಕೊಂಡ್ಲು 
ನಮ್ಮ ಮನೆಗೆ ಒಂದು ಗಣೇಶ 
ಅವರ ಮನೆಗೆ ಒಂದು ಅಂತ 
ಅದಕ್ಕಾದ ಹಣವನ್ನ 
ರಾಮನಾಥ್ ರವರು ಕೊಟ್ರು 
ಬೆಳ್ಳಿ ತಟ್ಟೆಯಲ್ಲಿ ಸ್ವಲ್ಪ ಹಳದಿ ಮಿಶ್ರಿತ 
ಅಕ್ಷತೆ ಕಾಳು ಹರಡಿ 
ಗಣೇಶನ್ನ ಅದರ ಮೇಲೆ ಕೂರಿಸಿ 
ಮನೆಗೆ ಕರೆದುಕೊಂಡು ಬಂದ್ರು 
ಅಮ್ಮನಿಗಾಗಲಿ ಅಪ್ಪನಿಗಾಗಲಿ 
ಗೊತ್ತೇ ಇರಲಿಲ್ಲಾ 
ಗಣೇಶ ಬಂದಾಂತ ಉತ್ಸಾಹದಿಂದ 
ನಾವೆಲ್ಲಾ ಕಿರುಚಲು 
ಪುಟ್ಟ ಗಣೇಶನ ಬಾ ಬಾ ಅಂತ
ಸಂತೋಷದಿಂದ ಬರಮಾಡಿಕೊಂಡ್ರು 
ಆಗ ಪ್ರಾರಂಭಿಸಿದ ಗಣೇಶನ ಹಬ್ಬ
65 ವರ್ಷ ತುಂಬಿದೆ ನಡುವೆ 
ಅಮ್ಮ, ಅಪ್ಪ,ಅಣ್ಣ ತೀರಿಕೊಂಡ 
ಆ ಮೂರು ವರ್ಷ ಹಬ್ಬವ ಆಚರಿಸಲಿಲ್ಲ
ಆದ್ರೆ ಆ ರೀತಿ ರಿವಾಜು ಈ ದಿನದ ವರೆಗೂ ಪಾಲಿಸಿ ಕೊಂಡುಬರುತ್ತಿದ್ದೀವಿ.
ಬೆಳಗ್ಗೆ ಎದ್ದು ಸ್ನಾನ ಮಾಡಿ ಪಂಚೆ 
ಉಟ್ಕೊಂಡು ಗಣೇಶನ ಕರೆ ತರಲು 
ಮನೆಯಿಂದ ಅಣ್ಣ ತಮ್ಮಂದಿರು ನಾವು ನಾಲಕ್ಕು ಜನ ಮಾರ್ಕೆಟ್ ಗೆ ಹೋಗಿ 
ಒಳ್ಳೆಯ ಮುಕ್ಕಾಲು ಅಡಿ ಎತ್ತರದ ಬಣ್ಣದ ಗಣೇಶನ ತರಲು, ಅದನ್ನ ಬೆಳ್ಳಿ ತಟ್ಟೆಯಲ್ಲಿಟ್ಟು ಎತ್ತಿ ಕೊಂಡು ಬರಲು 
ಮೇಧಾವಿ ಅಣ್ಣಂಗೆ ಜಿಮ್ಮೆದಾರಿಯ ಸೌಂಪಿಸಲಾಗಿತ್ತು ಇನ್ನೊಂದು ತಂಡ ಹೂವು ಹಣ್ಣು ಎಲೆ ಅಡಿಕೆ ಕರ್ಪೂರ, ಊದು ಬತ್ತಿ ತರಲು 
ಸರಿಯಾಗಿ ಬೆಳಗ್ಗೆ ಒಂಬತ್ತು ಘಂಟೆಗೆ 
ಗಣೇಶನ್ನ ಮನೆಯಲ್ಲಿ ಕೂರಿಸಿ 
ಪ್ರಥಮ ಕಾಲ ಪೂಜೆ, ನೈವೇದ್ಯವೆಲ್ಲಾ ಮುಗಿಸಿ ಬೆಳಗ್ಗಿನ ಉಪಹಾರ 
ಇಡ್ಲಿ ದಾಲ್, ಉದ್ದಿನ ವಡೆ, ಚಟ್ನಿ 
ಕೇಸರಿ ಬಾತ್ ಕಡುಬು ಮುಗಿಸಲು 
ಗಣೇಶನ ತರಹ ಅಲ್ಲಾಡದೆ ಕುಳಿತು 
ಗಣಪತಿಯೇ ಗಜಮುಖನೆ ನಿನಗೆ ವಂದನೆ ನಂಬಿದವರ ಪಾಲಿನ 
ಕಲ್ಪತರುವು ನೀನೇ ಹಾಡನ್ನ ಟೇಪ್ ರೆಕಾರ್ಡ್ ನಲ್ಲಿ ಕೇಳ್ತಾ ಕೇಳ್ತಾ 
ಇನ್ನೊಂದು ಸುತ್ತು 
ಚಕ್ಕುಲಿ, ಕೋಡುಬಳೆ 
ತೆಂಗಿನ ಕಾಯಿ ಬರ್ಫಿ ತಿನ್ನಲು 
 ಬಂದೇ ಬಿಡ್ತು ಮಧ್ಯಾಹ್ನ ಪೂಜೆ 
ನೈವೇದ್ಯದ ನಂತರ ಊಟದ ಸಮಯ
ಕೋಸಂಬರಿ, ಹುರಳಿಕಾಯಿ ಪಲ್ಯ, ಹುರಿದ ಮಸಾಲೆ ಆಲೂಗೆಡ್ಡೆ,
ಮಸಾಲ್ ವಡೆ ಶ್ಯಾವಿಗೆ ಪಾಯಸ,
ಅನ್ನ, ನುಗ್ಗೆಕಾಯಿ ಸಾಂಬಾರ್,
ಗಣೇಶಂಗೆ ಹಬ್ಬದೂಟ ಆದ್ರೆ 
ತಿಂದು ಚಪ್ಪರಿಸಿದ್ದು ನಾವು .
ಗಣೇಶ ವಿಗ್ನ ವಿನಾಶಕ, 
ಪರೀಕ್ಷೆ ಯಲ್ಲಿ 
ಸುಲಭವಾದ ಪ್ರಶ್ನೆಗಳು ಕೇಳಲು 
ನಿರ್ವಿಗ್ನ ಉತ್ತರಗಳು ಬರೆಯಲು 
ಧಾರಾಳವಾಗಿ ಅಂಕಗಳ ಕೊಡಿಸಲು ಮೇಷ್ಟ್ರುಗಳಿಗೆ ಉದಾರತೆ ತೋರಿಸಲು 
ಸ್ಕೂಲ್ ಪುಸ್ತಕಗಳು ವಿಶೇಷವಾಗಿ 
ಇಂಗ್ಲೀಷ್ ಹಾಗೂ ಗಣಿತದ ಪುಸ್ತಕಗಳ 
ಗಣೇಶನ ಮುಂದಿಟ್ಟು ಇದೆಲ್ಲವೂ ನಡೆಯಲೀಂತ ಬೇಡಿಕೊಳ್ಳುತ್ತಿದ್ದೆವು. 
ನನ್ನ ಸಹ ಪಾಠಿಗಳು ಸುಧೀರ, ಚಂದ್ರು 
ನಾಗೇಶ, ನನ್ನ ತಮ್ಮ ಉದಯ ಎಲ್ಲಾ ಸೇರಿ ಹುಡುಗರ ಜುಂಡೊಂದು  
ಮಧ್ಯಾಹ್ನ ಮೂರು ಘಂಟೆಗೆ 
ಮನೆಯ ಬಿಟ್ಟರೆ 108 ಗಣೇಶನ್ನ ನೋಡದೇನೆ ವಾಪಸ್ಸು ಮನೆಗೆ ಬರುತ್ತಿರಲಿಲ್ಲ. ಪ್ರತ್ಯೇಕ ಮನೆಯಲ್ಲಿ ಗಣೇಶ ಕೂರಿಸಿದ್ದೀರಾಂತ ಕೇಳೋದೊಬ್ಬ
ಧಢ ಧಡನೇ ನುಗ್ಗೋದು ನಾವೆಲ್ಲಾ 
ಗಣೇಶನಿಗೆ ಅಕ್ಷತೆ ಕಾಳು ಹಾಕೋದು ನಂತರ ಬಸ್ಕಿ ನಮಸ್ಕಾರ ಮಾಡಿ 
ಕಡ್ಲೆ ಕಾಳು ಹುಸ್ಲಿ, ಮೈಸೂರ್ ಪಾಕು ಮೋದಕ ಕಡುಬು ಹೀಗೇ ಎಲ್ರು ಮನೆಯಲ್ಲೂ ಏನಾದ್ರೂ ಪ್ರಸಾದ ಕೊಡೋವ್ರು ಅದನ್ನ ತಿಂದು ಕೆಲವೊಮ್ಮೆ ಪಾಯಸ ಕುಡಿದು ಗಣೇಶನ ಹೊಟ್ಟೆ ತರಹ ಆಗುವವರೆಗೂ ಅಥವಾ 108 ಗಣೇಶನ್ನ ನೋಡಿದ ಸಂಖ್ಯೆಯು ತಲುಪವವರೆಗೂ ನಡೀತಾ ಇತ್ತು 
ಸೋಡಾ ಫ್ಯಾಕ್ಟರಿ ಸುರೇಶಾಂತ 
ನಮ್ಮಣ್ಣನ ಕ್ಲಾಸ್ ಮೇಟ್ 
ಅವರ ಮನೆ ಮಾರ್ಕೆಟ್ ಪಕ್ಕ 
ಗಣೇಶ ಕೂರಿಸಿದ್ದೀರಾಂತ ಕೇಳ್ ದ್ವಿ 
ನಮ್ಮನ್ನು ನೋಡಿ ಬನ್ನಿ ಬನ್ನೀಂತ 
ಮನೆಯೊಳಗೆ ಓಡಿ ಹೋದ ಸುರೇಶಾ 
ಸರಿ ನಮ್ಮ ಲೆಕ್ಕದಲ್ಲಿ ಇನ್ನೊಂದು 
ಗಣೇಶಾಂತ ಒಳಗೆ ಹೋದರೆ ಗಣೇಶ ಇಲ್ಲಾ ಸುರೇಶ ಹೋಗಿ ಮಣೆ ಮೇಲೆ ಕೂತ್ಕೊಂಡು ನಾನೇ ಗಣೇಶಾಂತ 
ಅವರಮ್ಮ ಪರಕೆ ತೆಗೊಂಡು ಬಂದಿದ್ದೇ ತಡ ಓಡಿ ಹೋದ, ನಮಗೆಲ್ಲರಿಗೂ 
ಅವರಮ್ಮ ಕುಡಿಯಲು 
ಆರೆಂಜ್ ಕಲರ್ ಕ್ರಶ್ ಕೊಟ್ಟರು.
ಹೀಗೇ ನಡೆಯುತ್ತಿದ್ದ ಗಣೇಶ ದರ್ಶನ ಯಾತ್ರಾ..ಸಂಜೆಯೊಳಗೆ 108
ಗಣೇಶನ್ನ ನೋಡಬೇಕು ವಿಳಂಬವಾಗುವ ಭಯ,
ಯಾಕೇಂದ್ರೆ ಮುಸ್ಸಂಜೆಯಲ್ಲಿ 
ಚಂದ್ರ ಕಾಣಿಸಿದರೇ 
ಚಂದ್ರನ್ನ ನೋಡಬಾರದೂಂತ, 
ಅಮ್ಮ ಅಕ್ಕ ಎಲ್ರು ಹೇಳೋವ್ರು 
ನೋಡಿದ್ರೆ ಕಳ್ಳನಾಗ್ತೀಯಂತ 
ಇಲ್ಲದ ಸಲ್ಲದ ಅಪವಾದ ಬೇರೇ 
ತಗ್ಗಿಸಿ ಕೊಂಡ ತಲೆ ಎತ್ತದೇ 
ಬಿರ್ ಬಿರ್ ನೇ ನಡೆದು 
ಮನೆಗೆ ಬರುತ್ತಿದ್ದೆವು.
ಹಾಗೇನಾದ್ರೂ ಗೊತ್ತಿಲ್ಲದೇ 
ಚಂದ್ರನ್ನ ನೋಡಿಬಿಟ್ರೆ 
ಅದಕ್ಕೊಂದು ಪರಿಹಾರ 
ಶಮಂತಕ ಮಣಿಯ ಸಂಪೂರ್ಣ 
ಕಥೆ ಕೇಳಿದ್ರೇ ಅಪವಾದದಿಂದ 
ಮುಕ್ತಿ ಸಿಗತ್ತೇಂತ ನಂಬಿಕೆ.
ನಮ್ಮ ಮನೆಯಲ್ಲಿ ಗಣೇಶನ ಹಬ್ಬ 
ಒಂದು ದಿನಕ್ಕೇ ಸೀಮಿತ 
ರಾತ್ರಿ ಮಹಾ ಮಂಗಳಾರತಿಯ 
ನಂತರ ವಿಸರ್ಜನೆ ಕಾರ್ಯಕ್ರಮ
ರಾತ್ರಿ ಎಂಟು ಘಂಟೆಗೆ ಮನೆಯಿಂದ ಹೊರಟು ಸ್ಕೂಲ್ ಬಳಿಯಿದ್ದ ಹರಿವ ನೀರಿನ ಕಾಲುವೆಯಲ್ಲಿ ಬಿಟ್ಟು ಬರಬೇಕು.  ಬಲು ರಿಸ್ಕೀ ಜೋಖಂ ಭರಿತವಾದದ್ದು 
ಒಂದೆಡೆ ಚಂದ್ರನ್ನ ನೋಡಬಾರದು
ಇನ್ನೊಂದೆಡೆ ಸ್ವಲ್ಪ ದೂರ ಕತ್ತಲೆಯಲ್ಲಿ 
ನಡೆಯ ಬೇಕಿತ್ತು. ಬರಬೇಕಾದ್ರೆ ಹೆದರುಪುಕ್ಕನಾದ ನನ್ನನ್ನ ಬಿಟ್ಟ್ ಬಿಟ್ಟು
ಜೂಟ್ ಅಂತ ಹೇಳಿ ಓಡಿ ಬಿಡೋರು.. 
ಆದ್ರೂವೆ ಬಿಟ್ಟುಕೊಡದೆ 
ಕೂಗಿ ಚಿಲ್ಲಾಡ್ಕೊಂಡು 
ಗಣೇಶ ಬಂದ ಕಾಯಿ ಕಡುಬು ತಿಂದ 
ಚಿಕ್ಕ ಕೆರೇಲಿ ಬಿದ್ದ ದೊಡ್ಡ ಕೆರೇಲಿ ಎದ್ದ
ಏನು ಆನಂದ, ಲೋ ಪಿಚ್ ಹೈ ಪಿಚ್ 
ರಾಗ ಬದ್ದವಾಗಿ ಪ್ರಾಸ ಬದ್ದವಾಗಿ 
ಆರತಿ ಎತ್ತಿ ಮೂರು ಸಲ ನೀರಲ್ಲಿ ಮುಕ್ಕಿ 
ಮೂರನೇ ಸಲ ನೀರಲ್ಲೇ ಬಿಟ್ಟು 
ಮನೆಯತ್ತ ಹೊರಡುತ್ತಿದ್ದೆವು 
ಬರುತ್ತಾ ಮರಾಠಿ ಎಲ್ಲಿಂದ್ ಬಂತೋ
ಅರ್ಥವಾಯ್ತೋ ಇಲ್ಲವೋ ಆದ್ರೆ 
ಗಣಪತಿ ಬಪ್ಪಾ ಮೋರ್ ಯಾ 
ಮುಂದಿಲ್ಯಾ ವರ್ಷಾ ಲೌಕರ್ ಯಾ
ಅಂತ ಕೂಗಿ ಹೇಳಿ ಮುಕ್ತಾಯಕ್ಕೆ 
ಬರುತ್ತಿತ್ತು ಗಣೇಶನ ಹಬ್ಬ.
ಈಗ ನಾವೆಲ್ಲಾ ಬೆಂಗಳೂರು ವಾಸಿ 
ಪ್ರತಿವರ್ಷ ತಪ್ಪದೇ ಮನೆಯಲ್ಲಿ 
ಗಣೇಶನ್ನ ಕೂರಿಸ್ತೀವಿ.
ರಾತ್ರಿ ಹಲಸೂರು ಕೆರೆಯಲ್ಲಿ 
ಕಟ್ಟುಪಾಡುಗಳೊಂದಿಗೆ ವಿಸರ್ಜನೆ. 
ಆದ್ರೆ ಆಗಿದ್ದ ಆ ಉತ್ಸಾಹ, 
ಆ ಉಲ್ಲಾಸ,  ಆ ಜೋಷ್ 
ಈಗ ಎಲ್ಲಿದೆ 
ಸದ್ಯಕ್ಕೆ ಬೆಂಗಳೂರಲ್ಲಿದ್ದ 
ಮನೆ ಇರುವ ಮುಖ್ಯ ರಸ್ತೆಯಲ್ಲಿ 
ಡಿಜೆ ಮ್ಯೂಸಿಕ್ ಬ್ಯಾಂಡ್ ಜೋರು ಶೋರಾಗಿ ಕೇಳಿಸಿದೊಡನೆ 
ಮನೆಯಿಂದ ಎಲ್ಲರೂ 
ಹೊರಬಂದು ನೋಡಲು, 
ಬ್ಯಾಂಡ್ ಹಿಂದೆ ಹಾಡೋವ್ರ ಟ್ರೂಪ್ 
ಅದರೊಟ್ಟಿಗೆ ಕಪ್ಪು ಪ್ಯಾಂಟ್, 
ಕಪ್ಪುಜರಿ ಶರ್ಟ್, ಕಾಲಲ್ಲಿ ಆಡಿಡಾಸ್ 
ಶೂಗಳು ತಾಳ ಮೇಳ ಡಾನ್ಸ್ 
ದೊಡ್ಡ ರಾಕೆಟ್ ಗಣೇಶ ಟ್ರಾಲಿಯಲ್ಲಿ
ಚಂದಾದಾರರಿಗೆ ಉತ್ಸವ, 
ಮಾರ್ಕೆಟ್ನಲ್ಲಿ, ಮನೆಗಳಲ್ಲಿ ಚಂದಾ ವಸೂಲಿಸೋದೇ ಮುಖ್ಯ ಧ್ಯೇಯ 
50 ಕೆಜಿ ತೂಕದ ಬೂಂದಿ ಲಡ್ಡು 
ಕಂಟ್ರಾಕ್ಟರ್ ಕಮಲೇಶ ಹರಾಜಿನಲ್ಲಿ 
50,000 ರೂಪಾಯಿಯ ಕೊಟ್ಟು ಖರೀದಿಸಿದ, ಹೀಗೇ ದುಡ್ಡಿಗೇನೂ
ಕೊರತೆಯಿಲ್ಲದೆ ಧನ ಸಹಾಯವ 
ಮಾಡಿಸಿದ್ದ ಐಶ್ವರ್ಯ ಗಣೇಶ.
ಮನೆಯಿಂದ ಹೊರಗೆ ಕೋಲಾಹಲ 
ಮನೆಯೊಳಗೆ ಯಾರ ಹಂಗೂ ಇಲ್ಲದೆ 
ಯಾರ ಗೋಜಿಗೂ ಹೋಗದೆ 
ಆರಾಮಾಗಿ ಮಂಟಪದಲ್ಲಿ 
ಮಂದಹಾಸವ ಬೀರಿ ಕುಳಿತಿದ್ದ 
ಸಿದ್ಧಿ ವಿನಾಯಕ ನಮ್ ಗಣೇಶ,
ಬೆಳಗಿಂದ ಗಣೇಶನ್ನ ಹೊರಗಿನವರು 
ಯಾರೂ ಬಂದು ನೋಡಲಿಲ್ಲಾ 
ಯಾರೂ ಕೇಳಲೂ ಇಲ್ಲಾ 
ಸಿಂಗಲ್ ಮಕ್ಕಳ ಕುಟುಂಬ 
ಅಮ್ಮ ಅಪ್ಪ ಮಗು ಅನ್ನೋದು 
ಒಂದು ಯೂನಿಟ್ ಕುಟುಂಬ
ಮತ್ತೆ ಜಾಯಿಂಟ್ ಫ್ಯಾಮಿಲಿಗಳು 
ಸಂಯುಕ್ತ ಕುಟುಂಬಗಳು 
ಮರೆಯಾಗ್ತಾ ಕಾಣೆಯಾಗ್ತಾ 
ಹಬ್ಬಗಳ ಮೇಲೂ ಪ್ರಭಾವ ಬೀರಿತ್ತು. 
ಒಂದೆಡೆ ಜೆನ್ ಜೀ, ಎಲ್ಲವನ್ನೂ 
ಪ್ರಶ್ನಿಸುವ ನಾಸ್ತಿಕರು 
ಇನ್ನೊಂದೆಡೆ ಒಪ್ಪೋರ್ಚುನಿಸ್ಟುಗಳು 
ಅಂದರೆ ಅವಸರವಾದಿಗಳು, ಚಂದಾದಾರರಿಂದಾಗಿ 
ಗಣೇಶನ ಹಬ್ಬ ಕ್ರಮೇಣ 
ಮನೆಗಳಿಂದ ಹೊರ ಹಮ್ಮಿ ಬೀದಿಗೊಂದು ಗಣೇಶ 
ವಾರ್ಡ್ ಗೊಂದು ಗಣೇಶಂತ 
ವ್ಯಾಪಾರ ದ್ರಷ್ಟಿಯ 
ಅಳವಡಿಸಿಕೊಂಡು ಬೆಳೆದು 
ನಿಂತಿರುವ ಗಣೇಶನ್ನ ನೋಡಿದ್ರೆ ಆಶ್ಚರ್ಯವಷ್ಟೇ...
ಆದ್ರೆ ಇದೆಲ್ಲವೂ ಗೊತ್ತಿದ್ದೂ 
ಕಿಂಚಿತ್ತೂ ಕಂಡು ಕೊಳ್ಳದ  
ಸರ್ವಜ್ಞಾನಿ ನಮ್ಮ ಗಣೇಶ.
ಗಣೇಶನನ್ನು ತನ್ನ ಮಡಿಲಲ್ಲಿ 
ದಿನವಿಡೀ ಕೂರಿಸಿ ಹೆಮ್ಮೆ 
ಪಟ್ಟುಕೊಂಡ ಸ್ಟೂಲ್ 
ಗಣೇಶ ವಿಸರ್ಜನೆಯ ನಂತರ 
ಉದಾಸನಾಗಿದ್ದೇನೋ ನಿಜ 
ಮೇಕ್ ಅಪ್ ಅಳಿಸದ ನಟಿಯಂತೆ 
ಇನ್ನೂ ಜರಿ, ಹೂವ, ಬಾಳೆಮರ, 
ದೀಪ, ಧೂಪ ಯಾವದನ್ನು 
ಕದಡದೇ ಇದ್ದದ್ದು ಸ್ಟೂಲ್ ಗೆ 
ಸ್ವಲ್ಪ ಜಂಬ ಬಂದಿತ್ತೂಂತ ಕಾಣಿಸುತ್ತೆ.
ಮತ್ತೆ ಇರಲ್ವಾ ಅದೂನೂವೇ 
ಒಂದು ದಿನವಾದ್ರೇನೂ 
ವರ್ಷವಾದರೇನೂ 
ಗಣೇಶನ ಸ್ಟೂಲ್ ಅಂದ್ರೆ ಅದು 
ಗಣೇಶಂದೆ 
ಇದ್ದರೆ ಇರಲಿ ಬಿಡಿ 
ಗಣೇಶನ ಸ್ಟೂಲ್ ಅನ್ನಿ 
ಆದ್ರೆ ಇನ್ನೂ ಅದರ ಸರದಿ 
ಬರುವ ವರ್ಷ ಬರಲಿರುವ 
ಗಣೇಶನ ಹಬ್ಬಕ್ಕೆ... ಅದುವರೆಗೂ...ಅದು 
ಗಣೇಶನ ಸ್ಟೂಲ್ 
ಸುಮ್ಮನೇ ಮಾತಿಗೆ 
ಬರೀ ಸ್ಟೂಲ್ ಅಷ್ಟೇಂತ ಹೇಳಿದ್ದೆ 
ಅದಕ್ಕೇ ಕೋಪ ಮಾಡ್ಕೊಂಡು 
ನಾನು ಒಂದ್ ಸಲ ಸ್ಟೂಲ್ ಹತ್ತಿದಾಗ 
ಕಾಲು ಬ್ಯಾಲೆನ್ಸ್ ತಪ್ಪಿ ಬಿದ್ದದ್ದುಂಟು
ಸೇಡಿಗೆ ಸೇಡು ತೀರಿಸಿಕೊಂಡಿತ್ತು.
ಈಗ ಅದು ಬರೀ ಸ್ಟೂಲ್ 
ಅಲ್ಲಾಂತ ಒಪ್ಪಿಕೊಳ್ಳುತ್ತೀನಿ 
ಹೌದು, ಅದು, 
ಗಣೇಶನ ಸ್ಟೂಲ್. 

 






 




 










 




 

ಕಾಮೆಂಟ್‌ಗಳು

  1. ಒಂದು ಸ್ಟೂಲಿನ ಸುತ್ತ ಹೆಣೆದ ಗಣೇಶ ಸ್ಥಾಪನೆಯ ಕಥೆ ಸ್ವಾರಸ್ಯಕರ ವಾಗಿ ಮೂಡಿ ಬಂದಿದೆ. ಬ್ಲಾಗ್ ನ ನಿರೂಪಣೆಯಲ್ಲಿ ಬರುವ ವಿವರಣೆಗಳು (detailing) ಬಹಳ ಸುಂದರವಾಗಿದೆ. ಸಣ್ಣ ಸಣ್ಣ ಘಟನೆಗಳನ್ನು ಬಣ್ಣ ಬಣ್ಣವಾಗಿ ಚಿತ್ರಿಸುವ ಕಲೆ ಈ blog ನಲ್ಲೂ ಮುಂದುವರೆದಿದೆ. ಅಭಿನಂದನೆಗಳು ಮತ್ತೊಂದು ಸುಂದರ ಚಿತ್ರಣಕ್ಕಾಗಿ.

    ಪ್ರತ್ಯುತ್ತರಅಳಿಸಿ
  2. ತುಂಬ ಚೆನ್ನಾಗಿ ಓದಿಸಿಕೊಂಡು ಹೋಗುವ ಹಳೆ ಮದುರ ನೆನಪುಗಳನ್ನು ತರಿಸುವ ಸುಂದರ ಬರಹ ಚೊಕ್ಕದಾದ ನವಿರು ಹಾಸ್ಯದ ಹೂರಣ ಸಕಾಲಿಕವಾಗಿ ಎಲ್ಲರ ಭೂತಕಾಲದ ಗಣೇಶನ ಚೌತಿ ಪೂಜೆಯತ್ತ ಸೆಳೆವ ಸುಂದರ ಸ್ವಾರಸ್ಯಕರ ಬರವಣಿಗೆ

    ಪ್ರತ್ಯುತ್ತರಅಳಿಸಿ
  3. Suri,
    I loved your story. Since I joined Sainik school when I was 10-11 yr old, I had only few opportunities to celebrate Ganesha festival. Your story brought me back sweet old memories. It is amazing how you’re able to paint pictures with your words and give life to inanimate things like a wooden stool. Indeed it is no ordinary stool - it is your family’s Ganapati stool. We had Ganapathi madu (it is a designated window like structure for Ganapathi). Thanks to your description, I feel like I know your family. I very much like to visit the jog colony that you grew up in. That shows how good a storyteller you are. If you have a family picture (your parents and sibling picture) please feel share - curious to know.
    Another point: although I have eaten the same dishes you have described- neither I know their names or their composition. Your description makes my mouth water.
    One more point is the changing times you have described (unit family and loss of culture). I too long for those good old times of our childhood. Keep writing and sharing my friend. Sorry, it took a long time to respond. Busy with school and social duties - two concerts, dinners and picnics 😀

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.