ವಾನ್ ಬರ್ಟ್ ಲಾನ್ಫಿಯ ಡೊಂಕು ರೇಖೆ

ವಾನ್ ಬರ್ಟ್ ಲಾನ್ಫಿ
Von Bertlanffy 
ಎಲ್ಲೋ ಕೇಳ್ದಂಗೆ ಇದೆಯಲ್ಲಾ  
ಇವರ ಹೆಸರು ಕೇಳ್ದೇನೆ, ಓದ್ದೇನೆ 
BFSc ಡಿಗ್ರೀ ಯಾರೂ ಮಾಡಿರಲ್ಲಾ ಬಿಡಿ
ಹೆಸರು ಕೇಳಿದ ತಕ್ಷಣವೇ ಸ್ಮೃತಿ  
ಪಟಲದಲ್ಲಿ ಒಮ್ಮೆಲೆ ಗೊಂದಲ, 
ಗಡಿಬಿಡಿ, ಆಕರ್ಷಣೆಯ ಅನುಭೂತಿ ಜೋಯ್ಂತಾ...
ನರ ತಂತಿ ಮಿಡಿಯಿತು.
ಆಸ್ಟ್ರಿಯನ್ ಇಕಾಲಜಿಸ್ಟ್ ಒಬ್ಬ 
ಮೀನಿನ ವಯಸ್ಸು ಮತ್ತೆ 
ಅದಕ್ಕನುಗುಣವಾಗಿ ಅದರ 
ಬೆಳವಣಿಗೆಯ ಬಗ್ಗೆ 
1938 ನಲ್ಲಿ ಸೃಷ್ಟಿಸಿದ 
ಫಾರ್ಮೂಲಾನೇ VBGC ಗೆ ಮೂಲ
Von Bertlanffy ಗ್ರೋಥ್ ಕರ್ವ್
ಆ ಪಾಪುಲೇಷನ್ ಡೈನಾಮಿಕ್ಸ್ , ಆಗ 
ಚೆನ್ನಾಗಿ ಓದೋ ಕುಡುಮಿಗಳಿಗೂ  
ಅರ್ಥವಾಗಿರಲಿಲ್ಲ..ನಮಗಂತೂ 
ಋಣ ಇರಲಿಲ್ಲಾ, ಯಾಕೇಂದ್ರೆ ನಾವೆಲ್ಲಾ
ಬರೀ ಮೂಳೆ ಮಾಂಸದ ತಡಿಕೆ 
ಅದು ಅರ್ಥವಾಗದೇ ಇದ್ದದ್ದಕ್ಕೆ 
ಪ್ರೊಫೆಸರ್ ತಿಪ್ಪೇಸ್ವಾಮಿಯವರ 
ಕ್ಲಾಸ್ ಒಂದು ಕಾರಣವಾದ್ರೆ 
ಕ್ಲಿಷ್ಟವಾದ ವಿಷಯ ಇನ್ನೊಂದು.
ನಾವೆಲ್ಲಾ ಅಂಜಾಲ್ ರುಚಿ ಉಂಟಾ 
ಬಂಗುಡೆನಾ ಅಥವಾ ಮತ್ತಿನಾ ಅನ್ನೋ ಮುಖ್ಯ ವ್ಯವಹಾರಿಕ ಇಷ್ಟವಾದ ವಿಷಯದಲ್ಲಿ ತಲ್ಲೀನರಾಗಿದ್ದಾಗ ಮೀನುಗಳು ವಯಸ್ಸಿಗೆ ತಕ್ಕ ಬೆಳೆವಣಿಗೆ ಹೊಂದಿದೆಯಾ ಅನ್ನೋ 
ಕಾಳಜಿ ವಹಿಸೋರು ಯಾರು ?
ಅದು ಸರಿ, ಇದ್ದಕ್ಕಿದ್ದ ಹಾಗೇ 
ಯಾಕೆ ಈ ಚರ್ಚೆ? 
VBGC ಯ ಡೊಂಕು ರೇಖೆ ಬಗ್ಗೆ, 
ನನ್ನ ಹೊಟ್ಟೆಯ ಉಬ್ಬು ತಗ್ಗಿಗೆ
ಹೋಲಿಸಿ ಜೀರೋ ವರ್ಷದಲ್ಲಿ 
ಸುರೇಶ ಹ್ಯಾಗಿದ್ದ? ಯಾವದೋ ಒಂದು ಪಾಯಿಂಟ್ ನಲ್ಲಿ ಸಮಾನತೆ 
ಒಂದನ್ನ ಕಂಡು ಹಿಡಿದದ್ದರ ಫಲ 
Von Bertlanffy ಮತ್ತೆ 
ಆತನ ಡೊಂಕು ರೇಖೆಯಲ್ಲಿ.. 
ಆಸಕ್ತಿ ಹುಟ್ಟಿಸಿದ್ದ.
ಪ್ರೈಮರಿಯಲ್ಲಿ ತಿಂದಿದ್ದು 
ಯಾವದೂ 
ಮೈಗೆ ಅಂಟುತ್ತಿರಲಿಲ್ಲ 
ಆದ್ದರಿಂದ 
ಮೊದಲ ಹೆಸರು 
ನರಪೇತ್ಲ ನಾರಾಯಣ 
ಹಂಗೆಲ್ಲಾ ಇಷ್ಟು ಹಗುರವಾಗಿ
ಹೇಳ್ತಾ ಇರಲಿಲ್ಲಾ  
ಕಡ್ಡಿ ಪಯಿಲ್ವಾನ್ 
ಅನ್ನೋ ಒಂದು ಉಪಾಧೆ 
ತಾನಾಗೇ ಗಳಿಸಿದ್ದು 
ನಾನಾದ್ರೂ ಪರವಾಗಿಲ್ಲ 
ನನ್ ಕ್ಲಾಸ್ಮೇಟ್ ಚಂದ್ರು 
ಇನ್ನೂವೇ ತೆಳು 
ಈಗ ನೆನಸ್ಕೊಂಡ್ರೂ ನಗು ಬರುತ್ತೆ ಯಾಕೇಂದ್ರೆ ಅವನಿಗಿಟ್ಟ 
ಅಡ್ಡ ಹೆಸರು ಹಾಗಿತ್ತು 
ಹೆಚ್. ಕೆ. ಜೀಂತ 
ಹೂಸುಕಡ್ಡಿ ಗಾಂಧೀಜಿ HKG
ಗಾಂಧೀಜಿಗೂ ಇದಕ್ಕೂ 
ಏನ್ ಸಂಭಂಧಾಂತ ಕೇಳಬಾರದು
ಊದು ಬತ್ತಿಯಷ್ಟು ತೆಳುವಾಗಿದ್ದ.
ನಾನೂ ಕಾಲೇಜಿನಲ್ಲಿ ಓದುತ್ತಿದ್ದಾಗ
ನಿಮ್ಮ ಹಾಗೇ ವಯಸ್ಸಿಗೆ ತಕ್ಕ BMR ಎಲ್ಲವೂ ಇತ್ತು ಮತ್ತೇನಾಯ್ತು 
ಕಾಲಕ್ರಮೇಣ ನನ್ನರಿವಿಗೆ ಗೊತ್ತಿಲ್ಲದೇ 
ನನ್ನನ್ನು ಆಕ್ರಮಿಸಿದ 
ಆ X ಫ್ಯಾಕ್ಟರ್ 
ಜೀವಕೋಷಗಳ ಸುತ್ತಳತೆ 
ಹಾಗೂ ಅದಕ್ಕೆ ಅಂಟಿಕೊಂಡ 
ಕೊಬ್ಬಿನ ಪರಿಮಾಣ 
ಯಾವಾಗ ಬೆಳೆಯಿತೋ 
ಯಾವಾಗ ಅನಂತವ (ಇನ್ಫಿನಿಟಿಯ) 
ಹಬ್ಬಿಕೊಂಡಿತೋ ಗೊತ್ತಾಗಲಿಲ್ಲ 
ಇವೆಲ್ಲಾ ಆ ವಾನ್ ಬರ್ಟ್ ಲಾನ್ಫಿ ಗೇ ಗೊತ್ತಾಗಿದ್ದಿದ್ದರೆ ಹೊಸತಾದ 
ಇನ್ನೊಂದು ರಿವೆರ್ಸ್ ಫಾರ್ಮುಲಾ 
ಆವಿಷ್ಕಾರವಾಗುತ್ತಿತ್ತೋ ಏನೋ 
ಆದ್ರೆ ಖಂಡಿತವಾಗಲೂ 
ಸವಾಲಾಗಿದ್ದರಬಹುದು...
ಆದ್ರೆ ಹುದ್ದೆಗೆ ಸೇರಿಕೊಂಡಾಗ 
ಅದಕ್ಕನುಗುಣವಾದ 
ಎಲ್ಲಾ ಚಿನ್ಹೆಗಳು 
ಕಂಡು ಬಂದಿತ್ತು...
ಬೊಜ್ಜು ಬಚ್ಚಿಡಲಾಗಲಿಲ್ಲ 
ಅದು ಕೊಬ್ಬಲ್ಲಾ 
ಬರೀ ನೀರು ಸಾರ್ 
ವ್ಯಾಯಾಮ ಮಾಡಿ, 
ಬೆವರು ಸುರಿಸಿ, ಎಲ್ಲಾ ಸರಿ ಹೋಗತ್ತೇ 
ಟ್ರೇನರ್ ಜೈ ನ ಸಿಫಾರಿಶ್ ಬೇರೇ 
ದುಡ್ದುಕೊಟ್ಟು ಜಿಮ್ ಸೇರಿದ್ದಾಯ್ತು 
ವ್ಯಾಯಾಮ, ಕಸರತ್ತು, 
ಜೊತೆಗೆ ಯೋಗ 
ಶುರು ಮಾಡಿದ್ದಾಯ್ತು
ತೂಕ ಇಳಿದಿದ್ರೆ 
ಸುತ್ತಳತೆ ಕಮ್ಮಿಯಾಗಿದ್ರೆ 
ನಂಬಿಕೆ ಬಂದಿರೋದು 
ಯಥಾವತ್ತಾಗಿ ಏನೊಂದೂ 
ಬದಲಾವಣೆ ಇಲ್ಲದಿದ್ದರಿಂದ 
ಅದೇ ವೇಗದಲ್ಲಿ, ಮಳೆ ಬಂತೋ 
ಬಿಸಿಲು ಹೆಚ್ಚಾಯ್ತೋ ಕಾಗೆ ಕೂರ್ತೋ 
ಯಾವುದೋ, ಯಾರೋ, ಏನೋ 
ಏನೋ ಒಂದು 
ಕಾರಣವ ತೋರಿಸಿ 
ಜಿಮ್ ಗೆ ಹೋಗೋದು 
ನಿಂತು ಹೋಯ್ತು, 
ಸರಿ ದುಡ್ಡು ಉಳೀತೂಂತ
ಹಾಯಾಗಿದ್ರೆ 
ಬಿಡುತ್ತಾರಾ ಮತ್ತೇ 
ಯಾಕೆ ಜಿಮ್ ಗೆಲ್ಲಾ ಹೋಗ್ತೀರಾ 
ಒಂದು ಟ್ರೆಡ್ ಮಿಲ್ ತಗೊಳ್ಳಿ ಸಾರ್ 
ಮನೆಯಲ್ಲೇ ಎಕ್ಸರ್ ಸೈಜ್ ಮಾಡಬಹುದೂಂತ ಸಲಹೆ ಕೊಟ್ರು 
ಆಗ ಇಪ್ಪತ್ತು ಸಾವಿರ ಕೊಟ್ಟು 
ಏ ಒನ್ ಟ್ರೆಡ್ ಮಿಲ್ ತಗೊಂಡಿದ್ದಾಯ್ತು 
ಟಿವಿ ಮುಂದೆ ಇಟ್ಕೊಂಡು 
ಟಿವಿ ನೋಡ್ತಾ ಜಾಗಿಂಗು ಮಾಡ್ದೆ
ಜಾಗಿಂಗ್ ಮರೆತು 
ಟಿವಿ ಸೀರಿಯಲ್ ನಲ್ಲಿ ತಲ್ಲೀನನಾದೆ
ಸಾಸ್ ಭೀ ಕಭಿ ಬಹು ಸೀರಿಯಲ್ ನ 
ಸೊಸೆಗೆ ಹಾಲಿನಲ್ಲಿ ವಿಷ  ಬೆರೆಸುವಾಗ
ಟ್ರೆಡ್ ಮಿಲ್ ಅಡ್ಡ ಬರುತ್ತೇಂತ 
ಸೈಡ್ ನಲ್ಲಿಟ್ಟಿದ್ದು ನೀವು ಈಗ ಬಂದು ನೋಡಿದ್ರೂ ಟ್ರೆಡ್ ಮಿಲ್ ಅಲ್ಲೇ ಇದೆ.
ಆದ್ರೆ ಗೀತಾ ನನ್ ಪತ್ನಿ 
ಅದನ್ನ ಒದ್ದೆ ಬಟ್ಟೆ ಒಣಗಿಸೋದಕ್ಕೆ 
ಉಪಯೋಗಿಸುತ್ತಿದ್ದಾಳೇನ್ನೋದೇ 
ಚೂರು ಸಮಾಧಾನ, ಸಂತೋಷ. 
ಇದೆಲ್ಲಾ ಸರಿ ಹೋಗಲ್ಲಾ ಸಾರ್, 
ನಿಮಗೇ ಡಯಟಿಂಗ್ ಸರಿ ಹೋಗುತ್ತೇ 
ಹೇಳೋವರಿಗೇನು ಆರಾಮಾಗಿ ಹೇಳ್ತಾರೆ 
ಅನುಭವಿಸಿದ್ದು ನಾನಲ್ಲವೇ.
ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ 
ನಿಂಬೆಹಣ್ಣು ಜ್ಯೂಸ್ ಜೇನು ತುಪ್ಪದ 
ಮಿಶ್ರಣವ ಹಿತವಾದ 
ಬಿಸಿ ನೀರಲ್ಲಿ ಕುಡೀರಿ 
ಕೊಬ್ಬು ಕರಗುತ್ತೇಂತ ಹೇಳ್ದವರನ್ನ 
ಹುಡುಕ್ತಾ ಇದ್ದೀನಿ.. 
ನೀವೇನಾದ್ರೂ ಕಂಡ್ರಾ
ಸಾಂತ್ವನ ನೀಡಿದ್ದು 
ಡೈಟಿಷಿಯನ್ ಡಯಾನ,
ಡಯಟ್ ಬಿಡಿ 
ಸ್ಮಾರ್ಟಾಗಿದ್ದಳು 
ಸಾಧಾರಣ ನನ್ನಂತವರಿಗೆ 
ಪ್ರತಿದಿನ 2400-3000 
ಕೆಲೋರಿಗಳಷ್ಟು ಆಹಾರ 
ಸೇವನೆಯ ಅವಶ್ಯಕತೆಯ ಬಗ್ಗೆ 
ಅವಳನ್ನು 
ನೋಡ್ತಾ ನೋಡ್ತಾ,
ಕ್ಷಮಿಸಿ 
ಕೇಳ್ತಾ ಕೇಳ್ತಾ 
ಏನ್ ಹೇಳಿದ್ಲೂಂತ 
ಕಣ್ಣಿಗೆ ಹತ್ತಿದ್ದು ಮಂಡೆಗೆ ಹತ್ತಲಿಲ್ಲ. 
ಕೆಲೋರಿಗಳ ಲೆಕ್ಕಾಚಾರ 
ಜೋಡಿಸೋದು  ಕಳೆಯೋದ ಬಿಟ್ಟು 
ಭಾಗಾಕಾರಕ್ಕೆ ಬದಲಾಗಿ
ಗುಣಾಕಾರಕ್ಕೆ ಪರಿವರ್ತನೆಯಾಗಿ 
ಚಯಾಪಚಯದಲ್ಲೇ 
ಕಾಣೆಯಾದಳು ಡಯಾನಾ 
ನೀರ ಮೇಲಿನ ಗುಳ್ಳೆ 
ನಿಜವಲ್ಲಾ ನರಹರಿಯೇ 
ನನ್ ಜೀವನದಲ್ಲಿ  
ಅಷ್ಟೊಂದು ಸೊಪ್ಪು
ಅಷ್ಟೊಂದು ತರಕಾರಿ, ಸಲಾಡ್ 
ಅಷ್ಟೊಂದು ಧಾನ್ಯಗಳು 
ಬೇಯಸಿದ್ದು, ಮೊಳೆಕಟ್ಟಿದ್ದು,
ತಿಂದೇ ಇರಲಿಲ್ಲಾ 
ಕ್ರೆಬ್ಸ್ ಸೈಕಲ್, ಲಿಪೋಜನಸಿಸ್
ಬಯೋಕೆಮಿಸ್ಟ್ರಿಯ ಪ್ರೊಫೆಸರ್
ನನ್ನ ಮೊದಲನೇ ಬಾಸ್ 
ಶ್ರೀಕರ್ ಜ್ಞಾಪಕಕ್ಕೆ ಬಂದರು. 
ಇನ್ಸುಲಿನ್ ಹೆಚ್ಚು ಸ್ರವಿಸಿ 
ಎನರ್ಜಿ ಸ್ಟೋರೇಜ್ ಜಾಗವನ್ನು
ಕೊಬ್ಬು ಆಕ್ರಮಿಸಿದ್ದು ಗೊತ್ತೇ ಆಗಲಿಲ್ಲಾ 
ಇದೆಲ್ಲಾ ಅಲ್ಲೇ ಅಲ್ವಾ ಮೊದಲು 
ಓದಿದ್ದು, ಕಲಿತದ್ದು ಪ್ರಾಕ್ಟಿಕಲ್ಸ್ ಗೆ 
ಧ್ಯಾನ  ನೀಡಬೇಕಿತ್ತು.
ಎಲ್ಲವೂ ಸುತ್ತಿ ಕೊನೆಗೆ 
ಸುತ್ತಳತೆಯಲ್ಲಿ ಏನೊಂದೂ 
ವ್ಯತ್ಯಾಸ ಕಂಡು ಬರದಿದ್ದರಿಂದ 
ಡಯಟ್ ಹಾಗೇ ಅಂತ್ಯಗೊಂಡಿತು.
ಆದ್ರೆ ಅದರಲ್ಲೊಂದು
ಒಳ್ಳೆಯದು ನಡೆದಿದೆ ಅದೇ 
ಒಮೆಗಾ 3 ಪ್ಲಸ್ ಪಾಯಿಂಟ್ 
ಬರೀ ಮೀನು ತಿನ್ನಿ 
ಮತ್ತೆಲ್ಲಾ ಬಿಟ್ಟುಬಿಡಿ 
ಹೀಗಿರುವಾಗ ಇತ್ತೀಚಿಗೆ 
ಇಂಟೆರ್ಮಿಟೆಂಟ್ ಫಾಸ್ಟಿಂಗ್ 
ಬಗ್ಗೆ ಪರಿಚಯ ಮಾಡಿಸಿದ 
ನಮ್ ಅಶೂ 
ಮಧ್ಯಂತರ ಉಪವಾಸ 
ಹೆಸರು ಚೆನ್ನಾಗಿದೇಂತ,  
ಬರೀ ಪ್ರೊಟೀನ್ ಡಯಟ್
ಆಕರ್ಷಸಿತ್ತು.
24 ಘಂಟೆಯ ದಿನಚರ್ಯದಲ್ಲಿ 
16:8 ಫಾರ್ಮುಲಾ 
16 ಘಂಟೆ ಏನೂ ತಿನ್ನಬಾರದು 
ಉಪವಾಸ, ನೀರು ಕುಡಿಯಬಹುದು 
8 ಘಂಟೆ ಏನ್ ಬೇಕಾದ್ರೂ ತಿನ್ನಬಹುದು
ಅಂದರೆ ದಿನಕ್ಕೆ ಮೂರು ಬಾರಿ ಆಹಾರ ಸೇವಿಸುವವರಿಗಿಂತ ನಿಯಮಿತ ಉಪವಾಸ ಮಾಡುವವರು 
ದೀರ್ಘ, ಆರೋಗ್ಯಕರ ಜೀವನ ನಡೆಸುತ್ತಾರೆನ್ನೋದು 
ಗೊತ್ತಿದ್ರೂವೇ 
ನಿಯಮಿತ, ಉಪವಾಸ ಅನ್ನೋ 
ಶಬ್ದಗಳ ಬಳಕೆಗೆ 
ಮನಸ್ಸು ಒಪ್ಪಲಿಲ್ಲಾ 
ಇಲ್ಲಿ ಮನಸ್ಸು ಅಂದ್ರೆ ಹೊಟ್ಟೆ.
ಮತ್ತೊಮ್ಮೆ ಯಥಾಸ್ಥಿತಿ.
ಗಿಡವಾಗಿ ಬಗ್ಗದ್ದು 
ಮರವಾಗಿ ಬಗ್ಗೀತೆ 
ಅಬ್ಬಬ್ಬಾಂತಂದ್ರೇ ಆಯಸ್ಸು 
ಒಂದು ವರ್ಷವೋ ಎರಡು ವರ್ಷವೋ 
ಹೆಚ್ಚು ಕಾಲ ಬದುಕುವ 
ಲಾಭ ನಷ್ಟ ಗಳ ವ್ಯರ್ಥತೆ 
ಸಾರ್ಥಕತೆಯ ಪರಿಶೀಲಿಸಿ 
ಬೊಜ್ಜಿನ್ನಿಂದ, ಅದೇ ಒಬೆಸಿಟಿಯಿಂದ 
ಮುಕ್ತಿ ಪಡೆಯಲು 
ಅಂತಿಮ ಅಸ್ತ್ರವಾಗಿ 
ಧ್ಯಾನ, ಮೆಡಿಟೇಶನ್ 
ಸ್ಟ್ರೆಸ್ ಇಲ್ಲದ ಜೀವನಕ್ಕೆ 
ಮೊರೆ ಹೋದೆ,
ಸಾಂತ್ವನ, ಸಮಾಧಾನವ ನೀಡಿತ್ತು 
ಹ್ಯಾಗಿದ್ದೆ, ಈಗ ಹ್ಯಾಗಿದ್ದೀನಿ
ಶಾಶ್ವತ ಯಾವುದೂ ಇಲ್ಲಾ
ಜೀವ ನಶ್ವರ,
ಮೊಮ್ಮಕ್ಕಳು ಹೊಟ್ಟೆಯ ಮೇಲೆ 
ಜಾರೋಬಂಡೆಯಾಡುವಾಗ 
ನಿಶ್ಚಿಂತೆಯಾಗಿ ಆನಂದಿಸುವ 
ಆ ಕ್ಷಣವ ಅನುಭವಿಸುತ್ತಿದ್ದೇನೆ.
ಜೀವನಕ್ಕೊಂದು ಅರ್ಥ ಸಿಕ್ಕಿತು.
ಜೀರೋ ವರ್ಷದಿಂದ ಎಪ್ಪತ್ತು ವರ್ಷಕ್ಕೆ ಜಿಗಿದ ರೇಖೆ ಎಂದಾದರೂ 
ಒಂದಲ್ಲಾ ಒಂದು ದಿನ ಬಗ್ಗಿದ 
ಆ ವಾನ್ ಬರ್ಟ್ ಲಾನ್ಫಿಯ 
ಡೊಂಕು ರೇಖೆ ನನಗಾಗಿ 
ಆರೋಗ್ಯಕರವಾಗಿ 
ವಯಸ್ಸಿಗೆ ತಕ್ಕ ತೂಕದ 
ತುಲಾಭಾರ   ಸರಿಯಾಗತ್ತೇಂತ 
ಆಶಾವಾದಿಯಾಗಿ ಡೇಟಾ ಸಂಗ್ರಹಿಸುತ್ತಿದ್ದೇನೆ.



ಕಾಮೆಂಟ್‌ಗಳು

  1. The article written by you with such an interesting title is truly engaging. As one goes through it, the underlying reality of life beautifully unfolds.

    Von Bertalanffy’s theory, which is related to the study of fishery growth and explains growth with respect to age, length, and weight in a curvature model, has been explained by you in a very simple and interesting way.

    You have linked this scientific concept of growth so creatively with your classmates who were thin, and how you advised them to consume protein-rich and other nutritious food to improve their weight according to their age.

    The entire article is written with a wonderful sense of humour and presents many interesting facts about how each person is either gaining weight, losing weight, dieting, or exercising to stay fit.

    Overall, it is an excellent article, written hilariously, which creates a deep interest and keeps the reader engaged till the end.

    ಪ್ರತ್ಯುತ್ತರಅಳಿಸಿ
  2. Suri,
    Just finished reading your blog. It is hilarious yet honest. They say “A true comedy and genuine sense of humor requires great humility and emotional intelligence to laugh at once own shortcoming. “
    No one is perfect but few of us have the humility and courage to accept our own faults. Great people have almost always possessed the ability for productive self- reflection. You are a great human being in my book . Thank you for sharing. Dr ವಿಜಯ್ M Baragi

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ತೊಕ್ಕೊಟ್ಟು ಟೇಲ್ಸ್

ನಾವು ಇಪ್ಪತೈದು ಮುಗಿಸಿದ್ದು ಐವತ್ತು ನಮ್ದು ಕಿ ಎಪ್ಪತೈದು.